Labels
- (3)
- ೧೦ನೇ ತರಗತಿ (51)
- ೮ನೇ ತರಗತಿ (27)
- ೯ನೇ ತರಗತಿ (26)
- Popular Links (9)
- Videos (2)
- ಕಥೆಗಳ ಸಂಗ್ರಹ (6)
- ಕನ್ನಡ ಕಾವ್ಯೋತ್ಸವ (31)
- ಜಯಂತಿಗಳು (2)
- ದಿನ ಪತ್ರಿಕೆಗಳು (3)
- ಪತ್ರಿಕೆಯಲ್ಲಿ ಪ್ರಕಟಿತ ಕವನಗಳು (56)
- ರಸಪ್ರಶ್ನೆ ಕಾರ್ಯಕ್ರಮ (7)
- ವ್ಯಾಕರಣ (2)
- ಶಿಕ್ಷಕರಿಗಾಗಿ (9)
- ಸ್ವರಚಿತ ಕವನಗಳು (181)
- ಹಳೆಯ ಪ್ರಶ್ನೆ ಪತ್ರಿಕೆಗಳು (2)
Friday, November 20, 2020
ಸ್ವರಚಿತ ಕವನ ೨೦/೧೧/೨೦೨೦
ಕವನದ ಶೀರ್ಷಿಕೆ
*ಜಾತ್ಯಾತೀತ ಭಾವನೆ*
ಮಾನವ ಎಷ್ಟೋ
ವರ್ಷ ಇತಿಹಾಸದಿ
ಬೆಳೆದರೇನು?
ಸಜ್ಜನನೆಂದು
ಪ್ರಖ್ಯಾತಿ ಪಡೆದರು
ಬಿಡದಾದನು
ಜ್ಯಾತಿಯ ಬೇರ
ಗಟ್ಟಿಯಾಗಿ ಹಿಡಿದ
ತನ್ನಂತೆ ಇರೋ
ಮನುಜರನು
ನೋಡನು ಸರಿಸಮ
ತಾ ಶ್ರೇಷ್ಠ ನೀನು
ಕನಿಷ್ಠ ಎಂಬ
ಮೇಲು ಕೀಳು ನಾಟಕ
ಬಿಟ್ಟರೆ ಆಗ
ಮನುಕುಲವೇ
ಒಂದು ಕುಟುಂಬವಾಗಿ
ಗಂಡು ಹೆಣ್ಣೆಂಬ
ಎರಡೇ ಜಾತಿ
ಇರುವವು ಅಂತಹ
ಕಾಲ ಬರಲಿ
ಸರ್ವರು ಜಾತಿ
ಮತ ಭೇದ ಮರೆತು
ಬಾಳೋಣ ನಾವು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
ಚಿತ್ರಕ್ಕೊಂದು ಕವನ ೧೯/೧೧/೨೦೨೦
ಕವನದ ಶೀರ್ಷಿಕೆ
*ಬರ್ರೋ ಹೆಣ ಬಂತು ಓಡಿ ಹೋಗೋಣ*
ಕರೋನ ಕಾಲದ ಹೆಣಕ್ಕಿಲ್ಲ ಬೆಲೆ
ಅರಿತು ನಡೆದರೆ ಮನುಜನಿಗೆ ನೆಲೆ
ಮುಟ್ಟಂಗಿಲ್ಲ ನೋಡಂಗಿಲ್ಲ ಕ್ಯಾಲ
ಕಕಲಾತಿ ಅಂತ ಪೂರ ತೋರಂಗಿಲ್ಲ
ಹಣ ಗಳಿಸಿ ಹೆಣ ಆದ್ರೆ ಕೇಳೋರ್ಯಾರು
ಇಲ್ಲೋ ಎಪ್ಪ ಜೀವಕ್ಕೆ ಅಂಜಿ ಕರೆ ಕರೆ
ಮನೆಬಿಟ್ಟು ಬರೊಂಗಿಲ್ಲೊ ಯ್ಯಾರ್ಯಾರು
ಸನಿಹ ಹೆಣ್ತಿ ಮಕ್ಳು ಇದ್ದಾಗಟ್ಯಾ ಮರೆಯದಿರು
ಬಂಧು ಬಾಂಧವರ ಸಂಬಂಧ ಗಟ್ಟಿ ಇಡ್ಕೋ
ಬದಕಿದಾಗ ಒಳ್ಳೆವ ಇದ್ದ ಅಂತ ಹೇಳಾಕ್ಕ
ಬರುತೈತೆ ನೀ ಏನ್ರಾ ಸಿಡ್ಕ ಪಿಡ್ಕ ಮಾಡ್ಕೋ
ಬ್ಯಾಡೋ ಚೆಂದ ಬಾಳೋಣ ಇಲ್ಲಿ ಇರೋ ತನ್ಕಾ
ಕಾಲ ಹೆಂಗ್ ಬರತೈತಿ ಹೇಳಾಕಬರಲ್ಲಾ
ಕೆಟ್ಟ ಸಮಯ ಬಂದ್ರೆ ಹುಡ್ಕಾಡ್ಕೊಂಡು ಎಲ್ಲಾ
ನಾನು ನಂದು ಅಂತ ಗಳಿಸಿದ್ದು ಒಯ್ಯೊಲ್ಲಾ
ಇದ್ದುದರಾಗ ಹಂಚಿಕೊಂಡು ಬದುಕು ಗೆಲ್ಲೋ
ಕರೋನ ಅಬ್ಬರಕ್ಕೆ ಸಿಕ್ಕು ಮಡಿದವರ ಪಾಡೆಲ್ಲಾ
ಊಳಾಕ ಕುಣಿ ತೋಡೋವರ ಗತಿ ಇಲ್ದೆ ಎಲ್ಲೋ
ಇದ್ದೋರೂ ಬರ್ರೋ ಹೆಣ ಬಂತು ಓಡಿ ಹೋಗೋಣ ಎಲ್ಲಾ
ಎಂದು ಓಡುವ ಪಾಡು ಬಾರದಿರಲಿ ಕರೋನ ಓಡಲಿ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Thursday, November 19, 2020
ಸ್ವರಚಿತ ಕವನ ೧೯/೧೧/೨೦೨೦
ಕವನದ ಶೀರ್ಷಿಕೆ
*ರಾಷ್ಟ್ರ ಪ್ರೇಮ*
ವಿಶ್ವಕ್ಕೆ ಶಾಂತಿ
ಮಂತ್ರ ಬೋಧಿಸಿದಂತ
ದೇಶ ನನ್ನದು
ಸ್ತ್ರೀಯ ರಕ್ಷಣೆ
ಗೌರವ ನೀಡುವಂತ
ದೇಶ ನನ್ನದು
ದೇಶಕ್ಕೆ ಒಂದೇ
ಮತದಾನದ ಹಕ್ಕು
ನೀಡಿದ ದೇಶ
ನಾಡ ಗಡಿಯ
ಕಾಯ್ವ ವೀರ ಯೋಧರು
ನಮ್ಮಯ ಹೆಮ್ಮೆ
ರಾಷ್ಟ್ರ ಗೀತೆಯು
ಧ್ವಜವೂ,ಲಾಂಚನವೂ
ಶೌರ್ಯ ಸಂಕೇತ
ವಂದೇ ಮಾತರಂ
ಗೀತೆ ಹಾಡುತ ದೇಶ
ಸೇವೆಗೈವೆವು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Wednesday, November 18, 2020
ಸ್ವರಚಿತ ಕವನ ೧೮/೧೧/೨೦೨೦
ಕವನದ ಶೀರ್ಷಿಕೆ
*ಸೌಹಾರ್ದತೆಯ ಸೆಲೆ*
ಭವ್ಯ ಭಾರತ
ಹಿಂದು ಮುಸ್ಲಿಂ ಕ್ರೈಸ್ತರ
ನೆಲೆಯ ಬಲೆ
ಕೈ ಮಾಡಿ ಕರೆದು
ಒಗ್ಗೂಡಿ ಐಕ್ಯತೆಯು
ಹೃದಯದಲ್ಲಿ
ಒಡಮೂಡಿದೆ
ನೋಡು ಕಲ್ಮಶವಿಲ್ಲ
ಮನದಲ್ಲೆಲ್ಲ
ಭಾರತಾಂಬೆಯೇ
ಸೌಹಾರ್ದತೆಯ ಸೆಲೆ
ಕಾಣಲಿ ಎಲ್ಲೆಲ್ಲೂ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Tuesday, November 17, 2020
ಸ್ವರಚಿತ ಕವನ ೧೭/೧೧/೨೦೨೦
ಕವನದ ಶೀರ್ಷಿಕೆ
*ಭ್ರಾತೃತ್ವ*
ಹೆಂಗೆಳೆಯರು
ಅಣ್ಣ ತಮ್ಮಂದಿರನು
ಅಕ್ಕರೆಯಿಂದ
ರಕ್ಷಾಬಂಧನ
ರಾಖಿ ಕಟ್ಟಿ ಭ್ರಾತೃತ್ವ
ಭಾವನೆಯಿಂದ
ಸಹೋದರರ
ಪ್ರೀತಿಯನು ಪಡೆದು
ತವರು ಮನೆ
ಸುಖ ನೆಮ್ಮದಿ
ಬಯಸಿ ಬೇಡುವರು
ಆ ದೇವರಿಗೆ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
ಸ್ವರಚಿತ ಕವನ ೧೬/೧೧/೨೦೨೦
ಕವನದ ಶೀರ್ಷಿಕೆ
*ದೀಪಾವಳಿ ಸಂಭ್ರಮ*
ದೀಪ ಹಚ್ಚೇವು
ನಾವೆಲ್ಲ ಮನೆಯಲ್ಲಿ
ಆ ಬೆಳಿಕಿನ
ಬೆಲೆ ಅರಿಯದಾದ್ವಿ
ಕಣ್ಣು ಚೆನ್ನಾಗಿ ಇದ್ರೆ
ಜೀವನದಲ್ಲಿ
ಹಲವು ವರ್ಷಗಳ
ಕಾಲ ಇಂತಹ
ಅನೇಕ ಬೆಳಗನು
ಕಾಣುವೆವು ಎಂಬುದು
ಮಕ್ಕಳು ತಾವು
ಪಟಾಕಿ ಸುಡುವಾಗ
ಎಚ್ಚಿರಿಸುತ
ಕಾವಲಾಗಿ ಇರೋಣ
ಅನಾಹುತ ತಪ್ಪೀತು
ಹಿರಿಯರಾದಿ
ಕಿರಿಯರಿಂದ ದೀಪ
ಬೆಳಗಿಸುವ
ಮೂಲಕ ದೀಪಾವಳಿ
ಸಂಭ್ರಮ ಪಡುವರು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Monday, November 16, 2020
Sunday, November 15, 2020
ಸ್ವರಚಿತ ಕವನ ೧೫/೧೧/೨೦೨೦
ಕವನದ ಶೀರ್ಷಿಕೆ
*ನಮ್ಮ ಬಾಲ್ಯ*
ಚಿಕ್ಕಂದಿನಲಿ
ಈಜು ಬುಗುರಿ ಆಟ
ಕಾಲ್ಚೆಂಡು ಫಣಿ
ಚೆಂಡು ಕಣ್ಣು ಮುಚ್ಚಾಲೆ
ಚಿಣಿ ದಾಂಡು ಲಗೋರಿ
ಮಾವು ಹುಣಸೆ
ಮರ ಏರಿ ಚಿಗುರು
ಹಣ್ಣುಹಂಪಲು
ತಿಂದು ಜೋಕಾಲಿ ಕಟ್ಟಿ
ಆಡೋದು ಅಂದ್ರೆ ಇಷ್ಟ
ಜಾರು ಬಂಡೆಗೆ
ಜಾರಿ ಜಾರಿ ಒಂದರ
ಚೆಡ್ಡಿ ರೂಪವೇ
ಇರುತ್ತಿದ್ದಿಲ್ಲ ಬಟ್ಟೆ
ಒಗೆವಾಗ ಬೈಗುಳ
ಶಾಲೆಗೆ ಹೋಗೋ
ಅಂದ್ರೆ ಹಾಡಿಕೋತಲೆ
ಹೋಗಿ ಬಿಡ್ವಾಗ ತಲ್ಪಿ
ಹಾಲು ಉಪ್ಪಿಟ್ಟು ತಿಂದು
ಮನೆಗೆ ಬರುತಿದ್ವಿ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
*ಬರಹಗಾರರ ಬಳಗ ರಾಜ್ಯ ಘಟಕ*
*ಹೂವಿನಹಡಗಲಿ*
✍️✍️
*ಮಕ್ಕಳ ದಿನಾಚರಣೆಯ ಪ್ರಯುಕ್ತ*
*ಶಿಶು ಕವಿತಾ ಸಪ್ತಾಹ*
*ಟಂಕಾ ವಾರ*
*೩ ಅಥವಾ ೪ ಟಂಕಾ ಬರೆಯಬೇಕು*
🇮🇳🇮🇳
*೨೨೧ನೇ ಕಾವ್ಯಸೃಷ್ಠಿ*
*ದಿನಾಂಕ-೧೫.೧೧.೨೦೨೦*
*ವಾರ-ಭಾನುವಾರ*
*ನಿರ್ವಹಣೆ- *ಶ್ರೀ* *ಹುಸೇನಪ್ಪ* *ಸಜ್ಯೋಲಿ**
ವಿಷಯ- *ಬಾಲ್ಯ*
🇮🇳🇮🇳
*ಬನ್ನಿ*
*ಬರೆಯೋಣ*
*ಬರೆಸೋಣ*
*ಕಲಿಯೋಣ*
*ಕಲಿಸೋಣ*
🙏 *ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
Saturday, November 14, 2020
ಸ್ವರಚಿತ ಕವನ ೧೪/೧೧/೨೦೨೦
ಕವನದ ಶೀರ್ಷಿಕೆ
*ನನ್ನ ಕಂದ*
{ಟಂಕಾ ಪ್ರಕಾ}
ನೀನು ಹುಟ್ಟಿದ
ದಿನದಿಂದ ತಂದೆಯ
ಪಟ್ಟ ನನಗೆ
ಕಿರುನಗೆ ಬೀರುತ್ತಾ
ನಲಿವ ಸಂಭ್ರಮವೋ
ನನ್ನ ಕಂದ ನೀ
ಪುಟ್ಟ ಪುಟ್ಟ ಹೆಜ್ಜೆಯು
ಇಟ್ಟಾಗ ಗೆಜ್ಜೆ
ಸದ್ದು ಮಾಡಿ ಗೆಲ್ಲುವೆ
ದೊಡ್ಡವರ ಮನಸ್ಸು
ತೊದಲು ನುಡಿ
ತೆವಳುವ ನಡುಗೆ
ಬಿದ್ದಾಗ ಬಿದ್ದೆ
ಎಂದು ಅಳುವ ನೋಟ
ಯಾರು ನೋಡ್ಲಿಲ್ಲಂದ್ರೆ
ಸುಮ್ನಾಗುವುದು
ಕಿರು ಬೆರ್ಳು ಹಿಡಿದು
ನಡೆವ ಪರಿ
ಜಗಳ ತುಂಟತನ
ಮರೆಯಲು ಆಗದು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
ಮಕ್ಕಳ ದಿನಾಚರಣೆ ಪ್ರಯುಕ್ತ ೧೦ನೇ ತರಗತಿ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ೧೪/೧೧/೨೦೨೦
ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
☝️ ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ೭೫%ಕಿಂತ ಹೆಚ್ಚು ಪಡೆದರೆ ನಿಮ್ಮ ಇ-ಮೇಲ್ ವಿಳಾಸಕ್ಕೆ ಪ್ರಶಸ್ತಿ ಪತ್ರ ಬರುತ್ತದೆ.
-
ಕನ್ನಡ ನಾಡು ನುಡಿ ಕವನ ದಿನಾಂಕ ೨೨/೧೨/೨೦೨೦ ರಂದು ಹಸಿರು ಕ್ರಾಂತಿ ಪತ್ರಿಕೆಯಲ್ಲಿ ಪ್ರಕಟವಾದ ಕವನ
-
ಕವನದ ಶೀರ್ಷಿಕೆ *ಕನ್ನಡ ನಾಡು ನುಡಿ* ಕವಿಗಳ ಬೀಡು ಕನ್ನಡ ನಾಡು ಚಿನ್ನಾ.. ರನ್ನಾ.. ತಿಳಿಯೋ ನೀನು ಸವಿಜೇನು ಸವಿದಂತೆ ಈ ನುಡಿಯ ಕೇಳು ಅಕ್ಕರೆಯ ಅಕ್ಕರಗಳು ನೀ ಕಾಣು ಓ.....




