Sunday, December 27, 2020

Thursday, December 24, 2020

ಮರದ ಅಳಲು ಕವನ ಪ್ರಕಟ ೨೫/೧೨/೨೦೨೦

 ಮರದ ಅಳಲು ಕವನ

ದಿನಾಂಕ : ೨೫/೧೨/೨೦೨೦ ರಂದು ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಕವನ



Tuesday, December 22, 2020

೮ನೇ ಕನ್ನಡ ಜೀವನ ದರ್ಶನ ಪದ್ಯ ಭಾಗದ ವೀಡಿಯೊ ೨೨/೧೨/೨೦೨೦

 


೧೦ನೇ ಕನ್ನಡ ಸಂಧಿಗಳು ವೀಡಿಯೊ ಭಾಗ - ೧ ೨೧/೧೨/೨೦೨೦

 


ಕಣ್ಣೀರಿನ ಕಥೆ ಚುಟುಕುಗಳು ೨೨/೧೨/೨೦೨೦

 ಚುಟುಕುಗಳ ಶೀರ್ಷಿಕೆ

*ಕಣ್ಣೀರಿನ ಕಥೆ*


                   ೧

ಹೆಸರಿಗೆ ಮಾತ್ರ ರೈತ ಬೆನ್ನೆಲುಬು

ಎನ್ನುವವರು ಸಾಲದ ಸುಳಿಗೆ ಸಿಕ್ಕಿ

ತಾನು ಬೆಳೆದ ಬೆಳೆಗೆ ಸರಿಯಾದ

ಬೆಂಬಲ ಬೆಲೆ ಸಿಗದೆ ಕಂಗಾಲಾಗಿ

ಅಸಹಾಯಕತೆಯ ಕಣ್ಣೀರು ಹಾಕಿ

ಆತ್ಮಹತ್ಯೆಗೆ ಶರಣಾಗಿರುವನು.


                 ೨

ದೇಶ ಕಾಯೋ ಸೈನಿಕ ಅನ್ನ ನೀಡೋ ರೈತ

ವಿದ್ಯ ಕೊಡುವ ಶಿಕ್ಷಕ ಮತ್ತು ಸಾರಿಗೆ ನೌಕರರು

ವೈದ್ಯಕೀಯ ಸಿಬ್ಬಂದಿ ವರ್ಗ ಹಾಗೂ ಅಗತ್ಯ 

ಸೇವೆಗಳ ನೀಡುವ ಶ್ರೀ ಸಾಮಾನ್ಯರು ಹಗಲಿರುಳು ಅವರ ಕಣ್ಣೀರಿನ ಕಥೆ ಬದಿಗಿಟ್ಟು ದಣಿವರಿಯದೆ ದುಡಿಯುವ ಯೋಧರು ಅವರಿಗೆ ಎಂದೆಂದಿಗೂ 

ನಾವು ಚಿರಋಣಿಯಾಗಿರೋಣ.


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


ಚುನಾವಣೆ ಶೀರ್ಷಿಕೆ ಚುಟುಕುಗಳು ೨೧/೧೨/೨೦೨೦

 ಚುಟುಕುಗಳ ಶೀರ್ಷಿಕೆ

*ಚುನಾವಣೆ*

             ೧

ಚುನಾವಣೆಗಳು ಬಂದ್ರೆ 

ಕುಡುಕರಿಗೆ ಹುಡುಕುವರು

ತೂರ್ಯಾಡಿಕೊಂತ ಮನೆ

ಸೇರಿದರೆ ಸಾಕಪ್ಪಾ ಸಾಕು

ಕಡು ಕುಡುಕರ ಸಹವಾಸ

ಹೆಂಡರ ಮಕ್ಕಳ ಉಪವಾಸ 


                ೨

ಝಣ ಝಣ ಕಾಂಚಾಣ ಕುಣಿಯುತ್ತಾ

ಕಂಡ ಕಂಡವರ ಕೈ ಸೇರುತ ತಾಸು

ತಾಸಿಗೆ ಜನರ ತೆಲೆ ಕೆಡಿಸಿ ಬಿಟ್ಟು

ಸಂಬಂಧಗಳನು ತುಳಿದು ಕುಪ್ಪಳಿಸಿ

ರಣಕೇಕೆ ಹಾಕಿ ನಗುವುದು ಚುನಾವಣೆಗೆ

ನಿಂತ ಶೂರರು ಗೆಲ್ಲಲಿ ಬಿಡಲಿ ನನಗೆ

ಸುಖ ದುಃಖಗಳು ಬೇಕಿಲ್ಲ ಎಂದು

ಕ್ಷಣಕಾಲ ಖುಷಿ ನೀಡದೆ ಬಿಡೆನೆಂದಿದೆ ಹಣ.


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*



Sunday, December 20, 2020

ಚುನಾವಣಾ ಜಾಗೃತಿ ಮೂಡಿಸೋಣ ಕವನ ಹಸಿರು ಕ್ರಾಂತಿ ಪತ್ರಿಕೆಯಲ್ಲಿ ಪ್ರಕಟ ೨೧/೧೨/೨೦೨೦

ಚುನಾವಣಾ ಜಾಗೃತಿ ಮೂಡಿಸೋಣ ಕವನ 

ದಿನಾಂಕ ೨೧/೧೨/೨೦೨೦ ರಂದು ಹಸಿರು ಕ್ರಾಂತಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.



ನನ್ನ ಮತ ನನ್ನ ಹಕ್ಕು ಹನಿಗವನ ೨೦/೧೨/೨೦೨೦

 ಹನಿಗವನ ಸ್ಪರ್ಧೆ

ವಿಷಯ : *ನನ್ನ ಮತ ನನ್ನ ಹಕ್ಕು*


ಹತ್ತು ದಿನ ಹೆಂಡ ಸಾರಾಯಿ ಕುಡ್ಸಿ ಕಂಡ ತಿನ್ಸಿ

ನಾಸ್ಟಾ ಮಾಡ್ಸಿ ಬಣ್ಣದ ಮಾತುಗಳಾಡಿ ಗೆದ್ದು

ಐದು ವರ್ಷಗಳಿಗೊಮ್ಮೆ ಜನರಲ್ಲಿ ಬರೋರು 

ಹೇಗೆ ಪ್ರಜೆಗಳ ಹಿತಕ್ಕಾಗಿ ದುಡಿಯುವರು ತಾವು

ಆಕಿರೋ ದುಡ್ಡು ದುಪ್ಪಟ್ಟು ಗಳಿಸುವಂತವರ ನಂಬ್ದೆ

ನಮ್ಗೆ ಒಳಿತನ್ನು ಬಯಸುವ ಕಷ್ಟ ಸುಖಗಳಿಗೆಲ್ಲಾ

ಜೊತೆಯಾಗಿ ನಿಲ್ಲುವಂತಹ ಒಳ್ಳೆಯ ನಾಯಕರನ್ನು 

ಆಯ್ಕೆ ಮಾಡಲು ತಪ್ಪದೆ ಮತದಾನ ಮಾಡೋಣ....


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*



ತಮಂಧದಿಂದ ಬೆಳಕಿನೆಡೆಗೆ ಕವನ ೨೦/೧೨/೨೦೨೦

 ಕವನದ ಶೀರ್ಷಿಕೆ

*ತಮಂಧದಿಂದ ಬೆಳಕಿನೆಡೆಗೆ*


ನಾಗರಿಕತೆಯ ಕಾಲದಿಂದಲೂ ಬುದ್ಧಿಯು

ಚುರುಕಾಗಿ ಮಂಗನಿಂದ ಮಾನವನೆಡೆಗೆ

ಸಾಗಿದೆ ಪಯಣ ಆ ಹಾದಿಯಲಿ ಹಿಡಿಯಿತು

ಹಲವು ವರುಷಗಳ ಕಾಲ ಬಾಳ ನೆಲೆಯಡೆಗೆ


ಋಷಿ ಮುನಿಗಳು ಅವಿರತ ಶ್ರಮವಹಿಸಿ ತಾವು 

ಕಲಿಸಿಹರು ಸಾವಿರಾರು ಶ್ಲೋಕ ಕಾವ್ಯ ಪುರಾಣ 

ಆಗಮ ಶಾಸ್ತ್ರ ಚರಿತ್ರೆ ಅರವತ್ತು ನಾಲ್ಕು ವಿದ್ಯಗಳ

 ಜ್ಞಾನ ಧಾರೆಯೆರೆದು ಇದು ಅಲ್ಲವೆ ವಿದ್ಯ ಎಂದ್ರೆ


ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ 

ಮುಕುತಿ ಎಂದು ಸಾರಿದ ದಾರ್ಶನಿಕರ ಅನುಭವ 

ನೆಲೆ ಸೆಲೆಯಾಗಿ ಗೌರವಾದರ್ಶಗಳನು ರೂಢಿಸಿದ 

ಹಿರಿಯರ ತಮಂಧದಿಂದ ಬೆಳಕಿನೆಡೆಗಿನ ಪಯಣ


ನಾಡಿಗೆ ಬೆಳಕಾಗಿ ಬುದ್ಧ ಬಸವ ಗಾಂಧಿ ಅಂಬೇಡ್ಕರ 

ಬಂದು ಜನ ಜಾಗೃತಿಯ ಮೂಡಿಸಿದರು ಜಾತಿ ಮತ

ಭೇದ ಮರೆತು ಮಾನವೀಯ ಮೌಲ್ಯಗಳ ನೆಲೆಯಲಿ

ಬದುಕಿ ನೀತಿಯ ಮಾರ್ಗ ತೋರಿದ ಮಹನೀಯರು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*



Saturday, December 19, 2020

ಪುಟ್ಟಿಯ ಕಲ್ಪನೆ ಚಿತ್ರ ಕವನ ೧೫/೧೨/೨೦೨೦

 


ಕವನದ ಶೀರ್ಷಿಕೆ

*ಪುಟ್ಟಿಯ ಕಲ್ಪನೆ*


ಬಾಲೆಯು ಸಂಜೆ ಅಂದದಿ ಬರೆಯುತಿಹಳು

ಕಲ್ಪನ ಲೋಕದಿ ಸ್ವಚ್ಚಂದವಾಗಿ ವಿಹರಿಸುತಿಹಳು

ಬುಗುರಿಯು ಬಿನ್ನಾಣದಿ ತಿರುಗುವುದನು ಕಂಡಳು

ಹಕ್ಕಿಗಳ ಕಲರವಕೆ ತಾನೇ ಮನಸೋತಳು ಜಾಣೆ


ನದಿಗಳು ನರ್ತಿಸುತ ಹರಿವ ಮೋಜನು ಕಂಡಿಹಳು

ರಕ್ಕಸ ಅಲೆಗಳು ಅಪ್ಪಳಿಸದೆ ನದಿಗಳ ಕಲರವವು

ಹೂಗೊಂಚಲು ಗಿಡಗಳನೇಕ ಗಾಳಿಯ ಸೂಸುತಿಹವು

ಪುಟ್ಟಿಯ ಸ್ವಾಗತ ಕೋರುವ ಶುಕಪಿಕಗಳ ಸಮೂಹವು


ಬೆಳದಿಂಗಳ ಪೂರ್ಣ ಚಂದಿರನ ನೋಡಿ ನಲಿದಿಹಳು

ಆಕಾಶದಿ ಹೊಳೆಯುವ ನಕ್ಷತ್ರ ಪುಂಜಗಳ ನೋಟವು

ಲಕ್ಷಾಂತರ ಚುಕ್ಕೆಗಳು ಬಾಳಂಗಳಕೆ ಅಂದವ ಬಳಿದಿಹವು

ವೈಯ್ಯಾರದಿ ಈಜೋ ಮೀನಗಳ ಪುಟ್ಟಿಯು ಕಂಡಿಹಳು


ಮೋಡಗಳ ನಡುವೆ ನಡೆವ ಅನುಭವಕೆ ಪುಳಕಿತಳು

ಕಾಮನ ಬಿಲ್ಲಿನ ರಂಗು ರಂಗನು ನೋಡಿ ದಂಗಾದಳು

ಪಾತರಗಿತ್ತಿ ಪಕ್ಕ ಎಂದಾಡುತ ಚಿಟ್ಟೆಯ ಹಿಂದೋಡಿದಳು

ಬಾಲೆಯ ಕನಸು ನನಸಾಗಲು ಶುಭವನು ಕೋರುವೆವು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

Videos