Labels
- (3)
- ೧೦ನೇ ತರಗತಿ (51)
- ೮ನೇ ತರಗತಿ (27)
- ೯ನೇ ತರಗತಿ (26)
- Popular Links (9)
- Videos (2)
- ಕಥೆಗಳ ಸಂಗ್ರಹ (6)
- ಕನ್ನಡ ಕಾವ್ಯೋತ್ಸವ (31)
- ಜಯಂತಿಗಳು (2)
- ದಿನ ಪತ್ರಿಕೆಗಳು (3)
- ಪತ್ರಿಕೆಯಲ್ಲಿ ಪ್ರಕಟಿತ ಕವನಗಳು (56)
- ರಸಪ್ರಶ್ನೆ ಕಾರ್ಯಕ್ರಮ (7)
- ವ್ಯಾಕರಣ (2)
- ಶಿಕ್ಷಕರಿಗಾಗಿ (9)
- ಸ್ವರಚಿತ ಕವನಗಳು (181)
- ಹಳೆಯ ಪ್ರಶ್ನೆ ಪತ್ರಿಕೆಗಳು (2)
Monday, November 30, 2020
ಆಧುನಿಕ ವಚನಗಳು ೩೦/೧೧/೨೦೨೦
೧
ಜಾತಿ ಬೇದವ ಕಡೆಗಣಿಸಬೇಕಯ್ಯಾ
ನೀತಿ ಮಾರ್ಗವ ಹಿಡಿಯಬೇಕಯ್ಯಾ
ಛಲದಿ ಸಾಧಿಸುವ ಗುಣಬೇಕಯ್ಯಾ
ಸಜ್ಜನರ ಸಂಗ ಬಿಡದೆ ಪಾಲಿಸಯ್ಯಾ
ಸುಕೃತವ ಮಾಡಿ ಸದ್ಗತಿ ಪಡೆಯಬೇಕಯ್ಯಾ
ನಮ್ಮ ಗೂಳಿ ಬಸವ ಸದಾ ಕಾಯುವನಯ್ಯಾ
೨
ನಮ್ಮ ನಡೆ ನುಡಿ ಶುದ್ಧವಾಗಿರಬೇಕಯ್ಯಾ
ನಮ್ಮ ಅಂತರಂಗದ ಭಾವ ಒಳಿತಾಗಿರಬೇಕಯ್ಯಾ
ನಮ್ಮ ಶತೃಗಳು ನಾಚುವಂತೆ ನಡೆಯಬೇಕಯ್ಯಾ
ಗುರುಹಿರಿಯರ ಮಾತು ಕೇಳಿ ಗೌರವಿಸಬೇಕಯ್ಯಾ
ಸುಕೃತ ಕಾರ್ಯ ಗೈದರೆ ಬಾಳು ಬೆಳಗುವುದಯ್ಯಾ
ನಮ್ಮ ಗೂಳಿ ಬಸವನ ಬಿಡದೆ ನಂಬಬೇಕಯ್ಯಾ
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
Sunday, November 29, 2020
ರಾಷ್ಟ್ರೀಯತೆ ಕವನ ೨೨/೧೧/೨೦೨೦
ಕವನದ ಶೀರ್ಷಿಕೆ
*ರಾಷ್ಟ್ರೀಯತೆ*
ಭಾರತೀಯರು
ನಾವೆಲ್ಲ ಒಂದೇ ತಾಯಿ
ಮಕ್ಕಳು ನಾವು
ಪ್ರಪಂಚದಲ್ಲಿ
ಎಲ್ಲೆ ಇದ್ದರೂ ದೇವಿ
ಭಾರತಾಂಬೆಯ
ಮರೆಯದೆಯೇ
ಪೂಜಿಸೋಣ ತಪ್ಪದೆ
ಆರಾಧಿಸೋಣ
ತಂತ್ರಜ್ಞಾನದ
ಬೆಳವಣಿಗೆ ಮಾಡಿ
ಕೀರ್ತಿ ತರೋಣ
ನಮ್ಮ ಕೊಡುಗೆ
ನೀಡಿ ಮಾತೆಯ ನಾಮ
ಭಜಿಸುವೆವು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
ನನ್ನೂರು ಯರಗೋಳ ಕವನ ೨೧/೧೧/೨೦೨೦
ಕವನದ ಶೀರ್ಷಿಕೆ
*ನನ್ನೂರು ಯರಗೋಳ*
ಬೆಟ್ಟ ಗುಡ್ಡದ
ನಡುವೆ ಕೆರೆ ಚಾಚಿ
ನಿಂತಿದೆ ಬಾಚಿ
ತಬ್ಬಿಕೊಂಡಿದೆ
ಜನ ಸಮೂಹ ಮನೆ
ಮಠಗಳೆಲ್ಲ
ವಿಶಾಲ ಗದ್ದೆ
ಬಯಲು ತೋಟದಂಚು
ಪಾವನ ಭೂಮಿ
ಸಿದ್ಧಿ ಪುರುಷ
ಮಹಾತ್ಮರ ಸನ್ನಿಧಿ
ಹೊಂದಿದ ಊರು
ಹೆಮ್ಮೆಯ ಪುರ
ನನ್ನೂರು ಯರಗೋಳ
ನಿತ್ಯ ನೂತನ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
ಭ್ರಾತೃತ್ವ ಕವನ ೧೭/೧೧/೨೦೨೦
ಕವನದ ಶೀರ್ಷಿಕೆ
*ಭ್ರಾತೃತ್ವ*
ಹೆಂಗೆಳೆಯರು
ಅಣ್ಣ ತಮ್ಮಂದಿರನು
ಅಕ್ಕರೆಯಿಂದ
ರಕ್ಷಾಬಂಧನ
ರಾಖಿ ಕಟ್ಟಿ ಭ್ರಾತೃತ್ವ
ಭಾವನೆಯಿಂದ
ಸಹೋದರರ
ಪ್ರೀತಿಯನು ಪಡೆದು
ತವರು ಮನೆ
ಸುಖ ನೆಮ್ಮದಿ
ಬಯಸಿ ಬೇಡುವರು
ಆ ದೇವರಿಗೆ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
ಬಡತನ್ದ ಭವಣೆ ಕವನ ೦೯/೧೧/೨೦೨೦
ಕವನದ ಶೀರ್ಷಿಕೆ
*ಬಡತನ್ದ ಭವಣೆ*
(ಟಂಕಾ ಪ್ರಕಾರ)
ತಾಯಿ ಮಕ್ಕಳು
ಕಷ್ಟದಲೂ ಸಂತಸ
ಪಡುವದದು
ನಮಗೆಲ್ಲಾ ಮಾದರಿ
ಬಡತನ್ದ ಭವಣೆ
ಕಲಿಸೋ ಪಾಠ
ಒಂದಾ ಎರಡಾ ಹೇಳಿ
ಒಂದು ಹೊತ್ತಿನ
ಊಟಕ್ಕೂ ಪರದಾಟ
ಹೊಟ್ಟೆಗಾಗಿ ದುಡಿತ
ತಾಯಿ ತಲೆಯ
ಮೇಲೆ ಕಟ್ಟಿಗೆ ಹೊರೆ
ಬಗಲಲ್ಲೊಂದು
ಕೈಚೀಲ ಬೇರೆ ಭಾರ
ಹುಡುಗರ ಸಹಾಯ
ಓದುವ ಗೀಳು
ಹಚ್ಚಿಕೊಂಡು ಅಭ್ಯಾಸ
ಮಾಡೋದ ಬಿಟ್ಟು
ತಾಯಿಗಾಗಿ ಮಿಡಿವ
ಕರುಳ ಕುಡಿಗಳು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
ಅಪರಾಧ ತಡೆ ಕವನ ೦೪/೧೧/೨೦೨೦
ಕವನದ ಶೀರ್ಷಿಕೆ
*ಅಪರಾಧ ತಡೆ*
ಕಾನೂನುಗಳು ಇರುವದು ಕಾಗದಲಿ
ಎಂದು ತಿಳಿದು ನಡೆವವರೆ ಅಧಿಕ
ಬೈಸಿಕಲ್ ಸವಾರಿ ಮಾಡುವವರು
ಕೂಡಿಸಿಕೊಳ್ಳುವರು ಮೂರಕ್ಕೂ ಅಧಿಕ
ಅಪಘಾತಗಳ ಅರಿವು ಇಲ್ಲ ಇವರಿಗೆ
ಶಿರಸ್ತ್ರಾಣ ಧರಿಸಲಾರರು ಬಹಳ ಜನ
ಮನದಲಿ ಇಲ್ಲ ಯಾವುದೇ ಭಯ
ತಿಳಿದರೆ ಕಡಿಮೆಯಾಗುವವು ಅಪಘಾತ
ರಸ್ತೆ ನಿಯಮಗಳು ಗೊತ್ತಾದರೆ ಸಾಕು
ಅಪರಾಧಗಳ ತಡೆಯಲು ಸಹಕಾರಿ
ಇಲ್ಲದೆ ಹೋದರೆ ಕಳೆದುಕೊಳ್ಳಬಹುದು
ಪ್ರಾಣ ಮತ್ತು ದೇಹದ ಕೆಲವು ಅಂಗಗಳ
ಅತೀ ವೇಗದ ಚಾಲನೆ ಮಸಣದ ದಾರಿ
ಕುಡಿದು ಗಾಡಿ ಓಡಿಸಿದರೆ ಅಂಕೆಗೆ
ಸಿಗದೆ ಜೀವದ ಸಂತೆಯ ಮುಗಿಸುವದು
ಎಚ್ಚರಿದಿ ಚಲಿಸಿದರೆ ಜೀವದಿ ಮನೆ ಸೇರುವೆವು
ದಯಮಾಡಿ ಎಲ್ಲರೂ ಸಾಧ್ಯವಾದಷ್ಟು
ರಸ್ತೆ ನಿಯಮಗಳು ಅರಿತು ನಡೆಯೋಣ
ಸುರಕ್ಷತಾ ಸಾಧನಗಳ ಬಳಕೆ ಮಾಡೋಣ
ಅಪರಾಧ ತಡೆ ಹಾಕುವ ಸಂಕಲ್ಪ ಮಾಡೋಣ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
ಭಾಷಾಭಿಮಾನ ಬೆಳೆಸೋಣ ಕವನ ೩೧/೧೦/೨೦೨೦
ಕವನದ ಶೀರ್ಷಿಕೆ
*ಭಾಷಾಭಿಮಾನ ಬೆಳೆಸೋಣ*
ಕದಂಬ ಚೋಳ ಚಾಲುಕ್ಯ ಉತ್ಸವ
ಹೊಯ್ಸಳ ಶೈಲಿಯ ಶಿಲೆಯ ಬಾವ
ಶ್ರವಣ ಬೆಳಗೊಳ ಗೊಮ್ಮಟನ ಠೀವಿ
ಮೈಸೂರು ದಸರಾ ಮಹೋತ್ಸವ
ಪಂಪ ಪೊನ್ನ ರನ್ನ ಜನ್ನ ಕವಿ ಸ್ವಾದ
ರಾಜಾಧಿರಾಜರೆಂಬ ಘನತೆ ಮೆರೆದ
ವೀರ ಸಂಗೊಳ್ಳಿ ರಾಯಣ್ಣನ ಗಂಡೆದೆ
ಕಿತ್ತೂರ ರಾಣಿ ಚೆನ್ನಮ್ಮನ ರಣ ಕಹಳೆ ಸದ್ದು
ಕೆಚ್ಚೆದೆಯ ಸೈನಿಕರಿಂದ ಮೆರೆದ ನಾಡು
ಕನ್ನಡ ಕಂಪ ಸೂಸುವ ಚಿನ್ನದ ನಾಡು
ಕವಿಪುಂಗವರು ಹಾಡಿ ಹರಸಿದ ನಾಡು
ಕನ್ನಡಿಗರೊಗಟ್ಟಿಗೆ ದುಡಿದ ಭವ್ಯ ನಾಡು
ಬುದ್ಧ,ಬಸವ, ಅಂಬೇಡ್ಕರರವರ
ಹಿತನುಡಿಗಳ ಕೇಳುತ ಬೆಳೆದವರು
ಕುಮಾರವ್ಯಾಸ ಕನಕ ಪುರಂದರರ
ಭವ್ಯ ಗಾಯನ ವಾಚನ ಸವಿದವರು
ಕನ್ನಡ ಕನ್ನಡಕ್ಕಾಗಿ ನಾಡ ನುಡಿ ರಕ್ಷಣೆ
ಮಾಡುವ ಸಂಕಲ್ಪ ಯಾತ್ರೆ ಮಾಡೋಣ
ಎಲ್ಲರ ಮನದಲಿ ಭಾಷಾಭಿಮಾನ ಬೆಳೆಸೋಣ
ಕನ್ನಡಾಂಬೆಯ ಸೇವೆಗೆ ಟೊಂಕಕಟ್ಟಿ ನಿಲ್ಲೋಣ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
ಜೀವನ ಕಲಿಸೋ ಪಾಠ ಕವನ ೦೩/೦೯/೨೦೨೦
ಕವನದ ಶೀರ್ಷಿಕೆ:
"ಜೀವನ ಕಲಿಸೋ ಪಾಠ"
(ವೃತ್ಯಾನುಪ್ರಾಸ,ಛೇಕಾನುಪ್ರಾಸ,ಯಮಕಾಲಂಕಾರ, ಚಿತ್ರ ಕವಿತ್ವ ಅಲಂಕಾರ ನಾಲ್ಕು ಕೂಡಿ ಬರೆದದ್ದು)
೧
ಮಾನವ ತಾನು ದಿನಾಲು ಗಮನಿಸುತ ನಾನಾ
ವಿಧದ ವಿನೋದವಾದ ನವೀನತರ ನಮ್ಮ ಭಾನು
ಭುವಿ,ಬಾನಿನಲಿ ನಿತ್ಯ ನೂತನ ವಿಚಾರಗಳನು
ನೋಡುತ ತನ್ನ ಆಯುಷ್ಯವನು ಕಳೆಯುವನು
ತನ್ನ ನೆಚ್ಚಿನರೊಟ್ಟಿಗೆ ಆನಂದದಿ ನಕ್ಕು ನಲಿಯುವನು
೨
ತನ್ನಲ್ಲಿ ಹಣವಿದ್ದಾಗ ಕಷ್ಟದಲ್ಲಿವರ ಗೋಳು ಗೋಳನು
ನೋಡನು ದುಃಖದಲಿ ತನ್ನವರು ಯಾರು ಯಾರು
ಸಹಾಯ ಮಾಡಲಿಲ್ಲ ಎಂದು ಕೊರಗೆ ಕೊರಗುವನು
ಇದೆ ನೋಡು ಪ್ರಕೃತಿಯು ಕಲಿಸುವ ಪಾಠ ಪಾಠ
ಅದಕೆ ಜೋಪಾನ ಮಾಡಿಕೋ ಜೀವನ ಜೀವನ
೩
ತನ್ನವರನು ನಂಬುವವ ಗೆಲ್ಲುವನು
ತನ್ನವರನು ನಂಬದಿರುವವ ಹಾಳಾಗುವನು
ತನ್ನವರು ತನ್ನ ತಿಳಿದವರು ಕಾಪಾಡುವರು
ಮರೆಯದಿರು ಸ್ಥಿರವಲ್ಲದ ಕಾಯವ ನೆಚ್ಚದಿರು
ಮರೆಯದಿರು ತನ್ನವರೇ ನಿನ್ನ ನೋಡುವರು
೪
ಯಾಕೋ ಈ ಜೀವನ ನನ್ದು ನಿನ್ದು ಎನ್ದು
ಬನ್ದು ಭಾನ್ದವರ ಬನ್ದನವ ಭಂನ್ದುತ್ವವ
ಕಳೆದು ಕೊಂಡು ಅಂನ್ದದ ಚಂನ್ದದ ಕುಂನ್ದದ
ಸನ್ಬಂಧದ ಬನ್ದಿಯಾಗಿ ನೆಡೆಯುವದು ಕಲ್ತುಕೋ
ಒನ್ದಾಗಿ ಚನ್ದಾಗಿ ಬಾಳ್ವುದೆ ಜೀವನ ಕಲಿಸೋ ಪಾಠ
ರಚನೆ:
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
*ಯರಗೋಳ ತಾ||ಜಿ||ಯಾದಗಿರಿ*
ಮರದ ಅಳಲು ಕವನ ೨೬/೧೧/೨೦೨೦
ಚಿತ್ರಕ್ಕೊಂದು ಕವನ
ಕವನದ ಶೀರ್ಷಿಕೆ
*ಮರದ ಅಳಲು*
ಹಲವು ಪ್ರಾಣಿ ಪಕ್ಷಿ ಸರಿಸೃಪಗಳ ಬಳಗ
ಖಗ ಮೃಗಗಳ ಸಹಿತ ಚರಾಚರ ಜೀವಿಗೆ
ಹೊರೆದು ಕಾಪಾಡುವುದು ತಪ್ಪದೆ ಎಮಗೆ
ಚಿಂವ್ ಚಿಂವ್ ಸದ್ದುಮಾಡುತ ಗುಬ್ಬಿ ಕಾಗೆ
ಮುಂಜಾವಿನ ಚುಮುಚುಮು ಬೆಳಕಿನಲಿ
ಬಾಲ ಭಾಸ್ಕರನ ಆಗಮಕೆ ಸ್ವಾಗತ ಕೋರಲು
ಬಿಲದೊಳಗೆ ಬಾಲ ಮುದುರಿಕೊಂಡು ಕೆಲ
ಇಲಿ ಗಡಣವು ರವಿಯ ಕಿರಣ ಡಿಂಡಿಮ ಬೀರಲು
ಒಡನೆಯೇ ಓಡೋಡಿ ಹೊರಬಂದು ಹಾಲದ
ಮರದ ರೆಂಬೆ ಕೊಂಬೆಗಳಲಿ ಚೆಲ್ಲಾಟ ಸದಾ
ಬಿರುಗಾಳಿ ಬೀಸಿದರು ಲೆಕ್ಕಿಸದೆ ಗೂಡಿನಿಂದ
ಗೂಡಿಗೆ ವಯ್ಯಾರದಿ ಕುಣಿವವು ಜಿಗಿಜಿಗಿದು
ಮರದ ಪ್ರಪಂಚವು ಈ ರೀತಿ ಚೊಕ್ಕವಾದದ್ದು
ಮಾನವ ಕೆಲವು ಮರ ಮುಟ್ಟುಗಳ ಕಡಿದು
ಅವುಗಳ ಆನಂದ ಕೆಡಿಸುವನು ಆಗ ಮರದ
ಅಳಲು ಕೇಳುವವರು ಯಾರು ಇಲ್ಲ ವ್ಯಾಘ್ರದ
ಮನಸನು ಹೊಂದಿರುವ ಹಲಕೆಲವು ಜನರು
ದೊಡ್ಡ ದೊಡ್ಡ ಮರಗಳ ಕಡಿದರೆ ಅಲ್ಲಿರೋ
ಜೀವ ಸಂಕುಲಗಳು ಬೇರೆಡೆ ಹೋಗದೆ ನೀರು
ನೆರಳು ಇಲ್ಲದೆ ಹೊದ್ದಾಡಿ ಪ್ರಾಣ ಬಿಡುವುದು ಕರೆ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
ಅಕ್ಕರೆಯ ಅಕ್ಕರಗಳು ಕವನ ೨೯/೧೧/೨೦೨೦
ಕವನದ ಶೀರ್ಷಿಕೆ
*ಅಕ್ಕರೆಯ ಅಕ್ಕರಗಳು*
ಆಡೋಣ ಆಡೋಣ ಗೆಳೆಯರು ಕೂಡಿ
ಕಲಿಯೋಣ ಎಲ್ಲರೂ ಒಂದಾಗಿ ಬನ್ನಿ ||ಪ||
ಅಆ.. ಇಈ... ಉಊ...ಸ್ವರಗಳ ಸಾಲು
ಓಡೋಡಿ ಬರುವವು ಜೊತೆ ಜೊತೆಯಾಗಿ
ಋ ಎಏ... ಒಓ... ಔ ಅನ್ನೋ ಅಕ್ಕರಗಳು
ಸಕ್ಕರೆಯಂತೆ ಸಿಹಿಯಾಗಿ ಉಲಿಯುವವು ||೧||
ತಿಳಿಯೋ ಅಣ್ಣಾ ಬರೆಯಲು ಅತಿ ಸುಲಭ
ಶಾಲೆಯ ಅಂಗಳದಿ ಓಡಾಡಿ ಕಲಿಯೋ ರನ್ನ
ಕ ಖ ಗ ಘ ಙ ಕಿನ್ನರಿ ಮರಿಯೇ ಚಿಣ್ಣಾರಿ ಪಾಪು
ಚ ಛ ಜ ಝ ಞ ಚೆನ್ನಾಗಿ ತಿಳಿಯೋ ಸಂತಮ್ಮಣ್ಣ ||೨||
ಟ ಠ ಡ ಢ ಣ ಡಿಕ್ಕಿ ಹೊಡೆದು ಕೇಕೆ ಹಾಕು
ತ ಥ ದ ದ ನ ತಕತೈ ಎಂದು ಕುಣಿದು ನಲಿಯೋ
ಪ ಪ ಬ ಭ ಮ ಪಾತರಗಿತ್ತಿ ಪಕ್ಕ ಹಿಡಿದೆಳಿ ಪುಕ್ಕ
ಲಕ ಲಕ ಎಂದು ಹೊಳೆಯೋ ಮುಖ ಭಾವ ನಿಂದು ||೩||
ಯ ರ ಲ ವ ನಿನ್ನವರೆಂದು ತಿಳಿಯೋ ತಮ್ಮಾ
ಶ ಷ ಸ ಹ ಳ ಹೃದಯದ ಭಾಷೆ ಕನ್ನಡ ನಲ್ನುಡಿ
ಸುಂದರ ಸುಮಧುರ ಸುಲಲಿತವಾಗಿ ಬಳಸಲು
ಕನ್ನಡ ಡಿಂಡಿಮ ಕಹಳೆಯು ಮೊಳಗುವುದು ||೪||
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
ಅಂತಿಮ ಯಾತ್ರೆ ಕವನ ೨೯/೧೧/೨೦೨೦
*ಅಂತಿಮ ಯಾತ್ರೆ*
ಇದ್ದಾಗ ಅದು ನಂದು ಇದು ನಂದು ಅಂತಿದ್ಧಿ
ಸತ್ತಾಗ ಎಲ್ಲಾನೂ ಇಲ್ಲೇ ಬಿಟ್ಟೊಂಟಿಯಲ್ಲೋ ||•||
ಜೊತೆಯಲ್ಲಿ ಯಾವುದ್ಯಾವುದಿಲ್ಲ ಎಲ್ಲಾ ಇಲ್ಲೇ
ನಾಕು ಮಂದಿ ಹೆಣ ಹೊರ್ಲಕ್ಕೆ ಬೇಕೆ ಬೇಕು
ಮನೆಗಾಗಿ ಹಗಲೆಲ್ಲ ದುಡ್ದು ಸಂಸಾರ ಸುಖ
ಅನುಭವಿಸಿ ಕಷ್ಟಗಳ ನೋವುಂಡು ಬೆಳೆದಿ ||೧||
ಮಡದಿ ಮಕ್ಕಳ ಚಂದಿರಲೆಂದು ಭಾವಿಸಿದಿ
ಸತ್ತಾಗ ಅತ್ತರೆ ಸಿಗತೈತೇನು ನಿನ್ನ ಪ್ರೀತಿ ವಿಶ್ವಾಸ
ಬಾಳಲ್ಲಿ ಎಲ್ಲರೂ ನನ್ನವರೆಂದು ಹಚ್ಚಿಕೊಳ್ಳದೆ
ಜಾತಿ ಮತ ಭಾವ ಮನದಲಿ ಮೂಡಿಸಿಕೊಂಡಿ ||೨||
ಆಸ್ತಿ ಅಂತಸ್ತು ನೋಡಿ ಗೆಳೆತನ ನೀ ಮಾಡ್ದಿ
ಸತ್ತಾಗ ನಿನ್ನ ಹೆಸರ ಹೇಳಲು ಮನಸಿಲ್ಲ ಯಾರಿಗಿ
ಆಸೆಗಳು ಅನಂತ ಗಳಿಸಿದ್ದೆಲ್ಲಾ ಕ್ಷಣಿಕ ಸುಖ
ಕೂಡಿ ಬಾಳಿದ ನೆನಪು ಇನ್ನೂ ಇನ್ನೂ ಅಮರ ||೩||
ಅಂತಿಮ ಯಾತ್ರೆ ನಿಂದು ನಡೆದೈತಿ ಎಲ್ಲೆಲ್ಲೂ
ಮಾತುಗಳು ನಿಂದೆ ಕೇಳಿಬರುತೈತೆ ಬದುಕಿದ್ದ
ಮೂರುದಿನ ಚಂದ ಇದ್ರೆ ಒಳ್ಳೆಂವನಿದ್ದ ಅಂತಲೋ
ಕೆಟ್ಟಂವ ಇದ್ರೆ ಹೋಗಿದ್ದೆ ಚೊಲೋ ಅನ್ದಾರು ತಮ್ಮಾ ||೪||
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
ಯರಗೋಳ ತಾ.ಜಿ. ಯಾದಗಿರಿ
ಚಿತ್ರಕ್ಕೊಂದು ಕವನ ೨೮/೧೧/೨೦೨೦
ಕವನದ ಶೀರ್ಷಿಕೆ
*ಕಂಗಳು ನೋವ ನುಂಗಿ*
ಲೇ ಸಖಿಯಾಗಿ ಹೊಸ ಬಾಳು ಅರಸಿ ಬಂದೆ
ಸುಖವಿಲ್ಲ ಎಳ್ಳಷ್ಟು ಬರೀ ಕಷ್ಟಗಳೆ ಭರಪೂರ
ಮನಸಲ್ಲಿ ದುಃಖವಿದ್ದರೂ ತೋರಿಸಲಾರೆಯಾ
ಬಡತನವೆಂಬ ಬಂಗಾರವೇ ಧರಿಸಿರುವೆ ನೀನು
ನಿನ್ನ ಕಣ್ಣಂಚಿನ ನೋಟ ನೋಡಲು ಬಲು
ಸುಂದರ ಆ ದಿನಗಳು ಹೋದವು ಎಲ್ಲಿ
ಮಕ್ಕಳು ಆಟೋಟದಲ್ಲೆ ಮರೆವೆಯಾ ಎಲ್ಲಾ
ಒಂದ್ಹೊತ್ತಿನ ಊಟ ಇಲ್ಲವೇ ನಿನಗೆ ನೆಮ್ಮದಿ
ಕುಡಿದು ಬಂದು ಹೊಡೆಯುವ ಗಂಡ ಬೇರೆ
ಅತ್ತೆ ಮಾವಂದಿರ ಸಂರಕ್ಷಣೆ ಬೇಕೇ ಬೇಕು
ರಾತ್ರಿ ಇಡೀ ಕುಡಿದಮಲಿನಲಿ ಶಿವರಾತ್ರಿ
ಕಣ್ಣಿಗಿಲ್ಲ ಕೊನೆಗೆ ನಿದ್ರೆಯ ಸುಖವ ಬೆರೆಸಿ
ಯೌವನದಲ್ಲಿ ದುಡಿದುಡಿದು ಸೋತು ಸುಣ್ಣ
ಬಂದ ಕೂಲಿನಾಲಿ ದುಡ್ಡು ಹೆಂಡದಂಗಡಿ ಪಾಲು
ಕೇಳಲು ಹೋದರೇ ಕೂದಲಿಡಿದು ಎಳೆದಾಡಿ
ಜಗಳ ತೆಗೆದು ಬೈಗುಳದ ಜೋಗುಳ ಜೋರಾಗಿ
ಮಕ್ಕಳನು ಚೆನ್ನಾಗಿ ಓದಿಸುವ ಆಸೆಯ ಮೂಟೆ
ನನಸಾಗುವುದೋ ಕನಸಾಗಿ ಉಳಿಯುವದೋ
ಅವರಿಂದಲಾದರೂ ನನ್ನ ನೋವ ಮರೆವೆನೋ
ಇಲ್ಲ ಕಣ್ಣೀರೇ ನನ್ನ ಹಣೆಬರಹವೋ ಗೊತ್ತಿಲ್ಲ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
ಚಿತ್ರಕ್ಕೊಂದು ಕವನ ೨೭/೧೧/೨೦೨೦
ಕವನದ ಶೀರ್ಷಿಕೆ
*ಒಗ್ಗಟ್ಟಿನಲಿ ಬಲವಿದೆ*
ಸರಸರ ತಿರುಗುತ ತನ್ನವರ ಕರೆತರುತ
ಬರಬರನೆ ಸಡಗರದಿ ಓಡಾಡುವುದು
ಸಕ್ಕರೆಯ ಕಾಣಲು ಬಾಯೋಳಿಡಿದು
ಮಕ್ಕಳು ಮರಿಗೆಲ್ಲ ತಿನಿಸುವ ಆತುರ
ಮನುಜರೆಲ್ಲರೂ ಕಲಿತರೆ ಬಡವರನು ಕಾಣೆನು
ಜನ ಜಂಗುಳಿಯು ಸೇರವುದು ಸುತ್ತ ಮುತ್ತ
ಸತ್ತ ಪ್ರಾಣಿಯ ಹಿಡಿದು ತರುವ ಪ್ರಯತ್ನ ಮಾಡಿ
ಎತ್ತೆತ್ತ ನೋಡಲು ಎತ್ತುವ ಚಮತ್ಕಾರ ಗತಿಯಲಿ
ಇರುವೆಯು ಬರುವುದು ಸುದ್ದಿಯ ತರುವುದು
ದಾರಿಯಲಿ ಬಿದ್ದಿರುವ ಖುದ್ದು ನೋಡಿದ ರೀತಿ
ಆನೆಯೇ ಬೀಳಲಿ ಒಗ್ಗೂಡಿ ಎತ್ತಿ ತರುವವು
ವಾನರರ ಶಕ್ತಿ ನಮ್ಮದೆಂದು ತೋರುತಲಿರುವವು
ಒಗ್ಗಟ್ಟಿನಲಿ ಬಲವಿದೆ ಎಂಬುದ ಸಾರುತಲಿ
ಬಗ್ಗದೆ ಕುಗ್ಗದೆ ಹೋರಾಟ ಮಾಡುವ ಪ್ರಾಣಿಯ
ನೋಡಿ ಮನುಜನು ಕಲಿತರೆ ಸಾಗುವುದು ಪಯಣ
ದಡಸೇರಿ ಮುಟ್ಟುವವು ಜೀವನ ಜನನ ಮರಣ
ಇರುವವರೆಗೆ ಬಡಿದಾಡುವ ಗುಣದ ಕೃತಿಯೇ
ಇರುವೆಯು ಕ್ರಿಯಾಶೀಲತೆಯ ಸಂಕೇತವಾಗಿದೆ
ತಿರೆಯ ತುಂಬಾ ಸ್ವಾರ್ಥ ಸಾಧನೆಗಾಗಿ ಅಂಬಲಿಸೋ
ಭರ ಬಿಟ್ಟು ಸಿಹಿಯಾಗಿ ಬದುಕುವದ ಕಲಿತರಾಗದೆ.
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Wednesday, November 25, 2020
ಬಣ್ಣದ ಬುಗುರಿ ಕವನ ೨೬/೧೧/೨೦೨೦
ದಿನಾಂಕ : ೨೬/೧೧/೨೦೨೦
ಈ 👇ಕವನದ ಶೀರ್ಷಿಕೆ ಬಣ್ಣದ ಬುಗುರಿ ಆಗಬೇಕಿತ್ತು ತಪ್ಪಾಗಿ ಪ್ರೀತಿ ಇಲ್ಲದ ಮೇಲೆ ಎಂದು ಪ್ರಕಟವಾಗುವಾಗ ಬದಲಾಗಿರುತ್ತದೆ.
ಚಿತ್ರಕ್ಕೊಂದು ಕವನ ೨೫/೧೧/೨೦೨೦
ಕವನದ ಶೀರ್ಷಿಕೆ
*ಬಾಳ ನೌಕೆ*
(ಭಾಮಿನಿ ಷಟ್ಪದಿ)
ಬಾಳು ಕಡಲಿನ ಒಡಲು ಭಾವದ
ಸುಳಿಗೆ ಸಿಲುಕದ ರೀತಿ ನೋಡಿಕೊ
ಕಳವು ಮಾಡದೆ ನೀತಿ ಮಾರ್ಗದಿ ನಡೆದು ಬದುಕಿನಲಿ
ಸೆಳವು ಬಂದರೆ ಧೈರ್ಯದಿಂದಿರು
ಇಳೆಗೆ ಮಳೆಯಾ ಬಂದು ಊರಿನ
ಕಳೆ ತಗೆವ ತರದಿ ನಮ್ಮ ಕಷ್ಟವು ಕೂಡ ತೊಲಗುವವು
ರವಿಯು ಭೂಮಿಗೆ ಬೆಳಕು ಚೆಲ್ಲುವ
ತವಕದಿಂದಲೆ ಓಡಿ ಬರುವನು
ಕವಿದಿರುವ ಕತ್ತಲುನು ಒಡದೋಡಿಸದೆ ಬಿಡಲಾರ
ಸಾವದಾನದಿ ನೀನು ಯೋಚಿಸು
ಬವಣೆ ಸಾಗಲು ಹಲವು ತೊಂದರೆ
ಸಾವು ಬಂದರು ಬರಲಿ ಎನ್ನುತ ಸತತ ಹೋರಾಡು
ಬದುಕಿ ಉಳಿಯಲು ಅನುದಿನವು ನೀ
ಮುದದಿ ಕಷ್ಟ-ಸುಖಗಳ ಎದುರಿಸು
ನದಿಯ ಮೂಲಕ ಚಲಿಸೊ ಹಡಗಿಗೆ ಅಲೆಯು ಅಪ್ಪಳಿಸಿ
ಅದರ ದಾರಿಯ ತಪ್ಪಿಸುವವೋ
ಕದಲದಿರು ನೀ ಬಾಳ ನೌಕೆಯ
ಹದವರಿತು ಜೀವನವ ನಡೆಸೋ ಜಾಣ ಮರೆಯದೆ ನೀ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Tuesday, November 24, 2020
ಚಿತ್ರಕ್ಕೊಂದು ಕವನ ೨೪/೧೧/೨೦೨೦
ಕವನದ ಶೀರ್ಷಿಕೆ
*ಪರಿಸರ ವಿನಾಶಕ ಮಾನವ*
ಗಿಡಮರಗಳ ಕಡಿದು ಮನೆಗಳ ಕಟ್ಟಿ
ಗಾಳಿಯಿಲ್ಲದೆ ಸಾಯುವ ಉಸಿರುಗಟ್ಟಿ
ನೆರಳನ್ನಿಯುವ ಮರ ಕತ್ತರಿಸಿ ಬಿಟ್ಟ
ಬಿಸಿಲ ಝಳಕ್ಕೆ ಸೋತು ಹೋದ ಕಂಗೆಟ್ಟು
ಮುಂಪೀಳಿಗೆಗೆ ಕೂನಿಲ್ಲದೆ ಹೋದವು ಹಲವು ಮರ
ಭಾವಚಿತ್ರದಲಿ ತೋರಿಸುವಂತಾದೀತು ಕೆಲವು ಮರ
ಹಸಿರೇ ಉಸಿರು ಎಂದು ಜಂಬದಿ ಬೀಗಿ ಬಸಿರು
ಬಡಿದುಕೊಂಡರು ಸಿಗದಾದೀತು ಭಾವೀ ಜನರು
ನಮ್ಮ ನಾಶ ನಾವೇ ಮಾಡುತಿಹೆವು
ಮರದ ಕೊಂಬೆ ಏರಿ ಅದೇ ರೆಂಬೆ ಕಡಿತಿಹೆವು
ಆಧುನಿಕತೆಯ ಬರದಲ್ಲಿ ನೆರಳನ್ನೆ ಮರೆತಿಹೆವು
ಎತ್ತು ಕತ್ತೆಗಳು ಹೋಗಿ ಗಾಡಿ ಮೋಟಾರು ಬರುತಿಹೆವು
ಗಿಡಗಳೆಲ್ಲ ಬೋಳಾಗಿ ಅರಸಿ ಹೊರಟವು ಪ್ರಾಣಿ ಪಕ್ಷಿ
ಮಳೆ ನೀರು ಕಾಣದೆ ಅತ್ತವು ನಿರಾಸೆರಾಗಿ ಬಿಕ್ಕಿ ಬಿಕ್ಕಿ
ಕರುಣೆಯಿಲ್ಲದ ಪರಿಸರ ವಿನಾಶಕ ಮಾನವ ಕಕ್ಕಬೇಕು
ಮುಂದೆ ಪಶ್ಚಾತ್ತಾಪ ಪಟ್ಟು ಮುರಿದಾಗ ಅವನ ಸೊಕ್ಕು
ತಾಯಿ ಹಕ್ಕಿ ನೆರಳ ನೀಡುವುದು ತನ್ನ ಮರಿಗಳಿಗೆ
ಅರಿಯದಾದ ಮನುಜ ಇರಲಿ ತನ್ನ ವಂಶಜರಿಗೆ
ಮರ ಕಡಿದರೆ ವರುಣನ ಮುನಿಸು ಗೊತ್ತಿಲ್ಲ ಅವನಿಗೆ
ಸಕಾಲಕ್ಕೆ ಮಳೆ ಬೆಳೆ ಬರಲು ಬೆಳೆಸಿ ಗಿಡ ತಲೆಬಾಗಿ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Monday, November 23, 2020
ಚಿತ್ರಕ್ಕೊಂದು ಕವನ ೨೩/೧೧/೨೦೨೦
*ವೈರುಧ್ಯಗಳ ಸಂಕರ*
ನೋಡಲು ಚಿತ್ರ ವಿಚಿತ್ರ ಏನೆಂದು ಭಾವಿಸಲಿ
ಕೊರಳು ನೋಡಿ ನವಿಲೆಂದು ಕರೆಯಲೆ
ತಲೆಯು ನೋಡಲು ಹುಂಜದಂತೆ ಗೋಚರ
ಕೈಗಳು ನೋಡಲು ಒಂದು ಮಾನವನ ಕೈಯಂತೆ
ಕಂಡರು ಕಮಲದ ಹೂ ಹಿಡಿದು ತೋರಿಸುವಂತೆ
ಇನ್ನೊಂದು ಕಡೆ ಆನೆಯ ಮುಂಗಾಲು ಎತ್ತಿದಂತೆ
ದೇಹವು ಸಿಂಹದ ಆಕೃತಿಯನು ಹೋಲುವದು
ಹಿಂಗಾಲುಗಳು ಒಂದು ಹುಲಿಯ ಕಾಲಂತೆ
ಮತ್ತೊಂದು ವೇಗದ ಚಲಿಸೋ ಕುದುರೆ ಕಾಲು
ಶಂಖಾಕೃತಿಯ ಭುಜ ಹೊಂದಿರೆ ನಟ್ಟನಡುವೆ ಕಣ್ಣು
ಕಾವಲು ಕಾಯುವ ಯೋಧರ ತರದಿ ನೋಡುವ
ನಾಗ ಹೆಡೆಯ ಬಿಚ್ಚಿ ಸುತ್ತಲೂ ಪರಿಕಿಸುವ ಪರಿ
ಓಹೋ.... ಏನೇನೋ ನೂರಾರು ಯೋಚನೆ
ಮಾನವ ನವಿಲಿನ ನರ್ತನ ಸಂತಸ ಮೂಡಿಸೆ
ಕೂಗುವ ಹುಂಜ ಜಾಗೃತಿಯ ಕಹಳೆ ಊದುತ್ತ
ನಿದ್ದೆಗಣ್ಣಲ್ಲಿರುವವರ ಎಬ್ಬಿಸುವುದು ಅನುದಿನ
ಆದ್ರೆ ನಿದ್ದೆ ಬಂದಂತೆ ನಟಿಸುವವರು ಏಳುವರೇ
ಆನೆಯ ಗಾಂಭೀರ್ಯ ಗಟ್ಟಿತನ ಒಡಮೂಡಲಿ
ಕೈಯೊಳು ಪಿಡಿದ ಕಮಲವು ಪ್ರೀತಿ ಪ್ರೇಮ ನೀಡಲಿ
ಎಲ್ಲರೂ ನಾವು ನಮ್ಮವರ ಭಾವವು ಕೆರಳಲಿ
ಸಿಂಹ ದೇಹ ಸದೃಢ ಮನದಲಿ ಅನುರಾಗ ಅರಳಲಿ
ಶುಭ್ರ ಶ್ವೇತ ಬಣ್ಣದ ಶಂಖ ಶಾಂತಿಯ ಕರುಣಿಸಲಿ
ಹಾವಿನ ಬಾಲವು ಗಟ್ಟಿತನ ನೀಡಿ ಕಷ್ಟವ ತೊಲಗಲಿ
ವೈರುಧ್ಯಗಳ ಸಂಕರವಾದ ಚಿತ್ರ ಒಳಿತು ನೀಡಿ ಹರಸಲಿ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Saturday, November 21, 2020
ಸ್ವರಚಿತ ಕವನ ೨೧/೧೧/೨೦೨೦
ಕವನದ ಶೀರ್ಷಿಕೆ
*ನನ್ನೂರು ಯರಗೋಳ*
ಬೆಟ್ಟ ಗುಡ್ಡದ
ನಡುವೆ ಕೆರೆ ಚಾಚಿ
ನಿಂತಿದೆ ಬಾಚಿ
ತಬ್ಬಿಕೊಂಡಿದೆ
ಜನ ಸಮೂಹ ಮನೆ
ಮಠಗಳೆಲ್ಲ
ವಿಶಾಲ ಗದ್ದೆ
ಬಯಲು ತೋಟದಂಚು
ಪಾವನ ಭೂಮಿ
ಸಿದ್ಧಿ ಪುರುಷ
ಮಹಾತ್ಮರ ಸನ್ನಿಧಿ
ಹೊಂದಿದ ಊರು
ಹೆಮ್ಮೆಯ ಪುರ
ನನ್ನೂರು ಯರಗೋಳ
ನಿತ್ಯ ನೂತನ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Friday, November 20, 2020
ಸ್ವರಚಿತ ಕವನ ೨೦/೧೧/೨೦೨೦
ಕವನದ ಶೀರ್ಷಿಕೆ
*ಜಾತ್ಯಾತೀತ ಭಾವನೆ*
ಮಾನವ ಎಷ್ಟೋ
ವರ್ಷ ಇತಿಹಾಸದಿ
ಬೆಳೆದರೇನು?
ಸಜ್ಜನನೆಂದು
ಪ್ರಖ್ಯಾತಿ ಪಡೆದರು
ಬಿಡದಾದನು
ಜ್ಯಾತಿಯ ಬೇರ
ಗಟ್ಟಿಯಾಗಿ ಹಿಡಿದ
ತನ್ನಂತೆ ಇರೋ
ಮನುಜರನು
ನೋಡನು ಸರಿಸಮ
ತಾ ಶ್ರೇಷ್ಠ ನೀನು
ಕನಿಷ್ಠ ಎಂಬ
ಮೇಲು ಕೀಳು ನಾಟಕ
ಬಿಟ್ಟರೆ ಆಗ
ಮನುಕುಲವೇ
ಒಂದು ಕುಟುಂಬವಾಗಿ
ಗಂಡು ಹೆಣ್ಣೆಂಬ
ಎರಡೇ ಜಾತಿ
ಇರುವವು ಅಂತಹ
ಕಾಲ ಬರಲಿ
ಸರ್ವರು ಜಾತಿ
ಮತ ಭೇದ ಮರೆತು
ಬಾಳೋಣ ನಾವು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
ಚಿತ್ರಕ್ಕೊಂದು ಕವನ ೧೯/೧೧/೨೦೨೦
ಕವನದ ಶೀರ್ಷಿಕೆ
*ಬರ್ರೋ ಹೆಣ ಬಂತು ಓಡಿ ಹೋಗೋಣ*
ಕರೋನ ಕಾಲದ ಹೆಣಕ್ಕಿಲ್ಲ ಬೆಲೆ
ಅರಿತು ನಡೆದರೆ ಮನುಜನಿಗೆ ನೆಲೆ
ಮುಟ್ಟಂಗಿಲ್ಲ ನೋಡಂಗಿಲ್ಲ ಕ್ಯಾಲ
ಕಕಲಾತಿ ಅಂತ ಪೂರ ತೋರಂಗಿಲ್ಲ
ಹಣ ಗಳಿಸಿ ಹೆಣ ಆದ್ರೆ ಕೇಳೋರ್ಯಾರು
ಇಲ್ಲೋ ಎಪ್ಪ ಜೀವಕ್ಕೆ ಅಂಜಿ ಕರೆ ಕರೆ
ಮನೆಬಿಟ್ಟು ಬರೊಂಗಿಲ್ಲೊ ಯ್ಯಾರ್ಯಾರು
ಸನಿಹ ಹೆಣ್ತಿ ಮಕ್ಳು ಇದ್ದಾಗಟ್ಯಾ ಮರೆಯದಿರು
ಬಂಧು ಬಾಂಧವರ ಸಂಬಂಧ ಗಟ್ಟಿ ಇಡ್ಕೋ
ಬದಕಿದಾಗ ಒಳ್ಳೆವ ಇದ್ದ ಅಂತ ಹೇಳಾಕ್ಕ
ಬರುತೈತೆ ನೀ ಏನ್ರಾ ಸಿಡ್ಕ ಪಿಡ್ಕ ಮಾಡ್ಕೋ
ಬ್ಯಾಡೋ ಚೆಂದ ಬಾಳೋಣ ಇಲ್ಲಿ ಇರೋ ತನ್ಕಾ
ಕಾಲ ಹೆಂಗ್ ಬರತೈತಿ ಹೇಳಾಕಬರಲ್ಲಾ
ಕೆಟ್ಟ ಸಮಯ ಬಂದ್ರೆ ಹುಡ್ಕಾಡ್ಕೊಂಡು ಎಲ್ಲಾ
ನಾನು ನಂದು ಅಂತ ಗಳಿಸಿದ್ದು ಒಯ್ಯೊಲ್ಲಾ
ಇದ್ದುದರಾಗ ಹಂಚಿಕೊಂಡು ಬದುಕು ಗೆಲ್ಲೋ
ಕರೋನ ಅಬ್ಬರಕ್ಕೆ ಸಿಕ್ಕು ಮಡಿದವರ ಪಾಡೆಲ್ಲಾ
ಊಳಾಕ ಕುಣಿ ತೋಡೋವರ ಗತಿ ಇಲ್ದೆ ಎಲ್ಲೋ
ಇದ್ದೋರೂ ಬರ್ರೋ ಹೆಣ ಬಂತು ಓಡಿ ಹೋಗೋಣ ಎಲ್ಲಾ
ಎಂದು ಓಡುವ ಪಾಡು ಬಾರದಿರಲಿ ಕರೋನ ಓಡಲಿ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Thursday, November 19, 2020
ಸ್ವರಚಿತ ಕವನ ೧೯/೧೧/೨೦೨೦
ಕವನದ ಶೀರ್ಷಿಕೆ
*ರಾಷ್ಟ್ರ ಪ್ರೇಮ*
ವಿಶ್ವಕ್ಕೆ ಶಾಂತಿ
ಮಂತ್ರ ಬೋಧಿಸಿದಂತ
ದೇಶ ನನ್ನದು
ಸ್ತ್ರೀಯ ರಕ್ಷಣೆ
ಗೌರವ ನೀಡುವಂತ
ದೇಶ ನನ್ನದು
ದೇಶಕ್ಕೆ ಒಂದೇ
ಮತದಾನದ ಹಕ್ಕು
ನೀಡಿದ ದೇಶ
ನಾಡ ಗಡಿಯ
ಕಾಯ್ವ ವೀರ ಯೋಧರು
ನಮ್ಮಯ ಹೆಮ್ಮೆ
ರಾಷ್ಟ್ರ ಗೀತೆಯು
ಧ್ವಜವೂ,ಲಾಂಚನವೂ
ಶೌರ್ಯ ಸಂಕೇತ
ವಂದೇ ಮಾತರಂ
ಗೀತೆ ಹಾಡುತ ದೇಶ
ಸೇವೆಗೈವೆವು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Wednesday, November 18, 2020
ಸ್ವರಚಿತ ಕವನ ೧೮/೧೧/೨೦೨೦
ಕವನದ ಶೀರ್ಷಿಕೆ
*ಸೌಹಾರ್ದತೆಯ ಸೆಲೆ*
ಭವ್ಯ ಭಾರತ
ಹಿಂದು ಮುಸ್ಲಿಂ ಕ್ರೈಸ್ತರ
ನೆಲೆಯ ಬಲೆ
ಕೈ ಮಾಡಿ ಕರೆದು
ಒಗ್ಗೂಡಿ ಐಕ್ಯತೆಯು
ಹೃದಯದಲ್ಲಿ
ಒಡಮೂಡಿದೆ
ನೋಡು ಕಲ್ಮಶವಿಲ್ಲ
ಮನದಲ್ಲೆಲ್ಲ
ಭಾರತಾಂಬೆಯೇ
ಸೌಹಾರ್ದತೆಯ ಸೆಲೆ
ಕಾಣಲಿ ಎಲ್ಲೆಲ್ಲೂ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Tuesday, November 17, 2020
ಸ್ವರಚಿತ ಕವನ ೧೭/೧೧/೨೦೨೦
ಕವನದ ಶೀರ್ಷಿಕೆ
*ಭ್ರಾತೃತ್ವ*
ಹೆಂಗೆಳೆಯರು
ಅಣ್ಣ ತಮ್ಮಂದಿರನು
ಅಕ್ಕರೆಯಿಂದ
ರಕ್ಷಾಬಂಧನ
ರಾಖಿ ಕಟ್ಟಿ ಭ್ರಾತೃತ್ವ
ಭಾವನೆಯಿಂದ
ಸಹೋದರರ
ಪ್ರೀತಿಯನು ಪಡೆದು
ತವರು ಮನೆ
ಸುಖ ನೆಮ್ಮದಿ
ಬಯಸಿ ಬೇಡುವರು
ಆ ದೇವರಿಗೆ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
ಸ್ವರಚಿತ ಕವನ ೧೬/೧೧/೨೦೨೦
ಕವನದ ಶೀರ್ಷಿಕೆ
*ದೀಪಾವಳಿ ಸಂಭ್ರಮ*
ದೀಪ ಹಚ್ಚೇವು
ನಾವೆಲ್ಲ ಮನೆಯಲ್ಲಿ
ಆ ಬೆಳಿಕಿನ
ಬೆಲೆ ಅರಿಯದಾದ್ವಿ
ಕಣ್ಣು ಚೆನ್ನಾಗಿ ಇದ್ರೆ
ಜೀವನದಲ್ಲಿ
ಹಲವು ವರ್ಷಗಳ
ಕಾಲ ಇಂತಹ
ಅನೇಕ ಬೆಳಗನು
ಕಾಣುವೆವು ಎಂಬುದು
ಮಕ್ಕಳು ತಾವು
ಪಟಾಕಿ ಸುಡುವಾಗ
ಎಚ್ಚಿರಿಸುತ
ಕಾವಲಾಗಿ ಇರೋಣ
ಅನಾಹುತ ತಪ್ಪೀತು
ಹಿರಿಯರಾದಿ
ಕಿರಿಯರಿಂದ ದೀಪ
ಬೆಳಗಿಸುವ
ಮೂಲಕ ದೀಪಾವಳಿ
ಸಂಭ್ರಮ ಪಡುವರು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Monday, November 16, 2020
Sunday, November 15, 2020
ಸ್ವರಚಿತ ಕವನ ೧೫/೧೧/೨೦೨೦
ಕವನದ ಶೀರ್ಷಿಕೆ
*ನಮ್ಮ ಬಾಲ್ಯ*
ಚಿಕ್ಕಂದಿನಲಿ
ಈಜು ಬುಗುರಿ ಆಟ
ಕಾಲ್ಚೆಂಡು ಫಣಿ
ಚೆಂಡು ಕಣ್ಣು ಮುಚ್ಚಾಲೆ
ಚಿಣಿ ದಾಂಡು ಲಗೋರಿ
ಮಾವು ಹುಣಸೆ
ಮರ ಏರಿ ಚಿಗುರು
ಹಣ್ಣುಹಂಪಲು
ತಿಂದು ಜೋಕಾಲಿ ಕಟ್ಟಿ
ಆಡೋದು ಅಂದ್ರೆ ಇಷ್ಟ
ಜಾರು ಬಂಡೆಗೆ
ಜಾರಿ ಜಾರಿ ಒಂದರ
ಚೆಡ್ಡಿ ರೂಪವೇ
ಇರುತ್ತಿದ್ದಿಲ್ಲ ಬಟ್ಟೆ
ಒಗೆವಾಗ ಬೈಗುಳ
ಶಾಲೆಗೆ ಹೋಗೋ
ಅಂದ್ರೆ ಹಾಡಿಕೋತಲೆ
ಹೋಗಿ ಬಿಡ್ವಾಗ ತಲ್ಪಿ
ಹಾಲು ಉಪ್ಪಿಟ್ಟು ತಿಂದು
ಮನೆಗೆ ಬರುತಿದ್ವಿ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
*ಬರಹಗಾರರ ಬಳಗ ರಾಜ್ಯ ಘಟಕ*
*ಹೂವಿನಹಡಗಲಿ*
✍️✍️
*ಮಕ್ಕಳ ದಿನಾಚರಣೆಯ ಪ್ರಯುಕ್ತ*
*ಶಿಶು ಕವಿತಾ ಸಪ್ತಾಹ*
*ಟಂಕಾ ವಾರ*
*೩ ಅಥವಾ ೪ ಟಂಕಾ ಬರೆಯಬೇಕು*
🇮🇳🇮🇳
*೨೨೧ನೇ ಕಾವ್ಯಸೃಷ್ಠಿ*
*ದಿನಾಂಕ-೧೫.೧೧.೨೦೨೦*
*ವಾರ-ಭಾನುವಾರ*
*ನಿರ್ವಹಣೆ- *ಶ್ರೀ* *ಹುಸೇನಪ್ಪ* *ಸಜ್ಯೋಲಿ**
ವಿಷಯ- *ಬಾಲ್ಯ*
🇮🇳🇮🇳
*ಬನ್ನಿ*
*ಬರೆಯೋಣ*
*ಬರೆಸೋಣ*
*ಕಲಿಯೋಣ*
*ಕಲಿಸೋಣ*
🙏 *ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
Saturday, November 14, 2020
ಸ್ವರಚಿತ ಕವನ ೧೪/೧೧/೨೦೨೦
ಕವನದ ಶೀರ್ಷಿಕೆ
*ನನ್ನ ಕಂದ*
{ಟಂಕಾ ಪ್ರಕಾ}
ನೀನು ಹುಟ್ಟಿದ
ದಿನದಿಂದ ತಂದೆಯ
ಪಟ್ಟ ನನಗೆ
ಕಿರುನಗೆ ಬೀರುತ್ತಾ
ನಲಿವ ಸಂಭ್ರಮವೋ
ನನ್ನ ಕಂದ ನೀ
ಪುಟ್ಟ ಪುಟ್ಟ ಹೆಜ್ಜೆಯು
ಇಟ್ಟಾಗ ಗೆಜ್ಜೆ
ಸದ್ದು ಮಾಡಿ ಗೆಲ್ಲುವೆ
ದೊಡ್ಡವರ ಮನಸ್ಸು
ತೊದಲು ನುಡಿ
ತೆವಳುವ ನಡುಗೆ
ಬಿದ್ದಾಗ ಬಿದ್ದೆ
ಎಂದು ಅಳುವ ನೋಟ
ಯಾರು ನೋಡ್ಲಿಲ್ಲಂದ್ರೆ
ಸುಮ್ನಾಗುವುದು
ಕಿರು ಬೆರ್ಳು ಹಿಡಿದು
ನಡೆವ ಪರಿ
ಜಗಳ ತುಂಟತನ
ಮರೆಯಲು ಆಗದು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
ಮಕ್ಕಳ ದಿನಾಚರಣೆ ಪ್ರಯುಕ್ತ ೧೦ನೇ ತರಗತಿ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ೧೪/೧೧/೨೦೨೦
ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
☝️ ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ೭೫%ಕಿಂತ ಹೆಚ್ಚು ಪಡೆದರೆ ನಿಮ್ಮ ಇ-ಮೇಲ್ ವಿಳಾಸಕ್ಕೆ ಪ್ರಶಸ್ತಿ ಪತ್ರ ಬರುತ್ತದೆ.
Friday, November 13, 2020
ಸ್ವರಚಿತ ಕವನ ೧೩/೧೧/೨೦೨೦
ಕವನದ ಶೀರ್ಷಿಕೆ
*ಮಗಳು ಮತ್ತು ಗೊಂಬೆ*
ಮಗಳು ತನ್ನ
ಬೊಂಬೆಗಳಿಗೆ ಕಾಲು
ಕೈ ತಿಕ್ಕಿ ತೀಡಿ
ಜಳಕವ ಮಾಡಿಸಿ
ಚೂರು ಬಟ್ಟೆ ತೊಡಿಸಿ
ತಲೆಯ ಬಾಚಿ
ಮುಖ ಪೌಡರ್ ಹಚ್ಚಿ
ಚಂದ್ರ ಕುಂಕುಮ
ಕಾಡಿಗೆ ಕೈಗೆ ಬಳೆ
ಹಾಕಿ ಅಲಂಕಾರವ
ಗೈದು ಅದಕ್ಕೆ
ಒಂದು ಹೆಸರು ಬೇರೆ
ಕೊಟ್ಟು ಅದನ್ನು
ತನ್ನ ಮಗಳು ಎಂದು
ಹೇಳಿ ಮುದ್ದಾಡುವಳು
ಮಗು ಅತ್ತಾಗ
ರಮಿಸುವಂತ ಪರಿ
ಯಾರನ್ನಾದರೂ
ಮೀರಿಸುವ ಶಕ್ತಿಯೇ
ಅಮೋಘ ಅನುಭವ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Thursday, November 12, 2020
ಸ್ವರಚಿತ ಕವನ ೧೨/೧೧/೨೦೨೦
ಕವನದ ಶೀರ್ಷಿಕೆ
*ನನ್ನಯ ಪಾಠಿ*
{ಟಂಕಾ ಪ್ರಕಾರ}
ಮೊದ ಮೊದಲು
ಶಾಲೆಗೆ ಹೋಗೋ ಮುನ್ನ
ಕೊಡಿಸುವರು
ಪಾಠಿ ಅಕ್ಕರೆ ಮಗು
ಕಲಿಯುತ ನಲಿದು
ಪಾಠಿ ಬಳಪ
ಹಿಡಿದು ಕಲಿಯಲು
ಕುಳಿತು ತಿದ್ದಿ
ತಿದ್ದಿ ತೀಡಲು ಹೇಳಿ
ಕಲಿಸುವರು ಪಾಠ
ಅಕ್ಕರವನು
ಕಲಿತರೆ ಸಕ್ಕರೆ
ನಗು ಮೂಡಲು
ಅಕ್ಕರದಿ ಅಪ್ಪುಗೆ
ತಾಯಿಯು ನೀಡುವಳು
ನನ್ನಯ ಪಾಠಿ
ಬಣ್ಣದ ಪಾಠಿ ಸರ
ಸರ ಅಕ್ಕರ
ಕಲಿತೆ ಬಿಟ್ಟೆ ಎಂದು
ಹಿಗ್ಗಿ ಸಂತಸ ಪಟ್ಟೆ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Wednesday, November 11, 2020
ಸ್ವರಚಿತ ಕವನ ೧೧/೧೧/೨೦೨೦
ಕವನದ ಶೀರ್ಷಿಕೆ
*ಬಣ್ಣದ ಬುಗುರಿ*
(ಟಂಕಾ ಪ್ರಕಾರ)
ಚಿತ್ರ ವಿಚಿತ್ರ
ಬಣ್ಣದ ಬುಗುರಿಯು
ಕೈಯಲ್ಲಿರಲು
ನಮ್ಮಯ ಗೆಳೆಯರು
ನಕ್ಕು ನಲಿಯುವರು
ಜಾಳಿ ಬೀಸಲು
ಗಿರಗಿರ ತಿರುಗೋ
ನನ್ನ ಬಗುರಿ
ಯಾರು ಮಾಡಿದ ಮೋಡಿ
ತಿಳಿಯದು ನನಗೆ
ಚಿಣ್ಣರ ದಂಡು
ನಾ ಮುಂದು ನೀ ಮುಂದೆಂದು
ಹಾಡಿಸುತಲೇ
ಹಲವರು ಅಂಗೈಲಿ
ಆಡಿಸಿ ಕೊಳ್ಳುವರು
ತುಂಟಾಟ ಮಾಡಿ
ಚೇಡಿಸಿ ಕಾಡಿಸುತ
ಸಂಜೆಯತನ
ಊಟ ಮರೆತು ಆಟ
ಆಡುತ ಹಿಗ್ಗುವರು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Tuesday, November 10, 2020
ಸ್ವರಚಿತ ಕವನ ೧೦/೧೧/೨೦೨೦
ಕವನದ ಶೀರ್ಷಿಕೆ
*ಸೂತ್ರವಿರದ ಗಾಳಿಪಟ*
(ಟಂಕಾ ಪ್ರಕಾರ)
ಮಕ್ಕಳೆಲ್ಲರೂ
ಕೇಳಿ ಬದುಕು ನೀವು
ಅಂದುಕೊಂಡಂತೆ
ಸುಲಭವಲ್ಲ ಬಹು
ಜಾಗೃಕರಾಗಬೇಕು
ಅಪ್ಪಿತಪ್ಪಿಯೂ
ತಪ್ಪು ಹೆಜ್ಜೆ ಇಟ್ಟರೆ
ಕಷ್ಟ ತಪ್ಪದು
ನೀತಿ ಮಾರ್ಗವ ಹಿಡಿ
ನಂಬಿಕೆಯಿಂದ ನಡೆ
ಹದಿ ಹರೆಯ
ವಯಸ್ಸಿನಲಿ ದಾರಿ
ಬಿಡಬಾರದು
ಪ್ರೀತಿ ಪ್ರೇಮದ ಬಗ್ಗೆ
ಹುಷಾರಾಗಿರಬೇಕು
ಚೆನ್ನಾಗಿ ಓದಿ
ಮುಂದೆ ಬಂದರೆ ಬಾಳು
ಬಂಗಾರ ಇಲ್ಲ
ಸೂತ್ರವಿರದ ಗಾಳಿ
ಪಟದಂತೆ ಆದೀತು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Monday, November 9, 2020
ಸ್ವರಚಿತ ಕವನ ೦೯/೧೧/೨೦೨೦
ಕವನದ ಶೀರ್ಷಿಕೆ
*ಮಗುವಿನ ಮುಗ್ಧ ನಗು*
(ಟಂಕಾ ಪ್ರಕಾರ)
ಮಗು ನೀ ನಗು
ಕಪಟ ಮೋಸವಿಲ್ಲ
ಸದಾ ನಿನ್ನಲ್ಲಿ
ಉಲ್ಲಾಸದಿ ನಕ್ಕರೆ
ಕಾಣುವೆ ನೀ ಸುಂದರ
ಜಾತಿಯ ಕೊಂಕು
ಸೋಕದಂತೆ ಬೆರೆವ
ಮುಗ್ಧ ಮನಸ್ಸು
ನಿನ್ನದಲ್ಲವೇ ಜಾಣ
ದೊಡ್ಡವರೇ ದಡ್ಡರು
ನಿಮ್ಮಂತೆ ಏಕೆ
ಇರಲಾರರೋ ಕೇಳಿ
ನೋಡು ಯಾವಾಗ
ಕಲಿತಿರುವಿರಿ ಈ
ನಟನಾ ಚತುರತೆ
ಎಂದು ತಿಳಿದು
ತಿಳಿದು ಅನಾಚಾರ
ಮಾಡುವವರು
ಕಲಿಯಲಿ ನಿನ್ನಂತೆ
ಸೀದಾ ನಗುವುದನು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Sunday, November 8, 2020
ಸ್ವರಚಿತ ಕವನ ೦೮/೧೧/೨೦೨೦
ಕವನದ ಶೀರ್ಷಿಕೆ
*ಹೃದಯದ ಮಾತು*
ಜಾತಿ ಮತ ಪಂಥ ಬೇದಗಳ
ಗಂಟು ಕಟ್ಟಿ ಐಕ್ಯತೆಯಿಂದ ಒಡಗೂಡಿ
ಜಗದ ಜನರೆಲ್ಲ ಒಂದಾಗಿ ಬಾಳುತ
ವಿಶ್ವ ಭ್ರಾತೃತ್ವ ಸೌಹಾರ್ದತೆಯು ನೆಲೆಸಲಿ
ನಾನು ಶ್ರೇಷ್ಠ ನೀನು ಕನಿಷ್ಠ ಎಂಬ ಭಾವನೆ
ಅಳಿಸಿ ಸರ್ವರು ಸಮ ಬಾಳು ಸಮ ಪಾಲು
ಎನ್ನೋ ಘೋಷ ವಾಕ್ಯ ನಾನು ಕೇಳಲು
ಆತುರದಿ ಕಾಯುವ ಕಾಲ ಒದಗಿ ಬರಲಿ
ಗಂಡು ಹೆಣ್ಣಿನ ನಡುವಿನ ತಾರತಮ್ಯದ
ಗೋಡೆ ಉರುಳಿ ಇಬ್ಬರು ಸಮಾನರು
ಅನ್ನೋ ಸಹ ಜೀವನ ನಡೆಸಲು ಅತೀ
ಆನಂದದಿ ನಲಿದಾಡಿ ಕುಣಿಯುವದು ಮನ
ಆಸ್ತಿ ಅಂತಸ್ತು ನೋಡಿ ಮಣೆ ಹಾಕುವದ
ಬಿಟ್ಟು ಬಡವ ಬಲ್ಲಿದ ಒಂದೆ ತಾಟಿನಲಿ
ಉಣ್ಣುವ ಅವಕಾಶ ಬಂದು ಎಲ್ಲರೂ ಪ್ರೇಮದಿ
ಮಾತು ಕಥೆ ಆಡಿದಾಗಲೇ ನನ್ನ ಸಂಭ್ರಮವು
ಎಲ್ಲರ ಮನೆಯಲ್ಲೂ ತಂದೆ ತಾಯಿಯರ ಬಳಿ
ಅನುರಾಗದ ಮಾತಾಡಿ ಅತ್ತೆ ಸೊಸೆ ಪರಸ್ಪರ
ಕೂಡಿ ಅನ್ಯೋನ್ಯವಾಗಿದ್ದು ಹಿರಿಯರ ಯೋಗ
ಕ್ಷೇಮ ನೋಡುವಂತಾದರೆ ಹಿಗ್ಗುವುದು ನನ್ನ ಮನ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Saturday, November 7, 2020
ಸ್ವರಚಿತ ಕವನ ೦೭/೧೧/೨೦೨೦
ಕವನದ ಶೀರ್ಷಿಕೆ
*ಸೇಡು*
ಯಾವ ವ್ಯಕ್ತಿಯಲ್ಲಿ ಸೇಡು ಮನೆಮಾಡಿರೆ
ಆ ಮನುಷ್ಯನ ಅಧಃಪತನಕ್ಕೆ ದಾರಿ
ಸೇಡಿನ ಕೈಯಲ್ಲಿ ಬುದ್ಧಿ ಕೊಟ್ಟರೆ
ಕೋಪದಿಂದ ಹಾಳಾಗುವುದು ಸಂಸಾರ
ಮನದಲ್ಲಿ ವೈಷಮ್ಯ ತಲೆದೋರುವವು
ಸಂಬಂಧಗಳು ಸಡೀಲವಾಗುವವು
ನಂಬಿಕೆಗಳು ಹುಸಿ ಎನಿಸುವವು
ಒಂಟಿತನ ಭಾವನೆಗಳು ಕಾಡುವವು
ಕೋಪಿಷ್ಠನಾದವನಿಗೆ ಗೌರವ ಸಿಗದು
ಅದಕ್ಕಾಗಿ ಹತೋಟಿಗೆ ತರಲು ಸದಾ
ಪ್ರಯತ್ನ ಮಾಡುತ ಮನೋನಿಗ್ರಹದ
ಸಂಕಲ್ಪ ತೊಟ್ಟರೆ ವ್ಯಕ್ತಿತ್ವ ವಿಕಸವಾಗುವುದು
ಪ್ರೀತಿ ವಿಶ್ವಾಸ ವಾತ್ಸಲ್ಯ ತೋರುತ
ಎಲ್ಲರಿಗೆ ಬೇಕಾಗಿ ಒಂದಾಗಿ ಬಾಳುತ
ನೆಮ್ಮದಿ ಶಾಂತಿಯಿಂದ ಸಮಾನತೆ
ಸಹಬಾಳ್ವೆಯಡೆಗೆ ಸಾಗೋದೆ ಜೀವನ ಪಥ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
🙏ಶುಭೋದಯ 🙏
*ಬರಹಗಾರರ ಬಳಗ ರಾಜ್ಯ ಘಟಕ**
*ಹೂವಿನಹಡಗಲಿ*
*ಕಾವ್ಯಸೃಷ್ಠಿ-೨೧೩*
೭/೧೧/೨೦೨೦-ಶನಿವಾರ
*ವಿಷಯ-ಸೇಡು*
ನಿರ್ವಹಣೆ- *ಶ್ರೀಸಂತೋಷ* *ನಿಂಗಾಪೂರ*
*ಗದಗ*
ಕವಿತೆ ೧೬ ರಿಂದ ೨೦ ಸಾಲಿರಲಿ
*ಗಮನಿಸಿ*
೧.ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ
೨.ಗೋಷ್ಠಿಯಮದ್ಯೆ ಬೇರೆ ಏನನ್ನೂ ಹಾಕಬಾರದು
*ಸರ್ವ ಸಾಹಿತ್ಯದ ಸಿರಿ ಸಂಪತ್ತಿನ ಸಂತೋಷನ ಸಂಗಡಿಗರಿಗೆ ಸ್ವಾಗತ ಸುಸ್ವಾಗತ*
👍🙏🥰🌹
Friday, November 6, 2020
ಸ್ವರಚಿತ ಕವನ ೦೬/೧೧/೨೦೨೦
ಕವನದ ಶೀರ್ಷಿಕೆ
*ಸ್ವಾತಂತ್ರ್ಯ ಸಂಗ್ರಾಮ*
ಸ್ವಾತಂತ್ರ್ಯ ಸಂಗ್ರಾಮದಲಿ ಸಾವಿರಾರು ಜನ
ಹೋರಾಡಿ ವೀರ ಮರಣ ಹೊಂದಿದರು ತಮ್ಮ
ಕುಟುಂಬದ ಮಾನ,ಪ್ರಾಣ,ಆಸ್ತಿಯ ಲೆಕ್ಕಿಸದೆ
ಹಲವರು ಮನೆ - ಮಠ ತೊರೆದು ಬ್ರಿಟೀಷರ
ವಿರುದ್ಧ ಸಿಡಿದೆದ್ದು ಬಂಡಾಯದ ಬಾವುಟ
ಹಾರಿಸುವ ಮೂಲಕ ಐಕ್ಯತೆ ಮೂಡಿಸಿದರು
ರಾಮ ರಾಜ್ಯದ ಕನಸು ಕಂಡು ನನಸಾಗಲು
ಮಾಡು ಇಲ್ಲವೇ ಮಡಿ ಎಂಬ ಕರೆ ನೀಡಿದರು
ಹೋರೋಟದ ಕಾವು ಹೆಚ್ಚಿ ಆಂಗ್ಲರ ಸೊಲ್ಲು
ಅಡಗಿಸಲು ಹಗಲಿರುಳೆನ್ನದೆ ಸಂಘಟಿಸಿದರು
ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ್ದ
ಯುವಕರ ದಂಡು ಹೂಡಿದರು ದಂಗೆಗಳನು
ಕ್ರಾಂತಿ ಕಿಡಿ ಹೊತ್ತಿಸಿದರು ತೀವ್ರಗಾಮಿಗಳು
ಸತ್ಯ ಅಹಿಂಸೆ ತ್ಯಾಗ ಬಲಿದಾನ ಬಿತ್ತಿದವರು
ಮಹಾತ್ಮ ಗಾಂಧೀಜಿಯವರು ಉಪವಾಸ
ಸತ್ಯಾಗ್ರಹ ಎಂಬ ಅಸ್ತ್ರ ಬಳಸಿ ಅಧಿಕಾರಿಗಳ
ಬಗ್ಗುಬಡಿದರು ಮಂದಗಾಮಿ ನಾಯಕರು
ಹೀಗೆ ಭಾರತಾಂಬೆಯ ವಿಮೋಚನೆ ಆಗುತ್ತದೆ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Thursday, November 5, 2020
ಸ್ವರಚಿತ ಕವನ ೦೫/೧೧/೨೦೨೦
ಕವನದ ಶೀರ್ಷಿಕೆ
*ಆತ್ಮ ಗೌರವ*
ಮೊದಲು ನಮ್ಮನ್ನು ನಾವು ಪ್ರೀತಿಸಬೇಕು
ಇರಲಿ ನಮ್ಮ ಮೇಲೆ ನಾಮಗೆ ವಿಶ್ವಾಸ
ಹಿಡಿದ ಕಾರ್ಯ ಸಾಧಿಸುವೆನೆಂಬ ಛಲ
ನಮ್ಮಲ್ಲಿ ಮೂಡಿರಲು ಗೆಲುವು ನಮ್ಮದೆ
ಇಟ್ಟ ನಂಬಿಕೆಗೆ ತಕ್ಕಂತೆ ಕೆಲಸ ಮಾಡಬೇಕು
ಸತತ ಪರಿಶ್ರಮ ಪ್ರಯತ್ನ ತುಂಬಾ ಅಗತ್ಯ
ನಿಮ್ಮನ್ನು ನಾವು ಮೊದಲು ಗೌರವಿಸಬೇಕು
ಧೈರ್ಯದಿ ಮುನ್ನುಗ್ಗಿದರೆ ದಡ ತಲುಪಬಹುದು
ಸರಿ ತಪ್ಪುಗಳ ಯೋಚಿಸಿ ಮುನ್ನಡೆಯಬೇಕು
ಸರಿಯಾದ ದಾರಿಯಲ್ಲಿ ನಾವು ಸಾಗಬೇಕು
ಸಾಮರಸ್ಯದಿ ಬಾಳೋದು ಕಲಿಯಬೇಕು
ತಾನಾಗಿ ಬರುತವದು ನಮ್ಮನು ಗೌರವಿಸುವ ದಿನ
ನಮ್ಮ ನಂಬಿ ಬಾಳುವವರು ಇರುವರು ಅನೇಕ
ಅವರ ಕಡೆಗೂ ಕೊಡೋಣ ಸ್ವಲ್ಪ ನಮ್ಮ ಗಮನ
ಮನೆಯ ಸದಸ್ಯರ ಮಮತೆ ಪ್ರೀತಿ ವಾತ್ಸಲ್ಯವನು
ಗಳಿಸಿಕೊಂಡು ಉಳಿಸಿಕೊಂಡು ಹೋದರೆ ಸಾರ್ಥಕ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
Tuesday, November 3, 2020
Top family story
Top family story
ಪತ್ನಿ ತೀರಿಕೊಂಡು ಇಂದಿಗೆ ನಾಲ್ಕು ದಿನಗಳಾಯಿತು....
ಆಕೆಯ ಅಂತ್ಯಸಂಸ್ಕಾರಕ್ಕೆ ಆಗಮಿಸಿದ ಸಂಬಂಧಿಕರು ಒಬ್ಬೊಬ್ಬರಾಗಿ ಹೊರಟು ಹೋದರು...
ಕೊನೆಗೆ ಸಾವಿನ ಗಂಧವಿರುವ ಆ ಮನೆಯಲ್ಲಿ ನಾನು ಮತ್ತು ನನ್ನ ಮಕ್ಕಳು ಮಾತ್ರವಾಗಿ ಬಾಕಿಯಾದೆವು...
ಆಕೆ ಜೊತೆಯಲ್ಲಿಲ್ಲ ಎಂಬುದನ್ನು ನಂಬುವುದಕ್ಕೂ ನನಗೆ ಕಷ್ಟವಾಗುತ್ತಿದೆ....
ರೀ... ಇಲ್ಲಿ ನೋಡಿ... ಅಂತ ಹೇಳುತ್ತಾ ನನ್ನ ಬಳಿ ಓಡಿ ಬರುವುದನ್ನು ನಿನ್ನೆ ಎಂಬಂತೆ ನಾನು ನೆನಪಿಸಿಕೊಂಡೆ...
ನಮ್ಮನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಸೋತು ಹೋದ ನತದೃಷ್ಟೆಯಾಗಿದ್ದಳು ಆಕೆ.....
ನಮ್ಮ ಮೇಲಿನ ಅತಿಯಾದ ಪ್ರೀತಿಯಿಂದಲೇ ಇರಬೇಕು ಆಕೆ ಯಾವತ್ತೂ ನಮ್ಮಿಂದ ದೂರ ಹೋಗಿರಲಿಲ್ಲ....
ತವರು ಮನೆಗೆ ಹೋದರೂ ಕೂಡಾ ಮನೆಯಲ್ಲಿ ಅವರು ಮತ್ತು ಮಕ್ಕಳು ಮಾತ್ರ ಇರೋದು ಅಂತ ಕಾರಣ ಹೇಳಿ ಸಂಜೆಯಾಗುತ್ತಲೇ ಓಡೋಡಿ ಮನೆ ತಲುಪುತ್ತಿದ್ದಳು...
ನಿಜವಾಗಿಯೂ ಆಕೆ ಆಕೆಯ ಮನೆಗೆ ಹೋಗುವುದು ನನಗೆ ಇಷ್ಟವಿರಲಿಲ್ಲ.... ಅದು ಆಕೆಯ ಮೇಲಿನ ಪ್ರೀತಿಯಿಂದಾಗಿರಲಿಲ್ಲ. ಬದಲಾಗಿ, ಆಕೆ ಹೋದರೆ, ನಮಗೆ ಅಡುಗೆ ಮಾಡಿ ಬಡಿಸುವವರು ಯಾರೂ ಇಲ್ಲ ಎಂಬ ಸ್ವಾರ್ಥವಾದ ಕಾರಣವಾಗಿತ್ತು...
ನಾನು ಮತ್ತು ಮಕ್ಕಳು ರಜಾದಿನಗಳಲ್ಲಿ ಟಿ ವಿಯ ಮುಂದೆ ಒಂದೊಂದು ಕಾರ್ಯಕ್ರಮವನ್ನು ನೋಡಿ ಖುಷಿಪಡುವಾಗ, ಅಡುಗೆ ಮನೆಯಲ್ಲಿ ಅಡುಗೆ ಮಾಡುವುದರಲ್ಲಿ ನಿರತಳಾಗಿರುತ್ತಿದ್ದಳು ಆಕೆ...
ಯಾವಾಗಲಾದರೂ ಸ್ವಲ್ಪ ಟಿ ವಿ ನೋಡೋದಕ್ಕೆ ನಮ್ಮ ಜೊತೆ ಬಂದು ಕುಳಿತರೆ, - ಅಮ್ಮಾ ನೀರು...
ಲೇ.. ಸ್ವಲ್ಪ ಟೀ ಮಾಡು...
ಅಂತ ಎಲ್ಲಾ ಹೇಳಿ ಆಕೆಯನ್ನು ನಾವು ಆ ಅಡುಗೆ ಕೋಣೆಗೇ ವಾಪಾಸ್ ಕಳುಹಿಸುತ್ತಿದ್ದೆವು...
ನಾನು ಹೇಳದೆಯೇ ಎಲ್ಲವನ್ನೂ ಅರ್ಥ ಮಾಡಿಕೊಂಡು ನನ್ನ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದಳು...
ಇಂದು ಈಗ ಒಂದು ಕಪ್ ಟೀ ಮಾಡಿಕೊಡಲಿಕ್ಕೋ...,
ಒಂದು ಲೋಟ ನೀರು ಕೊಡಲಿಕ್ಕೋ, ಆಕೆ ಜೊತೆಯಲ್ಲಿಲ್ಲ ಎಂಬ ಕಟು ಸತ್ಯವನ್ನು ನಾನು ನೋವಿನಿಂದಲೇ ಅರಿತೆ.....
ಯಾವುದಕ್ಕೂ ಆಕೆ ದೂರುಗಳನ್ನು ಹೇಳಿದವಳಲ್ಲಾ... ಒಂದು ಒಳ್ಳೆಯ ಸೀರೆ ಕೂಡಾ ನಾನು ಖರೀದಿಸಿಕೊಟ್ಟಿರಲಿಲ್ಲ......
ಒಂದು ಸಿನೆಮಾ ನೋಡಲು ಕೂಡಾ ಆಕೆಯನ್ನು ಜೊತೆಯಲ್ಲಿ ಕರಕ್ಕೊಂಡೋಗಿರಲಿಲ್ಲ...
ಕ್ಲಬ್, ಪಾರ್ಟಿ ಅಂತ ನಾನು ತಡವಾಗಿ ಮನೆಗೆ ಬರುವಾಗ ಆಕೆ ಗಾಬರಿಯಿಂದ ಯಾಕೆ ತಡವಾಯಿತು ಅಂತ ಕೇಳುವಾಗ ನಾನು ಆಕೆಯ ಪ್ರಶ್ನೆಯನ್ನು ಲೆಕ್ಕಿಸದೆ ನಿರ್ಲಕ್ಷಿಸುತ್ತಿದ್ದೆ.....
ರೀ... ನೋಡಿ.. ಕರೆಂಟ್ ಬಿಲ್ ಪಾವತಿಸಬೇಕಾದ ಕೊನೆಯ ದಿನ ನಾಳೆ...
ನೋಡಿ ಹಾಲಿನವನಿಗೆ ದುಡ್ಡು ಕೊಡಬೇಕಾದ ಸಮಯ ಹತ್ತಿರ ಬಂತು...
ಪೇಪರ್ ನವ ನಿನ್ನೆ ದುಡ್ಡು ಕೇಳಿ ಹೋದ...
ಮಕ್ಕಳ ಶಾಲೆಯ ಫೀಸ್ ನಾಳೆನೇ ಕೊಡಬೇಕು ರೀ.....
ನೋಡಿ ನಿಮ್ಮ ಬಿ ಪಿ ಯ ಮಾತ್ರೆ ಖಾಲಿಯಾಗಿದೆ...
ಹಾಗೆ ಆಕೆಯ ಬಯಕೆ ಮತ್ತು ಬೇಡಿಕೆಗಳನ್ನು ಬಿಟ್ಟು, ಉಳಿದ ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಆಕೆ ನೆನಪಿಸುವಳು.....
ಇನ್ನು ಹಾಗೆ ನೆನಪಿಸುವವರು ಯಾರೂ ಇಲ್ಲ..
ರಾತ್ರಿ ಕೆಲಸವೆಲ್ಲಾ ಮುಗಿಸಿ, ನನ್ನ ಪಕ್ಕದಲ್ಲಿ ಬಂದು ಮಲಗುವಾಗ, ಎದೆ ನೋಯುತ್ತಿದೆ, ಕಾಲು ನೋಯುತ್ತಿದೆ ಅಂತ ಆಕೆ ಹೇಳುವಾಗ, - ಅದು ನಿನಗೆ ಮನೆಯಲ್ಲಿ ಏನೂ ಕೆಲಸವಿಲ್ಲದೆ ಸುಮ್ಮನೆ ಕುಳಿತುಕೊಳ್ಳುತ್ತಿಯಲ್ಲಾ..
ಬೆಳಿಗ್ಗೆ ಐದು ಗಂಟೆಗೆ ಎದ್ದು ಸ್ವಲ್ಪ ವಾಕಿಂಗ್ ಮಾಡಿದರೆ ಎಲ್ಲಾ ಸರಿಹೋಗುತ್ತೆ.. ಅಂತ ನಾನು ಹೇಳುವಾಗ, ಆಕೆಯ ಕಣ್ಣುಗಳು ತುಂಬುವುದನ್ನು ನಾನು ನೋಡದ ಹಾಗೆ ನಟಿಸುತ್ತಾ ತಿರುಗಿ ಮಲಗುತ್ತಿದ್ದೆ...
ಕೊನೆಗೆ ಆ ಎದೆ ನೋವು ಹಾರ್ಟ್ ಅ್ಯಟೇಕ್ ನ ರೂಪದಲ್ಲಿ ಬಂದು ಆಕೆಯನ್ನು ಕರಕೊಂಡು ಹೋಗುವಷ್ಟರಲ್ಲಿ ಆಕೆಯ ನೋವನ್ನು ಅರ್ಥಮಾಡಿಕೊಳ್ಳಲು ತುಂಬಾ ತಡಮಾಡಿಬಿಟ್ಟೆ...
ಮನೆಗೆಲಸಗಳನ್ನು ಮಾಡುತ್ತಾ , ಆಕೆಯ ನೆನಪುಗಳೊಂದಿಗೆ ಇಂದಿಗೆ ನಾಲ್ಕು ದಿನಗಳನ್ನು ದೂಡಿ ಮುಗಿಸಿದೆ... ಮನೆಗೆಲಸ ಅಷ್ಟು ಸುಲಭವಲ್ಲ ಎಂಬ ಕಟುಸತ್ಯವನ್ನು ಬಹುಬೇಗನೆ ಅರಿತುಕೊಂಡೆ.....
ಆಕೆಯನ್ನು ದೂರಿದ ದಿನಗಳನ್ನು, ಚುಚ್ಚು ಮಾತುಗಳಿಂದ ಆಕೆಯನ್ನು ನೋಯಿಸಿದ ದಿನಗಳನ್ನು ನಾನು ಶಪಿಸುತ್ತಾ ಸ್ವತಃ ಮರುಗತೊಡಗಿದೆ....
ನಾನು ಕೆಲಸಕ್ಕೆ ಹೋಗಲು ಹೊರಡುವಾಗ, ಐರನ್ ಮಾಡಿಟ್ಟ ಬಟ್ಟೆಗಾಗಿ ಹುಡುಕಾಡಿದೆ.....
ರೀ... ನೀವು ಈ ಕಂದು ಬಣ್ಣದ ಶರ್ಟ್ ಧರಿಸಿ... ಇದು ನಿಮಗೆ ಚೆನ್ನಾಗಿ ಕಾಣಿಸುತ್ತಿದೆ. ಅಂತ ಆಕೆ ಹೇಳುವ ಹಾಗೆ ನನಗೆ ಅನಿಸಿತು......
ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ನನಗಾಗಿ ಯಾರೂ ಬಾಗಿಲು ತೆರೆಯಲಿಲ್ಲ......
ನನ್ನ ಬರುವಿಕೆಗಾಗಿ ಯಾರೂ ಕಾದು ಕೂರಲಿಲ್ಲ....
ಯಾಕೆ ಇಷ್ಟು ತಡಮಾಡಿ ಬಂದಿದ್ದೀರಿ ಅಂತ ಯಾರೂ ನನ್ನತ್ರ ಗಾಬರಿಯಿಂದ ಕೇಳಲಿಲ್ಲ....
ಕೊನೆಗೆ ನಾನು ಬಾಗಿಲನ್ನು ದೂಡಿ ಒಳಗೆ ಹೋದಾಗ, ಹಾಲ್ ನಲ್ಲಿ ನಾನು ಬಂದದ್ದು ಕೂಡಾ ಅರಿಯದೆ, ಮಕ್ಕಳು ಮೊಬೈಲ್ ನಲ್ಲಿ ಮಗ್ನರಾಗಿದ್ದರು... ಅವರ ಪಕ್ಕದಲ್ಲಿ ತಿಂದ ಪಾತ್ರೆಗಳು ಎಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ನಾನು ದುಃಖದಿಂದ ನೋಡಿದೆ....
ಆಕೆಯಿದ್ದಾಗ ಸ್ವಚ್ಛವಾಗಿದ್ದ ಮನೆಯು ಇಂದು ಆಕೆಯಿಲ್ಲದಾಗ ಹೀನವಾಗಿ ಇರುವ ಮನೆಯ ಅವ್ಯವಸ್ಥೆಯನ್ನು ನೋಡಿ, ನನ್ನ ಹೃದಯವು ಮರುಗಿತು...
ಸ್ನಾನ ಮುಗಿಸಿ, ಒಂದು ಕಪ್ ಟೀ ಗಾಗಿ ನಾನು ಅಡುಗೆ ಮನೆಗೆ ಹೋದೆ...
ವಾಷ್ ಬೆಯ್ಸನ್ ನಲ್ಲಿ
ಊಟ ಮಾಡಿದ ತಟ್ಟೆಗಳು ಮತ್ತು ನೂಡಲ್ಸ್ ನ ಖಾಲಿ ಪ್ಯಾಕೆಟ್ ಗಳು ಮಾತ್ರ ನನಗೆ ಕಾಣಿಸಿತು....
ಪಾತ್ರೆಗಳನ್ನೆಲ್ಲಾ ಕ್ಲೀನ್ ಮಾಡಿ, ಫ್ರಿಡ್ಜ್ ನಿಂದ ಒಂದು ಆ್ಯಪಲ್ ತೆಗೆದು ಕಟ್ ಮಾಡಿ ತಿಂದು ಬೆಡ್ ರೂಮಿಗೆ ಬಂದು ಮಲಗಿದೆ....
ಲೈಟ್ ಆಫ್ ಮಾಡುವುದಕ್ಕೆ ಮುಂಚೆ ಗೋಡೆಯ ಮೇಲೆ ತೂಗುಹಾಕಿದ ಆಕೆಯ ಮುಗುಳ್ನಗುವ ಭಾವಚಿತ್ರವನ್ನೊಮ್ಮೆ ತುಂಬಾ ದುಃಖದಿಂದಲೇ ನಾನು ನೋಡಿದೆ.....,.
ಆಕೆಯನ್ನು ನಿರ್ಲಕ್ಷಿಸದೇ ಇದ್ದಿದ್ದರೆ, ಇಂದು ನಾನು ಸಂತೋಷದಿಂದ ಇರುತ್ತಿದ್ದೆ ಅಂತ ನೆನೆದು ಎರಡು ಹನಿ ಕಣ್ಣೀರು ನನ್ನ ಕಣ್ಣಿಂದ ಸುರಿಯಿತು.....
ಈ ಕಥೆಯನ್ನು ಓದಿದವರಲ್ಲಿ ಈ ಕಥೆಯ ಕಥಾ ನಾಯಕ ನಾನೇ ಅಂತ ಯೋಚಿಸುವವರು ಅನೇಕರು ಇರಬಹುದಲ್ಲವೇ...?
ಅಂತಹವರಿಗೆ ನಾನು ಹೇಳಬಯಸುವುದೇನೆಂದರೆ -
ಕಣ್ಣುಗಳಿರುವಾಗಲೇ ಅದರ ಬೆಲೆ ಗೊತ್ತಾಗುವುದು...
ಕಣ್ಣಿನ ದೃಷ್ಟಿ ನಷ್ಟವಾದ ನಂತರ ಕಣ್ಣಿನ ಮಹತ್ವವನ್ನು ಹೇಳಿ ಏನೂ ಪ್ರಯೋಜನವಿಲ್ಲ...
ಸ್ವರಚಿತ ಕವನ ೦೩/೧೧/೨೦೨೦
ಕವನದ ಶೀರ್ಷಿಕೆ
*ಯಾರು ಸಿರಿವಂತರು?*
ಮನೆಗೆ ಬಂದ ಅತಿಥಿಗಳಿಗೆ
ಗೌರವ ನೀಡದವರಂತು ಅಲ್ಲ
ಅಧಿಕಾರ ದರ್ಪದಿಂದ ವರ್ತಿಸುವವ
ಖಂಡಿತ ಅಲ್ಲವೇ ಅಲ್ಲ
ಗುರುಹಿರಿಯರಿಗೆ ಗೌರವಿಸದಿರುವ
ವ್ಯಕ್ತಿಯಂತು ಅಲ್ಲವೇ ಅಲ್ಲ
ಕುತ್ಸಿಕ ಮೋಸ ವಂಚನೆ ದುರ್ಬುದ್ಧಿ
ಹೊಂದಿದವರಂತು ಅಲ್ಲ
ಜನರೊಂದಿಗೆ ಬೆರೆಯದಿರುವ
ಅನೂನ್ಯ ಸಂಬಂಧವಿರವರಂತು ಅಲ್ಲ
ಅಕ್ರಮ ಅತ್ಯಾಚಾರ ವಾಮ ಮಾರ್ಗದಲಿ
ನಡೆವವನಂತು ಅಲ್ಲವೇ ಅಲ್ಲ
ಮತ್ಯಾರು ಸಿರಿವಂತರು ಬಡತನವಿರಲಿ
ಸಿರಿತನವಿರಲಿ ಎಲ್ಲರನ್ನು ಗೌರವಿಸುವವರು
ಮೌಲ್ಯಯುತ ಸತ್ಯ,ನೈತಿಕತೆಯ ಹಾದಿಯಲಿ
ನಡೆವವರು ನಿಜವಾದ ಸಿರಿವಂತನಾಗುವರು
ರಚನೆ
ಯಗುಮಾಶ
ಯರಗೋಳ ತಾ.ಜಿ. ಯಾದಗಿರಿ
Monday, November 2, 2020
ಸ್ವರಚಿತ ಕವನ ೦೨/೧೧/೨೦೨೦
ಕವನದ ಶೀರ್ಷಿಕೆ
*ತಾಳ್ಮೆ ಎಂಬ ಬೆಳಕು ಬೇಕು*
ಬಾಳ ಬೆಳಗಲು ತಾಳ್ಮೆ ಎಂಬ ಬೆಳಕು ಬೇಕು
ಶ್ರದ್ಧೆಯಿಂದ ಓದಿ ಜೀವನದಿ ಗೆಲ್ಲಬೇಕು
ನಿತ್ಯವೂ ದುಡಿದು ಧನಿಕನಾಗಬೇಕು
ನೀತಿ ನಿಯಮದಿ ನಿತ್ಯವೂ ಬಾಳಬೇಕು
ಸಂಸಾರಲಿ ಬೈದು ಬುದ್ಧಿ ಹೇಳುವರು
ತಿದ್ದಿ ನಡೆದರೆ ಬಾಳು ಒಂದು ಬಂಗಾರ
ಹಿರಿಯರು ಸದಾ ಹಿತವನ್ನು ಬಯಸುವರು
ತಪ್ಪೆಂದು ಬಾವಿಸಿ ನೀ ಕೋಪಗೊಳ್ಳದಿರು
ಇವು ನಮ್ಮ ಏಳ್ಗೆಗೆ ಪೂರಕವಾಗಿವೆ ನೋಡಾ
ಧೈರ್ಯದಿಂದ ಕಷ್ಟವ ಎದುರಿಸಬೇಕು ನೋಡಾ
ಸುಖ ದುಃಖಗಳ ಸಮವಾಗಿ ಕಾಣಬೇಕು ನೋಡೋ
ಸಜ್ಜನರ ಸಹವಾಸ ಮಾಡೋದು ಮರೆಯಬೇಡೋ
ಜೀವನದಲ್ಲಿ ಸಹನೆ,ಸಹಬಾಳ್ವೆಯ ಬದುಕು
ಹೊಂದಾಣಿಕೆ,ಸ್ನೇಹ,ಸೌಹಾರ್ದತೆಯು ಸಾಕು
ಸತ್ಯ ನುಡಿ,ಸಂಸ್ಕೃತಿ, ಪರಂಪರೆ ಉಳಿಸಬೇಕು
ನಿರಹಂಕಾರದ ತಾಳ್ಮೆಯನು ರೂಢಿಸಿಕೊಳ್ಳಬೇಕು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
-
ಕನ್ನಡ ನಾಡು ನುಡಿ ಕವನ ದಿನಾಂಕ ೨೨/೧೨/೨೦೨೦ ರಂದು ಹಸಿರು ಕ್ರಾಂತಿ ಪತ್ರಿಕೆಯಲ್ಲಿ ಪ್ರಕಟವಾದ ಕವನ
-
ಕವನದ ಶೀರ್ಷಿಕೆ *ಕನ್ನಡ ನಾಡು ನುಡಿ* ಕವಿಗಳ ಬೀಡು ಕನ್ನಡ ನಾಡು ಚಿನ್ನಾ.. ರನ್ನಾ.. ತಿಳಿಯೋ ನೀನು ಸವಿಜೇನು ಸವಿದಂತೆ ಈ ನುಡಿಯ ಕೇಳು ಅಕ್ಕರೆಯ ಅಕ್ಕರಗಳು ನೀ ಕಾಣು ಓ.....