Saturday, November 7, 2020

ಸ್ವರಚಿತ ಕವನ ೦೭/೧೧/೨೦೨೦

 ಕವನದ ಶೀರ್ಷಿಕೆ

*ಸೇಡು*


ಯಾವ ವ್ಯಕ್ತಿಯಲ್ಲಿ ಸೇಡು ಮನೆಮಾಡಿರೆ

ಆ ಮನುಷ್ಯನ ಅಧಃಪತನಕ್ಕೆ ದಾರಿ

ಸೇಡಿನ ಕೈಯಲ್ಲಿ ಬುದ್ಧಿ ಕೊಟ್ಟರೆ

ಕೋಪದಿಂದ ಹಾಳಾಗುವುದು ಸಂಸಾರ


ಮನದಲ್ಲಿ ವೈಷಮ್ಯ ತಲೆದೋರುವವು

ಸಂಬಂಧಗಳು ಸಡೀಲವಾಗುವವು

ನಂಬಿಕೆಗಳು ಹುಸಿ ಎನಿಸುವವು

ಒಂಟಿತನ ಭಾವನೆಗಳು ಕಾಡುವವು


ಕೋಪಿಷ್ಠನಾದವನಿಗೆ ಗೌರವ ಸಿಗದು

ಅದಕ್ಕಾಗಿ ಹತೋಟಿಗೆ ತರಲು ಸದಾ

ಪ್ರಯತ್ನ ಮಾಡುತ ಮನೋನಿಗ್ರಹದ

ಸಂಕಲ್ಪ ತೊಟ್ಟರೆ ವ್ಯಕ್ತಿತ್ವ ವಿಕಸವಾಗುವುದು


ಪ್ರೀತಿ ವಿಶ್ವಾಸ ವಾತ್ಸಲ್ಯ ತೋರುತ

ಎಲ್ಲರಿಗೆ ಬೇಕಾಗಿ ಒಂದಾಗಿ ಬಾಳುತ

ನೆಮ್ಮದಿ ಶಾಂತಿಯಿಂದ ಸಮಾನತೆ

ಸಹಬಾಳ್ವೆಯಡೆಗೆ ಸಾಗೋದೆ ಜೀವನ ಪಥ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



🙏ಶುಭೋದಯ 🙏


 *ಬರಹಗಾರರ ಬಳಗ ರಾಜ್ಯ ಘಟಕ** 

          *ಹೂವಿನಹಡಗಲಿ* 


 *ಕಾವ್ಯಸೃಷ್ಠಿ-೨೧೩* 

೭/೧೧/೨೦೨೦-ಶನಿವಾರ

 *ವಿಷಯ-ಸೇಡು* 

ನಿರ್ವಹಣೆ- *ಶ್ರೀಸಂತೋಷ* *ನಿಂಗಾಪೂರ*

 *ಗದಗ*

   

ಕವಿತೆ ೧೬ ರಿಂದ ೨೦ ಸಾಲಿರಲಿ


 *ಗಮನಿಸಿ*

೧.ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ

೨.ಗೋಷ್ಠಿಯಮದ್ಯೆ ಬೇರೆ ಏನನ್ನೂ ಹಾಕಬಾರದು


 *ಸರ್ವ ಸಾಹಿತ್ಯದ ಸಿರಿ ಸಂಪತ್ತಿನ ಸಂತೋಷನ ಸಂಗಡಿಗರಿಗೆ ಸ್ವಾಗತ ಸುಸ್ವಾಗತ* 


👍🙏🥰🌹

Friday, November 6, 2020

KARTET:04-10-2020 ರಂದು ಜರುಗಿದ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆ-2019 ರ ಪರೀಕ್ಷೆಯ ಪರೀಷ್ಕ್ರತ ಕೀ ಉತ್ತರ ಪ್ರಕಟಣೆ

 ಕೀ ಉತ್ತರಗಳ ಪ್ರಕಟಣೆ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಪತ್ರಿಕೆ - ೧ರ ಪರಿಷ್ಕೃತ ಉತ್ತರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಪತ್ರಿಕೆ - ೨ರ ಪರಿಷ್ಕೃತ ಉತ್ತರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ನಾಗವರ್ಮನ ಕರ್ನಾಟಕ ಕಾದಂಬರಿ ಕಾವ್ಯೋತ್ಸವ-೬

 


ಸ್ವರಚಿತ ಕವನ ೦೬/೧೧/೨೦೨೦

 ಕವನದ ಶೀರ್ಷಿಕೆ

*ಸ್ವಾತಂತ್ರ್ಯ ಸಂಗ್ರಾಮ*


ಸ್ವಾತಂತ್ರ್ಯ ಸಂಗ್ರಾಮದಲಿ ಸಾವಿರಾರು ಜನ

ಹೋರಾಡಿ ವೀರ ಮರಣ ಹೊಂದಿದರು ತಮ್ಮ

ಕುಟುಂಬದ ಮಾನ,ಪ್ರಾಣ,ಆಸ್ತಿಯ ಲೆಕ್ಕಿಸದೆ

ಹಲವರು ಮನೆ - ಮಠ ತೊರೆದು ಬ್ರಿಟೀಷರ

ವಿರುದ್ಧ ಸಿಡಿದೆದ್ದು ಬಂಡಾಯದ ಬಾವುಟ

ಹಾರಿಸುವ ಮೂಲಕ ಐಕ್ಯತೆ ಮೂಡಿಸಿದರು


ರಾಮ ರಾಜ್ಯದ ಕನಸು ಕಂಡು ನನಸಾಗಲು

ಮಾಡು ಇಲ್ಲವೇ ಮಡಿ ಎಂಬ ಕರೆ ನೀಡಿದರು

ಹೋರೋಟದ ಕಾವು ಹೆಚ್ಚಿ ಆಂಗ್ಲರ ಸೊಲ್ಲು

ಅಡಗಿಸಲು ಹಗಲಿರುಳೆನ್ನದೆ ಸಂಘಟಿಸಿದರು

ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ್ದ

ಯುವಕರ ದಂಡು ಹೂಡಿದರು ದಂಗೆಗಳನು


ಕ್ರಾಂತಿ ಕಿಡಿ ಹೊತ್ತಿಸಿದರು ತೀವ್ರಗಾಮಿಗಳು

ಸತ್ಯ ಅಹಿಂಸೆ ತ್ಯಾಗ ಬಲಿದಾನ ಬಿತ್ತಿದವರು

ಮಹಾತ್ಮ ಗಾಂಧೀಜಿಯವರು ಉಪವಾಸ

ಸತ್ಯಾಗ್ರಹ ಎಂಬ ಅಸ್ತ್ರ ಬಳಸಿ ಅಧಿಕಾರಿಗಳ

ಬಗ್ಗುಬಡಿದರು ಮಂದಗಾಮಿ ನಾಯಕರು

ಹೀಗೆ ಭಾರತಾಂಬೆಯ ವಿಮೋಚನೆ ಆಗುತ್ತದೆ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ






ನೇ ಕನ್ನಡ ಮರಳಿ ಮನೆಗೆ ಪದ್ಯ ಪಾಠದ ವೀಡಿಯೊ ೦೬/೧೧/೨೦೨೦

 


Thursday, November 5, 2020

ರನ್ನನ ಅಜಿತನಾಥ ಪುರಾಣ ಕನ್ನಡ ಕಾವ್ಯೋತ್ಸವ - ೫


ಸ್ವರಚಿತ ಕವನ ೦೫/೧೧/೨೦೨೦

 ಕವನದ ಶೀರ್ಷಿಕೆ

*ಆತ್ಮ ಗೌರವ*


ಮೊದಲು ನಮ್ಮನ್ನು ನಾವು ಪ್ರೀತಿಸಬೇಕು

ಇರಲಿ ನಮ್ಮ ಮೇಲೆ ನಾಮಗೆ ವಿಶ್ವಾಸ

ಹಿಡಿದ ಕಾರ್ಯ ಸಾಧಿಸುವೆನೆಂಬ ಛಲ

ನಮ್ಮಲ್ಲಿ ಮೂಡಿರಲು ಗೆಲುವು ನಮ್ಮದೆ


ಇಟ್ಟ ನಂಬಿಕೆಗೆ ತಕ್ಕಂತೆ ಕೆಲಸ ಮಾಡಬೇಕು

ಸತತ ಪರಿಶ್ರಮ ಪ್ರಯತ್ನ ತುಂಬಾ ಅಗತ್ಯ

ನಿಮ್ಮನ್ನು ನಾವು ಮೊದಲು ಗೌರವಿಸಬೇಕು

ಧೈರ್ಯದಿ ಮುನ್ನುಗ್ಗಿದರೆ ದಡ ತಲುಪಬಹುದು


ಸರಿ ತಪ್ಪುಗಳ ಯೋಚಿಸಿ ಮುನ್ನಡೆಯಬೇಕು

ಸರಿಯಾದ ದಾರಿಯಲ್ಲಿ ನಾವು ಸಾಗಬೇಕು

ಸಾಮರಸ್ಯದಿ ಬಾಳೋದು ಕಲಿಯಬೇಕು

ತಾನಾಗಿ ಬರುತವದು ನಮ್ಮನು ಗೌರವಿಸುವ ದಿನ


ನಮ್ಮ ನಂಬಿ ಬಾಳುವವರು ಇರುವರು ಅನೇಕ

ಅವರ ಕಡೆಗೂ ಕೊಡೋಣ ಸ್ವಲ್ಪ ನಮ್ಮ ಗಮನ

ಮನೆಯ ಸದಸ್ಯರ ಮಮತೆ ಪ್ರೀತಿ ವಾತ್ಸಲ್ಯವನು

ಗಳಿಸಿಕೊಂಡು ಉಳಿಸಿಕೊಂಡು ಹೋದರೆ ಸಾರ್ಥಕ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



ರನ್ನನ ಗದಾಯುದ್ಧ ಕನ್ನಡ ಕಾವ್ಯೋತ್ಸವ - ೪


 

೧೦ನೇ ಕನ್ನಡ ವ್ಯಾಘ್ರ ಗೀತೆ ಗದ್ಯಭಾಗದ ವೀಡಿಯೊ ಭಾಗ - ೩ ೦೫/೧೧/೨೦೨೦

 


Tuesday, November 3, 2020

Top family story

 Top family story


ಪತ್ನಿ ತೀರಿಕೊಂಡು ಇಂದಿಗೆ ನಾಲ್ಕು ದಿನಗಳಾಯಿತು.... 

ಆಕೆಯ ಅಂತ್ಯಸಂಸ್ಕಾರಕ್ಕೆ ಆಗಮಿಸಿದ ಸಂಬಂಧಿಕರು ಒಬ್ಬೊಬ್ಬರಾಗಿ ಹೊರಟು ಹೋದರು... 


ಕೊನೆಗೆ ಸಾವಿನ ಗಂಧವಿರುವ ಆ ಮನೆಯಲ್ಲಿ ನಾನು ಮತ್ತು ನನ್ನ ಮಕ್ಕಳು ಮಾತ್ರವಾಗಿ ಬಾಕಿಯಾದೆವು...


ಆಕೆ ಜೊತೆಯಲ್ಲಿಲ್ಲ ಎಂಬುದನ್ನು ನಂಬುವುದಕ್ಕೂ ನನಗೆ ಕಷ್ಟವಾಗುತ್ತಿದೆ....


ರೀ... ಇಲ್ಲಿ ನೋಡಿ... ಅಂತ ಹೇಳುತ್ತಾ ನನ್ನ ಬಳಿ ಓಡಿ ಬರುವುದನ್ನು ನಿನ್ನೆ ಎಂಬಂತೆ ನಾನು ನೆನಪಿಸಿಕೊಂಡೆ...


ನಮ್ಮನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಸೋತು ಹೋದ ನತದೃಷ್ಟೆಯಾಗಿದ್ದಳು ಆಕೆ..... 


ನಮ್ಮ ಮೇಲಿನ ಅತಿಯಾದ ಪ್ರೀತಿಯಿಂದಲೇ ಇರಬೇಕು ಆಕೆ ಯಾವತ್ತೂ ನಮ್ಮಿಂದ ದೂರ ಹೋಗಿರಲಿಲ್ಲ....


ತವರು ಮನೆಗೆ ಹೋದರೂ ಕೂಡಾ ಮನೆಯಲ್ಲಿ ಅವರು ಮತ್ತು ಮಕ್ಕಳು ಮಾತ್ರ ಇರೋದು ಅಂತ ಕಾರಣ ಹೇಳಿ ಸಂಜೆಯಾಗುತ್ತಲೇ ಓಡೋಡಿ ಮನೆ ತಲುಪುತ್ತಿದ್ದಳು... 

ನಿಜವಾಗಿಯೂ ಆಕೆ ಆಕೆಯ ಮನೆಗೆ ಹೋಗುವುದು ನನಗೆ ಇಷ್ಟವಿರಲಿಲ್ಲ.... ಅದು ಆಕೆಯ ಮೇಲಿನ ಪ್ರೀತಿಯಿಂದಾಗಿರಲಿಲ್ಲ. ಬದಲಾಗಿ, ಆಕೆ ಹೋದರೆ, ನಮಗೆ ಅಡುಗೆ ಮಾಡಿ ಬಡಿಸುವವರು ಯಾರೂ ಇಲ್ಲ ಎಂಬ ಸ್ವಾರ್ಥವಾದ ಕಾರಣವಾಗಿತ್ತು...


ನಾನು ಮತ್ತು ಮಕ್ಕಳು ರಜಾದಿನಗಳಲ್ಲಿ ಟಿ ವಿಯ ಮುಂದೆ ಒಂದೊಂದು ಕಾರ್ಯಕ್ರಮವನ್ನು ನೋಡಿ ಖುಷಿಪಡುವಾಗ, ಅಡುಗೆ ಮನೆಯಲ್ಲಿ ಅಡುಗೆ ಮಾಡುವುದರಲ್ಲಿ ನಿರತಳಾಗಿರುತ್ತಿದ್ದಳು ಆಕೆ... 


ಯಾವಾಗಲಾದರೂ ಸ್ವಲ್ಪ ಟಿ ವಿ ನೋಡೋದಕ್ಕೆ ನಮ್ಮ ಜೊತೆ ಬಂದು ಕುಳಿತರೆ, - ಅಮ್ಮಾ ನೀರು...

ಲೇ.. ಸ್ವಲ್ಪ ಟೀ ಮಾಡು...

ಅಂತ ಎಲ್ಲಾ ಹೇಳಿ ಆಕೆಯನ್ನು ನಾವು ಆ ಅಡುಗೆ ಕೋಣೆಗೇ ವಾಪಾಸ್ ಕಳುಹಿಸುತ್ತಿದ್ದೆವು...


ನಾನು ಹೇಳದೆಯೇ ಎಲ್ಲವನ್ನೂ ಅರ್ಥ ಮಾಡಿಕೊಂಡು ನನ್ನ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದಳು...  


ಇಂದು ಈಗ ಒಂದು ಕಪ್ ಟೀ ಮಾಡಿಕೊಡಲಿಕ್ಕೋ...,

ಒಂದು ಲೋಟ ನೀರು ಕೊಡಲಿಕ್ಕೋ, ಆಕೆ ಜೊತೆಯಲ್ಲಿಲ್ಲ ಎಂಬ ಕಟು ಸತ್ಯವನ್ನು ನಾನು ನೋವಿನಿಂದಲೇ ಅರಿತೆ.....


ಯಾವುದಕ್ಕೂ ಆಕೆ ದೂರುಗಳನ್ನು ಹೇಳಿದವಳಲ್ಲಾ... ಒಂದು ಒಳ್ಳೆಯ ಸೀರೆ ಕೂಡಾ ನಾನು ಖರೀದಿಸಿಕೊಟ್ಟಿರಲಿಲ್ಲ‌......

ಒಂದು ಸಿನೆಮಾ ನೋಡಲು ಕೂಡಾ ಆಕೆಯನ್ನು ಜೊತೆಯಲ್ಲಿ ಕರಕ್ಕೊಂಡೋಗಿರಲಿಲ್ಲ...

ಕ್ಲಬ್, ಪಾರ್ಟಿ ಅಂತ ನಾನು ತಡವಾಗಿ ಮನೆಗೆ ಬರುವಾಗ ಆಕೆ ಗಾಬರಿಯಿಂದ ಯಾಕೆ ತಡವಾಯಿತು ಅಂತ ಕೇಳುವಾಗ ನಾನು ಆಕೆಯ ಪ್ರಶ್ನೆಯನ್ನು ಲೆಕ್ಕಿಸದೆ ನಿರ್ಲಕ್ಷಿಸುತ್ತಿದ್ದೆ.....


ರೀ... ನೋಡಿ.. ಕರೆಂಟ್ ಬಿಲ್ ಪಾವತಿಸಬೇಕಾದ ಕೊನೆಯ ದಿನ ನಾಳೆ... 


ನೋಡಿ ಹಾಲಿನವನಿಗೆ ದುಡ್ಡು ಕೊಡಬೇಕಾದ ಸಮಯ ಹತ್ತಿರ ಬಂತು...


ಪೇಪರ್ ನವ ನಿನ್ನೆ ದುಡ್ಡು ಕೇಳಿ ಹೋದ...


ಮಕ್ಕಳ ಶಾಲೆಯ ಫೀಸ್ ನಾಳೆನೇ ಕೊಡಬೇಕು ರೀ.....


ನೋಡಿ ನಿಮ್ಮ ಬಿ ಪಿ ಯ ಮಾತ್ರೆ ಖಾಲಿಯಾಗಿದೆ...


ಹಾಗೆ ಆಕೆಯ ಬಯಕೆ ಮತ್ತು ಬೇಡಿಕೆಗಳನ್ನು ಬಿಟ್ಟು, ಉಳಿದ ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಆಕೆ ನೆನಪಿಸುವಳು.....


ಇನ್ನು ಹಾಗೆ ನೆನಪಿಸುವವರು ಯಾರೂ ಇಲ್ಲ..


ರಾತ್ರಿ ಕೆಲಸವೆಲ್ಲಾ ಮುಗಿಸಿ, ನನ್ನ ಪಕ್ಕದಲ್ಲಿ ಬಂದು ಮಲಗುವಾಗ, ಎದೆ ನೋಯುತ್ತಿದೆ, ಕಾಲು ನೋಯುತ್ತಿದೆ ಅಂತ ಆಕೆ ಹೇಳುವಾಗ, - ಅದು ನಿನಗೆ ಮನೆಯಲ್ಲಿ ಏನೂ ಕೆಲಸವಿಲ್ಲದೆ ಸುಮ್ಮನೆ ಕುಳಿತುಕೊಳ್ಳುತ್ತಿಯಲ್ಲಾ..

ಬೆಳಿಗ್ಗೆ ಐದು ಗಂಟೆಗೆ ಎದ್ದು ಸ್ವಲ್ಪ ವಾಕಿಂಗ್ ಮಾಡಿದರೆ ಎಲ್ಲಾ ಸರಿಹೋಗುತ್ತೆ.. ಅಂತ ನಾನು ಹೇಳುವಾಗ, ಆಕೆಯ ಕಣ್ಣುಗಳು ತುಂಬುವುದನ್ನು ನಾನು ನೋಡದ ಹಾಗೆ ನಟಿಸುತ್ತಾ ತಿರುಗಿ ಮಲಗುತ್ತಿದ್ದೆ...


ಕೊನೆಗೆ ಆ ಎದೆ ನೋವು ಹಾರ್ಟ್ ಅ್ಯಟೇಕ್ ನ ರೂಪದಲ್ಲಿ ಬಂದು ಆಕೆಯನ್ನು ಕರಕೊಂಡು ಹೋಗುವಷ್ಟರಲ್ಲಿ ಆಕೆಯ ನೋವನ್ನು ಅರ್ಥಮಾಡಿಕೊಳ್ಳಲು ತುಂಬಾ ತಡಮಾಡಿಬಿಟ್ಟೆ...


ಮನೆಗೆಲಸಗಳನ್ನು ಮಾಡುತ್ತಾ , ಆಕೆಯ ನೆನಪುಗಳೊಂದಿಗೆ ಇಂದಿಗೆ ನಾಲ್ಕು ದಿನಗಳನ್ನು ದೂಡಿ ಮುಗಿಸಿದೆ... ಮನೆಗೆಲಸ ಅಷ್ಟು ಸುಲಭವಲ್ಲ ಎಂಬ ಕಟುಸತ್ಯವನ್ನು ಬಹುಬೇಗನೆ ಅರಿತುಕೊಂಡೆ..... 


ಆಕೆಯನ್ನು ದೂರಿದ ದಿನಗಳನ್ನು, ಚುಚ್ಚು ಮಾತುಗಳಿಂದ ಆಕೆಯನ್ನು ನೋಯಿಸಿದ ದಿನಗಳನ್ನು ನಾನು ಶಪಿಸುತ್ತಾ ಸ್ವತಃ ಮರುಗತೊಡಗಿದೆ....


ನಾನು ಕೆಲಸಕ್ಕೆ ಹೋಗಲು ಹೊರಡುವಾಗ, ಐರನ್ ಮಾಡಿಟ್ಟ ಬಟ್ಟೆಗಾಗಿ ಹುಡುಕಾಡಿದೆ.....


ರೀ... ನೀವು ಈ ಕಂದು ಬಣ್ಣದ ಶರ್ಟ್ ಧರಿಸಿ... ಇದು ನಿಮಗೆ ಚೆನ್ನಾಗಿ ಕಾಣಿಸುತ್ತಿದೆ. ಅಂತ ಆಕೆ ಹೇಳುವ ಹಾಗೆ ನನಗೆ ಅನಿಸಿತು......


ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ನನಗಾಗಿ ಯಾರೂ ಬಾಗಿಲು ತೆರೆಯಲಿಲ್ಲ...... 

ನನ್ನ ಬರುವಿಕೆಗಾಗಿ ಯಾರೂ ಕಾದು ಕೂರಲಿಲ್ಲ....

ಯಾಕೆ ಇಷ್ಟು ತಡಮಾಡಿ ಬಂದಿದ್ದೀರಿ ಅಂತ ಯಾರೂ ನನ್ನತ್ರ ಗಾಬರಿಯಿಂದ ಕೇಳಲಿಲ್ಲ....


ಕೊನೆಗೆ ನಾನು ಬಾಗಿಲನ್ನು ದೂಡಿ ಒಳಗೆ ಹೋದಾಗ, ಹಾಲ್ ನಲ್ಲಿ ನಾನು ಬಂದದ್ದು ಕೂಡಾ ಅರಿಯದೆ, ಮಕ್ಕಳು ಮೊಬೈಲ್ ನಲ್ಲಿ ಮಗ್ನರಾಗಿದ್ದರು... ಅವರ ಪಕ್ಕದಲ್ಲಿ ತಿಂದ ಪಾತ್ರೆಗಳು ಎಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ನಾನು ದುಃಖದಿಂದ ನೋಡಿದೆ....


ಆಕೆಯಿದ್ದಾಗ ಸ್ವಚ್ಛವಾಗಿದ್ದ ಮನೆಯು ಇಂದು ಆಕೆಯಿಲ್ಲದಾಗ ಹೀನವಾಗಿ ಇರುವ ಮನೆಯ ಅವ್ಯವಸ್ಥೆಯನ್ನು ನೋಡಿ, ನನ್ನ ಹೃದಯವು ಮರುಗಿತು...


ಸ್ನಾನ ಮುಗಿಸಿ, ಒಂದು ಕಪ್ ಟೀ ಗಾಗಿ ನಾನು ಅಡುಗೆ ಮನೆಗೆ ಹೋದೆ... 

ವಾಷ್ ಬೆಯ್ಸನ್ ನಲ್ಲಿ 

ಊಟ ಮಾಡಿದ ತಟ್ಟೆಗಳು ಮತ್ತು ನೂಡಲ್ಸ್ ನ ಖಾಲಿ ಪ್ಯಾಕೆಟ್ ಗಳು ಮಾತ್ರ ನನಗೆ ಕಾಣಿಸಿತು....


ಪಾತ್ರೆಗಳನ್ನೆಲ್ಲಾ ಕ್ಲೀನ್ ಮಾಡಿ, ಫ್ರಿಡ್ಜ್ ನಿಂದ ಒಂದು ಆ್ಯಪಲ್ ತೆಗೆದು ಕಟ್ ಮಾಡಿ ತಿಂದು ಬೆಡ್ ರೂಮಿಗೆ ಬಂದು ಮಲಗಿದೆ....


ಲೈಟ್ ಆಫ್ ಮಾಡುವುದಕ್ಕೆ ಮುಂಚೆ ಗೋಡೆಯ ಮೇಲೆ ತೂಗುಹಾಕಿದ ಆಕೆಯ ಮುಗುಳ್ನಗುವ ಭಾವಚಿತ್ರವನ್ನೊಮ್ಮೆ ತುಂಬಾ ದುಃಖದಿಂದಲೇ ನಾನು ನೋಡಿದೆ.....,.


ಆಕೆಯನ್ನು ನಿರ್ಲಕ್ಷಿಸದೇ ಇದ್ದಿದ್ದರೆ, ಇಂದು ನಾನು ಸಂತೋಷದಿಂದ ಇರುತ್ತಿದ್ದೆ ಅಂತ ನೆನೆದು ಎರಡು ಹನಿ ಕಣ್ಣೀರು ನನ್ನ ಕಣ್ಣಿಂದ ಸುರಿಯಿತು.....


ಈ ಕಥೆಯನ್ನು ಓದಿದವರಲ್ಲಿ ಈ ಕಥೆಯ ಕಥಾ ನಾಯಕ ನಾನೇ ಅಂತ ಯೋಚಿಸುವವರು ಅನೇಕರು ಇರಬಹುದಲ್ಲವೇ...?

ಅಂತಹವರಿಗೆ ನಾನು ಹೇಳಬಯಸುವುದೇನೆಂದರೆ - 

ಕಣ್ಣುಗಳಿರುವಾಗಲೇ ಅದರ ಬೆಲೆ ಗೊತ್ತಾಗುವುದು...

ಕಣ್ಣಿನ ದೃಷ್ಟಿ ನಷ್ಟವಾದ ನಂತರ ಕಣ್ಣಿನ ಮಹತ್ವವನ್ನು ಹೇಳಿ ಏನೂ ಪ್ರಯೋಜನವಿಲ್ಲ...

ಪಂಪ ಭಾರತ ಕನ್ನಡ ಕಾವ್ಯೋತ್ಸವ - ೩

 


ಸ್ವರಚಿತ ಕವನ ೦೩/೧೧/೨೦೨೦

 ಕವನದ ಶೀರ್ಷಿಕೆ

*ಯಾರು ಸಿರಿವಂತರು?*


ಮನೆಗೆ ಬಂದ ಅತಿಥಿಗಳಿಗೆ

ಗೌರವ ನೀಡದವರಂತು ಅಲ್ಲ

ಅಧಿಕಾರ ದರ್ಪದಿಂದ ವರ್ತಿಸುವವ

ಖಂಡಿತ ಅಲ್ಲವೇ ಅಲ್ಲ


ಗುರುಹಿರಿಯರಿಗೆ ಗೌರವಿಸದಿರುವ

ವ್ಯಕ್ತಿಯಂತು ಅಲ್ಲವೇ ಅಲ್ಲ

ಕುತ್ಸಿಕ ಮೋಸ ವಂಚನೆ ದುರ್ಬುದ್ಧಿ

ಹೊಂದಿದವರಂತು ಅಲ್ಲ


ಜನರೊಂದಿಗೆ ಬೆರೆಯದಿರುವ

ಅನೂನ್ಯ ಸಂಬಂಧವಿರವರಂತು ಅಲ್ಲ

ಅಕ್ರಮ ಅತ್ಯಾಚಾರ ವಾಮ ಮಾರ್ಗದಲಿ

ನಡೆವವನಂತು ಅಲ್ಲವೇ ಅಲ್ಲ


ಮತ್ಯಾರು ಸಿರಿವಂತರು ಬಡತನವಿರಲಿ

ಸಿರಿತನವಿರಲಿ ಎಲ್ಲರನ್ನು ಗೌರವಿಸುವವರು

ಮೌಲ್ಯಯುತ ಸತ್ಯ,ನೈತಿಕತೆಯ ಹಾದಿಯಲಿ

ನಡೆವವರು ನಿಜವಾದ ಸಿರಿವಂತನಾಗುವರು


ರಚನೆ

ಯಗುಮಾಶ

ಯರಗೋಳ ತಾ.ಜಿ. ಯಾದಗಿರಿ








೮ನೇ ಕನ್ನಡ ಭರವಸೆ ಪದ್ಯ ಭಾಗದ ವೀಡಿಯೊ ೦೩/೧೧/೨೦೨೦

 


Monday, November 2, 2020

೯ನೇ ಕನ್ನಡ ಹೊಸ ಹಾಡು ಪದ್ಯ ಸ್ವಂತ ಕವಿತೆಯ ಓದು ಕಯ್ಯಾರ ಕಿಞ್ಞಣ್ಣ ರೈ ಅವರ ವಾಚನದ ವೀಡಿಯೊ

 


ಸ್ವರಚಿತ ಕವನ ೦೨/೧೧/೨೦೨೦

 ಕವನದ ಶೀರ್ಷಿಕೆ

*ತಾಳ್ಮೆ ಎಂಬ ಬೆಳಕು ಬೇಕು*


ಬಾಳ ಬೆಳಗಲು ತಾಳ್ಮೆ ಎಂಬ ಬೆಳಕು ಬೇಕು

ಶ್ರದ್ಧೆಯಿಂದ ಓದಿ ಜೀವನದಿ ಗೆಲ್ಲಬೇಕು 

ನಿತ್ಯವೂ ದುಡಿದು ಧನಿಕನಾಗಬೇಕು

ನೀತಿ ನಿಯಮದಿ ನಿತ್ಯವೂ ಬಾಳಬೇಕು


ಸಂಸಾರಲಿ ಬೈದು ಬುದ್ಧಿ ಹೇಳುವರು

ತಿದ್ದಿ ನಡೆದರೆ ಬಾಳು ಒಂದು ಬಂಗಾರ

ಹಿರಿಯರು ಸದಾ ಹಿತವನ್ನು ಬಯಸುವರು

ತಪ್ಪೆಂದು ಬಾವಿಸಿ ನೀ ಕೋಪಗೊಳ್ಳದಿರು


ಇವು ನಮ್ಮ ಏಳ್ಗೆಗೆ ಪೂರಕವಾಗಿವೆ ನೋಡಾ

ಧೈರ್ಯದಿಂದ ಕಷ್ಟವ ಎದುರಿಸಬೇಕು ನೋಡಾ

ಸುಖ ದುಃಖಗಳ ಸಮವಾಗಿ ಕಾಣಬೇಕು ನೋಡೋ

ಸಜ್ಜನರ ಸಹವಾಸ ಮಾಡೋದು ಮರೆಯಬೇಡೋ


ಜೀವನದಲ್ಲಿ ಸಹನೆ,ಸಹಬಾಳ್ವೆಯ ಬದುಕು

ಹೊಂದಾಣಿಕೆ,ಸ್ನೇಹ,ಸೌಹಾರ್ದತೆಯು ಸಾಕು

ಸತ್ಯ ನುಡಿ,ಸಂಸ್ಕೃತಿ, ಪರಂಪರೆ ಉಳಿಸಬೇಕು

ನಿರಹಂಕಾರದ ತಾಳ್ಮೆಯನು ರೂಢಿಸಿಕೊಳ್ಳಬೇಕು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ




ಜಾನಪದ ಮಹಾಭಾರತ ಕನ್ನಡ ಕಾವ್ಯೋತ್ಸವ - ೨


ಪಂಪನ ಆದಿಪುರಾಣ ಕನ್ನಡ ಕಾವ್ಯೋತ್ಸವ - ೧

 


ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಕಾವ್ಯೋತ್ಸವ ಜನಪದ ಮಹಾಭಾರತ ವೀಡಿಯೊ ೦೨/೧೧/೨೦೨೦

ಜನಪದ ಮಹಾಭಾರತ ವೀಡಿಯೊ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

೧೦ನೇ ಕನ್ನಡ ವ್ಯಾಘ್ರ ಗೀತೆ ಗದ್ಯಭಾಗದ ವೀಡಿಯೊ ಭಾಗ - ೨ ೦೨/೧೧/೨೦೨೦

 


Videos