Friday, November 13, 2020

ಹರಿಹರನ ಪುಷ್ಪ ರಗಳೆ ಕನ್ನಡ ಕಾವ್ಯೋತ್ಸವ - ೧೩

 


ಸ್ವರಚಿತ ಕವನ ೧೩/೧೧/೨೦೨೦

 ಕವನದ ಶೀರ್ಷಿಕೆ

*ಮಗಳು ಮತ್ತು ಗೊಂಬೆ*


ಮಗಳು ತನ್ನ

ಬೊಂಬೆಗಳಿಗೆ ಕಾಲು

ಕೈ ತಿಕ್ಕಿ ತೀಡಿ

ಜಳಕವ ಮಾಡಿಸಿ

ಚೂರು ಬಟ್ಟೆ ತೊಡಿಸಿ


ತಲೆಯ ಬಾಚಿ

ಮುಖ ಪೌಡರ್ ಹಚ್ಚಿ

ಚಂದ್ರ ಕುಂಕುಮ 

ಕಾಡಿಗೆ ಕೈಗೆ ಬಳೆ

ಹಾಕಿ ಅಲಂಕಾರವ


ಗೈದು ಅದಕ್ಕೆ

ಒಂದು ಹೆಸರು ಬೇರೆ

ಕೊಟ್ಟು ಅದನ್ನು

ತನ್ನ ಮಗಳು ಎಂದು

ಹೇಳಿ ಮುದ್ದಾಡುವಳು


ಮಗು ಅತ್ತಾಗ

ರಮಿಸುವಂತ ಪರಿ

ಯಾರನ್ನಾದರೂ

ಮೀರಿಸುವ ಶಕ್ತಿಯೇ

ಅಮೋಘ ಅನುಭವ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ










೯ನೇ ಕನ್ನಡ ಊರುಭಂಗ ಗದ್ಯಭಾಗದ ವೀಡಿಯೊ ಭಾಗ - ೧ ೧೩/೧೧/೨೦೨೦

 


Thursday, November 12, 2020

ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೧೩/೧೧/೨೦೨೦

ಸೂತ್ರವಿರದ ಗಾಳಿಪಟ ಕವನ 

ದಿನಾಂಕ : ೧೩-೧೧-೨೦೨೦



ಆಂಡಯ್ಯನ ಕಬ್ಬಿಗರ ಕಾವ್ಯ ಕನ್ನಡ ಕಾವ್ಯೋತ್ಸವ - ೧೨

 


ಸ್ವರಚಿತ ಕವನ ೧೨/೧೧/೨೦೨೦

 ಕವನದ ಶೀರ್ಷಿಕೆ

*ನನ್ನಯ ಪಾಠಿ*

{ಟಂಕಾ ಪ್ರಕಾರ}


ಮೊದ ಮೊದಲು

ಶಾಲೆಗೆ ಹೋಗೋ ಮುನ್ನ

ಕೊಡಿಸುವರು

ಪಾಠಿ ಅಕ್ಕರೆ ಮಗು

ಕಲಿಯುತ ನಲಿದು


ಪಾಠಿ ಬಳಪ

ಹಿಡಿದು ಕಲಿಯಲು

ಕುಳಿತು ತಿದ್ದಿ

ತಿದ್ದಿ ತೀಡಲು ಹೇಳಿ

ಕಲಿಸುವರು ಪಾಠ


ಅಕ್ಕರವನು

ಕಲಿತರೆ ಸಕ್ಕರೆ

ನಗು ಮೂಡಲು

ಅಕ್ಕರದಿ ಅಪ್ಪುಗೆ

ತಾಯಿಯು ನೀಡುವಳು


ನನ್ನಯ ಪಾಠಿ

ಬಣ್ಣದ ಪಾಠಿ ಸರ

ಸರ ಅಕ್ಕರ

ಕಲಿತೆ ಬಿಟ್ಟೆ ಎಂದು

ಹಿಗ್ಗಿ ಸಂತಸ ಪಟ್ಟೆ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



೧೦ನೇ ಕನ್ನಡ ಛಲಮನೆ ಮೆರೆವೆಂ ಪದ್ಯ ಭಾಗದ ವೀಡಿಯೊ ಭಾಗ - ೨ ೧೨/೧೧/೨೦೨೦

 


Wednesday, November 11, 2020

ರುದ್ರಭಟ್ಟನ ಜಗನ್ನಾಥ ವಿಜಯ ಕನ್ನಡ ಕಾವ್ಯೋತ್ಸವ - ೧೧

 


ಸ್ವರಚಿತ ಕವನ ೧೧/೧೧/೨೦೨೦

 ಕವನದ ಶೀರ್ಷಿಕೆ

*ಬಣ್ಣದ ಬುಗುರಿ*

(ಟಂಕಾ ಪ್ರಕಾರ)


ಚಿತ್ರ ವಿಚಿತ್ರ

ಬಣ್ಣದ ಬುಗುರಿಯು

ಕೈಯಲ್ಲಿರಲು

ನಮ್ಮಯ ಗೆಳೆಯರು

ನಕ್ಕು ನಲಿಯುವರು


ಜಾಳಿ ಬೀಸಲು

ಗಿರಗಿರ ತಿರುಗೋ

ನನ್ನ ಬಗುರಿ

ಯಾರು ಮಾಡಿದ ಮೋಡಿ

ತಿಳಿಯದು ನನಗೆ


ಚಿಣ್ಣರ ದಂಡು

ನಾ ಮುಂದು ನೀ ಮುಂದೆಂದು

ಹಾಡಿಸುತಲೇ

ಹಲವರು ಅಂಗೈಲಿ

ಆಡಿಸಿ ಕೊಳ್ಳುವರು


ತುಂಟಾಟ ಮಾಡಿ

ಚೇಡಿಸಿ ಕಾಡಿಸುತ

ಸಂಜೆಯತನ

ಊಟ ಮರೆತು ಆಟ

ಆಡುತ ಹಿಗ್ಗುವರು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ






Tuesday, November 10, 2020

ಜನ್ನನ ಯಶೋಧರ ಚರಿತೆ ಕನ್ನಡ ಕಾವ್ಯೋತ್ಸವ - ೧೦

 


ಸ್ವರಚಿತ ಕವನ ೧೦/೧೧/೨೦೨೦

 ಕವನದ ಶೀರ್ಷಿಕೆ

*ಸೂತ್ರವಿರದ ಗಾಳಿಪಟ*

(ಟಂಕಾ ಪ್ರಕಾರ)


ಮಕ್ಕಳೆಲ್ಲರೂ

ಕೇಳಿ ಬದುಕು ನೀವು

ಅಂದುಕೊಂಡಂತೆ

ಸುಲಭವಲ್ಲ ಬಹು

ಜಾಗೃಕರಾಗಬೇಕು


ಅಪ್ಪಿತಪ್ಪಿಯೂ

ತಪ್ಪು ಹೆಜ್ಜೆ ಇಟ್ಟರೆ

ಕಷ್ಟ ತಪ್ಪದು

ನೀತಿ ಮಾರ್ಗವ ಹಿಡಿ

ನಂಬಿಕೆಯಿಂದ ನಡೆ


ಹದಿ ಹರೆಯ

ವಯಸ್ಸಿನಲಿ ದಾರಿ

ಬಿಡಬಾರದು

ಪ್ರೀತಿ ಪ್ರೇಮದ ಬಗ್ಗೆ

ಹುಷಾರಾಗಿರಬೇಕು


ಚೆನ್ನಾಗಿ ಓದಿ

ಮುಂದೆ ಬಂದರೆ ಬಾಳು 

ಬಂಗಾರ ಇಲ್ಲ 

ಸೂತ್ರವಿರದ ಗಾಳಿ

ಪಟದಂತೆ ಆದೀತು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ


 

೮ನೇ ಕನ್ನಡ ಅಮ್ಮ ಗದ್ಯಭಾಗದ ವೀಡಿಯೊ ಭಾಗ - ೧ ೧೦/೧೧/೨೦೨೦

 


Monday, November 9, 2020

ಸ್ವರಚಿತ ಕವನ ೦೯/೧೧/೨೦೨೦

 ಕವನದ ಶೀರ್ಷಿಕೆ

*ಮಗುವಿನ ಮುಗ್ಧ ನಗು*

(ಟಂಕಾ ಪ್ರಕಾರ)


ಮಗು ನೀ ನಗು

ಕಪಟ ಮೋಸವಿಲ್ಲ

ಸದಾ ನಿನ್ನಲ್ಲಿ

ಉಲ್ಲಾಸದಿ ನಕ್ಕರೆ

ಕಾಣುವೆ ನೀ ಸುಂದರ


ಜಾತಿಯ ಕೊಂಕು

ಸೋಕದಂತೆ ಬೆರೆವ

ಮುಗ್ಧ ಮನಸ್ಸು

ನಿನ್ನದಲ್ಲವೇ ಜಾಣ

ದೊಡ್ಡವರೇ ದಡ್ಡರು


ನಿಮ್ಮಂತೆ ಏಕೆ

ಇರಲಾರರೋ ಕೇಳಿ

ನೋಡು ಯಾವಾಗ

ಕಲಿತಿರುವಿರಿ ಈ

ನಟನಾ ಚತುರತೆ


ಎಂದು ತಿಳಿದು

ತಿಳಿದು ಅನಾಚಾರ

ಮಾಡುವವರು

ಕಲಿಯಲಿ ನಿನ್ನಂತೆ

ಸೀದಾ ನಗುವುದನು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ




ನೇಮಿಚಂದ್ರನ ಲೀಲಾವತಿ ಪ್ರಬಂಧ ಕನ್ನಡ ಕಾವ್ಯೋತ್ಸವ - ೯

 


೧೦ನೇ ಕನ್ನಡ ಛಲಮನೆ ಮೆರೆವೆಂ ಪದ್ಯ ಭಾಗದ ವೀಡಿಯೊ ಭಾಗ - ೧ ೦೯/೧೧/೨೦೨೦

 


Sunday, November 8, 2020

ನಾಗಚಂದ್ರನ ರಾಮಚಂದ್ರ ಚರಿತ ಪುರಾಣ ಕನ್ನಡ ಕಾವ್ಯೋತ್ಸವ - ೮

 


ಸ್ವರಚಿತ ಕವನ ೦೮/೧೧/೨೦೨೦

 ಕವನದ ಶೀರ್ಷಿಕೆ

*ಹೃದಯದ ಮಾತು*


ಜಾತಿ ಮತ ಪಂಥ ಬೇದಗಳ

ಗಂಟು ಕಟ್ಟಿ ಐಕ್ಯತೆಯಿಂದ ಒಡಗೂಡಿ

ಜಗದ ಜನರೆಲ್ಲ ಒಂದಾಗಿ ಬಾಳುತ

ವಿಶ್ವ ಭ್ರಾತೃತ್ವ ಸೌಹಾರ್ದತೆಯು ನೆಲೆಸಲಿ


ನಾನು ಶ್ರೇಷ್ಠ ನೀನು ಕನಿಷ್ಠ ಎಂಬ ಭಾವನೆ 

ಅಳಿಸಿ ಸರ್ವರು ಸಮ ಬಾಳು ಸಮ ಪಾಲು

ಎನ್ನೋ ಘೋಷ ವಾಕ್ಯ ನಾನು ಕೇಳಲು

ಆತುರದಿ ಕಾಯುವ ಕಾಲ ಒದಗಿ ಬರಲಿ


ಗಂಡು ಹೆಣ್ಣಿನ ನಡುವಿನ ತಾರತಮ್ಯದ

ಗೋಡೆ ಉರುಳಿ ಇಬ್ಬರು ಸಮಾನರು

ಅನ್ನೋ ಸಹ ಜೀವನ ನಡೆಸಲು ಅತೀ

ಆನಂದದಿ ನಲಿದಾಡಿ ಕುಣಿಯುವದು ಮನ


ಆಸ್ತಿ ಅಂತಸ್ತು ನೋಡಿ ಮಣೆ ಹಾಕುವದ

ಬಿಟ್ಟು ಬಡವ ಬಲ್ಲಿದ ಒಂದೆ ತಾಟಿನಲಿ

ಉಣ್ಣುವ ಅವಕಾಶ ಬಂದು ಎಲ್ಲರೂ ಪ್ರೇಮದಿ

ಮಾತು ಕಥೆ ಆಡಿದಾಗಲೇ ನನ್ನ ಸಂಭ್ರಮವು


ಎಲ್ಲರ ಮನೆಯಲ್ಲೂ ತಂದೆ ತಾಯಿಯರ ಬಳಿ

ಅನುರಾಗದ ಮಾತಾಡಿ ಅತ್ತೆ ಸೊಸೆ ಪರಸ್ಪರ

ಕೂಡಿ ಅನ್ಯೋನ್ಯವಾಗಿದ್ದು ಹಿರಿಯರ ಯೋಗ

ಕ್ಷೇಮ ನೋಡುವಂತಾದರೆ ಹಿಗ್ಗುವುದು ನನ್ನ ಮನ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ





Videos