Tuesday, January 26, 2021

ನೇತಾಜಿ ಎಂಬ ಕ್ರಾಂತಿ ಸಿಂಹ ಕವನ

 ಕವನದ ಶೀರ್ಷಿಕೆ

"ನೇತಾಜಿ ಎಂಬ ಕ್ರಾಂತಿ ಸಿಂಹ"


ಭಾರತಾಂಬೆಯ ವೀರ ಪುತ್ರ ದೇಶಕ್ಕಾಗಿ

ಪ್ರಾಣದ ಹಂಗು ತೊರೆದು ನಿಂತಿಹನು

ಆಂಗ್ಲರ ಗುಲಾಮಗಿರಿಗೆ ಸೆಡ್ಡು ಹೊಡೆದು

ಕ್ರಾಂತಿಯ ಕಹಳೆ ಮೊಳಗಿಸಿ ಸೈನ್ಯ ಕಟ್ಟಿ


ಯುವಕರ ಮನಸ್ಸಲ್ಲಿ ಸ್ವಾತಂತ್ರ್ಯ ಕನಸ ಬಿತ್ತಿ

ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ

ಕೊಡಿಸುವೆ ಎಂದು ಹೇಳುತ ಸಿದ್ಧಗೊಳಿಹನು 

ಸೈನ್ಯವು ನಡುಕ ಹುಟ್ಟಿಸಿದೆ ಆಂಗ್ಲ ಅಧಿಕಾರಿಗಳಿಗೆ


ಗಲ್ಲಿಗೇರುವ ಧೀರನು ಕೂಗಿಹನು ವಂದೇ

ಮಾತರಂ ಅನ್ನೋ ಮಂತ್ರ ಒಂದೇ ಸಮನೆ

ತಾಯಿ ತಾಯ್ನಾಡಿಗೆ ಅರ್ಪಿಸಿಹರು ಪ್ರಾಣವ

ರವಿಯ ತೇಜಸ್ಸು ಹೊತ್ತಿಹರು ಎದೆಯಲ್ಲಿ


ಸತ್ಯ,ಶಾಂತಿ,ಅಹಿಂಸೆ,ತ್ಯಾಗ,ಬಲಿದಾನ ಮಾಡಿ

ಪಡೆಯುವೆವು ಸ್ವಾತಂತ್ರ್ಯ ಅನ್ನೋ ಭ್ರಮೆ ಬಿಟ್ಟು

ಧೈರ್ಯದಿ ಮುನ್ನುಗ್ಗಿ ಹೋರಾಡಿ ಆಂಗ್ಲ ಹೇಡಿಗಳ

ರುಂಡ ಚಂಡಾಡಿ ಪಡೆಯಲು ಸದಾ ಆತೋರೆದರು


ಕ್ರಾಂತಿ ಕಲಿಗಳನು ಸೇರಿಸಿ ದಿಟ್ಟತನದಿ ಹೋರಾಡುವ

ಸ್ವಾತಂತ್ರ್ಯ ಕಿಚ್ಚು ಹಚ್ಚುವ ಹುಚ್ಚು ತುಂಬಿದರು ಜನಕ್ಕೆ

ಆಂಗ್ಲರ ವಿರುದ್ಧ ಹೋರಾಡುವ ಆತ್ಮ ವಿಶ್ವಾಸ ತುಂಬಿ

ನಾಂದಿ ಹಾಡಿಹರು ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ


ಬರಹಗಾರರ ಬಳಗದ ಹೆಮ್ಮೆ ಕವನ

 ಕವನದ ಶೀರ್ಷಿಕೆ

"ಬರಹಗಾರರ ಬಳಗದ ಹೆಮ್ಮೆ"


ಕರುನಾಡ ಕವಿ ಪುಂಗವರನು ಒಗ್ಗೂಡಿಸಿ

ಕನ್ನಡಮ್ಮನ ನುಡಿ ಸೇವೆಗೆ ಹಚ್ಚಿಹದು

ಕವನಗಳ ಬರೆಯುತಿಹರು ಹಲವು ಜನ

ಕತೆ ಕವನಗಳ ಹೊತ್ತಿಗೆ ಬರುತಿಹವು ಕೆಲವು


ಟಂಕ,ಅದ್ವಿಜೋ,ಅಲಂಕಾರಿಕ,ಪ್ರಾಸ, ಹಾಯ್ಕು

ಷಟ್ಪದಿ ಹೀಗೆ ಸಾಹಿತ್ಯ ಪ್ರಕಾರಗಳನು ಕಲಿಯಬೇಕು

ಅನುಭಾವದಿಂದ ಅನುಭವ ಗಳಿಸುತಿಹೆವು ನಾವು

ಬೆಳಗಿನಿಂದ ಸಂಜೆಯವರೆಗೆ ಬರೆಯಬೇಕು ಒಮ್ಮೆ


ಸಾಹಿತ್ಯ ದಿಗ್ಗಜರು ಸಲಹೆ ನೀಡುವರು ಖುಷಿಯಲಿ

ನಾವು ಅವರಂತಾಗಲು ಹಂಬಲಿಸಿ ಬರೆಯಬೇಕು

ಕನ್ನಡ ನಾಡು ನುಡಿ ನೆಲ ಜಲ ವೇ‌ಷ ಭಾಷೆ ಸಂಸ್ಕೃತಿ

ಪ್ರಕೃತಿ ಸೌಂದರ್ಯ ಮಾನವೀಯ ಮೌಲ್ಯಗಳ ರಚನೆ


ಸಂಬಂಧಗಳೇ ಅಳಿಸುತ್ತಿರುವ ಕಾಲದಲ್ಲಿ ನಾವೆಲ್ಲರೂ

ಒಂದಾಗಿ ತಾಯಿ ಭುವನೇಶ್ವರಿ ದೇವಿ ಉತ್ಸವ ಜಾತ್ರೆ

ಮಾಡಿ ಹುರಿದುಂಬಿಸಿ ಪ್ರರೇಪಿಸುವರು ನಲ್ಮೆಯ ಗುರು

ಮಿತ್ರರು ಹಿರಿ-ಕಿರಿಯರ ಬೆಳೆಸೋದು ಬಳಗದ ಹೆಮ್ಮೆ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ





ಅನಿವಾರ್ಯತೆ ಕಾಡಿದಾಗ ಕವನ

 ಕವನದ ಶೀರ್ಷಿಕೆ

"ಅನಿವಾರ್ಯತೆ ಕಾಡಿದಾಗ"


ಬದುಕಿನ ಭವಣೆಗೆ ಜೋತುಬಿದ್ದು ಕಷ್ಟಗಳ

ಬಲೆಗೆ ಸಿಲುಕಿ ಒದ್ದಾಡಿ ದಡ ಸೇರುವ ತವಕ

ಮನದಲ್ಲಿದ್ದರೂ ಸುಖಾಸುಮ್ಮನೆ ಬರುವ

ಸಂಪತ್ತಿಗೆ ಆಸೆ ಪಟ್ಟು ಒಲ್ಲದ ಕಾರ್ಯಕ್ಕೆ ಒಗ್ಗುವ


ಸ್ವತಂತ್ರನಾದ ಮನುಜ ಸ್ವೇಚ್ಛೆಯಿಂದ ಬಾಳೋ

ಕನಸ ಕಂಡು ಕಲ್ಪನೆಗಳ ಲೋಕದಲ್ಲಿ ವಿಹರಿಸಿ

ಆಸೆಗಳು ಅನೇಕ ಹೀಡೇರದಾದಾಗ ಕೊನೆಗೆ ತಾನು

ಇದ್ದುದ್ದರಲ್ಲಿ ಹೊಂದಿಕೊಂಡು ಸಾಗಿವನು ಜೀವನ


ಸಂಬಂಧಗಳು ಸಡೀಲಗೊಂಡು ಅಳಿಸಿ ಹಾಕಿ

ಬೇಡವೇ ಬೇಡ ಇವರ ಸಹವಾಸ ಎಂದವರು

ಯಾರದೋ ಮಾತಿಗೆ ಕಟ್ಟುಬಿದ್ದು ಅನಿವಾರ್ಯತೆ ಕಾಡಿದಾಗ ಮೆತ್ತೆ ಜೊತೆಗೂಡಿ ಬಾಳುವರು ಒಂದಾಗಿ


ಕಷ್ಟಗಳ ಸುರಿ ಮಳೆಯೇ ಸುರಿಯಲಿ ಅಂಜದಿರು

ಅಳುಕದಿರು ನೋವು ನಲಿವುಗಳು ಕ್ಷಣಕಾಲ ತಿಳಿ

ನೀನು ಅನುಭವಿಸಿದ ದುಃಖ ದುಮ್ಮಾನಗಳ ಮರೆತು

ಮುಂದಿಹದು ಬಹು ಸ್ವಾರಸ್ಯಕರ ಗಳಿಗೆ ನಿನಗಾಗಿ ತಿಳಿ


ಕಾಣದ ಆಸೆಗಳೆಂಬ ಮೂಟೆಗಳ ಹೊತ್ತು ತಿರುಗದೆ

ತನ್ನ ಯೋಗ್ಯತೆಯ ಪರಿಮಿತಿಯನು ಅರಿತು ನಡೆದರೆ

ಸುಖ ಸಂಸಾರಕ್ಕೆ ರಹದಾರಿ ಎಂಬ ಸತ್ಯ ತಿಳಿದುಕೊಂಡು

ಸ್ವಚ್ಛ ಮನದಿ ಬಿಚ್ಚು ಭಾವದಿ ಬಾಳಿ ತೋರಬಾರದೇ



ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ


 

ಅನ್ನದಾತ ಚುಟುಕು

 ಚುಟುಕು ಕವನಗಳು

ವಿಷಯ : ಅನ್ನದಾತ


          ‌‌ ‌‌ ೧

ದೇಶಕ್ಕೆ ಅನ್ನ ನೀಡೋ ರೈತನ ಬೆವರಿನ 

ದುಡಿಮೆಗೆ ಬೆಲೆ ಇಲ್ಲದಂತಾಗಿದೆ ತಾನು 

ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ 

 ಋಣ ಭಾರದಲಿ ಕಂಗಾಲಾಗಿ ಅಂಗಲಾಚಿ 

ಬೇಡಿದರೂ ಸಿಗದಾಗಿದೆ ಸಾಲವೇ ಶೂಲವಾಗಿ 

ಕಾಡಿದಾಗ ತೀರಿಸಲಾಗದೆ ಮಡಿವನು ನಿರಾಶನಾಗಿ


              ‌ ೨

ಬದುಕಿನಲಿ ಕಷ್ಟ ಕೋಟಲೆಗಳು ನೂರಾರು

ನಂಬಿದ ಕುಟುಂಬಕ್ಕೆ ಆಸರೆಯಾಗಿ ನಿಂತು

ಕೇಳಿದಕ್ಕೆಲ್ಲ ಹಣ ನೀಡಿ ಬರೀ ಗೈಲಾದಾಗ

ಹುಸಿನಗುವ ಬೀರುವವನು ರೈತ ಕೃಷಿಯ

ನೆಚ್ಚಿ ಖುಷಿಯ ಕಳೆದುಕೊಂಡರು ಬಿಡೆನೆನ್ನುವ

ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲೆಂದು ನಂಬಿ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

Monday, January 18, 2021

ಕರ್ನಾಟಕ ಸಿವಿಲ್ ಸೇವಾ ನಿಯಮಗಳು - ೨೦೨೧

 ಸೇವಾ ನಿಯಮಗಳು - ೨೦೨೧ನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

೮ನೇ ಎಲ್ಲಾ ವಿಷಯಗಳ ಚಂದನ ಟಿವಿಯಲ್ಲಿ ಪ್ರಸಾರವಾದ ಪಾಠಗಳು

 ೮ನೇ ಚಂದನ ವಾಹಿನಿಯಲ್ಲಿ ಪ್ರಸಾರವಾದ ಪಾಠಗಳು ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಮೇಲಿನ ☝️ ಲಿಂಕನ್ನು ಒತ್ತಿ ವೀಡಿಯೊ ವೀಕ್ಷಿಸಬಹುದು

೯ನೇ ಎಲ್ಲಾ ವಿಷಯಗಳ ಚಂದನ ವಾಹಿನಿಯಲ್ಲಿ ಪ್ರಸಾರವಾದ ಪಾಠಗಳು

 ೯ನೇ ಎಲ್ಲಾ ವಿಷಯಗಳ ಪಾಠಗಳು

ನೋಡಲು ಈ ಮೇಲಿನ ☝️ ಲಿಂಕನ್ನು ಒತ್ತಿ ವೀಡಿಯೊ ವೀಕ್ಷಿಸಬಹುದು

ಸಂಕ್ರಾಂತಿ ಸುಗ್ಗಿಯ ಹಿಗ್ಗು ಕವನ

ಹತ್ತನೇ ತರಗತಿ ಚಂದನ ವಾಹಿನಿಯಲ್ಲಿ ಪ್ರಸಾರವಾದ ಪಾಠಗಳು

 ಹತ್ತನೇ ತರಗತಿ ಚಂದನ ವಾಹಿನಿಯಲ್ಲಿ ಪ್ರಸಾರವಾದ ಪಾಠಗಳು

ಹತ್ತನೇ ತರಗತಿ ಪಾಠಗಳು ನೋಡಲು ಈ ಮೇಲಿನ☝️ ಲಿಂಕನ್ನು ಒತ್ತಿ ವೀಡಿಯೊ ವೀಕ್ಷಿಸಬಹುದು


ಪ್ರಸಾದ ಆಧುನಿಕ ವಚನ

 ಆಧುನಿಕ ವಚನಗಳು

ವಿಷಯ : ಪ್ರಸಾದ


                                   ೧

ದೇಗುಲದಲ್ಲಿ ತಿಂದುಂಬರೆ ಪ್ರಸಾದ ಎನ್ನುವರಯ್ಯ

ಮನೆಯಲ್ಲಿ ಕುಳಿತುಂಡರೆ ಊಟ ಎಂಬುವರಯ್ಯ

ಅದೇ ಪ್ರೀತಿ ಇಲ್ಲದವರಿಗೆ ಬಡಿಸಲು ಕೂಳೆನ್ನುವರ

ನಾನಾ ರೀತಿ ಹೊಟ್ಟೆ ತುಂಬಿಸುವದು ಗೂಳಿ ಬಸವ 


                     ‌     ‌‌ ೨

ಭಕ್ತಿ ಇತ್ತು ಪ್ರಸಾದವ ಸೇವಿಸಯ್ಯ ಅದು ಶಕ್ತಿ 

ಉಲ್ಲಾಸವ ನೀಡುವುದಯ್ಯ ಅನ್ನದ ಅಗುಳಿಗೆ 

ಸೊಕ್ಕು ತೋರದಿರು ರೊಕ್ಕ ಎ‌ಷ್ಟಿದ್ದರೇನು ಅದು

ಎಂದಿಗೂ ರೊಟ್ಟಿಯಾಗದು ನೋಡ ಗೂಳಿ ಬಸವ


ರಚನೆ

ಯಗುಮಾಶ 

ಶ್ರೀ ಶರಣಬಸ್ಸಪ್ಪ ಎಂ ಗುಳೇದ

ಭಕ್ತಿ ಆಧುನಿಕ ವಚನ

 ಆಧುನಿಕ ವಚನಗಳು

ವಿಷಯ : "ಭಕ್ತಿ"


                  ೧

ಅಜ್ಞಾನಿಗೆ ಜ್ಞಾನದ ಬೆಳಕು ಬೇಕು

ಸಿರಿವಂತರಿಗೆ ದಾನ ಗುಣವೇ ಬೇಕು

ಬಡವನಿಗೆ ಸಿರಿತನವೇ ಬೇಕು ಇರ್ವರಿಗೂ

ಭಕ್ತಿ ಇತ್ತು ಸಲಹು ಶ್ರೀ ಗುರು ಗೂಳಿ ಬಸವ


                    ೨

ವ್ಯಾಪಾರಿಯ ಮನ ಮಾರಾಟಕ್ಕೆ ಎಳೆವುದು

ಪೂಜಾರಿಯ ಮನ ತಟ್ಟೆಯ ಹಣಕ್ಕೆ ಎಳೆವುದು

ಭಕ್ತನ ಮನವನ್ನು ಚಂಚಲತೆಯು ಎಳೆವುದನು

ತಡೆದು ದೇವರ ಧ್ಯಾನಕ್ಕೆ ಎಳೆದು ತಾ ಗೂಳಿ ಬಸವ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ


ಗುರು ಆಧುನಿಕ ವಚನ

 ಆಧುನಿಕ ವಚನಗಳು

ವಿಷಯ : ಗುರು


 ಗುರುವಿನಿಂದ ಅರಿವಿನ ಅಲೆಗಳು ಬಂದು 

ಅಪ್ಪಳಿಸಲು ಅಜ್ಞಾನ ಅಂಧಕಾರ ಮೂಢನಂಬಿಕೆ

ಜ್ಯಾತ್ಯಾಂಧತೆ ಅಧರ್ಮ ವೈಷಮ್ಯ ವೈರುಧ್ಯಗಳು

ಕೊಚ್ಚಿಕೊಂಡು ಹೋಗುವವು ಗೂಳಿ ಬಸವ


ರಚನೆ

ಯಗುಮಾಶ 

Tuesday, January 12, 2021

ಸೇಡು ಕವನ

 ಸೇಡು ಕವನ

ದಿನಾಂಕ : ೧೨/೦೧/೨೦೨೧ ರಂದು ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಕವನ



ಮೋಬೈಲ್ ಗೇಮ್ ಆಡದಿರಿ ಕವನ

 ಮೋಬೈಲ್ ಗೇಮ್ ಆಡದಿರಿ ಕವನ

ದಿನಾಂಕ : ೦೯/೦೧/೨೦೨೧ ರಂದು ಕಡಲವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಕವನ



ಬಾಳ ನೌಕೆ ಕವನ

ದಿನಾಂಕ : ೦೮/೦೧/೨೦೨೧ ರಂದು ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಕವನ


ಕಾಯಕ ಆಧುನಿಕ ವಚನ

 ಆಧುನಿಕ ವಚನಗಳು

ವಿಷಯ : ಕಾಯಕ


ಮನುಷ್ಯ ಯಾವುದೋ ಒಂದು ಕಾಯಕ

ಮಾಡು ವ್ಯರ್ಥ ಕಾಲಹರಣ ಮಾಡದಿರು

ಇಷ್ಟದ ಕೆಲಸವ ಶ್ರದ್ಧೆಯಿಂದ ಮಾಡಲು

ಯಶಸ್ಸು ತಾನಾಗಿಯೇ ಲಭಿಸುವದಯ್ಯ

ಕಾಯಕ ನಿಷ್ಠೆ ಮರೆತು ಉಡಾಳನಾಗಿ ತಿರುಗಲು

ಕಾಸಿನ ಕಿಮ್ಮತ್ತು ಇರದಯ್ಯ ಗೂಳಿ ಬಸವ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

ನಾದಮಯ ಈ ಲೋಕ ಕವನ

 ಕವನದ ಶೀರ್ಷಿಕೆ

"ನಾದಮಯ ಈ ಲೋಕ"


ಬ್ರಹ್ಮಾಂಡದಲಿ ಸಂಗೀತ ಸಾಧನಗಳನೇಕ

ಮನಸೂರೆಗೊಳ್ಳುವವು ಮನುಜರೆಲ್ಲರಲಿ

ಪ್ರಾಣಿ ಪಕ್ಷಿಗಳೂ ತಲೆದೂಗುವವು ನಾದಕ್ಕೆ

ನಾದಮಯ ಈ ಲೋಕವೆಲ್ಲ ಮರೆಯದಿರು


ಬಾಜಾ ಭಜಂತ್ರಿ ಶಹನಾಯಿ ಪಿಟಿಲು ಕೊಳಲು

ತಂಬೂರಿ ಪೇಟಿ ತಾಳ ತಬಲ ಮದ್ದಲೆ ಗೆಜ್ಜೆ

ಪುಂಗಿ ಪೀಪಿ ಡೋಲು ತಮಟೆ ನಗಾರಿಯು

ಡಮರುಗ ಸದ್ದು ಪರಮಾತ್ಮನಿಗೆ ಪ್ರಿಯವು


ಕೊಳಲಿಡಿದು ಶ್ರೀ ಕೃಷ್ಣ ನುಡಿಸಲು ಹಸುಗಳು

ಬರುವವು ದೇವಲೋಕದ ಇಂದ್ರಾದಿ ದೇವಾನು

ದೇವತೆ ರಂಭೆ ಊರ್ವಶಿ ಮೇನಕೆರ ಅಚ್ಚುಮೆಚ್ಚು

ವೀಣಾ ಪಾಣಿ ಸರಸ್ವತಿ ತಂಬೂರಿಯ ನಾರದರು


ಪಿಟಿಲು ಚೌಡಯ್ಯ ಶಹನಾಯಿ ಅಪ್ಪಣ್ಣನವರು

ಪಂಡೀತ ಪುಟ್ಟರಾಜ ಗವಾಯಿಗಳು ಜೀವತುಂಬಿ

ಹಾಡುಗಳ ಹಾಡಿ ಶ್ರೇಷ್ಠ ಮಹನಿಯರು ಸಂಗೀತ 

ಸರಸ್ವತಿ ಶಾರದೆಯ ಕೃಪಾಕಟಾಕ್ಷದಿಂದ ಮೆರೆದರು


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

 






 




ಸಂಕ್ರಾಂತಿ ಹಬ್ಬದ ಹಿಗ್ಗು ಕವನ

 ಸಿರಿಗನ್ನಡ ಕವನ ಸ್ಪರ್ಧೆ

ಕವನದ ಶೀರ್ಷಿಕೆ

"ಸಂಕ್ರಾಂತಿ ಹಬ್ಬದ ಹಿಗ್ಗು"


ಸಂಕ್ರಾಂತಿಯು ಬರಲು ಪಥ ಬದಲಿಸಿಹನು

ಸೂರ್ಯ ಉತ್ತರಾಯಣದ ಪುಣ್ಯ ಸ್ಪರ್ಶಕ್ಕೆ

ರೈತರೆಲ್ಲರೂ ಹಿಗ್ಗಿಹರು ಕಬ್ಬು ಬೆಲ್ಲವ ತಿಂದು

ಬಂಧು ಬಾಂಧವರೊಂದಿಗೆ ಹಬ್ಬ ಆಚರಿಸುತ


ಜೋಳದ ತೆನೆಯ ಸೀತನೆಯ ರಸ ಸವಿದಿಹರು

ಪರಮ ಪಾವನ ನದಿಯಲ್ಲಿ ಮಿಂದೆದ್ದಿಹರು

ದೈವದ ದರುಶನ ಪಡೆದು ರಕ್ಷೆಯ ಬೇಡಿಹರು

ನರ ನಾಡಿಗೆಲ್ಲ ಒಳಿತನು ತಾವೆಲ್ಲ ಬಯಸಿಹರು


ಸೇಂಗದ ಹೋಳಿಗೆ ಊಟ ಮಾಡಿ ನಾರಿಯರು

ಹೆಮ್ಮರದ ರೆಂಬೆ ಕೊಂಬೆಗೆ ಜೋಕಾಲಿಯ ಕಟ್ಟಿ

ಹೆಂಗೆಳೆಯರ ದಂಡು ಹಂಚಿಕೊಳ್ಳುತಲೇ ಭಾವ

ಬಾನಂಗಳದಲ್ಲಿ ಚಿತ್ತಾರದ ಆಸೆಗಳ ಕಲ್ಪನೆ ಒಡ್ಡಿ


ಸುಗ್ಗಿಯ ಕಾಲ ಬಂದೈತೆಂದು ಸದ್ದು ಮಾಡುತ್ತಾ

ಚಿಕ್ಕವರು ದೊಡ್ಡವರು ಗುಂಪುಕಟ್ಟಿ ಗೆಜ್ಜೆ ಕಟ್ಟಿ

ಹೆಜ್ಜೆ ಆಕಿ ನಾಟ್ಯ ನಟನೆ ಮಾಡಿ ಡೋಲು ತಮಟೆ

ತಾಳ ಮದ್ದಲೆಗೆ ಗತ್ತು ಗಾಂಭೀರ್ಯದಿ ಕುಣಿಯುವರ


ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣವೆಂದು

ಪ್ರೀತಿ ಪ್ರೇಮದ ವಾತ್ಸಲ್ಯ ತೋರುತ ಶಾಂತಿ ಮಂತ್ರವ

ಪಠಿಸುತ ಗುರು ಹಿರಿಯರ ಆಶೀರ್ವಾದವ ಬೇಡುತಲೇ

ಸಂಕ್ರಾಂತಿಯ ಸೊಬಗನು ಸವಿಯುತ ನಲಿದಾಡಿಹರು


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ










Videos