Sunday, November 15, 2020

ಸ್ವರಚಿತ ಕವನ ೧೫/೧೧/೨೦೨೦

 ಕವನದ ಶೀರ್ಷಿಕೆ

*ನಮ್ಮ ಬಾಲ್ಯ*


ಚಿಕ್ಕಂದಿನಲಿ

ಈಜು ಬುಗುರಿ ಆಟ

ಕಾಲ್ಚೆಂಡು ಫಣಿ

ಚೆಂಡು ಕಣ್ಣು ಮುಚ್ಚಾಲೆ 

ಚಿಣಿ ದಾಂಡು ಲಗೋರಿ


ಮಾವು ಹುಣಸೆ

ಮರ ಏರಿ ಚಿಗುರು

ಹಣ್ಣುಹಂಪಲು

ತಿಂದು ಜೋಕಾಲಿ ಕಟ್ಟಿ

ಆಡೋದು ಅಂದ್ರೆ ಇಷ್ಟ


ಜಾರು ಬಂಡೆಗೆ

ಜಾರಿ ಜಾರಿ ಒಂದರ

ಚೆಡ್ಡಿ ರೂಪವೇ

ಇರುತ್ತಿದ್ದಿಲ್ಲ ಬಟ್ಟೆ

ಒಗೆವಾಗ ಬೈಗುಳ


ಶಾಲೆಗೆ ಹೋಗೋ

ಅಂದ್ರೆ ಹಾಡಿಕೋತಲೆ

ಹೋಗಿ ಬಿಡ್ವಾಗ ತಲ್ಪಿ

ಹಾಲು ಉಪ್ಪಿಟ್ಟು ತಿಂದು

ಮನೆಗೆ ಬರುತಿದ್ವಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



*ಬರಹಗಾರರ ಬಳಗ ರಾಜ್ಯ ಘಟಕ* 

         *ಹೂವಿನಹಡಗಲಿ*

               ✍️✍️

 *ಮಕ್ಕಳ ದಿನಾಚರಣೆಯ ಪ್ರಯುಕ್ತ* 

       *ಶಿಶು ಕವಿತಾ ಸಪ್ತಾಹ*

         *ಟಂಕಾ ವಾರ* 

 *೩ ಅಥವಾ ೪ ಟಂಕಾ ಬರೆಯಬೇಕು* 

           🇮🇳🇮🇳

 *೨೨೧ನೇ ಕಾವ್ಯಸೃಷ್ಠಿ* 

 *ದಿನಾಂಕ-೧೫.೧೧.೨೦೨೦* 

 *ವಾರ-ಭಾನುವಾರ* 

 *ನಿರ್ವಹಣೆ- *ಶ್ರೀ* *ಹುಸೇನಪ್ಪ* *ಸಜ್ಯೋಲಿ** 

ವಿಷಯ- *ಬಾಲ್ಯ* 

                  🇮🇳🇮🇳


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 

🙏 *ಮಧುನಾಯ್ಕ.ಲಂಬಾಣಿ* 

      *ಬ.ಬ.ರಾ.ಘ.ಹೂ.ಹಡಗಲಿ*







No comments:

Post a Comment

Videos