Monday, January 4, 2021

Sunday, January 3, 2021

ಸೃಷ್ಟಿಯ ವೈಚಿತ್ರ್ಯ ಕವನ ೦೩/೦೧/೨೦೨೧

 ಕವನದ ಶೀರ್ಷಿಕೆ

*"ಸೃಷ್ಟಿಯ ವೈಚಿತ್ರ್ಯ"*


ಸೃಷ್ಟಿಯಲ್ಲಿ ಅನೇಕ ವಿಸ್ಮಯ

ಭೂಮಿ ತಿರುಗುವುದು ಎನ್ನುವರು

ಅದು ನಮ್ಮ ಅನುಭವಕ್ಕೆ ಬಾರದು


ಆಕಾಶವು ವಿಶಾಲ ಅಂತ್ಯವೆಂಬುದೆ

ಇಲ್ಲ ಕಂಡವರಂತೂ ಯಾರಿಲ್ಲ

ಕಣ್ಣಿಗೆ ಗೋಚರಿದ್ದೆ ಕರೆ ಕರೆ...!


ಹಗಲು ರಾತ್ರಿ ಆಗುವುದೇ ಒಂದು

ವಿಚಿತ್ರ ಗೊತ್ತಿಲ್ಲ ಯಾರಿಗೂ... 

ಕತ್ತಲು ಬೆಳಕುಗಳ ಆಟ...


ಗ್ರಹಗಳು ಅನೇಕ ಎಂಬುವರು

ಸೂರ್ಯ ಚಂದ್ರರರಂತೆ ದೊಡ್ಡವರು

ಸಣ್ಣವರು ಅನಂತ ಅನಂತ....


ನಕ್ಷತ್ರ ಪುಂಜಗಳು ಬಹಳ..

ಹೊಳೆಯುವ ಕಂಗಳಂತೆ

ಗೋಚರ ಅಗೋಚರ ಅಪಾರ....


ಚಂದ್ರನ ಮೇಲೆ ನೀರು ಇದೆ

ಎಂಬರು ಗಾಳಿ ಇಲ್ಲವೆ ಇಲ್ಲಂತೆ

ಹೋಗಿ ಬರುವರು ಎಲ್ಲರೂ ಮುಂದೊಮ್ಮೆ..


ವಿಜ್ಞಾನದ ಗುಟ್ಟೊಂದು ತಿಳಿದರೆ

ಹೊಳೆಯುವದು ಎಲ್ಲಾ ವಿಸ್ಮಯಕ್ಕೆ

ಉತ್ತರ ಬಲ್ಲವರೇ ಬಲ್ಲರು ಜಾಣರು..


ಸಮಸ್ತ ಜನತೆಯು ವೈಜ್ಞಾನಿಕ

ನೆಲೆಗಟ್ಟಿನಲಿ ವಿಚಾರ ಮಾಡಿ ತಿಳಿದರೆ

ಏನಿಲ್ಲ ಎಲ್ಲಾ ಬಟ್ಟಬಯಲು ಬಯಲು..


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*








ವಿಸ್ಮಯ ಪ್ರಕೃತಿ ಕವನ ೦೨/೦೧/೨೦೨೧

 ಕವನದ ಶೀರ್ಷಿಕೆ

*"ವಿಸ್ಮಯ ಪ್ರಕೃತಿ"*


ಪ್ರಕೃತಿಯಲ್ಲಿ

ಗಿಡಮರಗಳನ್ನು

ನೆಟ್ಟವರಾರು

ಧುಮ್ಮಿಕ್ಕುವ ನದಿಗೆ

ನೀರು ಬಿಟ್ಟವರಾರು?


ಕ್ರೀಮಿ ಕೀಟಕ್ಕೆ

ಆಹಾರ ನೀಡುವಂತ

ಕಾಣದ ಕೈಯ

ನೋಡಿದವರು ಇಲ್ಲ

ಕೇಳಿದವರೂ ಇಲ್ಲ ..


ಸೂರ್ಯ ಚಂದ್ರರ

ನಡುವಿನ ಅಂತರ

ಕೊಟ್ಟು ಬೆಳಕು

ನೀಡುವ ಆದೇಶವ

ಕೊಟ್ಟವರಾರು ಒಮ್ಮೆ


ಯೋಚಿಸಿದರೆ

ಪ್ರಕೃತಿಯ ರಮ್ಯತೆ

ಅರಿವಾಗ್ತದೆ

ಆ ದೇವರು ಎಲ್ಲವೂ

ಒದಗಿಸಿರುವನು


ಮಾನವ ಮಾತ್ರ

ತನಗೆ ಇಷ್ಟ ಬಂದ

ಹಾಗೆ ಗಾಳಿಯ

ನೀಡುವ ಮರಗಳ

ಕಡಿದು ಹಾಕುವನು


ತನ್ನ ಬುಡಕ್ಕೆ

ತಾನೆ ಕೊಡಲಿ ಹಾಕಿ

ವಿನಾಶದೆಡೆ

ಪಯಣ ಬೆಳೆಸಿಹ

ಎಚ್ಚತ್ತರೆ ಉಳಿವ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*









ಮಕ್ಕಳು ಕವನ ೦೧/೦೧/೨೦೨೧

 ಕವನದ ಶೀರ್ಷಿಕೆ

"ಮಕ್ಕಳು"


ಮಕ್ಕಳು ಕಂಡ

ಕನ್ಸು ನನಸಾಗಲು

ಏಕಾಗ್ರತೆಯ

ಓದು ಸತತವಾದ

ಪ್ರಯತ್ನ,ಪರಿಶ್ರಮ


ನಾಳಿನ ಭವ್ಯ

ಪ್ರಜೆಗಳಿಗೆ ನಾವು

ಮಾನವೀಯತೆ

ಅನುಕಂಪ ತುಂಬಲು

ಸತ್ಪ್ರಜೆಯಾಗುವರು


ತಂದೆ ತಾಯಿಯ

ನೀತಿಯ ಮಾತುಗಳು

ಕೇಳಿ ಅವರ

ಸೇವೆ ಮಾಡುವ ಬುದ್ಧಿ

ಸಂಸ್ಕಾರ ಅಗತ್ಯವು


ತಾವು ಪಟ್ಟಣ

ಸೇರಿದ ಪಾಲಕರು

ಮಕ್ಕಳಿಗೆಲ್ಲ

ಸಂಬಂಧಗಳ ಬೆಲೆ

ತಿಳಿಸಬೇಕು ಆಗ


ಯಾರ ಜೊತೆಗೆ

ಹೇಗೆ ನಡೆಯಬೇಕು

ಎಂಬ ಸಾಮಾನ್ಯ

ಜ್ಞಾನ ಬೆಳೆಯುವುದು

ಹಾಗೆ ನಡೆಯುವರು


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

ಭೂ ಒಡಲಾಳ ಕವನ ೩೧/೧೨/೨೦೨೦

 ಕವನದ ಶೀರ್ಷಿಕೆ

*ಭೂ ಒಡಲಾಳ*


ಭೂ ಜೀವ ರಾಶಿ

ಒಡಲಲ್ಲಿ ತುಂಬಿದ

ಚಮತ್ಕಾರವ

ಎಂತಹದು ಅದುವೇ

ಪರಮಾಶ್ಚರ್ಯ ಮಾಯೆ


ಕಡಲು ಬೆಟ್ಟ

ಗುಡ್ಡ ಪರ್ವತಗಳ

ಶ್ರೇಣಿ ಇರಲು

ಎಂಬತ್ತನಾಲ್ಕು ಲಕ್ಷ

ಕೋಟಿ ಪ್ರಬೇಧಗಳು


ಅದರಲ್ಲಿಯೂ

ಈ ನರ ಮಾನವನ

ಕೃತಕ ಸೃಷ್ಟಿ

ಸಮಷ್ಟಿಗೆ ಸಿಗದು

ಧುತ್ತೆಂದು ಬರುವವು


ಗಾಡಿ ಮೋಟಾರು

ಅದು ಮೀರಿಯೂ ತಾನು

ತನ್ನಂತೆ ಇರುವ

ರೋಬೋಟ್ಗಳ ಬುದ್ಧಿಯ

ಕ್ಷಮತೆಯ ಕಗ್ಗಂಟು


ಕೃಷಿಯ ಯಂತ್ರ,

ಸಲಕರಣೆಗಳು

ಆಸ್ಪತ್ರೆಯಲ್ಲಿ

ಬಳಸುವಂತ ಶಸ್ತ್ರ

ಚಿಕಿತ್ಸೆಯ ಸಾಮಾನು


ಕೈಗಾರಿಕೆಗೆ

ಬೇಕಾಗುವಂತ ಕಚ್ಚಾ

ವಸ್ತು,ಕಂಪನಿ

ಜನ ನಗರಗಳು

ಭೂ ಒಡಲು ತುಂಬಿವೆ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*





ಬನ್ನಿ ಗೆಳೆಯರೇ ಶಾಲೆಗೆ ಹೋಗೋಣ ಕವನ ೩೧/೧೨/೨೦೨೦

 ಕವನದ ಶೀರ್ಷಿಕೆ

"ಬನ್ನಿ! ಗೆಳೆಯರೇ ಶಾಲೆಗೆ ಹೋಗೋಣ"


ಬನ್ನಿ! ಬನ್ನಿ! ಗೆಳೆಯರೇ ಶಾಲೆಗೆ ಹೋಗೋಣ

ವಿದ್ಯೆಯ ಕಲಿತು ನಾವೆಲ್ಲ ಜಾಣರಾಗೋಣ!

ಹೊಸ ವರ್ಷದ ಹೊಸ ತರಗತಿಯ ಪಾಠಗಳ

ಓದುತ್ತ ನವೀನ ವಿಷಯ ಅರಿತು ಬೆಳೆಯೋಣ


ಭಾರತಾಂಬೆಯ ಹೆಮ್ಮೆಯ ವೀರರ ಸಾಹಸ

ಗಾಥೆಗಳ ಕೇಳುತ ಅವರಂತಾಗಲು ಮನಸ್ಸು

ಮಾಡೋಣ ವಿಜ್ಞಾನಿಗಳ ಸಂಶೋಧನೆ ತಿಳಿದು

ನಾವೂ ಮಾಡಿ ಅನುಭವ ಪಡೆದರೆ ಉಲ್ಲಾಸ


ಕನ್ನಡ ನಾಡು ನುಡಿ ನೆಲ ಜಲ ಭಾಷೆ ಸಾಹಿತ್ಯದ

ಕುರಿತು ಕವಿ ನಾಣ್ನುಡಿ ಕೇಳಿ ನಲಿಯುತ ಅದೇ

ತರ ನಾವು ಬರೆಯಲು ಆರಂಭಿಸಿ ಹೆಚ್ಚಿಸುವೆವು

ಸಾಹಿತ್ಯ, ಶಾರದೆಯ ವರವ ಬೇಡುತ ಎಂದೆಂದು


ಗಣಿತದ ಸೂತ್ರಗಳ ಮೂಲಕ ಸೊಗಸಾಗಿ ಕಲಿತು

ಪ್ರಮೇಯಗಳ ಅರಗಿಸಿಕೊಂಡು ಮುನ್ನಡೆಯುತ

ಸಾಗಲು ಸರಳ ಸುಲಲಿತವಾಗಿ ಬಿಡುವುದು ನೊಡು

ಮೊಗ್ಗಿಗಳನು ಕಲಿತರೆ ಗುಣಿಸಲು ಸುಲಭದ ಮಾತು


ಆಂಗ್ಲ,ಹಿಂದಿ ಭಾಷೆಯ ಜ್ಞಾನ ಪ್ರಚಲಿತಕೆ ಬೇಕು

ಆಳ ಸಾರವ ತಿಳಿಯಲು ಅವಶ್ಯ ಉನ್ನತ ಶಿಕ್ಷಣ ಕಲಿಕೆ

ತಂತ್ರಜ್ಞಾನದ ತರಬೇತಿ ಪಡೆದು ಆವಿಷ್ಕಾರ ಬಗ್ಗೆ

ಮಾಹಿತಿ ಹೊಂದಿ ಅರ್ಥಪೂರ್ಣ ಬದುಕು ಸಾಗಬೇಕು


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

ಯರಗೋಳ ತಾ.ಜಿ. ಯಾದಗಿರಿ.





ರೈತ ನಮ್ಮ ದೇವರು ಕವನ ೩೦/೧೨/೨೦೨೦

 ಕವನದ ಶೀರ್ಷಿಕೆ

*ರೈತ ನಮ್ಮ ದೇವರು*


ಪ್ರಜೆಗಳಿಗೆ

ಅನ್ನ ನೀಡೋ ಕಾಯಕ

ಹಿಡಿದ ನೇಗಿಲ

ಯೋಗಿ ನೀನಯ್ಯ ಬೆಳೆ

ಬೆಳೆದು ನೀ ಸಾಕುವೇ


ನಂಬಿದವರ

ಕೈ ಬಿಡದೆ ಬಾಳನು

ಹಸನಾಗಿಸೋ

ವ್ಯಕ್ತಿ ನೀನಯ್ಯ ನಮ್ಮ

ನೆಚ್ಚಿನ ನಾಯಕ ನೀ


ದುಡಿಯೋದನು

ಕಲಿಸಿ ಬುದ್ಧಿ ಹೇಳೋ

ಸೇವಕ ನೀನು

ಕಾಣದೆ ದೇವರಿಗೆ

ಕೈ ಮುಗಿಯೋ ಬದಲು


ಹಗಲು ರಾತ್ರಿ

ಎನ್ನದೆ ಅನುದಿನ

ದುಡಿದು ಅನ್ನ

ನೀಡುವ ನಿಜವಾದ

ರೈತ ನಮ್ಮ ದೇವರು


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

ಕರುನಾಡ ಕವಿ ಕುವೆಂಪು ಕವನ ೨೯/೧೨/೨೦೨೦

 ಕವನದ ಶೀರ್ಷಿಕೆ

"ಕರುನಾಡ ಕವಿ ಕುವೆಂಪು"


ಕರುನಾಡಿನ ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯ ಕುಡಿ 

ಕುವೆಂಪರು ವಿಶ್ವ ಮಾನವತೆಯ ಸಂದೇಶ ಸಾರಿಹರು

ಕಾವ್ಯ ಪಯಣದ ಕವಲೊಳೆಗೆ ಕೈಯಾಡಿಸಿ ಎಲ್ಲಾ

ಸಾಹಿತ್ಯದಲಿ ಕೃತಿಯ ರಚಿಸಿ ಸೈ ಎನಿಸಿಕೊಂಡವರು


ತಾಯಿಯ ತವರು ಹಿರೇಕೂಡಿಗೆಯಲ್ಲಿ ಜನಿಸಿದರು

ಮರಳಿನ ಮೇಲೆ ಆರಂಭವಾಯಿತು ಅಕ್ಕರ ಬೀಜ

ಮುಂದೆ ಬಿತ್ತಿದ್ದೆಲ್ಲ ಕಾವ್ಯದಾರೆಯಾಗಿ ಹರಿಯಿತು

ಜ್ಞಾನ ಪೀಠದಂತ ಭವ್ಯ ಪ್ರಶಸ್ತಿಗಳ ಸೆಳೆಯುವಂತೆ


ಕಲಿಕೆಯ ವೇಳೆ ಮೂಡಿದವು ಹಲವು ಕಾವ್ಯ ಕವನ

ಮಹಾರಾಜ ಕಾಲೇಜಿನಲ್ಲಿ ಕಲಿತು ತಾ ಕಲಿಸಿದ್ದು 

ಕೈಹಿಡಿದ ಹೇಮಾವತಿ ಹೆಗಲಿಗೆ ಹೆಗಲಾಗಿ ನಿಂತು

ನೀಡಿದಳು ಎರಡು ಗಂಡು ಎರಡೆಣ್ಣು ಮಕ್ಕಳನ್ನು


ಮಲೆನಾಡಿನ ರಮ್ಯ ಪ್ರಕೃತಿಯ ಮಡಿಲಲ್ಲಿ ಕವಿಮನೆ,

ಮನಸೆಳೆದುದು ಕವಿಶೈಲ ಒಡಮೂಡಿ ಬಂದವು

ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು,ಬೆರಳ್ಗೆ

ಕೊರಳು, ಶ್ರೀ ರಾಮಾಯಣದರ್ಶನಂ ಮಹಾಕಾವ್ಯಗಳು


ಓ ನನ್ನ ಚೇತನ ಆಗು ನೀ ಅನಿಕೇತನ ಎಂಬ ನುಡಿ

ವಿಶ್ವಮಾನವ, ವಿಶ್ವ ಚೇತನ ಆಗುವಂತೆ ಮಾಡಿಹದು

ಕೇಂದ್ರ ಸಾಹಿತ್ಯ,ಪದ್ಮಭೂಷಣ, ಪದ್ಮವಿಭೂಷಣ,

ರಾಷ್ಟ್ರ ಕವಿ ಪ್ರಶಸ್ತಿ ಬಂದವು ರಸ ಋಷಿಯ ಸಿರಿಮುಡಿಗೆ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ.






ವಿಶ್ವ ಮಾನವ ಕವನ ೨೯/೧೨/೨೦೨೦

 ಕವನದ ಶೀರ್ಷಿಕೆ

*ವಿಶ್ವ ಮಾನವ*

(ಟಂಕಾ ಪ್ರಕಾರ)


ನೀ ಅಗಣಿತ

ತಾರೆಗಳ ನಡುವೆ

ಹೊಳೆಯುವಂತ

ಸೂರ್ಯನಾದೆ ಕಾವ್ಯದ

ಗಿರಿ ಶಿಖರ ಏರಿ


ವಿಶ್ವ ಮಾನವ

ಸಂದೇಶ ಸಾರಿದಿರಿ

ಜಗತ್ತಿಗೆಲ್ಲ

ಜಾತಿ ಮತ್ಸರ್ರಹಿತ

ಪುಣ್ಯ ಪುರುಷ ನೀವು


ಮಲೆನಾಡಿನ

ಪರಿಸರದಿ ಹುಟ್ಟಿ

ಕವಿಶೈಲದಿ

ಕಾನೂರು ಹೆಗ್ಗಡತಿ

ಕೃತಿಯನು ರಚಿಸಿ



ಮಲೆಗಳಲ್ಲಿ

ಮದುಮಗಳು ಮತ್ತು

ಕಲಾಸುಂದರಿ

ಕೊಳಲು,ನವಿಲು,ಶ್ರೀ 

ರಾಮಾಯಣದರ್ಶನಂ


ಪದ್ಮಭೂಷಣ

ಕೇಂದ್ರ ಸಾಹಿತ್ಯ ಮತ್ತು

ಪಂಪ ಪ್ರಶಸ್ತಿ

ಜ್ಞಾನ ಪೀಠ, ರಾಷ್ಟ್ರ

ಕವಿಯಾದ ಕುವೆಂಪು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*







ಪತ್ನಿ ಚುಟುಕು ೨೮/೧೨/೨೦೨೦

 ಚುಟುಕು ಕವನದ ಶೀರ್ಷಿಕೆ

"ಪತ್ನಿ"


ಹೆಂಡತಿ ಮನೆಯೊಳಗಿದ್ದರೆ

ನೀಡುವಳು ಪ್ರೀತಿ ತವರಿಗೆ

ಓದರೇ ಈರ್ವರು ವಿರಹ 

ವೇದನೆ ಅನುಭವಿಸುವರು

ಗಂಡ ಹೆಂಡಿರ ಜಗಳ ಗಂಧ

ತೀಡಿದ್ಹಂಗ ಎಂದು ಜಗಳ 

ಕಾಯ್ದರೆ ಉಪವಾಸವೇ ಗತಿ

ಹೊಂದಿಕೊಂಡಿರೆ ಸ್ವರ್ಗ ಸುಖ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ



ಮಮತಾ ಮಾಯಿ ಅಮ್ಮ ಚುಟುಕು ೨೭/೧೨/೨೦೨೦

 ಸ್ಪರ್ಧೆಗಾಗಿ

ಚುಟುಕುಗಳ ಶೀರ್ಷಿಕೆ

*ಮಮತಾ ಮಯಿ ಅಮ್ಮ*


ಮಗುವ ‌ಪ್ರೀತಿಯಲಿ ನೋವ ಮರೆತಿಹಳು

ಕಂದನ ಅಪ್ಪುಗೆಯಲಿ ತನ್ಮಯಳಾಗಿಹಳು

ಒಲವಿನ ಭಾವದಲಿ ಖುಷಿಯ ತಂದಿಹಳು

ಅನುರಾಗ ಅರಳಿ ಸಂಭ್ರಮ ಪಡುತಿಹಳು

ಅಂಬೆಗಾಲಿಕ್ಕುತ ಅರಗಿಳಿಯಂತೆ ಉಲಿತಿಹಳು

ಕಿಲಕಿಲ ನಗುವ ನೀನೇ ನನಗೆಲ್ಲ ಎನುತಿಹಳು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ನನ್ನ ಓಟು ಹರಾಜಿಗಿಲ್ಲ ಕವನ ೨೬/೧೨/೨೦೨೦

 ಕವನದ ಶೀರ್ಷಿಕೆ

"ನನ್ನ ಓಟು ಹರಾಜಿಗಿಲ್ಲ"


ಚುನಾವಣೆಯಲ್ಲಿ ಹೆಂಡ ಸಾರಾಯಿ ಕುಡ್ಸುತ

ಇಲ್ಲದ ಆಸೆ ಆಮಿಷಗಳ ತೋರಿಸಿ ಹೆಚ್ಚು ಹಣ

ಕೊಟ್ಟವರಿಗೆ ಮತ ನೀಡಲು ನನ್ನ ಓಟು ಹರಾಜಿಗಿಲ್ಲ

ನಿಮ್ಮ ಮುಲಾಜಿಗೆ ಬೀಳಲು ನಾನು ಬಯಸಲ್ಲ


ಈಗ ಓಟು ಆಕಿಸಿಕೊಂಡು ಕಳೆದು ಹೋದವರು

ಐದು ವರ್ಷಗಳ ಕಾಲ ಈಕಡೆ ಸುಳಿಯದವರು        

ಹಣ ಚೆಲ್ಲಾಡಿದರೆ ಯಾರು ಬೇಕಾದರೂ ಗೆಲ್ಲುವೆವು

ಎಂದು ತಿಳಿದವರಿಗೆ ಬುದ್ಧಿ ಕಲಿಸಿ ಮನೆಗೆ ಕಳಿಸಬೇಕು


ನಾನು ನಮಗಾಗಿ ದುಡಿಯುವರಿಗೆ ಹಾಕುವೆ ಮತ

ಗ್ರಾಮಗಳ ಉದ್ದಾರಕ್ಕೆ ಶ್ರಮಿಸುವರಿಗೆ ನನ್ನ ಮತ

ಕಷ್ಟ ಸುಖಗಳಲ್ಲಿ ಜೊತೆಯಾಗಿರುವವರಿಗೆ ನನ್ನ ಮತ

ಜನತೆಗೆ ಗೌರವನೀಡಿ ಬೆರೆಯುವವರಿಗೆ ನನ್ನ ಮತ


ಬದಲಾವಣೆ ಬಯಸಿ ಅಭಿವೃದ್ಧಿ ಮಾಡುವವರನ್ನು

ಜನಹಿತ ಕಾರ್ಯ ಮಾಡುತ ಜನಕ್ಕೆ ಇಷ್ಟವಾದವರನ್ನು

ಜಾತಿ ಮತ ಪಂಥ ಎಂಬ ಕಟ್ಟುಪಾಡುಗಳಿಗೆ ಬೀಳದೆ

ಕೆಟ್ಟ ವ್ಯಕ್ತಿಗಳ ದಿಕ್ಕರಿಸಿ ಒಳ್ಳೆಯವರನ್ನು ಗೆಲ್ಲಿಸೋಣ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ







ಅತ್ತೆ ಹನಿಗವನ ೨೫/೧೨/೨೦೨೦

 ಹನಿಗವನಗಳ ಶೀರ್ಷಿಕೆ

"ಅತ್ತೆ"


               (೧)

ಸೊಸೆಯಾಗಿ ಮನೆ ಸೇರಿ 

ಮಕ್ಕಳಾದ ಮೇಲೆ ಬೆಳೆಸಿ

ದೊಡ್ಡವರ ಮಾಡಿ ಮದುವೆ

ಮಾಡಲು ಸೊಸೆಯಿಂದ 

ಅತ್ತೆಯಾಗಿ ಮಗನ ಮಡದಿಗೆ

ತಾಯಿಯಾಗುವ ಆಸೆಯಿದ್ದರೂ

ತನ್ನ ಅತ್ತೆಯ ನೆನೆದು ತಾನು

ತನ್ನ ವರಸೆಯ ತೋರುವಳು.


                (೨)

ಅತ್ತೆ ಹೇಳುವಳು ಅಳಿಯ ನೀ 

ನನ್ನ ಮಗನಾಗಿ ಬಂದಂತೆ ಬಂದು

ಮಗಳನ್ನು ಚೆನ್ನಾಗಿ ನೋಡಿಕೊಳ್ಳು

ಎಂದು ತಿಳಿಸಲು ಗಂಡನನ್ನೆ ತಾನು

ಹೇಳಿದಂತೆ ಕೇಳುವ ಪರಿಯನು

ಅರುಹಿ ಮಗಳ ಕೈಗೊಂಬೆಯಾಗಿ

ಬಾಳುವ ಅಳಿಯನ ಗೋಳು

ಕೇಳೋರ್ಯಾರು ಮನುಜ.


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ




ನಾರಿ ಹನಿಗವನ ೨೪/೧೨/೨೦೨೦

 ಹನಿಗವನಗಳ ಶೀರ್ಷಿಕೆ

*"ನಾರಿ"*


          ‌ (೧)

ಇಂದಿನ ನಾರಿಯರಿಗೆ ಸೀರೆಯ

ನಿರಿಗೆಯು ಸರಿಮಾಡುಡಲು

ಬಾರದೇ ಹುಡುಗರಂತೆ ಬಟ್ಟೆ

ತೊಟ್ಟು ನಲಿದಿಹರು ಚಂದಾಗಿ

ಕಾಣುವೆವು ಎಂಬಂತೆ ಆಂಗ್ಲರ

ಸೋಗಿಗೆ ಒಳಗಾಗಿ ಗಂಡು ಹೆಣ್ಣು

ಯಾವುದೆಂದು ತಿಳಿಯದೆ ಜನರು

ಪರದಾಡೋ ಕಾಲವು ಬಂದಿಹದು.


                   (೨)

ನಾರಿಯರು ಒಲಿದು ಬಾಳಿದರೆ

ಸರ್ವಸ್ವವ ನಮಗೆ ಅರ್ಪಿಸುವರು

ಅದೇ ತಿರುಗಿ ಬಿದ್ದರೆ ಗಂಡಸುಕಚ್ಚೆ 

ಕೈಯಲ್ಲಿ ಹಿಡಿದು ದಿಕ್ಕು ದೆಸೆ ಕಾಣದೆ 

ಓಡಿ ಹೋಗುವ ಸಮಯ ಬಂದೆ 

ಬರುವುದು ಅದಕ್ಕೆ ಒಲಿದರೆ ನಾರಿ 

ಮುನಿದರೆ ಮಾರಿ ಎಂದಿಹರು ತಿಳಿದ 

ಜಾಣರು ಹೊಂದಿಕೊಂಡು ಬಾಳೋಣ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*




ಚಳಿಗಾಲದ ಚಳಿ ಚಳಿ ....ಕವನ ೨೪/೧೨/೨೦೨೦

 ಕವನದ ಶೀರ್ಷಿಕೆ

"ಚಳಿಗಾಲದ ಚಳಿ ಚಳಿ...."


ಚಳಿಗಾಲವು ಬಂದೈತೆ ತಂಗಾಳಿಯು ಬೀಸೈತೆ

ಹುಡುಕುವೆವು ಬೆಚ್ಚನೆಯ ಉಡುಪುಗಳ ||ಪ||


ಮನೆಯೊಳಗಿನ ಮಕ್ಕಳು ಉಡುಪುಗಳ ತೊಟ್ಟು

ಅಂದು ಚಂದದಿ ಕಾಣುವರು ಗೊಂಬೆಯ್ಹಾಂಗೆ 

ಸಂಭ್ರಮದಿ ನಲಿಯುವರು ತಾವೆಲ್ಲ ಮೈಮರೆತು

ಅಮ್ಮ ಕರೆದಾಗ ಆಟ ಬಿಟ್ಟು ಓಡೋಡಿ ಬರುವರು ||೧||


ಹಿರಿಯರು ಕಿರಿಯರು ಎಲ್ಲಾರು ಸೇರಿ ಒಟ್ಟಾಗಿ

ಕೂಡುವರು ಚಳೆಗಂಜಿ ಬೆಚ್ಚನೆಯ ಬಟ್ಟೆಗಳುಟ್ಟು

ಬೆಳಗಾಗಿ ಬಾನಿನಲಿ ಸೂರ್ಯನು ಮೂಡಲು

ತಂಡಿಯು ಬಿಡದು ನಗುನಗುತಾ ಹೊರಗೆ ಬಾರಣ್ಣ ||೨||


ಗಡಗಡ ನಡುಗುವ ಚಳಿಗಂಜಿ ನಾವು ಹಾಸಿಗೆಯ

ಜಗ್ಗಿ ಜಗ್ಗಿ ಎಳೆದು ಹೊದ್ದುಕೊಂಡು ಮಲಗುವೆವು

ಚಳಿ ಚಳಿಯು ಬಿಟ್ಟಾಗ ಬೆಚ್ಚನೆಯ ಮನೆಯಿರಲು 

ಬಿಸಿ ಬಿಸಿಯ ಚಹಾ ಸಿಗಲು ಆನಂದವೋ ಆನಂದ ||೩||


ಸಂಜೆಯ ಹೊತ್ತಿಗೆ ಸರಿಯಾಗಿ ಮನೆಸೇರೊ ನೀನು

ಅನುದಿನವು ಉಂಡಾಗ ಬೇಗ ಬಿಸಿಯೂಟ ಸಿಕ್ಕರೆ 

ಸವಿರುಚಿಯು ಹೆಚ್ಚುವುದು ದೇಹಕ್ಕೂ ಒಳಿತಾಗಿ

ಮೈಮನವು ಉಲ್ಲಾಸದಿ ಒಳಗೊಳಗೆ ಪುಳಕಿತವು ||೪||


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

ಯರಗೋಳ ತಾ.ಜಿ. ಯಾದಗಿರಿ




ಗುಂಡ ಚುಟುಕು ೨೩/೧೨/೨೦೨೦

 ಚುಟುಕುಗಳ ಶೀರ್ಷಿಕೆ

*ನಮ್ಮ ಗುಂಡ*


ಜಾಣ ವಿದ್ಯಾರ್ಥಿಗೆ ಪುಸ್ತಕ ಜ್ಞಾನ

ಹಿಂದಿನ ಬೆಂಚಿನ ಗುಂಡನಿಗೆ

ಸಾಮಾಜಿಕ ಜ್ಞಾನ ವಿದ್ಯೆಯಲಿ

ಮುಂದಿಲ್ಲದಿದ್ದರೂ ಜೀವನದಲ್ಲಿ

ಅವನೆ ಮುಂದೆ ಇರುವವನು

ನಮ್ಮ ಗುಂಡ ಇಂತವರೇ ಬಹಳ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

ಬನ್ನಿ ಗೆಳೆಯರೇ ಶಾಲೆಗೆ ಹೋಗೋಣ ಕವನ ೦೩/೦೧/೨೦೨೧

 ಬನ್ನಿ ಗೆಳೆಯರೇ ಶಾಲೆಗೆ ಹೋಗೋಣ ಕವನ

ದಿನಾಂಕ : ೦೩/೦೧/೨೦೨೧ ರಂದು ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಕವನ


ಬನ್ನಿ ಗೆಳೆಯರೇ ಶಾಲೆಗೆ ಹೋಗೋಣ ಕವನ

ದಿನಾಂಕ : ೦೩/೦೧/೨೦೨೧ ರಂದು ಕಡಲವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಕವನ



ಜಾತ್ಯಾತೀತತೆ ಕವನ ಮತ್ತು ತಾಯೇ ಭುವನೇಶ್ವರಿ ಕವನ ೩೧/೧೨/೨೦೨೦

 ಜಾತ್ಯಾತೀತತೆ ಕವನ

ದಿನಾಂಕ : ೩೧/೧೨/೨೦೨೦ ರಂದು ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಕವನ


ತಾಯೇ ಭುವನೇಶ್ವರಿ ಕವನ

ದಿನಾಂಕ : ೩೧/೧೨/೨೦೨೦ ರಂದು ಹಸಿರು ಕ್ರಾಂತಿ ಪತ್ರಿಕೆಯಲ್ಲಿ ಪ್ರಕಟವಾದ ಕವನ





ಧನಿಕರ ದೌರ್ಜನ್ಯ ಕವನ 30/12/2020

 ಧನಿಕರ ದೌರ್ಜನ್ಯ ಕವನ

ದಿನಾಂಕ : ೩೦/೧೨/೨೦೨೦ ರಂದು ಧನಿಕರ ದೌರ್ಜನ್ಯ ಕವನ ಮತ್ತೊಮ್ಮೆ ಪ್ರಕಟವಾಗಿದೆ.



Videos