Sunday, December 27, 2020

Thursday, December 24, 2020

ಮರದ ಅಳಲು ಕವನ ಪ್ರಕಟ ೨೫/೧೨/೨೦೨೦

 ಮರದ ಅಳಲು ಕವನ

ದಿನಾಂಕ : ೨೫/೧೨/೨೦೨೦ ರಂದು ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಕವನ



Tuesday, December 22, 2020

೮ನೇ ಕನ್ನಡ ಜೀವನ ದರ್ಶನ ಪದ್ಯ ಭಾಗದ ವೀಡಿಯೊ ೨೨/೧೨/೨೦೨೦

 


೧೦ನೇ ಕನ್ನಡ ಸಂಧಿಗಳು ವೀಡಿಯೊ ಭಾಗ - ೧ ೨೧/೧೨/೨೦೨೦

 


ಕಣ್ಣೀರಿನ ಕಥೆ ಚುಟುಕುಗಳು ೨೨/೧೨/೨೦೨೦

 ಚುಟುಕುಗಳ ಶೀರ್ಷಿಕೆ

*ಕಣ್ಣೀರಿನ ಕಥೆ*


                   ೧

ಹೆಸರಿಗೆ ಮಾತ್ರ ರೈತ ಬೆನ್ನೆಲುಬು

ಎನ್ನುವವರು ಸಾಲದ ಸುಳಿಗೆ ಸಿಕ್ಕಿ

ತಾನು ಬೆಳೆದ ಬೆಳೆಗೆ ಸರಿಯಾದ

ಬೆಂಬಲ ಬೆಲೆ ಸಿಗದೆ ಕಂಗಾಲಾಗಿ

ಅಸಹಾಯಕತೆಯ ಕಣ್ಣೀರು ಹಾಕಿ

ಆತ್ಮಹತ್ಯೆಗೆ ಶರಣಾಗಿರುವನು.


                 ೨

ದೇಶ ಕಾಯೋ ಸೈನಿಕ ಅನ್ನ ನೀಡೋ ರೈತ

ವಿದ್ಯ ಕೊಡುವ ಶಿಕ್ಷಕ ಮತ್ತು ಸಾರಿಗೆ ನೌಕರರು

ವೈದ್ಯಕೀಯ ಸಿಬ್ಬಂದಿ ವರ್ಗ ಹಾಗೂ ಅಗತ್ಯ 

ಸೇವೆಗಳ ನೀಡುವ ಶ್ರೀ ಸಾಮಾನ್ಯರು ಹಗಲಿರುಳು ಅವರ ಕಣ್ಣೀರಿನ ಕಥೆ ಬದಿಗಿಟ್ಟು ದಣಿವರಿಯದೆ ದುಡಿಯುವ ಯೋಧರು ಅವರಿಗೆ ಎಂದೆಂದಿಗೂ 

ನಾವು ಚಿರಋಣಿಯಾಗಿರೋಣ.


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


ಚುನಾವಣೆ ಶೀರ್ಷಿಕೆ ಚುಟುಕುಗಳು ೨೧/೧೨/೨೦೨೦

 ಚುಟುಕುಗಳ ಶೀರ್ಷಿಕೆ

*ಚುನಾವಣೆ*

             ೧

ಚುನಾವಣೆಗಳು ಬಂದ್ರೆ 

ಕುಡುಕರಿಗೆ ಹುಡುಕುವರು

ತೂರ್ಯಾಡಿಕೊಂತ ಮನೆ

ಸೇರಿದರೆ ಸಾಕಪ್ಪಾ ಸಾಕು

ಕಡು ಕುಡುಕರ ಸಹವಾಸ

ಹೆಂಡರ ಮಕ್ಕಳ ಉಪವಾಸ 


                ೨

ಝಣ ಝಣ ಕಾಂಚಾಣ ಕುಣಿಯುತ್ತಾ

ಕಂಡ ಕಂಡವರ ಕೈ ಸೇರುತ ತಾಸು

ತಾಸಿಗೆ ಜನರ ತೆಲೆ ಕೆಡಿಸಿ ಬಿಟ್ಟು

ಸಂಬಂಧಗಳನು ತುಳಿದು ಕುಪ್ಪಳಿಸಿ

ರಣಕೇಕೆ ಹಾಕಿ ನಗುವುದು ಚುನಾವಣೆಗೆ

ನಿಂತ ಶೂರರು ಗೆಲ್ಲಲಿ ಬಿಡಲಿ ನನಗೆ

ಸುಖ ದುಃಖಗಳು ಬೇಕಿಲ್ಲ ಎಂದು

ಕ್ಷಣಕಾಲ ಖುಷಿ ನೀಡದೆ ಬಿಡೆನೆಂದಿದೆ ಹಣ.


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*



Sunday, December 20, 2020

ಚುನಾವಣಾ ಜಾಗೃತಿ ಮೂಡಿಸೋಣ ಕವನ ಹಸಿರು ಕ್ರಾಂತಿ ಪತ್ರಿಕೆಯಲ್ಲಿ ಪ್ರಕಟ ೨೧/೧೨/೨೦೨೦

ಚುನಾವಣಾ ಜಾಗೃತಿ ಮೂಡಿಸೋಣ ಕವನ 

ದಿನಾಂಕ ೨೧/೧೨/೨೦೨೦ ರಂದು ಹಸಿರು ಕ್ರಾಂತಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.



ನನ್ನ ಮತ ನನ್ನ ಹಕ್ಕು ಹನಿಗವನ ೨೦/೧೨/೨೦೨೦

 ಹನಿಗವನ ಸ್ಪರ್ಧೆ

ವಿಷಯ : *ನನ್ನ ಮತ ನನ್ನ ಹಕ್ಕು*


ಹತ್ತು ದಿನ ಹೆಂಡ ಸಾರಾಯಿ ಕುಡ್ಸಿ ಕಂಡ ತಿನ್ಸಿ

ನಾಸ್ಟಾ ಮಾಡ್ಸಿ ಬಣ್ಣದ ಮಾತುಗಳಾಡಿ ಗೆದ್ದು

ಐದು ವರ್ಷಗಳಿಗೊಮ್ಮೆ ಜನರಲ್ಲಿ ಬರೋರು 

ಹೇಗೆ ಪ್ರಜೆಗಳ ಹಿತಕ್ಕಾಗಿ ದುಡಿಯುವರು ತಾವು

ಆಕಿರೋ ದುಡ್ಡು ದುಪ್ಪಟ್ಟು ಗಳಿಸುವಂತವರ ನಂಬ್ದೆ

ನಮ್ಗೆ ಒಳಿತನ್ನು ಬಯಸುವ ಕಷ್ಟ ಸುಖಗಳಿಗೆಲ್ಲಾ

ಜೊತೆಯಾಗಿ ನಿಲ್ಲುವಂತಹ ಒಳ್ಳೆಯ ನಾಯಕರನ್ನು 

ಆಯ್ಕೆ ಮಾಡಲು ತಪ್ಪದೆ ಮತದಾನ ಮಾಡೋಣ....


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*



ತಮಂಧದಿಂದ ಬೆಳಕಿನೆಡೆಗೆ ಕವನ ೨೦/೧೨/೨೦೨೦

 ಕವನದ ಶೀರ್ಷಿಕೆ

*ತಮಂಧದಿಂದ ಬೆಳಕಿನೆಡೆಗೆ*


ನಾಗರಿಕತೆಯ ಕಾಲದಿಂದಲೂ ಬುದ್ಧಿಯು

ಚುರುಕಾಗಿ ಮಂಗನಿಂದ ಮಾನವನೆಡೆಗೆ

ಸಾಗಿದೆ ಪಯಣ ಆ ಹಾದಿಯಲಿ ಹಿಡಿಯಿತು

ಹಲವು ವರುಷಗಳ ಕಾಲ ಬಾಳ ನೆಲೆಯಡೆಗೆ


ಋಷಿ ಮುನಿಗಳು ಅವಿರತ ಶ್ರಮವಹಿಸಿ ತಾವು 

ಕಲಿಸಿಹರು ಸಾವಿರಾರು ಶ್ಲೋಕ ಕಾವ್ಯ ಪುರಾಣ 

ಆಗಮ ಶಾಸ್ತ್ರ ಚರಿತ್ರೆ ಅರವತ್ತು ನಾಲ್ಕು ವಿದ್ಯಗಳ

 ಜ್ಞಾನ ಧಾರೆಯೆರೆದು ಇದು ಅಲ್ಲವೆ ವಿದ್ಯ ಎಂದ್ರೆ


ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ 

ಮುಕುತಿ ಎಂದು ಸಾರಿದ ದಾರ್ಶನಿಕರ ಅನುಭವ 

ನೆಲೆ ಸೆಲೆಯಾಗಿ ಗೌರವಾದರ್ಶಗಳನು ರೂಢಿಸಿದ 

ಹಿರಿಯರ ತಮಂಧದಿಂದ ಬೆಳಕಿನೆಡೆಗಿನ ಪಯಣ


ನಾಡಿಗೆ ಬೆಳಕಾಗಿ ಬುದ್ಧ ಬಸವ ಗಾಂಧಿ ಅಂಬೇಡ್ಕರ 

ಬಂದು ಜನ ಜಾಗೃತಿಯ ಮೂಡಿಸಿದರು ಜಾತಿ ಮತ

ಭೇದ ಮರೆತು ಮಾನವೀಯ ಮೌಲ್ಯಗಳ ನೆಲೆಯಲಿ

ಬದುಕಿ ನೀತಿಯ ಮಾರ್ಗ ತೋರಿದ ಮಹನೀಯರು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*



Saturday, December 19, 2020

ಪುಟ್ಟಿಯ ಕಲ್ಪನೆ ಚಿತ್ರ ಕವನ ೧೫/೧೨/೨೦೨೦

 


ಕವನದ ಶೀರ್ಷಿಕೆ

*ಪುಟ್ಟಿಯ ಕಲ್ಪನೆ*


ಬಾಲೆಯು ಸಂಜೆ ಅಂದದಿ ಬರೆಯುತಿಹಳು

ಕಲ್ಪನ ಲೋಕದಿ ಸ್ವಚ್ಚಂದವಾಗಿ ವಿಹರಿಸುತಿಹಳು

ಬುಗುರಿಯು ಬಿನ್ನಾಣದಿ ತಿರುಗುವುದನು ಕಂಡಳು

ಹಕ್ಕಿಗಳ ಕಲರವಕೆ ತಾನೇ ಮನಸೋತಳು ಜಾಣೆ


ನದಿಗಳು ನರ್ತಿಸುತ ಹರಿವ ಮೋಜನು ಕಂಡಿಹಳು

ರಕ್ಕಸ ಅಲೆಗಳು ಅಪ್ಪಳಿಸದೆ ನದಿಗಳ ಕಲರವವು

ಹೂಗೊಂಚಲು ಗಿಡಗಳನೇಕ ಗಾಳಿಯ ಸೂಸುತಿಹವು

ಪುಟ್ಟಿಯ ಸ್ವಾಗತ ಕೋರುವ ಶುಕಪಿಕಗಳ ಸಮೂಹವು


ಬೆಳದಿಂಗಳ ಪೂರ್ಣ ಚಂದಿರನ ನೋಡಿ ನಲಿದಿಹಳು

ಆಕಾಶದಿ ಹೊಳೆಯುವ ನಕ್ಷತ್ರ ಪುಂಜಗಳ ನೋಟವು

ಲಕ್ಷಾಂತರ ಚುಕ್ಕೆಗಳು ಬಾಳಂಗಳಕೆ ಅಂದವ ಬಳಿದಿಹವು

ವೈಯ್ಯಾರದಿ ಈಜೋ ಮೀನಗಳ ಪುಟ್ಟಿಯು ಕಂಡಿಹಳು


ಮೋಡಗಳ ನಡುವೆ ನಡೆವ ಅನುಭವಕೆ ಪುಳಕಿತಳು

ಕಾಮನ ಬಿಲ್ಲಿನ ರಂಗು ರಂಗನು ನೋಡಿ ದಂಗಾದಳು

ಪಾತರಗಿತ್ತಿ ಪಕ್ಕ ಎಂದಾಡುತ ಚಿಟ್ಟೆಯ ಹಿಂದೋಡಿದಳು

ಬಾಲೆಯ ಕನಸು ನನಸಾಗಲು ಶುಭವನು ಕೋರುವೆವು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಜೀಕು ಜೋಕಾಲಿ ಚಿತ್ರ ಕವನ ೧೯/೧೨/೨೦೨೦



 








ಕವನದ ಶೀರ್ಷಿಕೆ

*ಜೀಕು ಜೋಕಾಲಿ*


ಯುಗಾದಿ ನಾಗರ ಪಂಚಮಿ ಮಹಾನವಮಿ

ಹಬ್ಬವು ಬಂತೆಂದರೆ ಹೆಂಗೆಳೆಯರು ಕೂಡಿ

ಮರಕ್ಕೆ ಹಗ್ಗ ಕಟ್ಟಿ ಹಿಗ್ಗಿನಿಂದ ಆಡುತಿರುವರು

ಜೋಕಾಲಿ ಜೋರಾಗಿ ಜೀಕುವರು ತಮ್ಮಂದಿರು


ನಾರಿಯರೆಲ್ಲ ಸೀರೆಯ ಉಟ್ಟು ವಾರಿಗೆ

ಗೆಳತಿಯರ ಸೇರಿ ಬೇವು ಬೆಲ್ಲ ಹೊಳಿಗೆ

ಊಟವ ಮಾಡಿ ಊರ ಹೊರಗಿನ ದೊಡ್ಡ

ಮರದೆಡೆಗೆ ಸಾಗಿ ಜೋಕಾಲಿ ಕಟ್ಟಿ ತೂಗುವರು


ಗಿಡದ ನೆರಳಿನ ತಂಪು ಗಾಳಿಯ ತೇಲಿ ಬರುವ

ಪದಗಳ ಕಟ್ಟಿ ಮಜವಾಗಿ ಆಡುವರು ಎಲ್ಲರೂ

ಜೊತೆಗೆ ತೊಡೆಯ ಮೇಲೆ ತಮ್ಮ ತಂಗಿಯರ 

ಕೂಡಿಸಿಕೊಂಡು ಜೋರಾಗಿ ಜೋಕಾಲಿ ಅಡ್ಯಾರು


ಈಗ ಮನೆಯಲ್ಲಿ ಟಿವಿಗಿವಿ ನೋಡುತ್ತಾ

ಬೇವು ಹುಣಸೆ ಹಾಲದ ಮರಗಳಿಗೆ ಜೋಕಾಲಿ

ಹಾಕುವ ಮಹಿಳೆಯರು ಇಲ್ಲದೆ ಹೋದವು

ಜನರು ಪಟ್ಟಣ ಸೇರಿ ಹಳ್ಳಿಯ ಸೊಗಡು ಮರೆತಿಹರು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


ಆಟಿಕೆ ಮೂಲಕ ವಿಜ್ಞಾನ ಕಾರ್ಯಕ್ರಮ ವೀಡಿಯೊ

 


ಚಳಿಗಾಲದ ಚಳಿ ಚಳಿ....ಕವನ ೧೯/೧೨/೨೦೨೦

 ಕವನದ ಶೀರ್ಷಿಕೆ

*ಚಳಿಗಾಲದ ಚಳಿ ಚಳಿ....*


ಚಳಿಗಾಲವು ಬಂದೈತೆ ತಂಗಾಳಿಯು ಬೀಸೈತೆ

ಹುಡುಕುವೆವು ಬೆಚ್ಚನೆಯ ಉಡುಪುಗಳ   ||ಪ||


ಮನೆಯೊಳಗಿನ ಮಕ್ಕಳು ಉಡುಪುಗಳ ತೊಟ್ಟು

ಅಂದು ಚಂದದಿ ಕಾಣುವರು ಗೊಂಬೆಯ್ಹಾಂಗೆ 

ಸಂಭ್ರಮದಿ ನಲಿಯುವರು ತಾವೆಲ್ಲ ಮೈಮರೆತು

ಅಮ್ಮ ಕರೆದಾಗ ಆಟ ಬಿಟ್ಟು ಓಡೋಡಿ ಬರುವರು ||೧||


ಹಿರಿಯರು ಕಿರಿಯರು ಎಲ್ಲಾರು ಸೇರಿ ಒಟ್ಟಾಗಿ

ಕೂಡುವರು ಚಳೆಗಂಜಿ ಬೆಚ್ಚನೆಯ ಬಟ್ಟೆಗಳುಟ್ಟು

ಬೆಳಗಾಗಿ ಬಾನಿನಲಿ ಸೂರ್ಯನು ಮೂಡಲು

ತಂಡಿಯು ಬಿಡದು ನಗುನಗುತಾ ಹೊರಗೆ ಬಾರಣ್ಣ ||೨||


ಗಡಗಡ ನಡುಗುವ ಚಳಿಗಂಜಿ ನಾವು ಹಾಸಿಗೆಯ

ಜಗ್ಗಿ ಜಗ್ಗಿ ಎಳೆದು ಹೊದ್ದುಕೊಂಡು ಮಲಗುವೆವು

ಚಳಿ ಚಳಿಯು ಬಿಟ್ಟಾಗ ಬೆಚ್ಚನೆಯ ಮನೆಯಿರಲು 

ಬಿಸಿ ಬಿಸಿಯ ಚಹಾ ಸಿಗಲು ಆನಂದವೋ ಆನಂದ ||೩||


ಸಂಜೆಯ ಹೊತ್ತಿಗೆ ಸರಿಯಾಗಿ ಮನೆಸೇರೊ ನೀನು

ಅನುದಿನವು ಉಂಡಾಗ ಬೇಗ ಬಿಸಿಯೂಟ ಸಿಕ್ಕರೆ 

ಸವಿರುಚಿಯು ಹೆಚ್ಚುವುದು ದೇಹಕ್ಕೂ ಒಳಿತಾಗಿ

ಮೈಮನವು ಉಲ್ಲಾಸದಿ ಒಳಗೊಳಗೆ ಪುಳಕಿತವು ||೪||


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


*ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗ ( ರಿ) ಮಡಿಕೇರಿ*


ಕೊಡಗು ಜಿಲ್ಲೆಯ ಕವಿ ಮನಸ್ಸುಗಳಿಗಾಗಿ ವಾಟ್ಸ್ ಅಪ್ ಮೂಲಕ ಬಳಗದಿಂದ ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.


ಕವನದ ವಿಷಯ: *ಚಳಿಗಾಲದ ಅನುಭವ*


ಪ್ರಥಮ,ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಕವನಗಳಿಗೆ ನಗದುಬಹುಮಾನ ಹಾಗೂ ಪ್ರಶಂಸಾಪತ್ರವನ್ನು ನೀಡಲಾಗುವುದು.


ಹಾಗೆಯೇ,ಮೆಚ್ಚಿಗೆಯ ಹತ್ತು ಕವನಗಳಿಗೂ ನಗದು ಬಹುಮಾನ ಹಾಗೂ ಪ್ರಶಂಸಾಪತ್ರವನ್ನು ನೀಡಲಾಗುವುದು.


ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಕವಿ ಮನಸ್ಸುಗಳಿಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು.


ಸ್ಪರ್ಧೆಯಲ್ಲಿ ಪಾಲ್ಗೊಂಡ ಕವನಗಳಲ್ಲಿ ಆಯ್ದ ಕವನಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು ಹಾಗೂ ಪುಸ್ತಕದ ಪ್ರತಿಯನ್ನು ಕವನ ರಚಿಸಿದ ಕವಿಗಳಿಗೆ ಉಚಿತವಾಗಿ ನೀಡಲಾಗುವುದು.


ನಿಯಮಗಳು:-


೧)ಕವನದ ವಿಷಯವು ಚಳಿಗಾಲದ ಅನುಭವವಾಗಿರಬೇಕು.


೨)ಕವನಗಳು ಹದಿನಾರರಿಂದ ಇಪ್ಪತ್ತನಾಲ್ಕು ಸಾಲುಗಳ ಮಿತಿಯಲ್ಲಿ ಇರಬೇಕು.


೩) ಕವನವು ಕನ್ನಡ ಭಾಷೆಯಲ್ಲಿರಬೇಕು.


೪)ಕವನವು ರಾಜಕೀಯ ಹಾಗೂ ಧಾರ್ಮಿಕ ಸಂಘರ್ಷಗಳಿಗೆ ಕಾರಣವಾಗಬಾರದು.


೫) ಕವನಗಳು ಈಗಾಗಲೇ ಪ್ರಕಟವಾಗಿರಬಾರದು,ಸ್ವಂತ ರಚನೆಯಾಗಿರಬೇಕು.


೬) ಕವನಗಳನ್ನು ಮೊದಲೇ ಸಿದ್ಧಪಡಿಸಿಕೊಂಡು,ಇದೇ ಡಿಸೆಂಬರ್ ಹತ್ತೊಂಬತ್ತು ಶನಿವಾರ ( 19-12-2020) ಸಂಜೆ ಆರರಿಂದ ಹತ್ತು ಗಂಟೆಯೊಳಗೆ ಕಳುಹಿಸಬೇಕು.


೭) ಕವನಗಳನ್ನು ಮೊಬೈಲ್ ನಲ್ಲಿ ಟೈಪ್ ಮಾಡಿ ವಾಟ್ಸ್ ಅಪ್ ನಲ್ಲಿ ಕಳುಹಿಸಬೇಕು.ಫೊಟೋ,ಕೈಬರೆಹಗಳನ್ನು ಸ್ವೀಕರಿಸುವುದಿಲ್ಲ.


೮) ಕವನಗಳನ್ನು 94483 46276 ಗೆ ವಾಟ್ಸ್ ಅಪ್ ಮೂಲಕ ಕಳುಹಿಸಬೇಕು.


-ಎಂ.ಪಿ.ಕೇಶವ ಕಾಮತ್, ಅಧ್ಯಕ್ಷ,ಕೊಡಗು ಲೇಖಕರ ಹಾಗೂ ಕಲಾವಿದರ ಬಳಗ,ಮಡಿಕೇರಿ


**************************

ನನ್ನ ಹೆಂಡ್ತಿ ಕವನ ೧೮/೧೧/೨೦೧೮

 ಕವನದ ಶೀರ್ಷಿಕೆ : “ನನ್ನ ಹೆಂಡ್ತಿ”


ಈ ಮೊದಲು ಕೂನಿಲ್ಲಾ ಗುರ್ತಿಲ್ಲಾ

ಆದರೂ ನನ್ನ ಹೆಂಡ್ತಿಯಾಗಿಯೇ ಬಿಟ್ಟಳಲ್ಲಾ

ಜೊತೆಯಾಗಿ ಸ್ನೇಹಿತೆಯ ಸ್ಥಾನತುಂಬಿದಳಲ್ಲಾ

ನಿನ್ನದೆಲ್ಲವು ನನ್ನದು ಎಂದೇ ತಿಳಿದಳಲ್ಲಾ


ವಿಧಿಯ ಲೀಲೆಯೋ ಗೊತ್ತಿಲ್ಲಾ

ಆದರೂ ಆಕೆಯೇ ನನ್ನ ನೆಚ್ಚಿನ ಹೆಂಡ್ತಿಯಾದಳಲ್ಲಾ

ನನ್ನ ಪ್ರೀತಿಲಿ ತನ್ನ ತವರ ಮರೆತಳಲ್ಲಾ

ನಂಬಿದ ಇನಿಯನ ವಿಶ್ವಾಸ ಗಳಿಸಿದಳಲ್ಲಾ


ಮಕ್ಕಳು-ಮರಿ ಎಲ್ಲ ನನ್ನವರೆಂದಳಲ್ಲಾ

ಆದರೂ ಅವರಲಿ ನನ್ನ ಹೆಂಡ್ತಿ ಒಬ್ಬಳೆಂದಳಲ್ಲಾ

ತನ್ನ ತನವ ಮರೆತು ಸೇವೆಯ ಅರಿತಳಲ್ಲಾ

ಮನೆಯವರ ಇಚ್ಚಯನರಿತು ನಡೆದಳಲ್ಲಾ


ಸಹಧರ್ಮಿಣಿಯಾಗಿ ಸಹಸಂಬಂಧ ಹೊಂದಿದಳಲ್ಲಾ

ಆದರೂ ಸಂಸಾರದ ಲಗಾಮು ನನ್ನ ಹೆಂಡ್ತಿ ಹಿಡಿದಳಲ್ಲಾ

ಮನೆತನದ ಮರ್ಯಾದೆ ಉಳಿಸೊದೆ ನನ್ನ ಜೀವವೆಂದಳಲ್ಲಾ

ನನ್ನ ಸರಿದಾರಿಗೆ ತರಲು ಸತತ ಪ್ರಯತ್ನಿಸಿದಳಲ್ಲಾ


ಮುದ್ದಿನ ಮಡದಿ ನಾ ಬರುವುದ ಕಾಯ್ದಳಲ್ಲಾ

ತನ್ನ ಪ್ರೀತಿಲಿ ನನ್ನ ಹೆಂಡ್ತಿ ನನ್ನೆ ಮೆರೆಸಿದಳಲ್ಲಾ

ದುಃಖದಲ್ಲೂ ಧೈರ್ಯ ತುಂಬಿದಳಲ್ಲಾ

ನನ್ನ ಬಿಂಬದಲಿ ಪ್ರತಿ ಬಿಂಬ ತಾನಾದಳಲ್ಲಾ


ಇಂತಿ,

ಶರಣಬಸಪ್ಪ ಎಂ ಗುಳೇದ



ತಾಯೇ ಭುವನೇಶ್ವರಿ ಕವನ೦೧/೧೧/೨೦೧೮

 ಕವನ : “ತಾಯೇ ಭುವನೇಶ್ವರಿ”


ಕನ್ನಡಾಂಬೆ ನಿನ್ನ ಮರೆಯಲೆಮ್ಮೆವು ಎಂಬುದು

ಅದು ಬರೀ ಬಿಂಕದ ಜಂಬದ ಮಾತಾಗಿಹದು

ನವೆಂಬರಲಿ ಮಾತ್ರ ಜೈಕಾರ ಹಾಕುವದು

ಮತ್ತೆ ನೆನಪಾಗುವುದು ಮುಂದಿನ ವರುಷದಿ.


ಕೃತಿಗಳಲಿ ಹಾಡಿ ಕೊಂಡಾಡಿಹರು ನಿನ್ನನು

ಅಜರಾಮರ ಕವಿಪುಂಗವರ ಮನದಲಿ ನೀನು

ನಡೆಯಲಿ ಮಾತ್ರ ಆಚರಿಸುವರು ಕಂಗ್ಲೀಸನು

ಇತ್ತ ಕನ್ನಡ ಅತ್ತ ಆಂಗ್ಲವೂ ಅಲ್ಲದ ಭಾಷೆ ಜನ.


ಬ್ರಿಟೀಷರಿಂದ ಪಡೆದ ವರವೆಂಬಂತಿವರು

ಬರ್ತಡೇ,ವ್ಯಾಲೆಂಟೆನ್ಸಡೇ ಮಾಡುವರು ಘೋರ

ದೀಪವ ಬೆಳಗಿಸುವದು ಮರೆತಿಹರು ಪೂರ

ಆರಿಸಲು ಮುಂದಾಗುವರು ದೀಪವ ಘೋರಾ..


ಎಲ್ಲಿ ನೋಡಿದರಲಿ ಪ್ರೀತಿಸುವಂತೆ ನಟಿಸುವರ

ವ್ಯಾಟ್ಸಾಪ್,ಫೇಸ್ಬುಕ್ನಲಿ ಪ್ರೀತಿಯ ತೋರುವರು

ಎದುರಿಗಿದ್ದರು ಅರಿಯದಾದರು ಪ್ರೀತಿ ಅವರು

ಯಾವಾಗಲೂ ಮೂಡಲಿ ಮಮತೆಯ ಸಾಕಾರ


ಮಮ್ಮಿ,ಡ್ಯಾಡಿ,ಅಂಕಲ್,ಆಂಟಿ ಎಂದಾರೋ

ತಂಗಿ,ತಮ್ಮ,ಅಪ್ಪ,ಅಮ್ಮನ ಮರತಾರೋ

ಮುಂದಿನ ಪೀಳಿಗೆಗೆ ಸಂಬಂಧದ ವರತೆಯ

ಹಬ್ಬಲಿ ತಾಯೇ ಭುವನೇಶ್ವರಿ ಈ ಜಗದಲಿ.


ಇಂತಿ

ಶರಣಬಸಪ್ಪ ಎಂ ಗುಳೇದ





ವಿಶ್ವಪ್ರೇಮ ಕವನ ೦೩/೧೧/೨೦೧೮

 ಸ್ಪರ್ಧೆಗೆ,


ಕವನದ ಶೀರ್ಷಿಕೆ : “ವಿಶ್ವಪ್ರೇಮ”


ಜಗದಲಿ ಮೂಡುತಿದೆ ಅಭದ್ರತೆಯನು

ಮನೆಯಿಂದ ಹೊರನಡೆದರೆ ಮರಳುವೆನೊ

ಎಂಬ ಭಯದಿ ಹೆಣ್ಣುಮಗಳು ಕಾತರಿಸುವಳು

ಹೆಚ್ಚುತ್ತಿದೆ ದ್ವೇಷ ಅಸೂಯಯ ಜ್ವಾಲೆಯನು


ಜಾತಿಯತೆಯು ತಿಳಿದ ಜಾಣರಿಂದಲೆ ಹೆಚ್ಚುತಿದೆ

ಕೋಮು-ಗಲಭೆಗಳ ಮೂಲ ಬೆಳೆಯುತಿದೆ

ನಮ್ಮ ದೇಶದ ಅಧಿಕಾರಶಾಹಿ ಮೂಲದಿ

ದಬ್ಬಾಳಿಕೆ ಮಿತಿಮೀರುತಿದೆ ಧನಿಕರಿಂದ


ಸತ್ಯ ಸಂಧತೆಗೆ ಬೆಲೆಯಿಲ್ಲದಾಗಿದೆ

ಕಳ್ಳಕಾಕರ,ಮೋಸ-ವಂಚಕರ ಮದ

ಅತ್ಯಾಚಾರಿಗಳ ಹುಟ್ಟಡಗಿಸಬೇಕಾಗಿದೆ

ದೇಶದ ಶಾಂತಿಗೆ ಭಂಗತರುವವರ ಹರಣವಾಗಬೇಕಾಗಿದೆ


ರಾಷ್ಟ್ರದ ರಕ್ಷಣೆಗೆ ಪಣತೊಡುವಂತಾಗಲು

ಏಕತೆ-ಐಕ್ಯತೆ ಸಾಮರಸ್ಯದಿ ಬದುಕಲು

ಸತ್ಯ,ಮಾನ ಪ್ರಾಣ ಜ್ಯಾತ್ಯಾತೀತತೆ ಮೂಡಲು

ಅನುರಾಗ ಅರಳಿ ಭ್ರಾತೃತ್ವ ಬೆಳಗಲು

ನಿಷ್ಕಲ್ಮಷವಾದ ವಿಶ್ವಪ್ರೇಮ ಎಲ್ಲರಲಿ ಅರಳಲಿ.


ಇಂತಿ,

ಶರಣಬಸಪ್ಪ ಎಂ ಗುಳೇದ



ಓ.. ಶಿಕ್ಷಕ ಕವನ ೨೩/೧೧/೨೦೧೮

 ಸ್ಪರ್ಧೆಗೆ,

ಕವನದ ಶೀರ್ಷಿಕೆ : “ಓ ಶಿಕ್ಷಕ”


ಕಲಿಯುಗದ ದೈವ ಕರುಣಾಕರ

ಕರವಿಡಿದು ಎತ್ತುವ ಸಹನೆಯ ಸರ್ದಾರ

ಸಂಭ್ರಮದಿ ಕಲಿಸುವ ಸಾಹುಕಾರ

ವಿದ್ಯಾರ್ಥಿಗೆಲ್ಲ ನೆಚ್ಚಿನ ನಟಭಯಂಕರ


ದೈರ್ಯದಿ ನಡೆಯಲು ಕಲಿಸುವವನು

ಮಾನವಿಯ ಮೌಲ್ಯಗಳ ಬೋಧಿಸುವವನು

ಸಮಾಜದಲಿ ತಲೆಯತ್ತಿ ಬಾಳಲು ತಿಳಿಸುವವನು

ಜೀವನದಿ ಶಿಸ್ತು,ಶಾಂತಿ ಬೆಳೆಸುವವನು


ಜಾತಿ-ಬೇದವನು ಅಳಿಯಲು ಪ್ರಯತ್ನಿಸುವವ

ನೀತಿ ಮಾರ್ಗದಿ ಬಾಳಲು ಕಲಿಸುವವ

ಏಕತೆಯ ತತ್ವವನು ಸಾರುವವ

ಜಗದಿ ನಿನಗೆ ಗೌರವಾದಾರವನು ಪಡೆದವ


ನಿನ್ನಿಚ್ಛೆಯಲಿ ಸಾಮಾನ್ಯನು ಅಸಮಾನ್ಯನಾಗುವ

ಹೇಡಿಯು ಶೂರನಾಗಿ ಜಯಶಾಲಿಯಾಗುವ

ದಡ್ಡನೂ ಕವಿಯಾಗುವ ವರನೀಡುವವ

ಓ ಶಿಕ್ಷಕ ನೀ ಜಗದ್ರಕ್ಷಕ ನೀನಾಗಿರುವೆ


ಇಂತಿ,

ಶರಣಬಸಪ್ಪ ಗುಳೇದ


ಅಂಬಿ ಅಣ್ಣ ಕವನ ೦೩/೧೨/೨೦೧೮

 ಕವನದ ಶೀರ್ಷಿಕೆ : “ಅಂಬಿ ಅಣ್ಣ”


ಕರುನಾಡಿನ ಕಲಿಯುಗದ ಕರ್ಣ

ಮಂಡ್ಯದಗಂಡು ರಾಜಕೀಯ ಚತುರ

ನೇರನುಡಿಯ ದಿಟ್ಟದೀರ ನೇತಾರ

ಅಭಿಮಾನಿಗಳ ಮಿಡಿತವನರಿದವರು


ಬಲಗೈಲಿ ಮಾಡಿದ ದಾನ ಎಡಗೈಗೆ

ಗೊತ್ತಾಗದೆ ಹಾಗೆ ಇರುವಂತವರು

ಅಂಬಿ ಅಣ್ಣ ರಾಜನಾಗಿ ಮೆರೆದವರು

ಕರುನಾಡಿನ ಜನತೆಪರ ದೆಹಲಿ ಗದ್ದುಗೆಗೆರಿದವರು

ಕಾವೇರಿಗಾಗಿ ಜನಮನದಲಿ ನೆಲೆಸಿದವರು


ಅಂದು ನೀನು ಅಮರನಾದಾಗ

ಕನ್ನಡಿಗರ ಹೃದಯ ಒಡೆದಂತಾಯಿತು

ಕಂಬನಿ ಮಿಡಿದ ಕಂಗಳೆಷ್ಟೋ

ಕಂಪನದಿ ಸತ್ತ ಅಭಿಮಾನಿಗಳು ಕೆಲವರು


ಸೇರಿತೊ ಜನಸಾಗರ ನಿಮ್ಮ ದರುಶನಕೆ

ಅಚ್ಚಳಿಯದಿ ಉಳಿದಿರಿ ಜನ ಮಾನಸದಲಿ

ನಿಮ್ಮ ಪ್ರೀತಿ ಅಭಿಮಾನಕೆ ಸೋತೊರೊ ಸಜ್ಜನ

ಉಳಿಯಲಿ ನಿಮ್ಮ ನೆನಪು ಅಮರ..ಅಮರ


ಇಂತಿ,

ಶರಣಬಸಪ್ಪ ಗುಳೇದ

Date : 01-03-2018


ಮೌನ ಮಾತಾಡಿದಾಗ ಕವನ ೧೯/೧೨/೨೦೨೦

 ಕವನದ ಶೀರ್ಷಿಕೆ

*ಮೌನ ಮಾತಾಡಿದಾಗ*


ಇನಿಯನ ಬಯಸಿ ಆತುರಿದಿ ಓಡಿ ಬರುವೆ

ಸನಿಹಕ್ಕೆ ಬಂದು ಸವಿಮಾತನು ನುಡಿಯುವೆ

ಕಾನನ ಮಧ್ಯೆ ನಾವಿಬ್ಬರು ಜೊತೆಯಾಗಿರಲು

ಮನಕೆ ದುಗುಡವೆಂಬುದಿಲ್ಲ ನಿನಗೂ ನನಗೂ


ಭಾವನೆಗಳ ಪ್ರಪಂಚದಲ್ಲಿ ತೆಲುತ್ತಿರುವ ನಾವು

ಯಾವ ವಿರಹ ವೇದನೆಯು ಅನುಭವಿಸದಿರಲಿ

ನವೀನ ವಿಚಾರಲಹರಿಯಲಿ ವಿಹರಿಸುವ ಬಯಕೆ

ಆವಭಾವ ಮಾಡಿ ಮರೆಸಿಹಳು ಮನೆಯ ವಿಚಾರ


ಮತ್ಯಾವುದೋ ವಿಷಯಕ್ಕೆ ಮುನಿದು ಮಾತಿಲ್ಲ

ಆಕೆಗೂ ನನಗೂ ಬರೀ ಕಣ್ಣೋಟದಲೆ ಹುಸಿ

ನಗೆಯ ಬೀರಿ ಹೊರಸೂಸುವಳು ಆಸೆ ಚೆಲ್ಲಿ

ಕಾಡುವ ವಿರಹ ವೇದನೆಯ ಕಟ್ಟೆಯೊಡೆದು


ಮರುಮಾತಾಡದೆ ಮೌನ ಮುರಿದು ಬಂದವಳೆ

ತೋಳ ತೆಕ್ಕೆಯ ಬಿಗಿದಪ್ಪಿ ಅಳುತಿಹಳು ಬಿಕ್ಕಿ ಬಿಕ್ಕಿ

ನಿನ್ನ ಬಿಟ್ಟು ಇರಲಾರೆ ಕ್ಷಮಿಸೆಂದು ಅಂಗಾಲಾಚಿ 

ಬೇಡಲು ಅನುರಾಗ ಅರಳಿ ಪ್ರೇಮ ಪಾಶದಿ ಬಿಗಿದಳು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*










ಕಡಲ ವಿಹಂಗಮ ನೋಟ ಕವನ ೧೮/೧೨/೨೦೨೦

 ಕವನದ ಶೀರ್ಷಿಕೆ

*ಕಡಲ ವಿಹಂಗಮ ನೋಟ*


ಕಂಗಳ ನೋಟದವರೆಗೆ ವಿಶಾಲವಾದ ಕಡಲು

ತಂಗಾಳಿಯು ಬೀಸುವುದು ಅನುದಿನವು

ಅಂಗನೆಯರು ಈಜುವುದ ನೋಡಲು ತಾವು

ಸಂಗಡಿಗರೊಂದಿಗೆ ಬರುವರು ಬಹುತೇಕರು


ಅಬ್ಬರಿಸಿ ತೇಲಾಡುತ ಬರುವವು ಅಲೆಗಳು

ತಬ್ಬಿಕೊಳ್ಳಬೇಕೆಂದು ಕಾತರಿಸಿದರು ಕೈಗೆ ಸಿಗದು

ಉಬ್ಬರವಿಳಿತಳು ಏರುತಿರುವವು ಪೂರ್ಣಿಮೆಗೆ

ಇಬ್ಬನಿಯ ಹನಿಗಳು ಇಲ್ಲವೋ ಕಡಲ ತೀರಕ್ಕೆ


ಕಡಲ ಒಡಲಲ್ಲಿ ಇವೆ ಹಲವು ಜಲಚರಗಳು

ಬಿಡದೆ ಬಲೆಯ ಬೀಸುವರು ಮೀನುಗಳಿಗೆ

ಸಡಗರದಿ ಹರಿದಾಡೋ ಜೀವಗಳಾಗುವವು ಬಲಿ

ಹುಡುಗರು ತಲುಪುವರು ಆನಂದದ ಪರಾಕಾಷ್ಟೆಗೆ


ನಾನಾ ದೇಶ ವಿದೇಶಗಳಿಂದ ಬರುವರು ನೋಡಲು

ಬಾನಾಡಿಗಳು ಅರಸಿ ಬರುವವು ಆಶ್ರಯ ಹುಡುಕಿ

ತಾನಾಗಿಯೇ ಬರುವವರ ಕೈಬೀಸಿ ಕರೆಯುತ್ತಿದೆ ಸದಾ

ಅನಾನುಕೂಲವಿಲ್ಲ ಇಲ್ಲಿ ಸಿಗುವುದು ಎಲ್ಲ ಸೌಲಭ್ಯ


ಉದಯದಿ ಕಾಣುವುದು ನಯನ ಮನೋಹರ

ವದನದಲಿ ಮೂಡುವುದು ಅತಿಯಾದ ಉಲ್ಲಾಸ

ಬದುಕಿನ ಪಯಣದಲಿ ನೋಡಬೇಕು ಕಡಲು ಆಗ

ಎದೆಯಲಿ ಒಡಮೂಡಲಿ ಹೃದಯ ವೈಶಾಲ್ಯತೆಯು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*




೯ನೇ ಕನ್ನಡ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಪದ್ಯದ ವೀಡಿಯೊ ೧೮/೧೨/೨೦೨೦

 


೧೦ನೇ ಕನ್ನಡ ವ್ಯಾಕರಣ ಛಂದಸ್ಸು ವೀಡಿಯೊ ಭಾಗ - ೨ ೧೭/೧೨/೨೦೨೦

 


ಬೆಂಕಿ ಹನಿಗವನಗಳು ೧೭/೧೨/೨೦೨೦

 ಹನಿಗವನಗಳ ಶೀರ್ಷಿಕೆ

*"ಬೆಂಕಿ"*


          ೧

ಹೊಟ್ಟೆ ತುಂಬಿಸಲು ಆಹಾರ

ಆಹಾರ ತಯಾರಿಸಲು ಬೆಂಕಿ

ಬೆಂಕಿ ಇಲ್ಲದೆ ತಿನ್ನಲು ರುಚಿ

ರುಚಿಯಾಗಿರದು ಬೆಂಕಿ ಬಳಸಿ 

ಇತಿಮಿತಿ ಮೀರಿ ಬಳಸಲು ಆಪತ್ತು


            ‌೨

ಧಗಧಗಿಸುವ ಬೆಂಕಿ ಆರಿಸಲು ಬೇಕು

ಅಗ್ನಿಶಾಮಕ ದಳ ಆಹಾರ ತಯಾರಿಸಲು

ಬೇಕೇ ಬೇಕು ಬೆಂಕಿ ಬೆಂಕಿಯಂತ ಸಿಟ್ಟು

ತಣ್ಣಗಾಗಲು ಬೇಕು ಶಾಂತಿ ಆ ಶಾಂತಿ

ಇಲ್ದಿದ್ರೆ ನನ್ಗೆ ಸೇರೋದಿಲ್ಲ ಅನ್ನ ನಿದ್ರೆ


ರಚನೆ

ಯಗುಮಾಶ




Friday, December 18, 2020

ಮತದಾನದ ಜಾಗೃತಿ ಕವನ ೧೬/೧೨/೨೦೨೦

 ಕವನ ಶೀರ್ಷಿಕೆ

*ಮತದಾನದ ಜಾಗೃತಿ ಮೂಡಿಸೋಣ*


ಚುನಾವಣೆಗಳು ಬಂದಿವೆ ನಾವು ಜಾಗೃತರಾಗೋಣ

ಕೆಲವು ದಿನ ಕೊಡುವ ಹೆಂಡ ಕಂಡಕೆ ಬಲಿಯಾಗದೆ

ಗೌರವದಿಂದ ಬಾಳಿ ಬದುಕುವ ಪಣ ತೊಡೋಣ

ಅವರ ಅಚ್ಚುಮೆಚ್ಚಿನ ಮಾತಿಗೆ ಮರಳಾಗಬೇಡಿ


ನಿಂತಿರುವ ವ್ಯಕ್ತಿಯ ಗುಣಾವಗುಣ ಲೆಕ್ಕಿಸೋಣ

ಸಂಬಂಧಗಳನು ಹಾಳು ಮಾಡಿಕೊಳ್ಳದೆ ಗಟ್ಟಿ

ಮಾಡಲು ಪ್ರಯತ್ನಿಸುವ ಕೆಲಸ ಸಾಗುತಿರಲಿ

ನಮಗೆ ಒಳಿತು ಬಯಸುವರನ್ನೆ ಚುನಾಯಿಸೋಣ 


ಜಾತಿಯ ಕಟ್ಟುಪಾಡುಗಳನ್ನು ಮೀರಿ ಒಳ್ಳೆಯ

ವ್ಯಕ್ತಿಯನ್ನು ನಾಯಕನನ್ನಾಗಿ ಮಾಡೋಣ

ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆಗೆ

ನೆನೆವ ನಯವಂಚಕರಿಗೆ ತಕ್ಕ ಉತ್ತರ ನೀಡೋಣ


ಆಸೆ ಆಮಿಷಗಳ ತೋರಿಸಿ ಹಣ ಸುರಿದು

ಓಟು ಆಕಿಸುವವರ ದುಡ್ಡಿಗೆ ಬೆಲೆ ನೀಡದಿರೋಣ

ನಮ್ಮ ಅಳಲು ತೋಡಿಕೊಂಡರೆ ನೀವು ಪುಕ್ಕಟೆ

ಓಟು ಆಕಿಲ್ಲವೆಂದು ಜರಿದಾಗ ಪೇಚಿಗೆ ಸಿಲುಕದಿರೋಣ


ಮತದಾರ ಪ್ರಭುಗಳಾದ ನಾವು ಉತ್ಸಾಹದಿ ಮತಗಟ್ಟೆಗೆ

ತೆರಳಿ ತಪ್ಪದೆ ಮತದಾನದ ಹಕ್ಕನ್ನು ಚಲಾಯಿಸೋಣ

ಗ್ರಾಮಗಳ ಉದ್ದಾರಕ್ಕೆ ದುಡಿವರನು ಗೆಲ್ಲಿಸಿ ತರುವ

ಸಂಕಲ್ಪ ತೊಟ್ಟು ಮತದಾನದ ಜಾಗೃತಿ ಮೂಡಿಸೋಣ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ






ಸಮರಸವೇ ಜೀವನ ಕವನ ೧೬/೧೨/೨೦೨೦

 ಕವನದ ಶೀರ್ಷಿಕೆ

*ಸಮರಸವೇ ಜೀವನ*


ಅನುರಾಗ ಅರಳಿ ಸರಸ ಬೀರಲು

ಹೊಂದಾಣಿಕೆ ಬೇಕು ಮಾನವ

ಹಿರಿಯರ ಸಲಹೆ ಕೇಳುತ ಸಾಗಲು

ಜೀವನ ಸುಂದರ ಸುಖಮಯವು


ಜಾತಿ ವಿಜಾತಿಗಳು ತೊಂದರೆ ಕೊಡವು

ಗೆಳೆತನದ ಸವಿರುಚಿಗೆ ಸುಖ ದುಃಖಗಳಲಿ

ಭಾಗಿಯಾಗಿ ನೋವ ಮರೆಯಲು ಸಹಕಾರಿ

ನಂಬಿಕೆಯ ನೆಲೆಯೇ ಕೆಳೆತನದ ಜೀವಾಳವು


ಭಾವ ಬಂಧನದಲಿ ಕೂಡುವೆವು ನಾವು ನೀವು

ಬದುಕಿನ ಪಯಣದಲಿ ಹಲವು ಮಜಲುಗಳು

ಕಾಣುವೆವು ಗಂಡ ಹೆಂಡತಿ ಜೊತೆ ಜೊತೆಯಾಗಿ

ಅವರವರ ಭಾವನೆಗಳ ಅರಿತು ಸಾಗಲು ಸರಳ


ಸವಿಮಾತು ಸವಿನಯದ ನಡೆಯೇ ಸುಗಮ ದಾರಿ

ಒಲವಿನ ಓಲೆ ಬರೆಯೋಣ ನಾವು ನೀವು ಒಂದಾಗಲು

ನೆಲ ಜಲ ವೇ‌ಷ ಭಾಷೆಯು ನಮಗೆ ಉಸಿರಾಗಿರಲಿ

ಸುಖಿ ಸಂಸಾರ ಸಾಗಲು ಸಮರಸ ಜೀವನ ನಡೆಸೋಣ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


 




Monday, December 14, 2020

ಧನಿಕರ ದೌರ್ಜನ್ಯ ಕವನ ೧೫/೧೨/೨೦೨೦

 ಧನಿಕರ ದೌರ್ಜನ್ಯ ಪ್ರಕಟ ೧೫/೧೨/೨೦೨೦



೮ನೇ ಕನ್ನಡ ಸೋಮೇಶ್ವರ ಶತಕ ಪದ್ಯ ಭಾಗದ ವೀಡಿಯೊ ೧೫/೧೨/೨೦೨೦


 

ವೇದನೆ ಕವನ ೧೪/೧೨/೨೦೨೦

 ಕವನದ ಶೀರ್ಷಿಕೆ

*ವೇದನೆ*

(ಅಂತ್ಯ ಪ್ರಾಸ*


ಪ್ರೀತಿಯಲಿ ಸೋತವರು ಅನುಭವಿಸಿಹರು

ಸಂಸಾರದ ಜಂಜಾಟದಲಿ ಬೇಸರವಾದವರು

ತೊಂದರೆಗಗಳು ಬಂದು ಸಾಕು ಸಾಕಾದವರು

ಕ್ಷುಲ್ಲಕ ವಿಷಯಕ್ಕೆ ಬೇಗ ಕೋಪಗೊಳ್ಳುವವರು


ಬೇರೆಯವರ ನೋಡಿ ನಾನು ಆಗಾಲಿಲ್ಲವೆಂದವರು

ಅತಿಯಾದ ಆಸೆ ಇಟ್ಟುಕೊಂಡು ಹೀಡೇರದವರು

ಪರಸ್ತ್ರೀಯರ ನೋಡಿ ಮನದಲ್ಲೇ ಕೊರಗುವವರು

ತಮ್ಮವರ ಸಂಬಂಧಗಳು ಸರಿಯಾಗಿ ಇಲ್ಲದವರು


ಹೆಂಡತಿಯು ತನ್ನ ಅಂಕೆಗೆ ಸಿಗಲಾರಳು ಎಂದು

ಮಕ್ಕಳು ಒಳ್ಳೆಯ ದಾರಿಯಲ್ಲಿ ಸಾಗಲಾರರೆಂದು

ವ್ಯಾಪಾರದಲ್ಲಿ ನಾವಂದುಕೊಂಡಂತೆ ಆಗಿಲ್ಲವೆಂದು

ರೋಗ ಬಂದು ಹಾಸಿಗೆ ಹಿಡಿದು ಭಾರವಾದೆನೆಂದು


ಆತ್ಮೀಯ ಗೆಳೆಯ ಗೆಳತಿಯರು ಮಾತು ಆಡದಿದ್ದಾಗ

ತನ್ನ ಮೇಲಾಧಿಕಾರಿಗಳು ಸರಿಯಾಗಿ ಸ್ಪಂದಿಸದಿದ್ದಾಗ

ಮುಪ್ಪಿನ ಕಾಲದಲ್ಲಿ ಮಕ್ಕಳು ನೋಡಿಕೊಳ್ಳದಿದ್ದಾಗ

ವೇದನೆ ಅನ್ನೋದು ಯಾರನ್ನು ಬಿಟ್ಟಿಲ್ಲವೇ ಜಗದಾಗ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*



೧೦ನೇ ಕನ್ನಡ ವ್ಯಾಕರಣ ಭಾಗ ಛಂದಸ್ಸು ವೀಡಿಯೊ ಭಾಗ -೧ ೧೪/೧೨/೨೦೨೦

 


ಜಾಗೃತ ಜಗತ್ತು ಕವನ ೧೩/೧೨/೨೦೨೦

 ಕವನದ ಶೀರ್ಷಿಕೆ

*ಜಾಗೃತ ಜಗತ್ತು*

(ರುಬಾಯಿ ಸಾಹಿತ್ಯ ಪ್ರಕಾರ)


ಕಲಿ ಕಾಲದ ಕಲಿಯುಗ ನಡದಿದೆ ಅಂತಾರ

ಹತ್ತು ವರ್ಷಗಳ ಹಿಂದೆ ಇದ್ದದ್ದು ಆಗ್ಯಾದ ಬ್ಯಾರೆ

ಬದಲಾವಣೆ ಅನ್ನೋದು ಜಗದ ನಿಯಮ ತಿಳಿ

ಅಂದಾರು ಇಷ್ಟು ಬದಲಾದುದ್ದು ಬಹಳ ಅಚ್ಚರಿ


ತಂತ್ರಜ್ಞಾನ ವೇಗವಾಗಿ ಬೆಳೆದು ಇದು ಸಾಧ್ಯವೇ

ಅಂದದ್ದು ಜಾಗತಿಕ ಮಾರುಕಟ್ಟೆಗೆ ಬಂದಿವೆ

ಏನೂ ಅರಿಯದ ಜನ ಹೊಂದಿಕೊಂಡಿರುವರು

ಆಡ್ತಾ ಆಡ್ತಾ ರಾಗ ಎನ್ನುವಂತೆ ತಾನಾಗೇ ಬಂದಿವೆ


ಮೊಬೈಲ್ ಬಳಕೆ ಕಂಪ್ಯೂಟರ್ ಜ್ಞಾನದ ಕಲಿಕೆ

ಸ್ವಲ್ಪ ಹೊತ್ತು ಹಾಗೆಯೇ ಮಾಡಿಹರು ಬಳಕೆ

ಅಂಗೈಯಲ್ಲಿ ಹಿಡಿದು ಇಡೀ ಜಗವ ನೋಡುವರು

ಹಳ್ಳಿ ಪಟ್ಟಣಗಳ ಐಕಳು ಸೇರಿ ಮಾಡಿಹರು ಬಳಕೆ


ಕ್ಷಣ ಮಾತ್ರದಲ್ಲಿ ತಲುಪುತ್ತದೆ ಮಾಹಿತಿ ಜ್ಞಾನ

ವ್ಯಾಟ್ಸಾಪ್ ಫೇಸ್ ಬುಕ್ ಕೊಟ್ಟಿವೆ ಆಹ್ವಾನ

ಪತ್ರಿಕೆ ಪುಸ್ತಕ ಅಂತರ್ ಜಾಲದಲ್ಲಿ ಕುಟುಕುವರು

ಜಗತ್ತಿನ ಜನರನ್ನು ಜಾಗೃತರನ್ನಾಗಿಸಿದೆ ತಂತ್ರಜ್ಞಾನ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


ಬದುಕು ಕಟ್ಟಿಕೊಳ್ಳುವ ತವಕ ಕವನ ೧೩/೧೨/೨೦೨೦

 ಕವನದ ಶೀರ್ಷಿಕೆ

*ಬದುಕು ಕಟ್ಟಿಕೊಳ್ಳುವ ತವಕ*


ಪ್ರವಾಹ ಬಂದು ಊರೊಳಗೆ ಹೊಕ್ಕು

ಮನೆ ತುಂಬ ನೀರೇ ನೀರು ತುಂಬಿಹದು

ಒಮ್ಮಿಂದೊಮ್ಮೆಲೆ ಹೋಗೆಂದರೆ ಹೇಗೆ

ಜೀವನಕ್ಕಿಂತ ಜೀವ ಮುಖ್ಯ ಎಂದು ತಿಳಿಸ್ಯಾರ


ನಾನು ನನ್ನದೆಂದು ಗಳಿಸಿದ್ದು ನಮಗಾಗಲಿಲ್ಲ

ಎಲ್ಲಾ ಬಿಟ್ಟು ಹೊರಟಾಗ ಶಾಶ್ವತವಲ್ಲ ಐಸಿರಿ

ನಮ್ಮ ಹೊಲ ನಮಗ ಸಿಗುತ್ತಿಲ್ಲ ಯಾರಿಗೆ ಗೊತ್ತು

ನಾಮ್ಮವರೆಲ್ಲಿ ಕೊಚ್ಚಿಕೊಂಡು ಹೋಗ್ಯಾರ ಅಂಥ


ಒಂದ್ಹೊತ್ತಿನ ಊಟಕ್ಕೂ ಕೈ ಚಾಚ ಬೇಕಾತು

ಗಂಜಿ ಕೇಂದ್ರದಾಗ ಕುಂತು ದಾರಿ ಕಾಯೋದಾತು

ಉಟ್ಟೆನೆಂದರ ಬಟ್ಟಿ ಇಲ್ಲ ಬರಿ ಇಲ್ಲ ಎಲ್ಲನೂ

ದವಸ ಧಾನ್ಯ ದನ ಕರು ಕೊಚ್ಚಿಕೊಂಡು ಹೋಗಿವೆ


ಊರು ದಾಟಿಸಲಿಕ್ಕೂ ಸೈನಿಕರ ಹರಸಾಹಸ 

ಮಕ್ಕಳ ಮರಿಯೊಂದಿಗೆ ಓಡೋಡಿ ಬಂದೇವ

ಜೀವ ಸತ್ತು ಹೋಗುವಾಗ ಗಳಿಸಿದ್ದೆಲ್ಲ ಶೂನ್ಯ

ನಾವು ನಮ್ಮವರ ಕೂಡಿ ಇರೋಣ ಒಂದಾಗಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

Saturday, December 12, 2020

ಕನ್ನಡ ನಾಡು ನುಡಿ ಕವನ 12/12/2020

ಕವನದ ಶೀರ್ಷಿಕೆ

*ಕನ್ನಡ ನಾಡು ನುಡಿ*


ಕವಿಗಳ ಬೀಡು ಕನ್ನಡ ನಾಡು

ಚಿನ್ನಾ.. ರನ್ನಾ.. ತಿಳಿಯೋ ನೀನು

ಸವಿಜೇನು ಸವಿದಂತೆ ಈ ನುಡಿಯ ಕೇಳು

ಅಕ್ಕರೆಯ ಅಕ್ಕರಗಳು ನೀ ಕಾಣು ಓ....


ತುಂಬೆ ತೇಗ ಬೀಟೆ ಗಂದ ಮರಗಳ ನೋಡು

ಮಾಮರ ಕೋಗಿಲೆಯ ಇಂಪಾದ ಹಾಡು

ಅಣ್ಣಾ ನೀ ಬಾಳಲೇ ಬೇಕು ಒಂದಾಗಿ ಚಂದಾಗಿ

ಜಾತಿ ಮತ ಭೇದವ ಮರೆತು.....ಬಾಳೋ.. ನೀ...


ಕಲ್ಪತರು ನಾಡು ಶಿಲೆಗಳ ಬೀಡು ಅಹ..ಅಹಾ.

ಚಾಲುಕ್ಯ ಹೊಯ್ಸಳ ಶೈಲಿಯ ಕಲೆಗಳ ನೋಡು

ಬಾದಾಮಿ ಬನಶಂಕರಿ ತಾಯಿಯ ವರದಿಂದ

ನಾವು.. ನೀವು.. ಒಲವೆತ್ತಿ ಬಾಳಿ ಬದುಕ ಬೇಕು


ಬೇಲೂರು ಹಳೇಬೀಡು ಹಂಪೆಯ ನೋಡು...

ಜೋಗಿ ಜಲಪಾತದಿ ಧುಮುಕುವ ವೈಭವವು...

ಕಾವೇರಿ ನದಿಯ ಜುಳು ಜುಳು ನಿನಾದವ ಕೇಳು

ಮೈಸೂರು ಅರಮನೆಯ ದಸರಾ ಮೆರವಣಿಗೆಗೆ ಹೋಗು....


ಊಟಿ ಉದಕ ಮಂಡಲದ ಮೈಮಾಟದ ಬೆರಗ..

ಮಡಿಕೇರಿ ಮಣ್ಣಿನ ಕಾಫಿಯ ಪರಿಮಳವ ಹೀರು

ಬೀದರ್ ಬಿಜಾಪುರ ಕಲ್ಬುರ್ಗಿಯ ಕೋಟೆಯ ಸುತ್ತು

ಕನ್ನಡ ಕನ್ನಡ ಎನ್ನುತ ನಲಿದು ಬಾರಿಸು ಕನ್ನಡ ಡಿಂಡಿಮವ..


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*









Friday, December 11, 2020

ತಲಕಾಡು ಮರಳಾದದು ಹೇಗೆ

 *ಐತಿಹಾಸಿಕ ತಲಕಾಡು ಮರಳಾಗಿದ್ದು ಹೇಗೆ? ಶಾಪದ ಶಕ್ತಿಯೇ ಕಾರಣವಾ?*


ಒಂದು ಕಾಲದಲ್ಲಿ ಗಂಗರು, ಚೋಳರು ರಾಜ್ಯಭಾರ ಮಾಡಿದ್ದ ತಲಕಾಡು ತನ್ನದೇ ಆದ ಇತಿಹಾಸವನ್ನು ಹೊಂದಿ ವೈಭವದಿಂದ ಮೆರೆದ ನಾಡಾಗಿತ್ತು. ಇಂತಹ ನಾಡು ಮರಳು ರಾಶಿಯಿಂದ ಕೂಡಲು ಕಾರಣವೇನು ಎಂಬುದರ ಹಿಂದೆ ಕಥೆಯೊಂದು ಪ್ರಚಲಿತದಲ್ಲಿರುವುದನ್ನು ಕಾಣಬಹುದು. ಇದೇ ಡಿ.10ರಿಂದ ತಲಕಾಡು ಪಂಚಲಿಂಗ ದರ್ಶನ ಆರಂಭವಾಗಲಿದ್ದು, ಈ ನೆಪದಲ್ಲಿ ತಲಕಾಡಿನ ಇತಿಹಾಸದ ಕುರಿತೂ ಮೆಲಕು ಹಾಕೋಣ...

ತಲಕಾಡನ್ನು ಗಜಾರಣ್ಯ ಕ್ಷೇತ್ರ, ಆನೆಕಾಡು ಎಂದು ಕೂಡ ಕರೆಯಲಾಗುತ್ತಿತ್ತು. ಇಲ್ಲಿರುವ ವೈದ್ಯೇಶ್ವರ ಲಿಂಗವು ಪ್ರಾಚೀನ ಕಾಲದ್ದಾಗಿದ್ದು, ಕಾಡಿನಲ್ಲಿದ್ದ ಈ ಲಿಂಗಕ್ಕೆ ಆಕಸ್ಮಿಕವಾಗಿ ಕೊಡಲಿ ತಾಗಿದಾಗ ರಕ್ತ ಚಿಮ್ಮಿತೆಂದೂ, ಅದನ್ನು ನಿವಾರಿಸಲು ಸ್ವತಃ ವೈದ್ಯ ಮಾಡಿದ್ದರಿಂದ ವೈದ್ಯೇಶ್ವರ ಎಂಬ ಹೆಸರು ಬಂತೆಂದು ಹೇಳಲಾಗುತ್ತಿದೆ. ಇಲ್ಲಿ ವೈದ್ಯೇಶ್ವರ ಲಿಂಗವಲ್ಲದೆ, ಮರಳೇಶ್ವರ, ಪಾತಾಳೇಶ್ವರ, ಅರ್ಕೇಶ್ವರ ಎಂಬ ಲಿಂಗಗಳಿದ್ದು, ಇಲ್ಲಿರುವ ಮರಳೇಶ್ವರ, ಪಾತಾಳೇಶ್ವರ ಮತ್ತು ಕೀರ್ತಿ ನಾರಾಯಣ ದೇಗುಲಗಳು ಹಿಂದೆ ಮರಳಿನಿಂದ ಮುಚ್ಚಿಹೋಗಿದ್ದವು. ಮುಂದೆ ಓದಿ...


*ಮರಳು ತೆಗೆಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್*


ಈ ದೇಗುಲಗಳ ಮೇಲೆ ಹರಡಿದ್ದ ಮರಳನ್ನು 1924ರಲ್ಲಿ ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ತೆಗೆಸಿ, ಪಂಚಲಿಂಗ ದರ್ಶನವಲ್ಲದೆ ಇತರೆ ದಿನಗಳಲ್ಲಿಯೂ ಭಕ್ತರು ದರ್ಶನ ಮಾಡಲು ಅನುಕೂಲ ಮಾಡಿಕೊಟ್ಟರು ಎಂದು ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ತಲಕಾಡು ಹೇಗೆ ಮರಳಾಯಿತು ಎಂಬುದನ್ನು ನೋಡುವುದಾದರೆ ಇದರ ಹಿಂದೆ ಮೈಸೂರು ಪ್ರಾಂತ್ಯದಲ್ಲೊಂದು ದಂತಕಥೆಯಿದೆ. ಇದಕ್ಕೆ ಖಚಿತ ಪುರಾವೆ ಇಲ್ಲವಾದರೂ ಒಂದಷ್ಟು ಘಟನೆಗಳ ಸಾಮ್ಯತೆ ಇರುವುದನ್ನು ತಳ್ಳಿ ಹಾಕಲಾಗದು.


*ತಲಕಾಡಿನಲ್ಲಿ ಮೃತಪಟ್ಟ ಶ್ರೀರಂಗರಾಯ*


ಅದು ವಿಜಯನಗರ ಅರಸರು ಆಳುತ್ತಿದ್ದ ಕಾಲ. ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡು ಆಳ್ವಿಕೆ ನಡೆಸಲಾಗುತ್ತಿತ್ತು. ಈ ವೇಳೆ ಹಲವು ಸಾಮಂತರಾಜರು ವಿಜಯನಗರ ರಾಜರ ಪ್ರತಿನಿಧಿಯಾಗಿ ಆಳ್ವಿಕೆ ನಡೆಸುತ್ತಿದ್ದರು. ಅದರಂತೆ ಶ್ರೀರಂಗಪಟ್ಟಣದಲ್ಲಿ ಶ್ರೀರಂಗರಾಯ ಎಂಬಾತ ಆಳ್ವಿಕೆ ನಡೆಸುತ್ತಿದ್ದನು. ಇತ್ತ ಮೈಸೂರಿನಲ್ಲಿ ರಾಜ ಒಡೆಯರ್ ಆಳ್ವಿಕೆ ನಡೆಸುತ್ತಿದ್ದರು. ರಾಜ ಒಡೆಯರಿಗೂ ತಮ್ಮ ಸಾಮ್ರಾಜ್ಯ ವಿಸ್ತರಿಸುವ ಬಯಕೆಯಿತ್ತು. ಇದೇ ಸಮಯದಲ್ಲಿ ಶ್ರೀರಂಗರಾಯನಿಗೆ ಬೆನ್ನುಪಣಿ ರೋಗ ಬಂದಿತ್ತು. ಇದು ವಾಸಿಯಾಗಲು ತಲಕಾಡಿಗೆ ತೆರಳಿ ವೈದ್ಯನಾಥೇಶ್ವರನಿಗೆ ಪೂಜೆ ಸಲ್ಲಿಸಲು ರಾಜವೈದ್ಯರು ಸಲಹೆ ನೀಡಿದರು. ಅದರಂತೆ ತನ್ನ ಪತ್ನಿ ಅಲಮೇಲಮ್ಮನ ಸಹಿತ ತಲಕಾಡಿನ ಶ್ರೀ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಪೂಜೆಗಾಗಿ ತೆರಳುತ್ತಾರೆ. ಆದರೆ ಅಷ್ಟರಲ್ಲೇ ಶ್ರೀರಂಗರಾಯನನ್ನು ಬಾಧಿಸುತ್ತಿದ್ದ ರೋಗ ಉಲ್ಬಣಗೊಳ್ಳುತ್ತದೆ. ಹಲವು ರೀತಿಯ ಚಿಕಿತ್ಸೆ ನೀಡಿದರೂ ಪ್ರಯೋಜನವಾಗದೆ ರೋಗ ಇನ್ನಷ್ಟು ಉಲ್ಬಣವಾಗಿ ಶ್ರೀರಂಗರಾಯ ತಲಕಾಡಿನಲ್ಲೇ ಮರಣಹೊಂದುತ್ತಾರೆ.


*ರಾಜ ಒಡೆಯರ್ ವಶಕ್ಕೆ ಶ್ರೀರಂಗಪಟ್ಟಣ*


ಶ್ರೀರಂಗಪಟ್ಟಣವನ್ನು ಆಳುತ್ತಿದ್ದ ಶ್ರೀರಂಗರಾಯ ಕಾಯಿಲೆಯಿಂದ ಮರಣ ಹೊಂದಿರುವ ವಿಚಾರ ಮೈಸೂರಿನ ಅರಸರಾಗಿದ್ದ ರಾಜ ಒಡೆಯರ್ ಗೆ ತಿಳಿಯುತ್ತದೆ. ಇದೇ ಸೂಕ್ತ ಸಮಯ ಎಂದರಿತ ಅವರು ಶ್ರೀರಂಗಪಟ್ಟಣದ ಮೇಲೆ ದಂಡೆತ್ತಿ ಹೋಗಿ ಶ್ರೀರಂಗಪಟ್ಟಣವನ್ನು ಆಕ್ರಮಿಸಿಕೊಳ್ಳುತ್ತಾರೆ. ಈ ಸಂದರ್ಭ ಶ್ರೀರಂಗರಾಯನ ಪತ್ನಿ ಅಲಮೇಲಮ್ಮ ಶ್ರೀರಂಗಪಟ್ಟಣವನ್ನು ಬಿಟ್ಟು ತಲಕಾಡಿನ ಪಕ್ಕದಲ್ಲಿರುವ ಮಾಲಂಗಿ ಗ್ರಾಮದಲ್ಲಿ ನೆಲೆಸುತ್ತಾಳೆ. ಆದರೆ ಅಮೂಲ್ಯವಾದ ಮುತ್ತಿನ ಮೂಗುತಿ ಸೇರಿದಂತೆ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿಗೆ ಧರಿಸುತ್ತಿದ್ದ ಬಹಳಷ್ಟು ಒಡವೆಗಳು ಅವಳ ವಶದಲ್ಲಿರುತ್ತದೆ.


*ಆಭರಣ ನೀಡಲು ಅಲಮೇಲಮ್ಮನಿಗೆ ರಾಜಾಜ್ಞೆ*


ಈ ನಡುವೆ ರಾಜ ಒಡೆಯರ್ ಶ್ರೀರಂಗಪಟ್ಟಣವನ್ನು ಅತಿಕ್ರಮಿಸಿ ಅದನ್ನು ರಾಜಧಾನಿಯಾಗಿಸಿ ಅಲ್ಲಿನ ಶ್ರೀ ರಂಗನಾಥಸ್ವಾಮಿ ದೇಗುಲದ ಮುಂಭಾಗದಲ್ಲಿದ್ದ ಅರಮನೆಯಲ್ಲಿ ರಾಜ್ಯಭಾರ ನಡೆಸುತ್ತಿದ್ದರಲ್ಲದೆ, ಅರಮನೆಯ ಸಂಪ್ರದಾಯದಂತೆ ನವರಾತ್ರಿ ಉತ್ಸವವನ್ನು ಆಚರಣೆ ಮಾಡುತ್ತಾರೆ. ಈ ವೇಳೆ ಶ್ರೀ ರಂಗನಾಥ ಸ್ವಾಮಿಗೆ ಅಲಂಕಾರ ಮಾಡಬೇಕಾದ ಒಡವೆಗಳು ತಲಕಾಡಿನಲ್ಲಿದ್ದ ಶ್ರೀರಂಗರಾಯರ ಪತ್ನಿ ಅಲಮೇಲಮ್ಮನ ಬಳಿಯಿರುವುದು ಗೊತ್ತಾಗುತ್ತದೆ. ಹೀಗಾಗಿ ಅದನ್ನು ತಂದು ಒಪ್ಪಿಸುವಂತೆ ರಾಜಾಜ್ಞೆ ಮಾಡುತ್ತಾರೆ. ಆದರೆ ಅವುಗಳನ್ನು ರಾಜ ಒಡೆಯರಿಗೆ ಒಪ್ಪಿಸಲು ಅಲಮೇಲಮ್ಮ ನಿರಾಕರಿಸುತ್ತಾಳೆ. ಈ ವೇಳೆ ಆ ಒಡವೆಗಳನ್ನು ಬಲವಂತವಾಗಿ ಕಿತ್ತುಕೊಳ್ಳುವ ಪ್ರಯತ್ನಕ್ಕೆ ರಾಜ ಒಡೆಯರು ಮುಂದಾಗುತ್ತಾರೆ.


*ಶಾಪ ನೀಡಿ ನದಿಗೆ ಹಾರಿದ ಅಲಮೇಲಮ್ಮ*


ಇದರಿಂದ ಭಯಗೊಂಡ ಅಲಮೇಲಮ್ಮ ರಾಜರ ಮೇಲೆ ಆಕ್ರೋಶಗೊಂಡು ತಲಕಾಡು ಮರಳಾಗಿ ಮಾಲಂಗಿ ಮಡುವಾಗಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ ಎಂದು ಶಾಪ ಹಾಕಿ ಒಡವೆಗಳೊಡನೆ ಕಾವೇರಿ ನದಿಗೆ ಹಾರಿ ಪ್ರಾಣ ಬಿಡುತ್ತಾಳೆ. ಅಂದಿನಿಂದ ತಲಕಾಡು ಮರಳಾಯಿತು ಎಂದು ಹೇಳಲಾಗುತ್ತಿದೆ. ಈ ಕಥೆಯ ಸತ್ಯಾಸತ್ಯತೆ ಏನೇ ಇರಲಿ ಆದರೆ ತಲಕಾಡು ಮರಳಾಗಿಯೂ, ಮಾಲಂಗಿ ಮಡುವಾಗಿಯೂ, ಮೈಸೂರು ರಾಜರಿಗೆ ಮಕ್ಕಳಾಗದೆ, ದತ್ತುಪುತ್ರರಿಗೆ ಮಾತ್ರ ಮಕ್ಕಳಾಗುತ್ತಿರುವುದು ನಡೆದುಕೊಂಡು ಬಂದಿದೆ.

ಹಿಂದೆ ತಲಕಾಡಿನಲ್ಲಿರುವ ದೇಗುಲಗಳು ಮರಳಿನಿಂದ ತುಂಬಿ ಹೋಗುತ್ತಿದ್ದವು. ಪಂಚಲಿಂಗದರ್ಶನದ ವೇಳೆ ಮರಳನ್ನು ತೆಗೆದು ಭಕ್ತರಿಗೆ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗುತ್ತಿತ್ತು. ನಂತರ ಮತ್ತೆ ಮರಳಿನಿಂದ ದೇಗುಲಗಳು ಮುಚ್ಚಿ ಹೋಗುತ್ತಿದ್ದವು. ಆದರೆ ಬದಲಾದ ಕಾಲಮಾನದಲ್ಲಿ ಮೊದಲಿನಂತೆ ಮರಳು ರಾಶಿಗಳು ಇಲ್ಲವಾದರೂ ಸುತ್ತಮುತ್ತಲು ಮರಳಂತು ಇದ್ದೇ ಇದೆ.

09ನೇ ಕನ್ನಡ ಹರಲೀಲೆ ಗದ್ಯಭಾಗದ ವೀಡಿಯೊ ಭಾಗ - 2 11/12/2020

 


ಹೆಣ್ಣು ಕವನ 11/12/2020

 ಕವನದ ಶೀರ್ಷಿಕೆ

*ಹೆಣ್ಣು*


ಮಮತಾಮಯಿ ಹೆಣ್ಣು

ಗರ್ಭಧರಿಸಿ ಜನನಕ್ಕೆ ಕಾರಣಳು

ಮಕ್ಕಳ ಲಾಲನೆ ಪಾಲನೆ ಮಾಡುತ

ಪ್ರೀತಿಯನು ಧಾರೆ ಎರೆವಳು


ತಾಯಿಯೇ ಮೊದಲ ಗುರುವಾಗಿ

ಪರಿಚಯಿಸಿಹಳು ಜ್ಞಾನವ ನೀಡಿ

ನಲ್ಮೆಯ ಹಾರೈಕೆಯಿಂದ ಹರಸುವಳು

ತಪ್ಪು ಹೆಜ್ಜೆ ಇಡಲು ಬುದ್ಧಿ ಕಲಿಸುವಳು


ಚಿಕ್ಕಂದಿನಿಂದಲೂ ನಕ್ಕು ನಲಿಯುವದ

ಕಲಿತು ಮುಂದೆ ನೋವ ಮರೆಯುವಳು

ಗಂಡನೊಂದಿಗೆ ಬದುಕಿ ಬಾಳಿ ಬೇಕು

ಬೇಡ ತಿಳಿದು ನಯ ವಿನಯ ತೋರುವಳು


ಕುಟುಂಬ ಸದಸ್ಯರ ಆರೈಕೆ ಮಾಡಿ ತಾನು

ಸೈ ಎನಿಸಿಕೊಂಡ ಅಕ್ಕರೆ ನೀಡಿ ಮೆಚ್ಚುಗೆ

ಪಡೆದು ಒಗ್ಗೂಡಿ ನೆಡೆಯುವಲ್ಲಿ ಎತ್ತಿದ ಕೈ

ಹೆಣ್ಣಿನಲಿ ತಾಳ್ಮೆಯ ಅನುರಾಗ ಅರಳುವದು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ





10ನೇ ಕನ್ನಡ ವ್ಯಾಕರಣ ಗಾದೆಗಳು 10/12/2020

 


ಧನಿಕರ ದೌರ್ಜನ್ಯ ಕವನ 10/12/2020

ಕವನದ ಶೀರ್ಷಿಕೆ

*ಧನಿಕರ ದೌರ್ಜನ್ಯ*


ಬಡವರನು ಕಣ್ಣೆತ್ತಿಯೂ ನೋಡರು

ಅವರ ಮನೆಯ ಕೆಲಸಕ್ಕೆ ಇವರು ಬೇಕು

ಕರುಣೆಯಿಲ್ಲದೆ ದುಡಿಸಿಕೊಳ್ಳುವ ಮನ

ಒಂದಿಷ್ಟು ಹೆಚ್ಚು ದುಡ್ಡು ಕೇಳಲು ಕೋಪ


ಬಡವರನು ಬಡವರಾಗಿಯೇ ಇಡೋ ತಂತ್ರ

ಅವರು ಹಣವಂತರಾದ್ರೆ ಚಾಕರಿ ಮಾಡೋರಾರು

ಕೈಗೊಬ್ಬ ಕಾಲ್ಗೊಬ್ಬ ಆಳು ಇಟ್ಟುಕೊಂಡು ಶೋಕಿ

ಮಾಡುತ ಗುಲಾಮಗಿರಿಗೆ ತಳ್ಳುವ ತವಕ ಬೇರೆ


ಆಳುಗಳಿಗೆ ಬಾಯಿಗೆ ಬಂದಂತೆ ಬೈಯ್ಯುವುದು

ಅವಮಾನದಿ ಮುಖ ತಗ್ಗಿಸಿ ನಿಂತ್ರೇನು ಖುಷಿಯೋ

ಬಡ್ಡಿ ಚಕ್ರಬಡ್ಡಿ ಸೇರಿಸಿ ದುಡಿ ಮಗನ ಅನ್ನೋದು

ರೋಗ ರುಜಿನ ಬಂದ್ರೆ ತೋರಿಸಲು ದುಡ್ಡಿಲ್ಲದ ಜನ


ಬಡವರೇನು ಬಿಟ್ಟಿಗಿ ಬಿದ್ದಾರಂತ ತಿಳಿದಿರೇನ್ರೋ

ಬಡವನ ಸಿಟ್ಟು ದವಡೆಗೆ ಮೂಲಂತ ಸುಮ್ಮನಿರೋರು

ತಿರುಗಿ ಬಿದ್ರೆ ನಿಮ್ಮನೆ ಕಸ ಬಳಿಯೊಕ್ಕು ಜನ ಸಿಗೊಲ್ಲ

ದವಲತ್ತು ಬಿಟ್ಟು ಮನುಷತ್ವದಿಂದ ನೋಡೋದು ಕಲಿರಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*




 

ಮಕ್ಕಳ ಭವ್ಯ ಕನಸುಗಳು ಕವನ 09/12/2020

 ಕವನದ ಶೀರ್ಷಿಕೆ

*ಮಕ್ಕಳ ಭವ್ಯ ಕನಸುಗಳು*

ವಿಷಯ : ಮಕ್ಕಳ ಮನೋಲೋಕ


ನೀರಲ್ಲಿ ಮೀನಾಗಿ ಈಜಾಡುವ ಆಸೆ

ಹಕ್ಕಿಗಳಂತೆ ಆಕಾಶದಿ ಹಾರುವ ಬಯಕೆ

ನಕ್ಷತ್ರ ಪುಂಜಗಳ ಮುಟ್ಟುವ ತವಕ ನನಗೆ

ಚಂದಿರನ ಮೇಲೆ ಆಟ ಆಡುವ ಕನಸ ಕಾಣೆ


ಮಿಂಚಂತೆ ಓಡೋಡಿ ಬರುವ ಶಕ್ತಿಬೇಕು

ಜನರ ಮನಸು ಅರ್ಥ ಮಾಡಿಕೊಳ್ಳಬೇಕು

ಕತ್ತಲನು ಓಡಿಸುವ ಬೆಳಕು ನನಾಗಬೇಕು

ಬರೆಯಲು ಬೇಕಾಗುವ ಲೆಕ್ಕಣಿಕೆಯಾಗಬೇಕು


ಸೂರ್ಯನಂತೆ ದೃಢವಾಗಿ ನಿಲ್ಲುವ ಗುಣ ಸಾಕು

ಜಲದಂತೆ ಹರಿಯೋ ವಿಶಾಲ ಮನಸು ನನಗಿರಲಿ

ನದಿಗಳು ಸಮುದ್ರ ಸೇರುವಂತೆ ಐಕ್ಯತೆ ಭಾವ ಬೇಕು

ರಾಜಾಧಿರಾಜರಂತೆ ಮೆರೆಯುವ ಕನಸು ನಿಜವಾಗಲಿ


ದೀನ ದಲಿತರ ಸೇವೆ ಮಾಡೋ ಅವಕಾಶ ಸಿಗಲಿ

ಜಾತಿ ವೈಷಮ್ಯವಿರದ ನಾಡು ಕಟ್ಟೋ ನಿರ್ಧಾರ 

ಜನಾನುರಾಗಿ ರಾಜಕಾರಣಿ ಆಗಿ ಕೆಲಸ ಮಾಡುತು

ರಾಮ ರಾಜ್ಯದ ಕನಸು ಕಂಡು ನನಸಾಗಿಸೋ ಒಲವು


ದೇವರ ಧ್ಯಾನ ಮಾಡಿ ದೇಶದ ಒಳಿತು ಬೇಡುವೆ

ಸ್ವಾತಂತ್ರ್ಯ ವೀರ ಸೇನಾನಿಗಳ ಧ್ಯೇಯ ಪಾಲಿಸುವೆ

ಮಾನವೀಯ ಮೌಲ್ಯಗಳ ನೆಲೆಯಲ್ಲಿ ಬದುಕುವೆ

ಸತ್ಯ ಅಹಿಂಸೆ ತ್ಯಾಗ ಬಲಿದಾನದ ಮಹತ್ವ ಅರಿಯುವೆ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ







8ನೇ ಕನ್ನಡ ಸಪ್ತಾಕ್ಷರಿ ಮಂತ್ರ ಗದ್ಯಭಾಗದ ವೀಡಿಯೊ ಭಾಗ - 2 08/12/2020

 


ಹಳ್ಳಿಯ ಸಿರಿ ಸೊಬಗು ಕವನ 08/12/2020

 ಕವನದ ಶೀರ್ಷಿಕೆ

*ಹಳ್ಳಿಯ ಸಿರಿ ಸೊಬಗು*


ಹಕ್ಕಿಗಳ ಚಿಲಿಪಿಲಿ ಕಲರವ ನಿನಾದ ಕೇಳುತ್ತಲೇ

ನಭಾಂಗಣದಿ ಬಾಲ ನೇಸರನ ಕೆಂಬಣ್ಣದ ಚಿತ್ತಾರ 

ಹರಿಯೊ ನದಿಗಳ ಜುಳು ಜುಳು ಸದ್ದು ಗದ್ದಲ

ಹರಸುವ ಕೋಗಿಲೆಗಳ ಕುಹೂ ಕುಹೂ ಗಾನ


ಗದ್ದೆಯ ಬಯಲು ಎತ್ತೆತ್ತ ನೋಡುತ್ತಿರಲು

ಹಚ್ಚ ಹಸಿರಿನ ವನಸಿರಿಯ ಹಾಸು ಆಸೆವ್ಳೆ

ಭೂಮಿ ತಾಯಿ ಬೆಳ್ಳಕ್ಕಿ ಹಿಂಡು ಹಿಂಡು ಸೇರಿ

ಹುಲ್ಲು ಹಾಸಿನ ಮೇಲೆ ಬೆಳ್ಳಿ ರಂಗು ರಂಗೋಲಿ


ನಾಟಿ ಮಾಡಲು ಬಂದಿಹರು ಹೆಂಗೆಳೆಯರು

ಬಣ್ಣ ಬಣ್ಣದ ಸೀರೆ ತೊಟ್ಟು ಹೊಂಬಣ್ಣ ಮೂಡಿ

ಎತ್ತು,ಮನುಜರು ಕೆಸರು ಗದ್ದೆಯ ರಾಡಿ ರಾಡಿ

ಬಡಿದು ಗುರ್ತು ಸಿಗುತ್ತಿಲ್ಲ ಬೆದರು ಗೊಂಬೆಯಂತಾಗಿ


ಬೆಳೆದು ನಿಂತಿದೆ ಜೋಳ ಸೇಂಗ ತೊಗರಿ ಹತ್ತಿ ಬೆಳೆ

ಸುತ್ತಲೂ ಬೆಟ್ಟ ಗುಡ್ಡ ಕಣಿವೆಗಳು ಕಾವಲು ನಿಂತಂತೆ

ತುಂತುರು ನೀರು ಚಿಮುಕಿ ನೃತ್ಯ ಮಾಡುವ ವೈಯಾರ

ಹೊತ್ತು ಹೋಗದ ಮುನ್ನ ಅಳಿಸದಾದೆವು ಸಿರಿ ಸೊಬಗ


ಗೋಧೂಳಿ ಸಮಯ ಓಡೋಡಿ ಬರುವವು ದನಕರು

ಹಾಲು ಕೊಡವವು ಆಕಳ ಹಿಂಡು ಕೂಸು ಕುನ್ನಿಗೆಲ್ಲ

ಸಂಜೆ ಸೂರ್ಯ ಮುಳುಗಲು ಪಕ್ಷಿಗಳು ದಂಡುಗಟ್ಟಿ

ಎಷ್ಟು ಹೇಳಿದರೂ ಮುಗಿಯದು ಹಳ್ಳಿಯ ಸಿರಿ ಸೊಬಗು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ


10ನೇ ಕನ್ನಡ ಪತ್ರಲೇಖನ 07/12/2020

 


ಕದನ ಕಲಿಗಳು ಕವನ 07/12/2020

ಕವನದ ಶೀರ್ಷಿಕೆ

ಕದನ ಕಲಿಗಳು

(ಕುಸುಮ ಷಟ್ಪದಿ)


ಕದನದಲಿ ಹೋರಾಡಿ

ಸದ್ದಡಗಿಸೊ ಕಲಿಗಳು

ಗೆದ್ದು ಕೊಡುವರು ವಿಜಯ ಮಾಲೆಯು ದಿಟ

ಬದುಕಿನಲಿ ಜೀವ ಭಯ

ಹೊಂದದೆಯು ನಾಡಗುಡಿ

ಎದೆಯೊಡ್ಡಿ ನಿಂತುಗಡಿ ಕಾಯುವವರು ||೧||


ಭರತ ಖಂಡದ ಮಹಾ

ವೀರರು ಅತಿ ಕಲಿಯಲಿ

ಮರಣಕ್ಕೆ ಅಂಜದೆಯು ಹೋರಾಡುವ

ವರ ಪಡೆದ ಶೂರ ಜನ

ಹರಿಹರರ ರಕ್ಷಣೆಯು

ಹರಸುವರು ಸೈನಿಕರ ಆರೈಕೆಗೆ ||೨||


ನಮನ ಸಲ್ಲಿಸುವವರು

ನಮ್ಮೆದೆಯ ಗೂಡಿನಲಿ

ನಮ್ಮ ಗಂಡೆದೆಯ ಸೈನಿಕರಿಗೆ ಸದಾ

ನಮ್ಮ ನಾಡಿನ ಜನರು

ಹಮ್ಮಿನಲಿ ಸಂತಸದಿ

ನಮ್ಮ ವಿಜಯ ದಿವಸವ ಆಚರಿಸುವೆ ||೩||


ರಚನೆ

ಯಗುಮಾಶ(ಕಾವ್ಯನಾಮ)

ಶ್ರೀ ಶರಣಬಸ್ಸಪ್ಪ ಎಂ ಗುಳೇದ

ಯರಗೋಳ ತಾ.ಜಿ. ಯಾದಗಿರಿ

ಪಿನ್ ಕೋಡ್ -೫೮೫೨೧೮

ಮೊಬೈಲ್ - ೮೬೫೫೨೪೪೩೩೪










 

ಮಾನವನ ಮಾನವೀಯತೆ ಕವನ 07/12/2020

 ಕವನದ ಶೀರ್ಷಿಕೆ

*ಮಾನವನ ಮಾನವೀಯತೆ*

    (ರುಬಾಯಿ ಪ್ರಕಾರ)


ಮನುಜಮತ ವಿಶ್ವಪಥ ಸರ್ವೋದಯ

ಸಮತೆ ಸಹೃದಯತೆ ಸದಾಚಾರ ಸಮನ್ವಯ

ಜಾತ್ಯಾತೀತ ಪರಂಪರೆ ಬೆಳೆಸಿಕೊಂಡು ನಲಿ

ಕವಿಗಳ ವಚನಕಾರರ ದಾರ್ಶನಿಕರ ಸದಾಶಯ


ಕೋಮು ಸೌಹಾರ್ದತೆಯ ಗಾಢಾಂಧಕಾರ 

ದುರಾಡಳಿತ ಭ್ರಷ್ಟಾಚಾರ ಅತ್ಯಾಚಾರ 

ದೌರ್ಜನ್ಯ ವಿರೋಧಿಸಿ ದಾರಿದ್ರ್ಯ ತೊಲಗಲಿ

ಮಾನ ಉಳಿಯಲಿ ರೈತ ಕೂಲಿ ಕಾರ್ಮಿಕರ


ಕಲೆ ಸಾಹಿತ್ಯ ಸಂಸ್ಕೃತಿ ಪುಸ್ತಕಗಳಿಗೆ ಬೆಲೆ

ನೀಡಿ ಸಹೃದಯಿ ಓದುಗರ ಸವಿ ಕರೆಯೋಲೆ

ಕಾವ್ಯ ಕೃತಿ ಜಾನಪದ ಗೀತೆ ಪಾಡಿ ನೃತ್ಯ ಮಾಡಲು

ಸಲಹೆ ಮಾರ್ಗದರ್ಶನ ನೀಡಿ ಒಂದಾಗಲಿ ಭಾವದಲಿ


ಭವ್ಯ ಭಾರತದ ನಿರ್ಮಾಣ ಯುವಕರ ಕನಸು

ಜ್ಞಾನ ವಿಜ್ಞಾನ ತಂತ್ರಜ್ಞಾನ ಕಲಿತರೆ ಸೊಗಸು

ಸಂಬಂಧಗಳ ಗಟ್ಟಿಯಾಗಿ ಒಲುಮೆಯು ಚಿಮ್ಮಲು

ಬೇಕು ಮಾನವನ ಮಾನವೀಯತೆಯ ಬಹುವಿಕಾಸ


ರಚನೆ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ




ಆಧುನಿಕ ವಚನಗಳು 06/12/2020

 *ಆಧುನಿಕ ವಚನಗಳು*


ಮಮತಾಮಯಿ ಹೆಣ್ಣನ್ನು ಜಗದ ಕಣ್ಣೆಂಬರು ಕೇಳಿರಯ್ಯ

ಜೀವನದಲಿ ತಾಯಿ ತಂಗಿ ಹೆಂಡತಿ ಮಗಳಾಗಿ ಪ್ರೀತಿಸುವಳಯ್ಯ

ಅವಳಿಂದಲೇ ಇಹ ಪರಕ್ಕೂ ಶ್ರೇಯಸ್ಸು ಲಭಿಸುವದಯ್ಯ

ಕೊನೆಗಾಲದಲ್ಲಿ ಆರೈಕೆ ಮಾಡಿ ಪೊರೆವವಳು ಹೆಣ್ಣಯ್ಯ

ಇಂತಿಪ್ಪ ಸೇವೆಗಳ ಮಾಡುತ ಬದುಕಿ ಬಾಳಿವರಯ್ಯ

ಆದಾಗ್ಯೂ ಕೀಳಾಗಿ ಕಾಣುವ ದುರುಳರನೇನೆಂಬೆ ಗೂಳಿ ಬಸವ


ರಚನೆ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*



ಆಧುನಿಕ ವಚನಗಳು 05/12/2020

 *ಆಧುನಿಕ ವಚನಗಳು*


ಧನಿಕರಲ್ಲಿ ದಯವಿರಬೇಕಯ್ಯ

ಕಟುಕನಲ್ಲಿ ದಯವಿರಬೇಕಯ್ಯ

ಸಿಡುಕನಲ್ಲಿ ಬುದ್ಧಿ ಇರಬೇಕಯ್ಯ

ಕುತಂತ್ರಿಯಾದವನಲ್ಲಿ ದಯವಿರಬೇಕಯ್ಯ

ದುಷ್ಟ ಯೋಚನೆಗಳೇ ನಮ್ಮ ಬಲಹೀನಗಳಯ್ಯ

ಗೂಳಿ ಬಸವ ದಯವಿಲ್ಲದ ಧರ್ಮ ಯಾವುದಯ್ಯ


ರಚನೆ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ


Friday, December 4, 2020

೯ನೇ ಕನ್ನಡ ಹರಲೀಲೆ ಗದ್ಯಭಾಗದ ವೀಡಿಯೊ ಭಾಗ - ೧ ೦೪/೧೨/೨೦೨೦

 


ಆಧುನಿಕ ವಚನಗಳು ೦೪/೧೨/೨೦೨೦

 *ಆಧುನಿಕ ವಚನಗಳು*


ಎತೇಚ್ಚ ಧನ ಕನಕವಿದ್ದರು ನೆಮ್ಮದಿ ಅರಸುವರಯ್ಯ

ತಂದೆ ತಾಯಿ ಸೇವೆ ಮಾಡದೆ ವೃದ್ಧಾಶ್ರಮಕ್ಕೆ ಅಟ್ಟುವರಯ್ಯ

ಸಕಲ ಸಂಪತ್ತು ಇದ್ದರೂ ಅತಿ ಆಸೆಯಿಂದ ಕೊರಗುವರಯ್ಯ

ಬಹಳಷ್ಟು ಧಾನ್ಯ ಕೊಳೆತ ಬಿದ್ದರೂ ದಾನ ಮಾಡರಯ್ಯ

ಗೂಳಿ ಬಸವ ತಲೆಗುಂಬು ಬುತ್ತಿ ಇದ್ದರೂ ಉಣ್ಣದವರೇನೆಂಬೆ ಅಯ್ಯ

ಬಡತದಲ್ಲಿ ಸುಖ ನೆಮ್ಮದಿಯಿಂದ ದಾನ ಧರ್ಮ ಮಾಡುವವರು ಭಾಗ್ಯವಂತರಯ್ಯ


ರಚನೆ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ




೧೦ನೇ ವ್ಯಾಕರಣ ಭಾಗ ಪ್ರಬಂಧ ರಚನೆ ೦೩/೧೨/೨೦೨೦

 


ಆಧುನಿಕ ವಚನಗಳು ೦೩/೧೨/೨೦೨೦

 *ಆಧುನಿಕ ವಚನಗಳು*


ಕೆಲರು ನ್ಯಾಯ ಅನ್ಯಾವನು ಅರಿಯರು ನೋಡಯ್ಯ

ಕೆಲರು ಸತ್ಯ ಅಸತ್ಯವನ್ನು ಲೆಕ್ಕಿಸದೆ ನುಡಿವರಯ್ಯ

ಕೆಲರು ಹಿಂಸೆ ಅಹಿಂಸೆಯನು ಗಣಿಸದೆ ಆಚರಿಸುವರಯ್ಯ

ಕೆಲರು ಮೋಸ ವಂಚನೆಯ ಜಾಲ ಸುಳಿಗೆ ಸಿಕ್ಕಿಸುವರಯ್ಯ

ಕಾಲನ ಹೆಗಲೇರಿ ಕುಳಿತವರಂತೆ ಆಡುವವರಿಗೆ ಗಂಟೆ ಕಟ್ಟುವವರಾರಯ್ಯ

ಗೂಳಿ ಬಸವ ಇಂತವರನು ಒಳ್ಳೆ ಮಾರ್ಗದಿ ನಡೆಸಯ್ಯ


ರಚನೆ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


ಆಧುನಿಕ ವಚನಗಳು ೦೨/೧೨/೨೦೨೦

 *ಆಧುನಿಕ ವಚನಗಳು*

                  

                           ೧

ಜಗಜ್ಯೋತಿ ಬಸವೇಶ್ವರ ನಿಮ್ಮಿಂದ ವಚನದ ನಾಂದಿ ಅಯ್ಯ

ಶರಣರ ಸಂಗಮವಾಗಿ ಜಗದಲಿ ವಚನ ಕ್ರಾಂತಿ ನಡೆದಿತಯ್ಯ

ನುಡಿದಂತೆ ನಡೆದ ಶರಣರ ನುಡಿಗಡಣ ಆದರ್ಶಪ್ರಾಯವಯ್ಯಾ

ಜಾತಿ ಜಂಜಾಟವ ತೊರೆದು ವಿಶ್ವ ಭ್ರಾತೃತ್ವ ಕಂಡಿತಯ್ಯಾ

ಅಂತರಂಗ ಬಹಿರಂಗ ಶುದ್ದಿಯಾಗಿರಲು ಕಲಿಸಿದರಯ್ಯ

ಗೂಳಿ ಬಸವ ಶರಣರ ಸೂಳ್ನುಡಿ ಪಾಲಿಸುವಂತೆ ಮಾಡಯ್ಯಾ


ರಚನೆ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



ಆಧುನಿಕ ವಚನಗಳು ೦೧/೧೨/೨೦೨೦

 *ಆಧುನಿಕ ವಚನಗಳು*

                  ೧

ಮೋಬೈಲ್ ಗೇಮ್ ಆಡದಿರಯ್ಯಾ

ಅದರೊಳ್ ಓದಿದಡೆ ಮಸ್ತಕದಿ ಉಳಿಯದಯ್ಯಾ

ಅಗತ್ಯಕ್ಕೆ ತಕ್ಕಂತೆ ಬಳಸಿದರೆ ಒಳಿತಯ್ಯಾ

ಕಂಡ ಕಂಡಿದ್ದು ನೋಡೋದು ಬಿಡಬೇಕಯ್ಯ

ಒಳಿತಾದ ದಾರಿಗೆ ನಡೆದರೆ ಸಾಕಾರಗೊಳ್ಳುದಯ್ಯ

ಮಿತಿಯಾದರೆ ಆ ಗೂಳಿ ಬಸವನೂ ಕಾಯನಯ್ಯಾ


       ‌‌ ೨

ಮಕ್ಕಳು ಟಿವಿ ಮುಂದೆ ಕುಳಿತು ಕೆಟ್ಟರಯ್ಯ

ಆಟೋಟಗಳ ಮರೆತುಬಿಡುವರಯ್ಯ

ದೈಹಿಕ ಬಲಾಢ್ಯರಾಗದಿ ಮಾನಸಿಕ ಕುಗ್ಗುವರಯ್ಯ

ಗೆಳೆಯರೊಂದಿಗೆ ಕೂಡಿ ಆಟ ಹಾಡಿ ನಲಿಯಬೇಕಯ್ಯ 

ತಲೆ ತಗ್ಗಿಸಿ ಓದಲು ಜೀವನ ಸಾಕಾರಗೊಳ್ಳುವುದಯ್ಯ ಗೂಳಿ ಬಸವ ತಿದ್ದಿ ನಡೆಯೋದು ಕರುಣಿಸಯ್ಯಾ


ರಚನೆ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

Videos