Sunday, November 29, 2020

ಚಿತ್ರಕ್ಕೊಂದು ಕವನ ೨೭/೧೧/೨೦೨೦



ಕವನದ ಶೀರ್ಷಿಕೆ

*ಒಗ್ಗಟ್ಟಿನಲಿ ಬಲವಿದೆ*


ಸರಸರ ತಿರುಗುತ ತನ್ನವರ ಕರೆತರುತ

ಬರಬರನೆ ಸಡಗರದಿ ಓಡಾಡುವುದು 

ಸಕ್ಕರೆಯ ಕಾಣಲು ಬಾಯೋಳಿಡಿದು

ಮಕ್ಕಳು ಮರಿಗೆಲ್ಲ ತಿನಿಸುವ ಆತುರ


ಮನುಜರೆಲ್ಲರೂ ಕಲಿತರೆ ಬಡವರನು ಕಾಣೆನು

ಜನ ಜಂಗುಳಿಯು ಸೇರವುದು ಸುತ್ತ ಮುತ್ತ

ಸತ್ತ ಪ್ರಾಣಿಯ ಹಿಡಿದು ತರುವ ಪ್ರಯತ್ನ ಮಾಡಿ

ಎತ್ತೆತ್ತ ನೋಡಲು ಎತ್ತುವ ಚಮತ್ಕಾರ ಗತಿಯಲಿ


ಇರುವೆಯು ಬರುವುದು ಸುದ್ದಿಯ ತರುವುದು

ದಾರಿಯಲಿ ಬಿದ್ದಿರುವ ಖುದ್ದು ನೋಡಿದ ರೀತಿ

ಆನೆಯೇ ಬೀಳಲಿ ಒಗ್ಗೂಡಿ ಎತ್ತಿ ತರುವವು

ವಾನರರ ಶಕ್ತಿ ನಮ್ಮದೆಂದು ತೋರುತಲಿರುವವು


ಒಗ್ಗಟ್ಟಿನಲಿ ಬಲವಿದೆ ಎಂಬುದ ಸಾರುತಲಿ

ಬಗ್ಗದೆ ಕುಗ್ಗದೆ ಹೋರಾಟ ಮಾಡುವ ಪ್ರಾಣಿಯ

ನೋಡಿ ಮನುಜನು ಕಲಿತರೆ ಸಾಗುವುದು ಪಯಣ

ದಡಸೇರಿ ಮುಟ್ಟುವವು ಜೀವನ ಜನನ ಮರಣ


ಇರುವವರೆಗೆ ಬಡಿದಾಡುವ ಗುಣದ ಕೃತಿಯೇ

ಇರುವೆಯು ಕ್ರಿಯಾಶೀಲತೆಯ ಸಂಕೇತವಾಗಿದೆ

ತಿರೆಯ ತುಂಬಾ ಸ್ವಾರ್ಥ ಸಾಧನೆಗಾಗಿ ಅಂಬಲಿಸೋ

ಭರ ಬಿಟ್ಟು ಸಿಹಿಯಾಗಿ ಬದುಕುವದ ಕಲಿತರಾಗದೆ.


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ












No comments:

Post a Comment

Videos