ಕವನದ ಶೀರ್ಷಿಕೆ
*ರಾಷ್ಟ್ರ ಪ್ರೇಮ*
ವಿಶ್ವಕ್ಕೆ ಶಾಂತಿ
ಮಂತ್ರ ಬೋಧಿಸಿದಂತ
ದೇಶ ನನ್ನದು
ಸ್ತ್ರೀಯ ರಕ್ಷಣೆ
ಗೌರವ ನೀಡುವಂತ
ದೇಶ ನನ್ನದು
ದೇಶಕ್ಕೆ ಒಂದೇ
ಮತದಾನದ ಹಕ್ಕು
ನೀಡಿದ ದೇಶ
ನಾಡ ಗಡಿಯ
ಕಾಯ್ವ ವೀರ ಯೋಧರು
ನಮ್ಮಯ ಹೆಮ್ಮೆ
ರಾಷ್ಟ್ರ ಗೀತೆಯು
ಧ್ವಜವೂ,ಲಾಂಚನವೂ
ಶೌರ್ಯ ಸಂಕೇತ
ವಂದೇ ಮಾತರಂ
ಗೀತೆ ಹಾಡುತ ದೇಶ
ಸೇವೆಗೈವೆವು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
No comments:
Post a Comment