Saturday, October 31, 2020

ಸ್ವರಚಿತ ಕವನ ೩೧/೧೦/೨೦೨೦

 ಕವನದ ಶೀರ್ಷಿಕೆ

*ಸತಿಯೇ ಸಂಗಾತಿ*


ಬಾಳ ಬೆಳಗಲು ಬಂದವಳೆ

ಭವ್ಯ ಭವಿಷ್ಯದಿ ನಿಂದವಳೆ

ಕಂಗಳಲಿ ಪ್ರೀತಿ ತಂದವಳೆ

ಸತಿಯೇ ಸಂಗಾತಿಯಾದವಳೆ

ಪತಿಯೇ ಪರದೈವೆಂದವಳೆ 

ಹಿರಿ-ಕಿರಿಯರೊಡನೆ ಬಾಳಿದವಳೆ


ಹೌದು ಗೆಳತಿ ನನ್ನ ಯೋಗಕ್ಷೇಮ ನೀನಾದೆ

ನಿನ್ನ ತವರ ಮರೆತು ಬಾಳಿನ ನೌಕೆ ನೀನಾದೆ

ಸವಿ ಮಾತಲಿ ಮನಗೆದ್ದು ಎಲ್ಲರಲಿ ನೀನಾದೆ

ನೆರೆ ಮನೆಯ ಸುಖ ದುಃಖಕೆ ಸಹಕಾರ ನೀನಾದೆ

ಮಕ್ಕಳ ಏಳಿಗೆಗಾಗಿ ಮಿಡಿದ ತುಡಿತ ನೀನಾದೆ

ನನ್ನ ಬಂಧು ಬಾಂಧವರಿಗೆ ಎಲ್ಲಾ ನೀನಾದೆ


ಬಡತನದಲಿ ನೀತಿಯ ಬಿಡದೆ ನೀ ಪಾಲಿಸಿದೆ

ಮಕ್ಕಳು ಸರಿದಾರಿಗೆ ಸಾಗಲು ನೀ ನಿಯಮ ಪಾಲಿಸಿದೆ

ನಮ್ಮ ತಂದೆ ತಾಯಿಯರ ಮಾತನು ನೀ ಪಾಲಿಸಿದೆ

ನಮ್ಮ ಅಕ್ಕ ತಂಗಿಯರ ಆಣತಿಯನು ನೀ ಪಾಲಿಸಿದೆ

ನಮ್ಮ ಅಣ್ಣ ತಮ್ಮಂದಿರ ಆಜ್ಞೆಯನು ನೀ ಪಾಲಿಸಿದೆ

ನನ್ನ ಸತಿಯಾಗಿ ಬಂದು ಸತಿಧರ್ಮವ ನೀ ಪಾಲಿಸಿದೆ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ


*ಬರಹಗಾರರ ಬಳಗ ರಾಜ್ಯ ಘಟಕ* 

         *ಹೂವಿನಹಡಗಲಿ*

               ✍️✍️

       *ಕವಿತಾ ಸಪ್ತಾಹ* 

              🙏🙏

 *ಕವನದ ಶೀರ್ಷಿಕೆ

*ಸತಿಯೇ ಸಂಗಾತಿ*


ಬಾಳ ಬೆಳಗಲು ಬಂದವಳೆ

ಭವ್ಯ ಭವಿಷ್ಯದಿ ನಿಂದವಳೆ

ಕಂಗಳಲಿ ಪ್ರೀತಿ ತಂದವಳೆ

ಸತಿಯೇ ಸಂಗಾತಿಯಾದವಳೆ

ಪತಿಯೇ ಪರದೈವೆಂದವಳೆ 

ಹಿರಿ-ಕಿರಿಯರೊಡನೆ ಬಾಳಿದವಳೆ


ಹೌದು ಗೆಳತಿ ನನ್ನ ಯೋಗಕ್ಷೇಮ ನೀನಾದೆ

ನಿನ್ನ ತವರ ಮರೆತು ಬಾಳಿನ ನೌಕೆ ನೀನಾದೆ

ಸವಿ ಮಾತಲಿ ಮನಗೆದ್ದು ಎಲ್ಲರಲಿ ನೀನಾದೆ

ನೆರೆ ಮನೆಯ ಸುಖ ದುಃಖಕೆ ಸಹಕಾರ ನೀನಾದೆ

ಮಕ್ಕಳ ಏಳಿಗೆಗಾಗಿ ಮಿಡಿದ ತುಡಿತ ನೀನಾದೆ

ನನ್ನ ಬಂಧು ಬಾಂಧವರಿಗೆ ಎಲ್ಲಾ ನೀನಾದೆ


ಬಡತನದಲಿ ನೀತಿಯ ಬಿಡದೆ ನೀ ಪಾಲಿಸಿದೆ

ಮಕ್ಕಳು ಸರಿದಾರಿಗೆ ಸಾಗಲು ನೀ ನಿಯಮ ಪಾಲಿಸಿದೆ

ನಮ್ಮ ತಂದೆ ತಾಯಿಯರ ಮಾತನು ನೀ ಪಾಲಿಸಿದೆ

ನಮ್ಮ ಅಕ್ಕ ತಂಗಿಯರ ಆಣತಿಯನು ನೀ ಪಾಲಿಸಿದೆ

ನಮ್ಮ ಅಣ್ಣ ತಮ್ಮಂದಿರ ಆಜ್ಞೆಯನು ನೀ ಪಾಲಿಸಿದೆ

ನನ್ನ ಸತಿಯಾಗಿ ಬಂದು ಸತಿಧರ್ಮವ ನೀ ಪಾಲಿಸಿದೆ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ ಗೋಷ್ಠಿ* 

ದಿನಾಂಕ-೩೧.೧೦.೨೦೨೦,ಶನಿವಾರ

ನಿರ್ವಹಣೆ- *ಶ್ರೀ ಹೆಚ್ ರಾಠೋಡ್* 

ವಿಷಯ- *ಸತಿಧರ್ಮ,ಪ್ರಕಾರ- ಅಂತ್ಯಪ್ರಾಸ* 

ಆರು ಸಾಲಿನ ಮೂರು ಅಥವಾ ನಾಲ್ಕು ಪದ್ಯ ಬರೆಯಿರಿ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 

🙏 *ಮಧುನಾಯ್ಕ.ಲಂಬಾಣಿ* 

      *ಬ.ಬ.ರಾ.ಘ.ಹೂ.ಹಡಗಲಿ*

Friday, October 30, 2020

ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೩೧/೧೦/೨೦೨೦

 ಕನ್ನಡಿಗರ ಹೊಣೆ ಕವನ



೯ನೇ ಕನ್ನಡ ಜನಪದ ಕಲೆಗಳ ವೈಭವ ಗದ್ಯಭಾಗದ ವೀಡಿಯೊ ಭಾಗ - ೨ ೩೦/೧೦/೨೦೨೦

 


ಸ್ವರಚಿತ ಕವನ ೩೦/೧೦/೨೦೨೦

 ಕವನದ ಶೀರ್ಷಿಕೆ

*ನೆರವಿನ ಭರವಸೆ*

(ಭೋಗ ಷಟ್ಪದಿ)


ನೆರೆಯು ಬಂದು ನರನ ಜನ್ಮ

ನೆರವಿನ ಭರವಸೆಗೆ ಕಾದು

ಕರವ ಮುಗಿದು ಬೇಡಿದರು ಸಹಾಯ ಮಾಡಲು

ಬರುವುದಿಲ್ಲ ಯಾರು ಮುಂದೆ 

ಬರಿದೆ ಆಸೆ ಆಮಿಷಗಳ

ತೋರಿ ತಮ್ಮ ಬಯಕೆಗಳನು ತೀರಿಸಲು ಸದಾ


ಅವಣಿಸುವರು ನೋಡಿ ಇವರು

ಯಾವ ತರದಿ ಜನರ ನಡುವೆ

ಸೇವೆ ಮಾಡಿ ದುಡ್ಡು ಹೊಡೆವ ಸಂಚು ರೂಪಿಸಿ

ದೈವದವರು ಮೆಚ್ಚುವಂತೆ

ಭಾವದಲ್ಲಿ ಭಕ್ತಿ ಬಿಟ್ಟು

ಸೇವೆಯ ಹೆಸರಿನಲಿ ವಂಚಿಸುವದನು ಬಿಡು ನೀ 


ಮನೆ-ಮಠವನು ಕಳೆದು ಕೊಂಡ

ಜನರು ಬೀದಿ ಪಾಲು ಆದ

ಮನುಜರಿಗೆ ಮೊದಲು ನೆಲೆ ಸಿಗಲೆಂದು ಹರಸುತ

ಧನ ಕನಕವ ಬೇಡರು ಕೆಲ

ದಿನದವರೆಗೆ ಊಟ ತಿಂಡಿ

ಇನ್ನು ವಸತಿ ಮಾತ್ರ ಮಾಡಿ ನೆನೆಯುವರು ಸದಾ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



*ಬರಹಗಾರರ ಬಳಗ ರಾಜ್ಯ ಘಟಕ* 

          *ಹೂವಿನಹಡಗಲಿ*

                🌸🌸

         *ಗೋಷ್ಠಿ-೨೦೫*

 *ದಿನಾಂಕ-೩೦.೧೦.೨೦೨೦* 

 *ವಾರ-ಶುಕ್ರವಾರ* 

 *ವಿಷಯ-ನೆರವು* 

 *ಪ್ರಕಾರ-ಆದಿಪ್ರಾಸ*

 *ನಿರ್ವಹಣೆ-ಶ್ರೀಜ್ಯೋತಿನಾಯ್ಕ* 

               🌸🌸

ಕವಿತೆ ೧೮ ಸಾಲಿರಲಿ


*ಆದಿಪ್ರಾಸ*


ಆರು ಸಾಲಿನ ಮೂರು ಪದ್ಯ ಬರೆಯಬೇಕು


ಚರಣದ(ಸಾಲಿನ) ಎರಡನೇ ಅಕ್ಷರವು ಒಂದೇ ಆಗಿರಬೇಕು


 *ಉದಾಹರಣೆ*


ಸ ತ್ತ ವರ ಕಥೆಯಲ್ಲ ಜನನದಿ

ಕು ತ್ತ ದಲ್ಲಿ ಕುದಿಕುದಿದು ಕರ್ಮದಿ

ಕ ತ್ತ ಲೆಯ ಸೀಮೆಗರ ಸಿಲುಕುವರು 


ಇಲ್ಲಿ ಸಾಲಿನ ಎರಡನೇ ಅಕ್ಷರ


ತ್ತ...ಇದರಹಾಗೆಯೇ ಆರು ಸಾಲಿನಲ್ಲಿ ಬರಬೇಕು ವಿಷಯ ಸಂಪೂರ್ಣವಾಗಿ

ಮಂಡಿತವಾಗಬೇಕು

ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ

ಗೋಷ್ಠಿಯ ಮದ್ಯೆ ಬೇರೆ ಏನನ್ನೂ ಹಾಕಬಾರದು


 *ಮಧುನಾಯ್ಕ.ಎಲ್*

 *ಬ.ಬ.ರಾ.ಘ.ಹೂ.ಹಡಗಲಿ*






ಒಂದು ಕಪ್ ಮೊಸರೂ, ಅಪ್ಪನ ಬಿಸಿಯುಸಿರೂ. ಕಥೆ

 *ತುಂಬಾ ಮನಮುಟ್ಟುವ ಕಥೆ ದಯವಿಟ್ಟು ಸಂಪೂರ್ಣ ಓದಿ.*


*ಒಂದು ಕಪ್ ಮೊಸರೂ,

ಅಪ್ಪನ ಬಿಸಿಯುಸಿರೂ. *


ಬೆಂಗಳೂರಿನ ಯಶವಂತಪುರದಿಂದ ಹಾಸನಕ್ಕೆ ಅಥವಾ ತುಮಕೂರಿಗೆ ಹೋಗುವ ದಾರಿಯಲ್ಲೇ ಗೊರಗುಂಟೆಪಾಳ್ಯವಿದೆ. ಅಲ್ಲಿಂದ ಹೆಬ್ಬಾಳಕ್ಕೆ ಹೋಗುವ ರಸ್ತೆಯಲ್ಲಿ ಅರ್ಧ ಕಿಲೋ ಮೀಟರ್ ಹೋದರೆ,ಸ್ಟ್ಯಾಂಡರ್ಡ್ ಮೆಕ್ಯಾನಿಕಲ್ ವರ್ಕ್ಸ್ ಫ್ಯಾಕ್ಟರಿ ಸಿಗುತ್ತದೆ. ಹೆಚ್ಚಿನ ಸದ್ದಾಗದಂತೆ ಕಾರ್ಯ ನಿರ್ವಹಿಸುವ ವಿದೇಶಿ ನಿರ್ಮಿತ ಯಂತ್ರಗಳು ಅಲ್ಲಿವೆ. ಫ್ಯಾನ್, ರೆಫ್ರಿಜರೇಟರ್, ಟಿ.ವಿಗಳಿಗೆ ಅಗತ್ಯವಾಗಿ ಬೇಕಾಗುವ ಬಿಡಿಭಾಗಗಳನ್ನು ಅಲ್ಲಿ ಉತ್ಪಾದಿಸಲಾಗುತ್ತದೆ. ಎಲ್ಲಾ ಪ್ರಮುಖ ಕಂಪನಿಗಳಿಗೂ ಬಿಡಿ ಭಾಗಗಳನ್ನು ಸಪ್ಲೈ ಮಾಡುತ್ತಿರುವುದರಿಂದ ಸ್ಟ್ಯಾoಡರ್ಡ್ ಮೆಕ್ಯಾನಿಕಲ್‌ಸ್‌ ಫ್ಯಾಕ್ಟರಿಗೆ ಒಳ್ಳೆಯ ಹೆಸರೂ ಇದೆ. 


ಈ ಫ್ಯಾಕ್ಟರಿ ಮಾಲೀಕನೇ ರಂಗಸ್ವಾಮಿ. ಈತ, ಅರಸೀಕೆರೆ ಸಮೀಪದ ಹಳ್ಳಿಯವನು. ಸಿದ್ದಗಂಗಾ ಮಠದಲ್ಲಿ ಹೈಸ್ಕೂಲು, ತುಮಕೂರಿನಲ್ಲಿ ಐಟಿಐ ಓದಿದವನು ಸೀದಾ ಬಂದಿದ್ದು ಪೀಣ್ಯಕ್ಕೆ. ಹೆಲ್ಪರ್ ಆಗಿ ಒಂದು ಫ್ಯಾಕ್ಟರಿ ಸೇರಿಕೊಂಡವನು ಐದು ವರ್ಷದಲ್ಲಿ ಎಲ್ಲ ಬಗೆಯ ಕೆಲಸ ಕಲಿತ. ನಂತರ ಮಾರ್ಕೆಟಿಂಗ್ ಮ್ಯಾನೇಜರ್ ಆದ. ಮಾರಾಟಕ್ಕೆ ಸಂಬಂಧಿಸಿದ ಆಳ-ಅಗಲಗಳು ರಂಗಸ್ವಾಮಿಗೆ ಪರಿಚಯವಾದದ್ದೇ ಆಗ. ಹತ್ತಾರು ಕಂಪನಿಗಳ ಮುಖ್ಯಸ್ಥರ ಒಡನಾಟ, ವಿಶ್ವಾಸ, ಅಲ್ಲಿನ ವಹಿವಾಟುಗಳಿಗೆ ಇರುವ ಬೇಡಿಕೆಯನ್ನು ಗಮನಿಸಿದ ನಂತರ, ಹೇಗಿದ್ರೂ ಎಲ್ಲ ಕೆಲಸದ ಬಗ್ಗೆ ಗೊತ್ತಿದೆ. ಒಂದೆರಡು ಕಂಪನಿಗಳಿಂದ ಕಾಂಟ್ರಾಕ್ಟ್ ತಗೊಂಡು ಸ್ಪೇರ್ ಪಾರ್ಟ್ಸ್ ಉತ್ಪಾಾದನೆಯ ಸ್ವಂತ ಫ್ಯಾಕ್ಟರಿ ಶುರು ಮಾಡಿದ್ರೆ ಹೇಗೆ ಎಂಬ ಯೋಚನೆಯೂ ಅವನಿಗೆ ಬಂತು. 


ರಂಗಸ್ವಾಮಿ ತಡಮಾಡಲಿಲ್ಲ. ಒಂದು ಪುಟ್ಟ ಶೆಡ್‌ನಲ್ಲಿ ಫ್ಯಾಕ್ಟರಿಯನ್ನು ಆರಂಭಿಸಿಯೇಬಿಟ್ಟ. ಯೌವನದ ಹುಮ್ಮಸ್ಸು ಹಾಗೂ ಗೆಲ್ಲಬೇಕೆಂಬ ಹಠದಿಂದ ಹಗಲಿರುಳೂ ದುಡಿದ. ಪರಿಣಾಮ, ಕೆಲವೇ ದಿನಗಳಲ್ಲಿ ರಂಗಸ್ವಾಮಿಯ ಬ್ಯಾಂಕ್ ಬ್ಯಾಲೆನ್ಸ್ ದುಪ್ಪಟ್ಟಾಯಿತು. ಅದುವರೆಗೂ ಸೆಕೆಂಡ್‌ ಹ್ಯಾಂಡ್ ಹೀರೋ ಹೋಂಡಾದಲ್ಲಿ ಓಡಾಡುತ್ತಿದ್ದವನು, ಒಟ್ಟಿಗೇ ಎರಡು ಕಾರ್ ಖರೀದಿಸುವಷ್ಟು ಶ್ರೀಮಂತನಾದ. 25 ಮಂದಿಗೆ ಕೆಲಸ ಕೊಟ್ಟ. ಫ್ಯಾಕ್ಟರಿಗೆ ಸ್ವಂತ ಬಿಲ್ಡಿಂಗ್ ಕಟ್ಟಿಸಿದ. ವಾಸಕ್ಕೆ, ಯಶವಂತಪುರದಲ್ಲೇ ಒಂದು ಮನೆ ಖರೀದಿಸಿದ. ಇಷ್ಟೆಲ್ಲ ಆದಮೇಲೆ, ರಂಗಸ್ವಾಮಿಯ ಯಶೋ ಗಾಥೆ ನೂರಾರು ಮಂದಿಯನ್ನು ತಲುಪಿತು. ಹೇಗಿದ್ದವನು ಹೇಗಾಗಿಬಿಟ್ಟ ಅಲ್ವ ಎಂದು ಎಲ್ಲರೂ ಬೆರಗಾಗುವ ವೇಳೆಗೇ, ಹಳೇ ಪರಿಚಯದ ಹುಡುಗಿಯೊಂದಿಗೆ ಮದುವೆಯಾದ ರಂಗಸ್ವಾಮಿ, ವರ್ಷದ ನಂತರ ಗಂಡು ಮಗುವಿನ ತಂದೆಯೂ ಆದ. 


ಕೈ ತುಂಬಾ ವರಮಾನ ಕೊಡುವ ಕೆಲಸ, ಮನ ಮೆಚ್ಚಿದ ಹೆಂಡತಿ, ಖುಷಿ ಹೆಚ್ಚಿಸುವ ಮಗ, ಸಮಾಜದಲ್ಲಿ ವಿಶೇಷ ಸ್ಥಾನಮಾನ, ಯಾರಿಗೂ ಸಾಲ ಕೊಡಬೇಕಿಲ್ಲ ಎಂಬ ನಿರಾಳ ಭಾವ... ಲೈಫ್ ಈಸ್ ಬ್ಯೂಟಿಫುಲ್ ಎನ್ನಲು ಇಷ್ಟು ಸಾಕಲ್ಲವೇ? ರಂಗಸ್ವಾಮಿಯೂ ಇಂಥದೇ ಸಂಭ್ರಮದಲ್ಲಿದ್ದ. ಆಗಲೇ, ಯಾರೂ ನಿರೀಕ್ಷಿಸದ ಆಘಾತವೊಂದು ಅವನನ್ನು ಅಪ್ಪಳಿಸಿತು. ಅದೊಂದು ದಿನ ಮಾರ್ಕೆಟ್‌ಗೆ ಹೋಗಿ ವಾಪಸಾಗುತ್ತಿದ್ದ ರಂಗಸ್ವಾಮಿಯ ಪತ್ನಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ... 

*** 

‘ಈಗಾಗ್ಲೇ ನನಗೂ ನಲವತ್ತೈದು ತುಂಬಿದೆ. ಮಗ 7ನೇ ಕ್ಲಾಸ್‌ಗೆ ಬಂದಿದಾನೆ. ಹೀಗಿರುವಾಗ ಇನ್ನೊಂದು ಮದುವೆಯಾಗಿ ಸಾಧಿಸೋದೇನಿದೆ? ಸೆಕೆಂಡ್ ಮ್ಯಾರೇಜ್ ಮಾಡ್ಕೊಂಡೆ ಅಂತಿಟ್ಕೊಳ್ಳಿ, ಹೊಸದಾಗಿ ಬಂದ ಹೆಂಡತಿ ನನ್ನ ಮಗನನ್ನು ತಿರಸ್ಕಾರದಿಂದ ನೋಡಿಬಿಟ್ರೆ, ಅಥವಾ ಹೆಂಡತಿಯ ಮೇಲಿನ ಮೋಹದಿಂದ ನಾನೇ ವಿಲನ್ ಥರಾ ವರ್ತಿಸಿಬಿಟ್ರೆ? ಬೇಡ ಬೇಡ. ಇಂಥ ಸಂದರ್ಭಗಳು ಜೊತೆಯಾಗೋದೇ ಬೇಡ. ನನಗಿನ್ನು ಮಗನೇ ಸರ್ವಸ್ವ . ಹೆಂಡತಿಯ ನೆನಪನ್ನು ಜೊತೆಗಿಟ್ಟುಕೊಂಡೇ ಇವನನ್ನು ಚೆನ್ನಾಗಿ ಓದಿಸ್ತೇನೆ...’. ಎರಡನೇ ಮದುವೆ ಮಾಡಿಕೊಳ್ಳಪ್ಪಾ ಎಂದು ಒತ್ತಾಯಿಸಲು ಬಂದ ಬಂಧುಗಳು ಹಾಗೂ ಹಿತೈಷಿಗಳಿಗೆ ರಂಗಸ್ವಾಮಿ ಹೇಳಿದ ಖಡಕ್ ಮಾತುಗಳಿವು. 


ರಂಗಸ್ವಾಮಿ ಮಾತಿಗೆ ತಪ್ಪಲಿಲ್ಲ. ಅವನು ಮಗನನ್ನು ಕಣ್ರೆಪ್ಪೆಯಷ್ಟು ಜೋಪಾನವಾಗಿ ನೋಡಿಕೊಂಡ. ಒಳ್ಳೆಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಿಸಿದ. ನನಗೆ ನೀನೇ ಪ್ರಪಂಚ. ನೀನು ಜೊತೆಗಿಲ್ಲದೆ ನಾನು ಬದುಕಲಾರೆ ಎಂಬುದನ್ನು ಪರೋಕ್ಷವಾಗಿ ಮನದಟ್ಟು ಮಾಡಿಕೊಟ್ಟ.ಮುಂದೊಂದು ದಿನ- ‘ನನ್ನ ಕ್ಲಾಸ್ ಮೇಟ್ ಹುಡುಗೀನ ಲವ್ ಮಾಡಿದೀನಪ್ಪಾ. ಅವಳನ್ನೇ ಮದುವೆ ಆಗ್ತೀನಿ. ಅವರ ಮನೇಲಿ ಒಪ್ಪಿದಾರೆ. ನಿನ್ನ ಒಪ್ಪಿಗೆ ಬೇಕಪ್ಪಾ...’ ವಿಧೇಯನಾಗಿಯೇ ಹೇಳಿದ್ದ ಮಗ. ರಂಗಸ್ವಾಮಿ ಅದನ್ನೂ ಆಕ್ಷೇಪಿಸಲಿಲ್ಲ. ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟ. ಇದಾಗಿ ವರ್ಷ ಕಳೆಯುತ್ತಲೇ ಫ್ಯಾಕ್ಟರಿ ವ್ಯವಹಾರವನ್ನೆಲ್ಲ ಮಗನಿಗೆ ವಹಿಸಿಕೊಟ್ಟು, ‘ನನಗೆ ವಯಸ್ಸಾಯಿತು ಕಣಪ್ಪಾ. ರೆಸ್ಟ್ ಬೇಕು ಅನ್ನಿಸ್ತಿದೆ. ಇನ್ಮುಂದೆ ನಾನು ಮನೇಲಿರ್ತೀನಿ. ಶ್ರದ್ಧೆ ಮತ್ತು ಎಚ್ಚರದಿಂದ ಫ್ಯಾಕ್ಟರಿ ನಡೆಸ್ಕೊಂಡು ಹೋಗು’ ಎಂದಿದ್ದ. ಮರುದಿನವೇ ವಕೀಲರ ಜೊತೆಗೂ ಮಾತಾಡಿ ಫ್ಯಾಕ್ಟರಿಯನ್ನು ಮಗನ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಬಿಟ್ಟ. 


ಚಿತ್ರಾನ್ನ-ಕಾಯಿಚಟ್ನಿ, ದೋಸೆ-ಜಾಮೂನ್, ಬಿಸಿಬೇಳೆಬಾತ್- ಚಿಪ್ಸ್, ವಾಂಗೀಬಾತ್-ಆಲೂಬೋಂಡಾ, ಪಲಾವ್-ಗಟ್ಟಿಮೊಸರು- ಹೀಗೆ ಪ್ರತಿಯೊಂದು ತಿಂಡಿಗೂ ಒಂದು ಸೈಡ್ ಐಟಂ ಇರಬೇಕು ಎಂಬುದು ರಂಗಸ್ವಾಮಿಯ ಆಸೆಯಾಗಿತ್ತು. ಅದರಲ್ಲೂ ಪಲಾವ್-ಮೊಸರು ಅವನ ಮೆಚ್ಚಿನ ತಿಂಡಿಯಾಗಿತ್ತು. ನಾವು ಎಷ್ಟು ದಿನ ಇರ್ತೀವೋ ಗೊತ್ತಿಲ್ಲ. ಇರುವಷ್ಟು ದಿನ ಚೆನ್ನಾಗಿ ತಿಂದುಂಡು ಬಾಳಬೇಕು ಎಂಬುದು ಅವನ ವಾದವಾಗಿತ್ತು. 


ಅವತ್ತು ರಂಗಸ್ವಾಮಿಯ ಮಗ ಜಾಗಿಂಗ್ ಮುಗಿಸಿ ಬಾಗಿಲ ಬಳಿ ಬಂದಾಗಲೇ ಪಲಾವ್‌ನ ಘಮ ಮೂಗಿಗೆ ಅಡರಿತು. ಓಹ್, ಇವತ್ತು ಅಪ್ಪನ ಫೇವರಿಟ್ ತಿಂಡಿ ಎಂದುಕೊಂಡು ಅವನು ಒಳಬರುವುದಕ್ಕೂ, ಡೈನಿಂಗ್ ಟೇಬಲ್ ಮುಂದೆ ತಿಂಡಿಗೆ ಕುಳಿತಿದ್ದ ರಂಗಸ್ವಾಮಿ- ಸ್ವಲ್ಪ ಮೊಸರು ಇದ್ರೆ ಕೊಡಮ್ಮ. ಪಲಾವ್ ಜೊತೆ ಮೊಸರು ಕೊಡೋದನ್ನೇ ಮರೆತಿದ್ದೀಯಲ್ಲ.. ಅನ್ನುವುದಕ್ಕೂ ಸರಿಹೋಯಿತು. ರಂಗಸ್ವಾಮಿಯ ಸೊಸೆ ಸರ್ರನೆ ಹೊರಬಂದವಳೇ- ‘ಇಲ್ಲ, ಮೊಸರಿಲ್ಲ; ಮೊಸರು ಖಾಲಿಯಾಗಿದೆ’ ಅಂದು ಭರ್ರನೆ ಹೋಗಿಬಿಟ್ಟಳು. ಹೌದಾ? ಹೋಗ್ಲಿ ಬಿಡಮ್ಮ ಎನ್ನುತ್ತಾ ರಂಗಸ್ವಾಮಿ ತಿಂಡಿಯ ಶಾಸ್ತ್ರ ಮುಗಿಸಿದ. 


ದಿನವೂ ಹೆಂಡತಿಯೊಂದಿಗೆ ತಿಂಡಿ ತಿಂದು ನಂತರ ಫ್ಯಾಕ್ಟರಿಗೆ ಹೋಗುವುದು ರಂಗಸ್ವಾಮಿಯ ಮಗನ ದಿನಚರಿಯಾಗಿತ್ತು. ಅವತ್ತೂ ಹಾಗೆಯೇ ತಿಂಡಿಗೆ ಕೂತವನು ಅಸಹನೆ ಮತ್ತು ಗೊಂದಲದಿಂದ ಹೆಂಡತಿಯನ್ನು ನೋಡಿದ. ಕಾರಣ; ಹೆಂಡತಿ ತಂದಿಟ್ಟ ತಿಂಡಿಯೊಂದಿಗೆ ಅರ್ಧ ಲೀಟರಿನಷ್ಟು ಗಟ್ಟಿ ಮೊಸರಿತ್ತು. ''ಅಪ್ಪ ಕೇಳಿದಾಗ ಮೊಸರೇ ಇಲ್ಲ ಅಂದೆಯಲ್ಲ? ಇದು ಎಲ್ಲಿತ್ತು? ಯಾಕೆ ಸುಳ್ಳು ಹೇಳ್ದೆ?'' ಎಂದು ಪ್ರಶ್ನಿಸಿದ. ಆಕೆ- ‘ಗಟ್ಟಿಯಾಗಿ ಮಾತಾಡಬೇಡಿ. ಸೈಲೆಂಟಾಗಿ ತಿಂಡಿ ತಿನ್ನಿ. ನಿಮ್ಮಪ್ಪ ಕೇಳ್ತಾರೆ ಅಂತ ಅವರು ಕೇಳಿದ್ದನ್ನೆಲ್ಲ ಕೊಡೋಕಾಗುತ್ತಾ? ಬಾಯಿ ಚಪಲ ಯಾವತ್ತೂ ಒಳ್ಳೆಯದಲ್ಲ. ಇವತ್ತು ಮೊಸರು ಕೇಳ್ತಾರೆ. ನಾಳೆ ತುಪ್ಪಾನೇ ಬೇಕು ಅಂತಾರೆ. ಕೇಳಿದ್ದನ್ನೆಲ್ಲ ರೆಡಿ ಮಾಡಿ ಇಟ್ಕೊoಡಿರೋಕೆ ಆಗುತ್ತಾ?’ ಅಂದುಬಿಟ್ಟಳು. ತಿರುಗಿ ಮಾತಾಡಿದರೆ ಜಗಳ ಆಗುತ್ತೆ. ಜಗಳ ಆಗಿಬಿಟ್ರೆ ರಾತ್ರಿ ಅನ್ನೋದು ನರಕ ಆಗುತ್ತೆ. ಉಹೂಂ, ಅಂಥ ಪರಿಸ್ಥಿತಿ ಜೊತೆಯಾಗಬಾರದು ಎಂದು ಯೋಚಿಸಿದ ರಂಗಸ್ವಾಮಿಯ ಮಗ, ಮೌನವಾಗಿ ಫ್ಯಾಕ್ಟರಿಗೆ ಹೋಗಿಬಿಟ್ಟ. ರಂಗಸ್ವಾಮಿ, ಮನೆಯ ಹೊರಗಿನ ಕೈ ತೋಟದಲ್ಲಿ ಇದ್ದುದರಿಂದ ಗಂಡ-ಹೆಂಡಿರ ದುಸುಮುಸು ಅವನಿಗೆ ಗೊತ್ತಾಾಗಲೇ ಇಲ್ಲ. 


ಅವತ್ತು ನಾಲ್ಕೈದು ಕಂಪನಿಗಳ ಮುಖಂಡರೊಂದಿಗೆ ಹೋಟೆಲೊಂದರಲ್ಲಿ ವ್ಯವಹಾರ ಸಂಬಂಧಿ ಮೀಟಿಂಗ್ ನಡೆಸಬೇಕಾಗಿ ಬಂತು. ಊಟದ ಸಮಯದಲ್ಲಿ ಅವರೆಲ್ಲಾ- ''ಊಟ ಬೇಡ, ದೋಸೆ ವಡಾ ಥರದ ಐಟಮ್ಸ್ ತಗೊಳ್ಳೋಣ. ಕಡೆಗೆ ಮೊಸರನ್ನ ಇರಲಿ''ಎಂದರು. ಮೊಸರನ್ನದಲ್ಲಿದ್ದ ಕೆನೆಮೊಸರು, ದಾಳಿಂಬೆ, ಗೋಡಂಬಿಯ ಚೂರುಗಳನ್ನು ಕಂಡಾಗ ಛಕ್ಕನೆ, ಮೊಸರು ಇದ್ಯಾ ಎಂದು ಕೇಳಿದ ಅಪ್ಪನ ಮುಖವೇ ಎದುರು ಕಂಡಂತಾಗಿ ರಂಗಸ್ವಾಮಿಯ ಮಗ ತತ್ತರಿಸಿಹೋದ. ತನಗಾಗಿ ಏನೆಲ್ಲಾ ತ್ಯಾಗ ಮಾಡಿದ ತಂದೆಗೆ ಒಂದು ಕಪ್ ಗಟ್ಟಿ ಮೊಸರು ಕೊಡಲು ಆಗಲಿಲ್ಲವಲ್ಲ ಎಂಬ ಚಿಂತೆ ಅವನನ್ನು ಕ್ಷಣಕ್ಷಣಕ್ಕೂ ಕಾಡತೊಡಗಿತು. 


ಉಹೂಂ, ಅವನ ಹೆಂಡತಿಗೆ ಇಂಥ ಯಾವ ‘ಗಿಲ್ಟ್ ಕೂಡ ಇರಲಿಲ್ಲ. ಪ್ರತಿಯೊಂದು ತಿಂಡಿಗೂ ಮತ್ತೊಂದು ಸೈಡ್ ಐಟಂ ಹಾಕಿಕೊಡೋಕೆ ಇದೇನು ಹೋಟ್ಲಾ? ಇಡೀ ದಿನ ಮನೇಲಿ ಇರೋರು ಕೊಟ್ಟಿದ್ದನ್ನು ತಿಂದುಕೊಂಡು ತೆಪ್ಪಗಿರಬೇಕು ಅಲ್ವ ಎಂದೇ ಅವಳು ವಾದಿಸಿದಳು. ಬೆಡ್‌ರೂಂ, ಜಗಳದ ತಾಣವಾದರೆ ಇಡೀ ದಿನದ ಕೆಲಸ ಕೆಡುತ್ತೆ ಎಂದು ಗೊತ್ತಿದ್ದುದರಿಂದ ರಂಗಸ್ವಾಮಿಯ ಮಗ ಹೆಂಡತಿಗೆ ಎದುರು ಮಾತಾಡಲು ಹೋಗಲಿಲ್ಲ. 


ಹೀಗೇ ವಾರ ಕಳೆಯಿತು. ಅವತ್ತೊಂದು ದಿನ- ‘ಯಾವುದೋ ಕೋರ್ಟ್ ಕೇಸ್ ಬಂದಿದೆಯಪ್ಪಾ. ನನಗೆ ಸ್ವಲ್ಪ ಕನ್‌ಫ್ಯೂಶನ್ ಇದೆ. ನೀನು ಜೊತೆಗಿದ್ರೆ ದೊಡ್ಡ ಧೈರ್ಯ. ಮಧ್ಯಾಹ್ನ ಬೇಗ ಬಂದ್ಬಿಡೋಣ...’ ಎಂದೆಲ್ಲ ಹೇಳಿ ಆ ಮಗರಾಯ ತಂದೆಯೊಂದಿಗೆ ಕೋರ್ಟ್‌ಗೆ ಬಂದ. ಅಲ್ಲಿ ನೋಡಿದರೆ- ಫ್ಯಾಕ್ಟರಿ, ಮನೆ ಮತ್ತು ಇಡೀ ಆಸ್ತಿಯನ್ನು ರಂಗಸ್ವಾಮಿಯ ಹೆಸರಿಗೆ ಮರು ವರ್ಗಾಯಿಸಿದ ದಾಖಲೆ ಪತ್ರಗಳಿದ್ದವು. ಅವಕ್ಕೆಲ್ಲಾ ತುಂಬಾ ಒತ್ತಾಯದಿಂದಲೇ ಸಹಿ ಹಾಕಿಸಿದ ಮಗ- ‘ಅಪ್ಪಾ, ನೀನು ಇನ್ನೊಂದು ಮದುವೆ ಮಾಡ್ಕೊಳಪ್ಪಾ. ಜನ ಏನಾದ್ರೂ ಅಂದುಕೊಳ್ಳಲಿ. ಅದರ ಬಗ್ಗೆ ಚಿಂತೆ ಮಾಡ್ಬೇಡ. ನಿನ್ನ ಜೊತೆಗೆ ನಾನಿರ್ತೀನಿ. ಈ ವಿಷಯದಲ್ಲಿ ನಿಂಗೆ ಸಪೋರ್ಟ್ ಮಾಡ್ತೀನಿ. ದಯವಿಟ್ಟು ಇನ್ನೊಂದು ಮದುವೆ ಮಾಡ್ಕೊ..’ ಅಂದ. 


ಈ ಮಾತುಗಳಿಂದ ರಂಗಸ್ವಾಮಿಗೆ ಅಚ್ಚರಿಯಾಯಿತು. ‘ಯಾಕಪ್ಪಾ? ಯಾಕೆ ಹೀಗೆ ಹೇಳ್ತಿದೀಯ? ನಿನಗೆ ಏನಾದ್ರೂ ಕೊರತೆ ಆಯ್ತಾ? ನಾನು ನಿನಗೆ ಹೊರೆ ಅನ್ನಿಸಿಬಿಟ್ನಾ? ಏನಾದ್ರೂ ತಪ್ಪು ಮಾಡಿದೀನೇನೋ ನಾನು? ಎಲ್ಲವನ್ನೂ ನನ್ನ ಹೆಸರಿಗೇ ಮಾಡಿಸಿದೀಯಲ್ಲ ಯಾಕೋ.., 


ಈ ಮಾತುಗಳನ್ನು ಅಷ್ಟಕ್ಕೇ ತಡೆದ ರಂಗಸ್ವಾಮಿಯ ಮಗ ಹೇಳಿದ: ಛೆ,ಛೆ ಖಂಡಿತ ನಿನ್ನಿಂದ ಯಾವುದೇ ತಪ್ಪಾಗಿಲ್ಲಪ್ಪಾ. ಪ್ರತಿ ಹೆಂಗಸು, ತನ್ನ ಗಂಡ ಮತ್ತು ಮಕ್ಕಳ ಬಗ್ಗೆ ಮಾತ್ರ ವಿಶೇಷ ಕಾಳಜಿ ವಹಿಸ್ತಾಳೆ. ಉಳಿದವರನ್ನು ನಿರ್ಲಕ್ಷ್ಯದಿಂದ ನೋಡೋದು ಅವಳಿಗೆ ಅಭ್ಯಾಸ ಆಗಿಬಿಟ್ಟಿರುತ್ತೆ. ಅಂಥದೊಂದು ನಿರ್ಲಕ್ಷ್ಯದ ಅನುಭವ ನಿನಗೆ ಎಂದೆಂದೂ ಆಗದಿರಲಿ ಎಂಬ ಸದಾಶಯದಿಂದಲೇಇನ್ನೊಂದು ಮದುವೆ ಆಗು ಅಂತ ಒತ್ತಾಯಿಸ್ತಾ ಇದೀನಿ. ನಾಳೆಯಿಂದ ನಾನು ಹೆಂಡತಿಯೊಂದಿಗೆ ಬಾಡಿಗೆ ಮನೆಗೆ ಹೋಗ್ತೇನೆ. ಫ್ಯಾಕ್ಟರಿಗೆ ನೀನು ಎಂ.ಡಿ., ನೀನೇ ಸಿ.ಇ.ಒ. ನಾನು ಒಬ್ಬ ನೌಕರನಾಗಿ ಕೆಲಸ ಮಾಡ್ತೀನಿ. ನಮ್ಮಲ್ಲಿ ಎಂಜಿನಿಯರ್‌ಗಳಿಗೆ ಕೊಡ್ತೀಯಲ್ಲ; ಅಷ್ಟೇ ಸಂಬಳವನ್ನು ನನಗೂ ಕೊಡು. ಒಂದು ಬಟ್ಟಲಿನಷ್ಟು ಮೊಸರು ಸಂಪಾದಿಸಲು ಮನುಷ್ಯನಿಗೆ ಎಷ್ಟು ಕಷ್ಟ ಇದೆ ಎಂಬುದನ್ನು ನನ್ನ ಹೆಂಡತಿಗೆ ಪರಿಚಯ ಮಾಡಿಕೊಡಬೇಕು. ಅದರ ಜೊತೆಗೆ, ವೃದ್ಧಾಪ್ಯದಲ್ಲಿ ತುಂಬಾ ಮುತುವರ್ಜಿಯಿಂದ ನೋಡಿಕೊಳ್ಳುವ ಒಬ್ಬರು ನಿನ್ನೊಂದಿಗೆ ಇರುವಂತೆ ವ್ಯವಸ್ಥೆ ಮಾಡಬೇಕು. ಫ್ಯಾಕ್ಟರಿಯನ್ನು ನಿನ್ನ ಹೆಸರಿಗೆ ವರ್ಗಾಯಿಸಿದ್ದಕ್ಕೆ, ನಾಳೆಯಿಂದ ಒಬ್ಬ ಆರ್ಡಿನರಿ ನೌಕರನಾಗಿ ಕೆಲಸಕ್ಕೆ ಬರ್ತಿರೋದಕ್ಕೆ ಬೇರೆ ಯಾವ ಕಾರಣವೂ ಇಲ್ಲ. ಒಳ್ಳೇದಾಗ್ಲಿ ಅಂತ ಆಶೀರ್ವದಿಸಪ್ಪ...’ 


ರಂಗಸ್ವಾಮಿ ಏನೂ ಮಾತಾಡಲಿಲ್ಲ. ನಡೆದಿರುವುದೇನೆಂದು ತನಗೆ ಅರ್ಥವಾಗಿದೆ ಎಂಬಂತೆ ಮಗನನ್ನು ಮೆಚ್ಚುಗೆಯಿಂದ ನೋಡಿದ. 

ಅವನನ್ನು ಬಾಚಿ ತಬ್ಬಿಕೊಂಡು ಹಣೆಗೆ ಮುತ್ತಿಟ್ಟ........


ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಸಾಕು,

ಅವರೇ ಅವರ ಜೀವನವನ್ನ ಸುಂದರ ಮಾಡಿಕೊಳ್ಳುತ್ತಾರೆ,


ಹಣ, ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್ ಎಲ್ಲಾ ವ್ಯರ್ಥ....


*ಸಂಸ್ಕಾರ ಮುಖ್ಯ*

Thursday, October 29, 2020

ಕಥೆಗಳ ಸಂಗ್ರಹ

ಆತ್ಮವಿಶ್ವಾಸದ ಕಥೆ

 ಆತ್ಮವಿಶ್ವಾಸ.


ವ್ಯವಹಾರದಲ್ಲಿ ತುಂಬಲಾರದ ನಷ್ಟ ಕಂಡ ಬಿಜಿನೆಸ್‌ಮ್ಯಾನ್ ಒಬ್ಬ ಪಾರ್ಕಿನ ಕಲ್ಲುಬೆಂಚಿನ ಮೇಲೆ ಕುಳಿತಿದ್ದ. ಇನ್ನೇನು ಆಕಾಶವೇ ಕಳಚಿ ತಲೆಮೇಲೆ ಬೀಳುತ್ತದೆ ಎಂಬಂತಿತ್ತು ಅವನ ಮುಖ. ಸಾಲಗಾರರು ಬೆನ್ನ ಹಿಂದೆ ಬಿದ್ದಿದ್ದರು, ಪಾಲುದಾರರು ಹಣ ಕೇಳುತ್ತಿದ್ದರು, ಕೆಲಸಗಾರರಿಗೆ ಸಂಬಳ ಕೊಡಬೇಕಿತ್ತು….ಹೀಗೆ ಸಮಸ್ಯೆಗಳ ಸರಮಾಲೆ ಆತನ ಕುತ್ತಿಗೆಗೆ ಸುತ್ತಿಕೊಂಡಿತ್ತು. 


ಆಗ ಅಲ್ಲಿಗೆ ಮುದುಕನೊಬ್ಬ ಬಂದ. ಬಿಜಿನೆಸ್‌ಮ್ಯಾನ್‌ನ ಮುಖ ನೋಡಿದರೆ ಆತ ಕಷ್ಟದಲ್ಲಿದ್ದಾನೆಂದು ಯಾರು ಬೇಕಾದರೂ ಸುಲಭವಾಗಿ ಹೇಳಬಹುದಿತ್ತು. ‘ಏನಪ್ಪಾ ನಿನ್ನ ಸಮಸ್ಯೆ?’ ಅಂತ ಮುದುಕ ನೇರವಾಗಿ ವಿಷಯಕ್ಕೆ ಬಂದ. ಈತ ತನ್ನೆಲ್ಲ ಕಷ್ಟಗಳನ್ನು ಹೇಳಿಕೊಂಡ. ಸಾಯುವುದೊಂದೇ ಈಗ ಕಾಣಿಸುತ್ತಿರುವ ದಾರಿಯೆಂದು ಹೇಳಿ ಕಣ್ಣೀರಾದ.


ಆಗ ಮುದುಕ ‘ನಾನು ನಿನಗೆ ಸಹಾಯ ಮಾಡುತ್ತೇನೆ. ಯೋಚಿಸಬೇಡ’ ಎಂದು ಹೇಳಿ ಈತನ ಹೆಸರಿನಲ್ಲಿ ಚೆಕ್ ಒಂದನ್ನು ಬರೆದುಕೊಟ್ಟ. ‘ಈ ಹಣ ತೆಗೆದುಕೋ. ನಿನ್ನ ಆರ್ಥಿಕ ಸಮಸ್ಯೆಗಳನ್ನೆಲ್ಲ ಮೊದಲು ಬಗೆ ಹರಿಸಿಕೋ. ಒಂದು ವರ್ಷದ ನಂತರ ಇದೇ ದಿನ, ಇದೇ ಜಾಗಕ್ಕೆ ಬಾ. ಆಗ ನನಗೆ ಹಣ ವಾಪಸ್ ಮಾಡು. ಒಂದು ವರ್ಷ ಸಮಯವಿದೆ, ಬೇಕಾದಷ್ಟು ಹಣವಿದೆ. ನೋಡು ಏನು ಮಾಡ್ತೀಯ’ ಅಂತ ಹೇಳಿ ಬೆನ್ನು ತಿರುಗಿಸಿ ಹೊರಟೇ ಬಿಟ್ಟ!


ಬಿಜಿನೆಸ್‌ಮ್ಯಾನ್ ಚೆಕ್ ತೆಗೆದು ನೋಡಿ ಅವಾಕ್ಕಾದ. 5,00,000 ಡಾಲರ್‌ನ ಚೆಕ್‌ನ ಕೊನೆಗೆ ಅತ್ಯಂತ ಶ್ರೀಮಂತನಾಗಿದ್ದ ಜಾನ್ ಡಿ ರಾಕ್ಫೆಲ್ಲರ್‌ನ ಸಹಿ ಇತ್ತು! ಅರೇ, ಅವರನ್ನು ನಾನು ಗುರುತಿಸಲೇ ಇಲ್ಲವಲ್ಲ ಎಂದು ಬಿಜಿನೆಸ್‌ಮ್ಯಾನ್ ಕೈ ಕೈ ಹಿಸುಕಿಕೊಂಡ. ನನ್ನೆಲ್ಲ ಕಷ್ಟಗಳು ಒಂದೇ ಕ್ಷಣದಲ್ಲಿ ನಿವಾರಣೆಯಾದವೆಂದು ಹಿಗ್ಗಿದ. ಆದರೂ ಆ ಚೆಕ್‌ ಅನ್ನು ನಗದು ಮಾಡಿಸಿಕೊಳ್ಳಬಾರದೆಂದು ನಿರ್ಧರಿಸಿದ. 


ಅಷ್ಟೊಂದು ದೊಡ್ಡ ಚೆಕ್ ಇದೆ ಎಂಬುದೇ ಆತನಿಗೆ ಬೆಟ್ಟದಷ್ಟು ಆತ್ಮವಿಶ್ವಾಸ ನೀಡಿತ್ತು. ಆತ ಹೊಸ ಹುರುಪಿನೊಂದಿಗೆ ವ್ಯವಹಾರ ಶುರುಮಾಡಿದ. ಹೊಸ ಸಾಲಗಳನ್ನು ಮಾಡಿ, ಹಳೆಯ ಬಾಕಿಗಳನ್ನು ತೀರಿಸಿದ. ಕೆಲವೊಂದಿಷ್ಟು ಮಹತ್ವದ ನಿರ್ಧಾರಗಳ ಮೂಲಕ ವ್ಯವಹಾರವನ್ನು ಹಂತ ಹಂತವಾಗಿ ಮೇಲಕ್ಕೆ ತಂದ. ಮೂರು-ನಾಲ್ಕು ತಿಂಗಳುಗಳಲ್ಲಿ ಆತ ಸಾಲದ ಹೊರೆಯಿಂದ ಮುಕ್ತನಾದ. ವ್ಯವಹಾರ ಸುಗಮವಾಗಿ ನಡೆಯತೊಡಗಿತು.


ಕೊಟ್ಟ ಮಾತಿನಂತೆ ಸರಿಯಾಗಿ ಒಂದು ವರ್ಷದ ಬಳಿಕ ಬಿಜಿನೆಸ್‌ಮ್ಯಾನ್ ಅದೇ ಪಾರ್ಕ್‌ಗೆ ಹೋದ. ಕೈಯಲ್ಲಿ ನಗದು ಮಾಡಿಸಿಕೊಳ್ಳದ ಚೆಕ್ ಇತ್ತು. ಹೇಳಿದ ಸಮಯಕ್ಕೆ ಆ ಶ್ರೀಮಂತ ಮುದುಕನೂ ಬಂದ. ಇನ್ನೇನು ಚೆಕ್ ವಾಪಸ್ ಮಾಡಿ, ತನ್ನ ಯಶಸ್ಸಿನ ಕಥೆ ಹೇಳಬೇಕೆನ್ನುವಷ್ಟರಲ್ಲಿ ಹಿಂದಿನಿಂದ ನರ್ಸ್ ಒಬ್ಬಳು ಓಡಿ ಬರುತ್ತಿರುವುದು ಕಾಣಿಸಿತು. ಆಕೆ ಏದುಸಿರು ಬಿಡುತ್ತಾ ಓಡಿ ಬಂದು ಮುದುಕನನ್ನು ಗಟ್ಟಿಯಾಗಿ ಹಿಡಿದುಕೊಂಡಳು. ‘ಅಬ್ಬಾ ದೇವರೇ ಕೊನೆಗೂ ಈತನನ್ನು ಹಿಡಿದುಬಿಟ್ಟೆ!’ ಎಂದು ಜೋರಾಗಿ ಉಸಿರಾಡುತ್ತಾ ಉದ್ಘರಿಸಿದಳು. ‘ನಿಮಗೆ ಈತ ಏನೂ ತೊಂದರೆ ಕೊಟ್ಟಿಲ್ಲ ಎಂದು ಭಾವಿಸಿದ್ದೇನೆ. ಅಯ್ಯೋ ಈತನೊಬ್ಬ ಹುಚ್ಚು ಮುದುಕ. ಪದೇ ಪದೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋಗುವ ಚಟ. ತನ್ನನ್ನು ತಾನು ಜಾನ್ ಡಿ. ರಾಕ್ಫೆಲ್ಲರ್ ಅಂತ ಕಂಡವರಿಗೆಲ್ಲ ಪರಿಚಯಿಸಿಕೊಳ್ಳುತ್ತಾನೆ. ಅದನ್ನು ಹೌದು ಎಂದು ನಂಬುವ ಹುಚ್ಚರೂ ಇದ್ದಾರೆ’ ಎಂದು ಹೇಳಿ ಮುದುಕನನ್ನು ಎಳೆದು ಕರೆದುಕೊಂಡು ಹೋದಳು.


ಈ ಬಿಜಿನೆಸ್‌ಮ್ಯಾನ್ ತನ್ನ ಮುಂದೆ ನಡೆದಿದ್ದು ಕನಸೋ, ನಿಜವೋ ಎಂದು ತಿಳಿಯದೆ ಬೆಪ್ಪನಂತೆ ನಿಂತಿದ್ದ. ಒಂದಿಡೀ ವರ್ಷ ಆತ ತನ್ನ ಬಳಿ ಅರ್ಧ ಮಿಲಿಯನ್ ಡಾಲರ್ ಹಣ ಇದೆ ಎಂದು ಭ್ರಮಿಸಿ ವ್ಯಾಪಾರ- ವ್ಯವಹಾರವನ್ನು ವಿಸ್ತರಿಸುತ್ತಾ, ಸಾಲ ಮಾಡಿ, ಸಾಲ ತೀರಿಸುತ್ತಾ ಹೋದ. ಆದರೀಗ ಗೊತ್ತಾಗಿದ್ದೇನೆಂದರೆ ಇವನ ಬಳಿ ಇದ್ದದ್ದು ಅರ್ಧ ಮಿಲಿಯನ್ ಡಾಲರ್ ಚೆಕ್ ಅಲ್ಲ, ಯಾವನೋ ಒಬ್ಬ ಹುಚ್ಚ ಕೊಟ್ಟಿದ್ದ ಕಾಗದದ ಚೂರು! 


ಹಾಗಾದರೆ ತನ್ನ ಕೈಯಲ್ಲಿ ಇನ್ನೇನೂ ಮಾಡಲು ಸಾಧ್ಯವಿಲ್ಲ ಅಂದುಕೊಂಡಿದ್ದವನಿಂದ ಅಭೂತಪೂರ್ವ ಕೆಲಸಗಳನ್ನು ಮಾಡಿಸಿದ ಆ ಶಕ್ತಿ ಯಾವುದು? ಅದುವೇ ಆತ್ಮವಿಶ್ವಾಸ! ಅದೊಂದು ನಿಮ್ಮ ಜತೆಯಿದ್ದರೆ ಎಂಥ ಅಸಾಧ್ಯವನ್ನೂ ಸಾಧ್ಯಗೊಳಿಸಬಹುದು.


ಶಿವಾರ್ಪಣಮಸ್ತು (ಸದ್ವಿಚಾರ ಸಂಗ್ರಹ)

ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೨೯/೧೦/೨೦೨೦

 ಅನ್ನ ಅಮೃತಕ್ಕೆ ಸಮಾನ ಕವನ

ದಿನಾಂಕ ೨೯/೧೦/೨೦೨೦



ಸ್ವರಚಿತ ಕವನ ೨೯/೧೦/೨೦೨೦

 ಕವನದ ಶೀರ್ಷಿಕೆ

*ಅಶಾಶ್ವತ ಸಂಪತ್ತು*

(ಹಾಯ್ಕು ಪ್ರಕಾರ)


ಮನುಷ್ಯ ತಾನು 

ಗಳಿಸಿದ ಸಂಪತ್ತು

ಆಸ್ತಿ ಅಂತಸ್ತು


ಮಕ್ಕಳಿಗಾಗಿ

ಇರಲೆಂದು ಗಳಿಸಿ

ಇಡುವವರೇ


ಎಲ್ಲರ ಸುಖ

ಬಯಸಿದ ಜೀವಕ್ಕೆ

ಆಸರೆ ಬೇಕು


ಕೊನೆಗಾಲಕ್ಕೆ

ವೃದ್ಧಾಶ್ರಮದೆಡೆಗೆ

ಕಳುಹಿದರೆ


ಜೀವನ ಪೂರ್ತಿ

ಎಷ್ಟೆಲ್ಲ ದುಡಿದರೂ

ನಮಗಾಗದು


ಈ ಅಶಾಶ್ವತ

ಸಂಪತ್ತಿನ ವ್ಯಾಮೋಹ

ತೊರೆದು ಬಾಳಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



*ಹಾಯ್ಕು ರಚನೆ*


೧.ಮೂರು ಸಾಲಿನ ಹಾಯ್ಕು


೨.ಮೊದಲ ಸಾಲು ೫ ಅಕ್ಷರ

    ಎರಡನೇ ಸಾಲು ೭ ಅಕ್ಷರ

    ಮೂರನೇ ಸಾಕು ೫ ಅಕ್ಷರ


೩.ಐದು ಅಥವಾ ಆರು ಹಾಯ್ಕು ಬರೆಯಬೇಕು


೪.ಸಮಯ ಮುಂಜಾನೆ ಎಂಟು ಗಂಟೆಯಿಂದ ಸಂಜೆ ಐದು ಗಂಟೆಯೊಳಗೆ


೫.ಗೊಇಷ್ಠಿಯ ಸಮಯದಲ್ಲಿ ಬೇರೆ ಏನನ್ನೂ ಹಾಕುವ ಹಾಗಿಲ್ಲ


೬.ವಿಷಯಕ್ಕೆ ತಕ್ಕಂತೆ ಹಾಯ್ಕು ಸಾಗಬೇಕು


ಬನ್ನಿ


ಬರೆಯೋಣ

ಬರೆಸೋಣ

ಕಲಿಯೋಣ

ಕಲಿಸೋಣ


🙏ಮಧುನಾಯ್ಕ.ಎಲ್

ಬ.ಬ.ರಾ.ಘ.ಹೂ.ಹಡಗಲಿ


*ಹಾಯ್ಕು ಸಾಹಿತ್ಯದ ಸಂಕ್ಷಿಪ್ತ ಪರಿಚಯ*

₹₹₹₹₹₹₹₹₹₹₹₹₹₹₹₹₹₹₹₹₹


ನನ್ನ ನೆಚ್ಚಿನ ಕವಿ ಮನಸ್ಸುಗಳಿಗೆ ಇದರ ಅರ್ಪಣೆ...‌........


ಈ ಸಾಹಿತ್ಯವನ್ನು ಪರಿಚಯಿಸುವ ಮುನ್ನ *ಸಾಹಿತ್ಯ ಪ್ರೇಮಿಗಳ ಬಳಗವೆಂಬ ವ್ಯಾಟ್ಸಪ್* ಗುಂಪನ್ನು ಸ್ಮರಿಸುವೆ..‌‌ಅಲ್ಲಿ ಇದರ ಬಗ್ಗೆ *ಡಾ//ಮಲ್ಲಿಕಾರ್ಜುನ ತಳವಾರ* ಸರ್ ಮುನ್ನುಡಿಯ ರೂಪದಲ್ಲಿರುವ ಅವರು ಸಂಗ್ರಹಿಸಿದ ವಿಷಯವನ್ನು ಪ್ರಾಸ್ತಾಪಿಸಿದರು ಅದು ನನಗೆ ಆಕರ್ಷಣಿಯವಾಗಿ ಕಂಡಿತು.ಆಗ ಈ ಹಾಯ್ಕು ನ ಬಗ್ಗೆ *ಕೆ.ಬಾರವಲಿ** ಗುರುಗಳಿಗೆ ನಾನು ಮೆಸೇಜ್ ಹಾಕಿದಾಗ ಆ ಬೆಂಕಿಗೆ ಅವರು ತುಪ್ಪ ಸುರಿದರು......ತದ ನಂತರ ಇದನ್ನು ಮಧು ಸರ್ ಗೆ ತಿಳಿಸಿದಾಗ ಅವರು ಖುಷಿಯಿಂದ ಸರ್ ಇದರ ಬಗ್ಗೆ ನಮ್ಮ ಬರಹಗಾರರ ಬಳಗದವರಿಗೆ ಹಂಚುವ ಕೆಲಸ ಮಾಡೊಣ ಅಂತಾ ಒಪ್ಪಿಗೆ ಸೂಚಿಸಿದರು.ತತ್ಕ್ಷಣ ನಾನು ಇದರ ಬಗ್ಗೆ ತಡಕಾಡಿದಾಗ ಬಾರವಲಿ ಸರ್ ರವರು ಅಂತರ್ಜಾಲ ಜಾಲಾಡಿ ಅಲ್ಲಿದ್ದ ಶ್ರೀ. ರಾಘವೇಂದ್ರ ಜೋಷಿಯವರ ಬ್ಲಾಗ್ ನಲ್ಲಿನ ಕೇಲವು ವಿಷಯಗಳನ್ನು ನನಗೆ ಹಂಚಿದರು.ಅದನ್ನು ನಾನು.ಓದಿ, ಆರಿಸಿ,ಬೆರೆಸಿ, ಸೇರಿಸಿ ನಿಮ್ಮಗಳಿಗೆ ಉಣಬಡಿಸಲು ತಂದಿರುವೆ.


ಈ ವಿಷಯದಲ್ಲಿ ನಾನೇನು *ಎಲ್ಲಾ ಬಲ್ಲವನಲ್ಲ* ಕಲಿಕಾರ್ಥಿ ಅಷ್ಟೇ ........ ಜೋತೆಜೋತೆಯಾಗಿ ಎಲ್ಲರೂ ಕಲಿಯೋಣ.



ಈಗ ವಿಷಯದ ಕಡೆ ಗಮನಹರಿಸೋಣ......


ಕನ್ನಡ ವಾಗ್ದೇವಿಯ ಭಂಡಾರವನ್ನೊಮ್ಮೆ ಅವಲೋಕಿಸಿದಾಗ ಹಲವಾರು ವಿಸ್ಮಯಗಳು ಸಹೃದಯ. ಓದುಗರನ್ನು ಜಿಜ್ಞಾಸೆಗೆ ಹಚ್ಚುತ್ತವೆ. ಅರ್ವಾಚೀನ ಸಾಹಿತ್ಯದ ಮೇಲೆ ಸಂಸ್ಕೃತ ಭಾಷೆಯ ಪ್ರಭಾವವಿದ್ದಂತೆ ಆಧುನಿಕ ಸಾಹಿತ್ಯದ ಮೇಲೆ ಆಂಗ್ಲ ಭಾಷೆಯ ಪ್ರಭಾವವಿರುವುದನ್ನು ಕಾಣುತ್ತೇವೆ. ಅದರಲ್ಲಿ ಜಪಾನಿನ ಕಾವ್ಯ ಕಲೆ 'ಹಾಯ್ಕು' ಕೂಡ ಒಂದು. 

    ಹಾಯ್ಕುನ್ನು ಮೊದಲು ಸಾರಸ್ವತ ಅಂಗಳದಲ್ಲಿ ಪರಿಚಯಿಸಿದವರೆಂದರೆ **ಭಾಶೋ**ಎಂಬ ಪ್ರಸಿದ್ಧ ಜಪಾನಿ ಕವಿ. 


*ಹಾಯ್ಕು ಅಂದರೇನು?*


ಹಾಯ್ಕು ಅನ್ನುವುದು ಗದ್ಯವಾ?ಪದ್ಯವಾ? ಅಥವಾ ಇನ್ನೇನಾದರೂ ಇದರೊಳಗೆ ಇದೇಯಾ? ಯಾವ ಸಾಹಿತಿಕ ಅಂಶಗಳನ್ನು ಹಾಯ್ಕು ಅಂತಾ ಗುರುತಿಸಬಹುದು. ಇಂತಹ ನೂರಾರು ಪ್ರಶ್ನೆಗಳಿಗೆ ಸರಳ ರೀತಿಯಲ್ಲಿ ವಿವರಿಸಲು ಪ್ರಯತ್ನಿಸುವೆ.


ಹಾಗೆ ನೋಡಿದರೆ *ಹಾಯ್ಕು* ಅಪರಿಚಿತ ಸಾಹಿತ್ಯ ಪ್ರಕಾರ ವಾಗಿದೆ. ನಮಗೆ ದ್ವಿಪದಿ,ತ್ರಿಪದಿ,ಷಟ್ಪದಿ, ಸಾಂಗತ್ಯ, ರಗಳೆಗಳು ಹೇಂಗೆ ಪರಿಚಿತ ಸಾಹಿತ್ಯಗಳೋ...ಹಾಗೇ ಇದು ಒಂದು.ಆದರೆ ಅಪರಿಚಿತ‌.


ಇದಕ್ಕೂ ತನ್ನದೆ ಆದ ಕೆಲವು ಸಿಂಪಲ್ ನಿಯಮಗಳುಂಟು.



*ನಿಯಮಗಳು*

₹₹₹₹₹₹₹₹₹₹₹₹


# ಇದು ಜಪಾನಿನ ಕಾವ್ಯ ಕಲೆ


#ಇದು ತುಂಬಾ ಸಂಕಿರ್ಣವಾದ ಸಾಹಿತ್ಯದ ಪ್ರಕಾರ.


# ಲೌಕಿಕ ಗಣಿತದ ಲೆಕ್ಕಾಚಾರದಂತೆ ಇದು ಮೂರು ಸಾಲುಗಳನ್ನು ಹೊಂದಿರುತ್ತದೆ‌. ಒಂದನೆಯ ಮತ್ತು ಮೂರನೇ ಸಾಲುಗಳಲ್ಲಿ ಐದು ಅಕ್ಷರಗಳು ಎರಡನೆಯ ಸಾಲಿನಲ್ಲಿ ಏಳು ಅಕ್ಷರಗಳು ಬರಬೇಕು. ಇದೊಂದು ಹದಿನೇಳು ಅಕ್ಷರಗಳ ಕಾವ್ಯಮಾಲೆ. 


 ಇದೊಂದು ಸರಳ ನಿಬಂಧನೆ. ಆದರೆ ಈ ನಿಬಂಧನೆಯ ಆಂತರ್ಯದಲ್ಲಿ ಅಕ್ಷರಗಳ ಔಚಿತ್ಯ, ವ್ಯಾಕರಣದ ಬಂಧ ಹಾಗೂ ಕಾವ್ಯದ ಧ್ವನಿ ಮುಖ್ಯವಾಗಿ ಇರಲೇಬೇಕು.


ಉದಾ : (ಖಂಡು ಬಂಜಾರರ ರಚನೆಗಳು)


             ನಾನು ಶಿಕ್ಷಕ (೫)

             ಜ್ಞಾನದ ರಕ್ಷಕನೇ (೭)

             ಭಕ್ಷಕನಲ್ಲ (೫)      

      

           ಒಟ್ಟು.ಅಕ್ಷರಗಳು -೧೭ 



      ನನ್ನ ಲಂಬಾಣಿ

      ಬಂಗಾರದ ಭರಣಿ

      ಸೌಂದರ್ಯ ಗಣಿ



     ಕೊರೋನ ಬಂದ್ರೆ

     ಕಾಯವು ನಿರ್ಗಮನ

     ಇರೋದು ಕರ್ಮ


ಹೀಗೆ *ಕಿರಿದರಲ್ಲಿ ಹಿರಿದು ಅಡಗಿರಬೇಕು. ಕನ್ನಡಿಯಲ್ಲಿ ಆನೆಯನ್ನು ತೋರಿಸುವ ಕೆಲಸ* ಹಾಯ್ಕು ಮಾಡುತ್ತದೆ. ಕೆಲವೇ ಪದಗಳಲ್ಲಿ ಕವಿ ತಾನು ಅನುಭವಿಸಿದ ಜೀವನಾನುಭವಗಳನ್ನು ಸುಂದರವಾಗಿ ಕಟ್ಟಿಕೊಡುವುದು ಅತ್ಯಂತ ಪ್ರಯಾಸದ ಕೆಲಸ. ಈ ಪ್ರಯಾಸ ದೈಹಿಕತೆಯದಲ್ಲ, ಮಾನಸಿಕತೆಯದು. ಇದೊಂದು *ಜಾಣ್ಮೆಗೆ ಓರೆಗಚ್ಚುವ ಸೃಜನಶೀಲ ಕುಸುರಿ ಕೆಲಸವಾಗಿದೆ*. ಈ ಹಾಯ್ಕುಗಳೆಲ್ಲವೂ *'ಹಿಡಿದರೆ ಹಿಡಿ ತುಂಬ, ಬಿಟ್ಟರೆ ಜಗದ ತುಂಬ'* ಎನ್ನುವಂತೆ ಅನಾವರಣಗೊಳ್ಳಬೇಕು.


ಉದಾ :ಹುಳಿಯಾರ್ ಷೆಬ್ಬೀರ್ ಸರ್ ರವರ ಆಯ್ದ ಕೇಲವು ಹಾಯ್ಕುಗಳು...


"ವೈರಾಗ್ಯದಾಸೆ 

ಬುದ್ಧನ ನಿದಿರೆಯ 

ಕದ್ದಿತು ನೋಡಿ..!"



ಒಣ ಮರವು 

ಚಿಗುರುವೆನೆಂದು 

ಶಾಸ್ತ್ರ ಕೇಳಿತು...!" 


"ವಿರಹವನ್ನು 

ಮಿಲನದ ಮಿತ್ರನೇ 

ಅನ್ನಬಹುದು...!" 


"ಬೆಂದರೆ ಬೇಂದ್ರೆ 

ದೇಶವ ಸುತ್ತಿದರೆ 

ಕಾರಂತರಯ್ಯ....!" 


"ಹಟವ ಬಿಟ್ಟು 

ಚಟವನ್ನು ತೊರೆದು 

ನೀವು ನೀವಾಗಿ..!" 


"ಬುರ್ಖಾದೊಳಗೆ 

ಅವಿತುಕೊಂಡಿರುವ 

ಸಜೀವಿ ತಾಳ್ಮೆ...!" 


"ಭೂಮಿ ತಾಯಿಗೂ 

ಚುಂಬಿಸುವ ಬದ್ಧತೆ 

ನೇಗಿಲಿನಲ್ಲೂ...!"


ಹೀಗೆ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ತಾತ್ವಿಕ.... ನೆಲೆಯಲೆಲ್ಲ ಹಾಯ್ಕುಗಳ ಕಬಂಧ ಬಾಹುಗಳನ್ನು ಗುರುತಿಸಬಹದು.


ಅಯ್ಯೋ ಎಷ್ಟು ಸರಳವಾಗಿದೆಯಲ್ಲ ? ಇದರಲ್ಲೆನು ವಿಶೇಷ ಲೆಕ್ಕಾಚಾರ ಅನ್ನುವಿರಾ? ಹೌದು, ಅದು ಕೆವಲ 17 ಅಕ್ಷರಗಳ ಲೆಕ್ಕಾಚಾರವಲ್ಲ.ಅದು 17 ಸಿಲೇಬಲ್(ಪದಗಳ ಉಚ್ಚಾರಣೆ ಗಳ)ಗಳ ಲೆಕ್ಕಾಚಾರ.


ಹಾಯ್ಕು ಗಳಲ್ಲಿ ಸಿಲೇಬಲ್ ತುಂಬಾ ಮುಖ್ಯ.ಇದು ಜಪಾನಿ ಭಾಷೆಯಲ್ಲಿ ಸುಲಭವಿರಬಹುದು ಆದರೆ ಕನ್ನಡ ಭಾಷೆಯ ಸೂಗಸು ಬೇರೆ.ಇಲ್ಲಿ ಯಾವುದೇ *ಸೈಲೆಂಟ್* ಅಕ್ಷರಗಳಿಲ್ಲ ಹೀಗಾಗಿ ಕನ್ನಡದಲ್ಲಿ ಸರಿಯಾಗಿ 17 ಅಕ್ಷರಗಳಲ್ಲಿ ನಮ್ಮ ಭಾವನೆಗಳನ್ನು ತುಂಬಿ ಹಾಯ್ಕುವೊಂದನ್ನು ಹೆಣೆಯುವುದು ತುಂಬಾ ಸವಾಲಿನ ಕೆಲಸ.


ಇರಲಿ..........ಹಾಡ್ತ ಹಾಡ್ತ ರಾಗ.........😁😁😁😁😁


ಇಲ್ಲಿ *ಸಿಲೇಬಲ್* ಲೆಕ್ಕಾಚಾರ ಹ್ಯಾಗೆ ಮಾಡುತ್ತಾರೆ ಗಮನಿಸೋಣ......


ಇಂಗ್ಲಿಷ್ ನ *LOVE* ಅನ್ನುವ ಪದ 4 ಅಕ್ಷರಗಳನ್ನು ಹೊಂದಿದೆ. ಇದು ಕನ್ನಡದ ಎರಡಕ್ಷರದ *ಲವ್* ಆಗಿದೆ.ಆದರೆ ಇದನ್ನು ಉಚ್ಚರಿಸುವಾಗ *ಲೌ* ಅನ್ನಬಹುದು. ಹೀಗಾಗಿ ಲೆಕ್ಕಾಚಾರದಲ್ಲಿ ಇದು *ಒಂದು ಸಿಲೇಬಲ್* ಅಥವಾ ಒಂದೇ ಅಕ್ಷರ ಅಂತಲೇ ಗಣನೆಗೆ ತೆಗೆದುಕೊಳ್ಳಬೇಕು.


ಅದೇ ರೀತಿ *ಕಣ್* ಅನ್ನುವ ಪದವನ್ನು ಒಂದೇ ಸಿಲೇಬಲ್ ಅಂತಾ ಲೆಕ್ಕಾಚಾರ ಹಾಕಬೇಕು. ಅದನ್ನೇ *ಕಣ್ಣು* ಅಂತಾ ಬರೆದರೆ ಅದು ಎರಡು ಸಿಲೇಬಲ್ (ಅಕ್ಷರ) ಅಂತಾ ಇಲ್ಲಿ ಲೆಕ್ಕ ಹಾಕಬೇಕು.


ಇನ್ನೂ ದೀರ್ಘಕ್ಷರಗಳು,.ಅನುಸ್ವಾರ, ವಿಸರ್ಗ,ಒತ್ತಕ್ಷರಗಳು,ಲೇಖನ ಚಿಹ್ನೆಗಳನ್ನು ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳುವಂತದಲ್ಲ.


ಹಾಗದರೆ ಎಂಥವುಗಳನ್ನು *ಹಾಯ್ಕು* ಗಳೆನ್ನಬೇಕು.


ನಮಗೆ ಸಿಕ್ಕ ಮಾಹಿತಿ ಪ್ರಕಾರ......ನಿಸರ್ಗದಲ್ಲಿ ನಡೆಯುವ ಘಟನೆಗಳು ಅಥವಾ ಬೆಳವಣಿಗೆ ಹೊಂದಿರುವ ವಿಷಯಗಳಿರಬೇಕು.ಇಲ್ಲಿ ನಮ್ಮ ಪಾತ್ರ ಇರಕೊಡದು. ಅದು ಹೊರಗಿನ ಯಾವುದೇ force ಇಲ್ಲದೇ ಸ್ವಯಂಪ್ರೇರಿತವಾಗಿ ನಡೆಯುವ ಬೆಳವಣಿಗೆಯಾಗಿರಬೇಕು. ಇಲ್ಲಿ ಕವಿ ಘಟನೆಗಳನ್ನು ದೂರ ನಿಂತು ದಾಖಲಿಸಬೇಕು.ತಾನೇ ಅದರಲ್ಲಿ ಇಳಿಯಬಾರದು.


ಇದು ಬರೀ ಕವಿತೆಯಾಗದೆ ಒಂದು ಸ್ತಬ್ಧಚಿತ್ರವಾಗಿರಬೇಕು. ಘಟನೆಗಳನ್ನುಮಾನವೀಯ ಅಂಶಗಳ ಚೌಕಟ್ಟಿನಲ್ಲಿ ಚಿತ್ರಿಕರಿಸುವಂತಿರಬೇಕು.


ಇಲ್ಲಿ ಒಂದು ಘಟನೆ,ಬೆಳವಣಿಗೆಗಳನ್ನೆ ಚಿತ್ರಕರಿಸುವುದಲ್ಲ.ಒಂದು ರೂಪಕದ ಹೋಲಿಕೆಯನ್ನು ಸಹ ಮಾಡಬಹುದು.

     

            (ಹೋಲಿಕೆಗೆ)

ಉದಾ : ಕತ್ತಲ ಹಾದಿ

              ಪೋರನಿಗೆ ಹಾಡೋಂದೇ

              ಅಪತ್ಭಾಂಧವ



ಇವುಗಳನ್ನು ಓದಿದರೆ ಏನೋ ಒಂಥರಾ ರೋಚಕವೆನಿಸಬೇಕು.ಅದರ ಅನುಭವ ಮಿಂಚೋಡದಂಗಿರಬೇಕು.


ಉದಾ : ಚಡ್ಡಿ ಹೇಗಿದ್ರು

           ಪರವಾಗಿಲ್ಲ ಮಾಸ್ಕ

           ಸರಿ ಇರಬೇಕು

        (ಕೆ.ಬಾರವಲಿ)


ಇವುಗಳು ಹೇಗಿರಬೇಕಂದ್ರೆ...... ಭಾವನೆಗಳನ್ನು ಬೀಸಿ ಒಗೆದಂತಿರಬೇಕು. ಥಟ್ ಅಂತ ಹೊಳೆದದ್ದನ್ನು ಫಟ್ ಅಂತ ಬರೆದು ಚಟಾಪಟ್ ಅರ್ಥವಾಗುವಂತೆ.


ಹಾಗೇ ನಮ್ಮಲ್ಲಿ ಒಂದು ಪ್ರಶ್ನೆ ಮೂಡುವುದು ಸಹಜ.


ಚುಟುಕು ಸಾಹಿತ್ಯಕ್ಕೂ,ಹಾಯ್ಕುಗಳಿಗೂ ವ್ಯತ್ಯಾಸವಿದೆಯೇ ? ಎಂದು.


ಹೌದು

ಇದೆ

 ಚುಟುಕಿನಲ್ಲಿ ಅಕ್ಷರಗಳ,ಸಾಲುಗಳ ನಿಯಮವಿಲ್ಲ.ಇಲ್ಲಿ ಇದೆ ಅಷ್ಟೇ‌. 


ಹಾಗಾದರೆ ಮತ್ತೊಂದು ಪ್ರಶ್ನೆ ಮೂಡಬಹುದು........


ಇದರ ಸಂಕಲನ ಹೇಗೆ ಹೊರ ತರಬಹುದು? ಎಂದು.


ಒಂದು *ಹಾಯ್ಕು* ಸಂಕಲನ(ಪುಟದಲ್ಲಿ ಎರಡರಂತೆ) 140ಹಾಯ್ಕು ಗಳನ್ನು ಹೊಂದಿದ್ದರೆ ಚೆನ್ನ. ಹೆಚ್ಚಿದ್ದರೂ ಪರವಾಗಿಲ್ಲ. ಪ್ರತಿ ಪುಟಗಳಲ್ಲಿ ಆಯಾ ಹಾಯ್ಕು ಗಳಿಗೆ ಸಂಬಂಧಿಸಿದ ರೇಖಾಚಿತ್ರಗಳು ಇದ್ದರೆ ಇನ್ನೂ ಚೆಂದ.


ಹೀಗೆ.......ಹಾಯ್ಕುನ ಬಗ್ಗೆ ಸಿಕ್ಕ ಮಾಹಿತಿ ನಿಮಗಾಗಿ...‌ 


ನಿಮ್ಮ ಪ್ರತಿಕ್ರಿಯೆಗಾಗಿ ಕಾದಿರುವೆ...........??



*ಧನ್ಯವಾದಗಳು*


*ಈ ಲೇಖನದ ಸ್ಪೂರ್ತಿ ದಾತರು*


# ರಾಘವೇಂದ್ರ ಜೋಶಿ

#ಡಾ. ಮಲ್ಲಿನಾಥ ಶಿ. ತಳವಾರ 

#ಹುಳಿಯಾರ್ ಷಬ್ಬಿರ್

#ಕೆ.ಬಾರವಲಿ

#ಮಧುನಾಯ್ಕ.ಲಂಬಾಣಿ



✒️📝 *ಖಂಡು ಬಂಜಾರ*

            *ಸೇವಾನಗರ.ಹರಪನಹಳ್ಳಿ. ಬಳ್ಳಾರಿ*






೧೦ನೇ ಕನ್ನಡ ವ್ಯಾಘ್ರಗೀತೆ ಗದ್ಯಭಾಗದ ವೀಡಿಯೊ ಭಾಗ - ೧ ೨೯/೧೦/೨೦೨೦

 


Wednesday, October 28, 2020

ಸ್ವರಚಿತ ಕವನ ೨೮/೧೦/೨೦೨೦

 ಕವನದ ಶೀರ್ಷಿಕೆ

*ಸುಗ್ಗಿಯ ಸಿರಿ ಸೊಬಗು*

(ಸಾಹಿತ್ಯ ಪ್ರಕಾರ - ರುಬಾಯಿ)


ಸುಗ್ಗಿ ಬಂದೈತೆ ನೋಡವ್ವ

ಸೊಬಗು ತಂದೈತೆ ಕೇಳವ್ವ

ಊರ ಜನರೆಲ್ಲಾ ಒಂದಾಗಿ

ಹರುಷವ ತುಂಬೈತೆ ಕಾಣವ್ವ


ಮೂಡಲ ಹೊಡೆಯುವದರೊಳಗಣ್ಣಾ

ಹೊಲದಲ್ಲಿ ಕೆಲಸವ ಮಾಡಬೇಕಣ್ಣ

ಸಂಜೆಯ ಹೊತ್ತು ಮುಳುಗುವ ತನಕ

ರಾಶಿಯ ಮಾಡಿ ಹಸನು ಮಾಡಣ್ಣ


ತೆನೆಗಳ ಒಗ್ಗೂಡಿಸಿ ಹೊರೆಯ ಕಟ್ಟಿ

ಹೆಂಗೆಳೆಯರೆಲ್ಲ ಪದಗಳ ಕಟ್ಟಿ

ಹಾಡುವ ಸೊಬಗು ನೋಡಲು ಇಲ್ಲಿ

ಕಣ್ಣೆರಡು ಸಾಲದೆ ಮನ ತಟ್ಟಿ


ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುತ್ತಾ

ನಾಟ್ಯದಿ ನಟಿಸಿ ಮನಸೆಳೆಯುತ್ತಾ

ಬರುವರು ನಮ್ಮ ಯುವ ಜನರು

ಬಿಡದೆ ಸುಗ್ಗಿಯ ಹಿಗ್ಗು ಪಡೆಯುತ್ತಾ


ವರುಷದ ಹರುಷ ಸುಗ್ಗಿಯ ತಂದೈತೆ

ಬಡವರ ಬದುಕಿಗೆ ಬೆಳಕಾಗಿ ಬಂದೈತೆ

ಧನ ದಾನ್ಯವ ಸಂಗ್ರಹಿಸುವರು ನೋಡೋ

ಸುಗ್ಗಿಯ ಸಿರಿ ಸೊಬಗು ತುಂಬೈತೆ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


*ಬರಹಗಾರರ ಬಳಗ ರಾಜ್ಯ ಘಟಕ* 

         *ಹೂವಿನಹಡಗಲಿ*

               ✍️✍️

       *ಕವಿತಾ ಸಪ್ತಾಹ* 

          🌺🌺

 *೨೦೩ ನೇ ಗೋಷ್ಠಿ* 

ದಿನಾಂಕ-೨೮.೧೦.೨೦೨೦, ಬುಧುವಾರ

ನಿರ್ವಹಣೆ- *ಶ್ರೀಮತಿ ಜ್ಯೋತಿಕೃಷ್ಣನಾಯ್ಕ* 

ವಿಷಯ- *ಸುಗ್ಗಿ,ಪ್ರಕಾರ- ರುಬಾಯಿ* 

ನಾಲ್ಕು ಅಥವಾ ಐದು ರುಬಾಯಿ ಬರೆಯಿರಿ

         ☘️☘️


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 

🙏 *ಮಧುನಾಯ್ಕ.ಲಂಬಾಣಿ* 

      *ಬ.ಬ.ರಾ.ಘ.ಹೂ.ಹಡಗಲಿ*






Tuesday, October 27, 2020

ಚಿತ್ರಕ್ಕೊಂದು ಕವನ ೨೭/೧೦/೨೦೨೦










ಕವನದ ಶೀರ್ಷಿಕೆ

*ಐಸ್ ಕ್ರೀಮ್ ಅಣ್ಣಾ*


ಐಸ್ ಕ್ರೀಮ್,ಐಸ್ ಕ್ರೀಮ್,ಐಸ್ ಕ್ರೀಮ್

ಪೊಂವ್... ಪೊಂವ್... ಪೊಂವ್...ಅಂತ

ಶಬ್ದ ಮಾಡುತ್ತಾ ಬಂದೀತು ಗಾಡಿಯೊಂದು

ಓಡೋ..ಡಿ  ಬಂದರು ಚಿಂಟು ಚಿಣ್ಣಾರಿಗಳು


ಬಾಲಕರೆಲ್ಲರು ಬಡಿದಾಡಿ ಬಂದು ನಿಂತು 

ನೋಡುವವರೆ ನೋಡುತ್ತಾ ನಿಂದವರೆ

ಯಾರು ತಗೋತಾರೋ ಗೊತ್ತಿಲ್ಲ ಸುಮ್ನೆ

ನಿಂದವರೆ ಬಹಳ ಜನ ಹಾದಿ ಬಿಡದಂತೆ


ತೆಗೆದು ಕೊಳ್ಳುವವರ ಮುಖ ಒಮ್ಮೆಮ್ಮೆ

ನೋಡುತ ತಿನ್ನುವವರನ್ನೊಮ್ಮಮ್ಮೆ

ನೋಡುತಲಿರುವರು ಕೆಲವರು ಅಣ್ಣಾ ಕೊಡೋ

ಅಣ್ಣಾ ಕೊಡೋ ಎಂದು ದುಂಬಾಲು ಬೀಳುವರು


ಐಸ್ ಕ್ರೀಮ್ ಮಾರೋ ಅಣ್ಣ ಹೈರಾಣಾಗಿ

ಹೋಗುವನು ಮತ್ತೊಂದು ಓಣಿಯಡಗೆ

ಅಲ್ಲಿಯೂ ಇವರಂತೆ ಮತ್ತೊಂದು ಗ್ಯಾಂಗ್

ಅದೇ ಕಥೆ ಸಂಜೆವರೆಗೆ ಅದೇ ಆಟ ಕಾಟ


ಪೊಂ..ವ್ ಪೊಂ..ವ್ ಶಬ್ದ ಕೇಳಿದೊಡನೆ

ಶುರು ಮನೆಯಲ್ಲಿನ ತಂದೆ ತಾಯಿ ಅಜ್ಜ ಅಜ್ಜಿ

ಅಕ್ಕ ಅಣ್ಣ ಯಾರಿರುವರೋ ಅವರಿಗೆ ತಪ್ಪದು

ಮಕ್ಕಳ ಕಾಟ ಕೊಡಿಸಿದಾಗಲೇ ಖುಷಿಯಾಗುವರು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*




ಸ್ವರಚಿತ ಕವನ ೨೭/೧೦/೨೦೨೦

  ಶೀರ್ಷಿಕೆ

*ತುಂಟಾಟದ ನೆನೆಪು*

      (ಜಡೆ ಕವನ)

ಹಿಗ್ಗಿದಾಗ ನೋಡು ಮಗುವಿನ ನಗು

ನಗುತಾ ನಗುತಾ ನಲಿ ನಲಿದಾಡುವುದು 

ನಲಿದಾಡುತ್ತಾ ಆಡುತ್ತಾ ಮೈ ಮರೆಯುವುದು

ಮರೆತೆ ಬಿಡುವುದು ಆಟದಲಿ ಊಟವನು


ಊಟವನು ಮಾಡಿಸಲು ಮಗುವನ್ನು ಎತ್ತಿ

ಎತ್ತಿಕೊಂಡು  ಚಂದಾ ಮಾಮಾ ಬಾರೋ 

ಬಾರೋ ಬಾರೋ ಎಂದು ಹಾಡನು ಹಾಡಿ

ಹಾಡಿ ಹಾಡಿ ರಮಿಸುವದೇ ಅವಳ ಕಾಯಕ


ಕಾಯಕ ನಿಷ್ಠೆಯ ಮೂರ್ತಿಯೇ ತಾಯಿ

ತಾಯಿಯ ಋಣವ ತೀರಿಸಲು ಆಗದು 

ಆಗದೇ ಹೋದರು ಕೊನೆಯಲ್ಲಿ ಅವರ

ಅವರವರ ಸೇವೆ ಮಾಡಿ ಇಳಿಸೋಣ ಬಾ


ಬಾಲ್ಯದ ತುಂಟಾಟಗಳ ನಂಟು ಅನಂತ

ಅನಂತ ಭಾವಗಳು ಬೆಚ್ಚಗೆ ಅವಿತಿವೆ

ಅವಿತಿರುವ ಮಧುರ ನೆನಪುಗಳ ಓಲೆಯ ಕೆದಕೆ

ಕೆದಕಿದರೆ ಎಲ್ಲರ ಬಾಲ್ಯವು ಸವಿ ನೆನಪಾಗುವುದು


ನೆನಪಾದಾಗಲೆಲ್ಲ ಏನೋ ಒಂತಾರ ನಾವು

ನಾವೆಲ್ಲ ಹೇಗಿದ್ವಿ ಎಲ್ಲೆಲ್ಲೋ ಸುತ್ತಾಡಿದ್ದು

ಸುತ್ತಾಡತ ಮನೆಗೆ ಬಾರದೆ ಅಮ್ಮ ಬೈಯ್ದುದ್ದು

ಬೈದು ಮತ್ತೆ ರಮಿಸಿದಾಗ ಆಗುವುದು ಹಿಗ್ಗು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ.ಯಾದಗಿರಿ



*ಬಂಧುಗಳೆ* 


 *ಜಡೆ ಪ್ರಕಾರದ ಮಾಹಿತಿ* 


ಈ ಕಲಿಕೆಯ ಪಯಣದಲ್ಲಿ ಹೊಸ ಪ್ರಕಾರವೊಂದನ್ನು ಪರಿಚಯ ಮಾಡಿಕೊಳ್ಳುವ, ನಿಮ್ಮ ಜೊತೆ ಜೊತೆಯಲ್ಲೇ ಕಲಿಯುವ ಇಚ್ಛೆ ನನ್ನದು.


ಯಾವುದು ಅದು ಅಂತೀರಾ ಅದೇ *ಜಡೆ ಕವನ* ಏನಿದು ಜಡೆ ಕವನ? ಜಡೆಗೂ ಕವನಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯ??? ಹೌದು ಹೆಸರೇ ಸೂಚಿಸುವಂತೆ ಜಡೆ ಮಾದರಿಯಲ್ಲಿ ಕವನ ಹೆಣೆಯುತ್ತಾ ಸಾಗುವುದು..ಹೇಗೆ??


👉ಕವಿತೆಯ ಆರಂಭದ ಪದ ಹಾಗೂ ಕವಿತೆಯ ಅಂತ್ಯದ ಪದ ಒಂದೇ ಆಗಿರಬೇಕು ಅಂದರೆ ಯಾವ ಪದದಿಂದ ಪ್ರಾರಂಭಿಸುವಿರೋ ಅದೇ ಪದ ದಿಂದ ಆಂತ್ಯ ಮಾಡುವುದು.

👉 ಪ್ರತಿ ಚರಣದ ಕೊನೆ ಪದ ಮುಂದಿನ ಚರಣದ ಮೊದಲ ಪದವಾಗಬೇಕು

 

👉 ಮೊದಲ ಚರಣದ ಕೊನೆ ಪದದಿಂದ ಎರಡನೇ ಚರಣ ಆರಂಭ,ಎರಡನೇ ಚರಣ ಕೊನೆ ಇಂದ ಮೂರನೇ ಚರಣ ಹೀಗೆ ಕವನ ಕಟ್ಟುತ್ತಾ ಸಾಗಿದರೆ ಸಾಕು 


👉 ಭಾವ ಪೂರ್ಣ ವಾಗಿರಬೇಕು. ಅರ್ಥ ಪೂರ್ಣ ಚರಣಗಳನ್ನು ಮಾಡಿ 


ಇವಿಷ್ಟು ಮಾಡಿದರೆ ಸಾಕು.



ಉದಾಹರಣೆ 


*ಪ್ರಳಯ ನರ್ತನ*


ಪ್ರಕಾರ : ಜಡೆ ಕವನ 


ಸುಡುಸುಡು ಸುಡುತಿದೆ ವೈಶಾಖ ಬಿಸಿಲು 

ಬಿಸಿಲ ಝಳಕೆ ಖಗ ಮೃಗ ತರುಲತೆ ಬಾಯಾರಿರಲು 

ಬಾಯಾರಿ ಬಳಲಿದೆ ನೋಡು ತಿರೆಯ ಒಡಲು 

ಒಡಲು ಬಿರಿದು ಉರಿಯೆದ್ದಿದೆ ಎಲ್ಲೆಡೆಯಲ್ಲೂ 



ಎಲ್ಲೆಡೆಯಲ್ಲೂ ಬಿಸಿಲ ಉರಿ ಉರಿ ತಾಪ 

ತಾಪವ ಕಳೆಯಲೋ ಅವನಿಯ ತಣಿಸಲೊ 

ತಣಿಸಿ ಮಣಿಸಿ ಭೂರಮೆಯ ಸಿಂಗರಿಸಲು 

ಸಿಂಗರಿಸಿ ಪೃಥಿವೀ ದೇವಿಯ ರಮಿಸಲು ವರುಣಾಗಮನ 


ಆಗಮ ನಿಗಮ ಒಂದು ಗೂಡಿ ವರುಣನ ಆರ್ಭಟ

ಆರ್ಭಟದಬ್ಬರ ನೋಡಿದು ಪ್ರಕೃತಿ ಮುನಿಸೋ 

ಮುನಿದ ಅವ್ವಾ ಇದೋ ಸರ ಸರ ಸೆಳೆಯುತಾ 

ಸೆಳೆದು ಹೊತ್ತುಒಯ್ಯುತಿಹಳು ಮನುಜರ ಜೀವ 


ಜೀವವ ಸೆಳೆಯಲು ಕಾರಣ ನಮ್ಮಯ ದಾಹ 

ದಾಹಕೆ ಲೋಭಕೆ ಇದೋ ಮೈಲಿಗೆ ಆಯಿತು ಭುವಿಯು 

ಭುವಿಯ ಬಸಿರ ಬೆದಕಿ ಹಿಸುಕಿ ಮಾಡಿರುವೆವು ಮಹಾ ಲೋಪ 

ಲೋಪದ ಫಲವೇ ನೋಡು ಪ್ರಕೃತಿ ವಿಕೋಪ  

ವಿಕೋಪದಿ ನೀಡಿಹಳು ಶಾಪವ ಸುಡುಸುಡುತ 


*ಬರೀತೀರಾ ತಾನೇ*


ನಮಸ್ಕಾರಗಳು 


🙏🙏ಸಂಧ್ಯಾ ರಾವ್ 

          ಮೈಸೂರು








೮ನೇ ಕನ್ನಡ ಯಶೋಧರೆ‌ ಗದ್ಯಭಾಗದ ವೀಡಿಯೊ ಭಾಗ - ೨ ೨೭/೧೦/೨೦೨೦

 


Monday, October 26, 2020

೧೦ನೇ ಕನ್ನಡ ಕೌರವೇಂದ್ರನ ಕೊಂದೆ ನೀನು ಪದ್ಯಭಾಗದ ವೀಡಿಯೊ ಭಾಗ - ೩ ೨೬/೧೦/೨೦೨೦

 


ಸ್ವರಚಿತ ಕವನ ೨೬/೧೦/೨೦೨೦

 ಕವನದ ಶೀರ್ಷಿಕೆ

*ಕನ್ನಡಿಗರ ಹೊಣೆ*

(ಟಂಕಾ ಪ್ರಕಾರ)


        ೧

ಕನ್ನಡ ನಾಡು

ನುಡಿ ನೆಲ ಸಂಸ್ಕೃತಿ

ಕಟ್ಟುವ ಕಾರ್ಯ

ಭರದಿಂದ ಸಾಗುವ

ಕಾಲ ಕೂಡಿಬಂದಿದೆ


         ೨

ಅನ್ಯ ಭಾಷೆಯ

ಪ್ರಭಾವದ ಸೆಳೆತ

ನಮ್ಮೆಲ್ಲರನು

ಆಕ್ರಮಿಸುವ ಮುನ್ನ

ಒಗ್ಗೂಡಿ ಹೋರಾಡೋಣ


             ೩

ನಮ್ಮತನವ

ನಾವು ಕಾಯದಿದ್ದರೆ

ಕನ್ನಡ ಭಾಷೆ

ಮರೆಯಾಗುವುದೇನೋ

ಹಾಗಾಗಿ ನಾವೆಲ್ಲರೂ


           ೪

ಕನ್ನಡಕ್ಕಾಗಿ

ನಮ್ಮ ಭಾಷೆಯ ಬಗ್ಗೆ

ಕಾಳಜಿ ಹೊಂದಿ

ಕನ್ನಡಿಗರೆಲ್ಲರೂ

ಕನ್ನಡ ಮಾತಾಡೋಣ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ


*ಟಂಕಾ ಪ್ರಕಾರ*


ಐದು ಸಾಲಿನ ಒಂದು ಟಂಕಾ


ಮೊದಲಸಾಲು ಐದು ಅಕ್ಷರ

ಎರಡನೇ ಸಾಲು ಏಳು ಅಕ್ಷರ

ಮೂರನೇ ಸಾಲು ಐದು ಅಕ್ಷರ

ನಾಲ್ಕನೇ ಸಾಲು ಏಳು ಅಕ್ಷರ

ಐದನೇ ಸಾಲು ಏಳು ಅಕ್ಷರ

ಒಟ್ಟು ೩೧ ಅಕ್ಷರಗಳ ಒಂದು ಟಂಕಾ


ಅರ್ಥ ಕೆಡಬಾರದು ಶಿರೋನಾಮೆಗೆ ತಕ್ಕಂತೆ ಬರೆಯಬೇಕು







Sunday, October 25, 2020

ಸ್ವರಚಿತ ಕವನ ೨೫/೧೦/೨೦೨೦

 


ಕವನದ ಶೀರ್ಷಿಕೆ

*ಬನ್ನಿ ಬಂಗಾರ*


ದಸರೆಯು ಬಂದಿತು ನೋಡೋ

ಹಸನಾಗಿ ದೇವಿ ಪೂಜೆಯ ನೀ ಮಾಡೋ

ಹೊಸ ಹೊಸ ಕಾರ್ಯವ ನೀ ಮಾಡೋ

ಜಸ ಸಿಗುತದೆ ಪಕ್ಕಾ ಅದಕೆ ತಕ್ಕ ನೀ ದುಡಿಯೋ


ಜನರೆಲ್ಲ ಒಂದಾಗಿ ಕೊಡುವರು ಬನ್ನಿ ಬಂಗಾರ

ಅನುದಿನವು ಬಂಗಾರದಂತೆ ಬಾಳೋಣವೆಂದು

ಭಿನ್ನ ಭಾವನೆಯ ಬಿಟ್ಟು ಏಕತೆಯ ಪಠಿಸೋಣ

ಅನುರಾಗದ ಸಂಗಮವಾಗುವ ಕ್ಷಣವದು ನೋಡೋ


ಜಾತಿ ಮತ ಭೇದ ಭಾವ ಮನದಲಿ ಮೂಡದು

ಹಿತವನು ಬಯಸಿ ಆಶೀರ್ವಾದವ ಮಾಡುವರು

ಜತನದಿ ನೂರಾರು ಕಾಲ ಬಾಳೆಂದು ಹರಸುವರು

ಸತಿಸುತರಾದಿಯಾಗಿ ಆನಂದಿಸುವರು ಸಂಭ್ರಮದಿ


ಹಲವು ವರ್ಷಗಳ ವಿರಸ ದೂರಾಗುವವು ಪೂರಾ

ಕೆಲವು ವೈಮನಸ್ಸು ಬಿಟ್ಟು ಸಂತಸವ ಹಿಡಿಯೋ

ಒಲವೇ ಬದುಕಿನ ಗುಟ್ಟೆಂಬುದು ಅರಿತು ಬಾಳೋ

ಛಲ ಬಿಡದೆ ಸಾಧಿಸಿ ಜೀವನ ಪಯಣದಿ ಗೆಲ್ಲೋಣ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ









Saturday, October 24, 2020

ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೨೫/೧೦/೨೦೨೦

 ಅಹಂಕಾರವೆಂಬ ಅಜ್ಞಾನ ಕವನ ಎರಡನೇ ಬಾರಿ ಪ್ರಕಟ

ದಿನಾಂಕ ೨೫/೧೦/೨೦೨೦



ಸ್ವರಚಿತ ಕವನ ೨೪/೧೦/೨೦೨೦

 ಕವನದ ಶೀರ್ಷಿಕೆ

*ನನ್ನ ಪುಸ್ತಕ ಪ್ರೀತಿ*


ಪುಸ್ತಕಗಳೆಂದರೆ ನನಗೆ ಎಲ್ಲಿಲ್ಲದ ಪ್ರೀತಿ

ಎಲ್ಲಿಯೇ ಹೋಗಲಿ ಒಂದಾದರು ತರುವಂತ

ಹುಚ್ಚು ವ್ಯಾಮೋಹ ನನಗೆ ಗೊತ್ತಾಗದಂತೆ

ನನ್ನ ಮನಸೆಳೆದ ಹೊತ್ತುಗೆಗಳು ಅನಂತ


ಕಥೆ ಕಾದಂಬರಿ ನಾಟಕ ಕಾವ್ಯಗಳು ಅನೇಕ

ಅದರಲ್ಲಿ ಬರುವ ಪಾತ್ರಗಳು ಮನಮೋಹಕ

ಒಂದಕ್ಕಿಂತ ಒಂದು ವಿಭಿನ್ನ ರೀತಿ ಸಾಮಾಜಿಕ

ಆರ್ಥಿಕ ರಾಜಕೀಯ ಪ್ರಚಲಿತ ವಿಷಯ ಬಹುತೇಕ


ಯಾವ ಕೃತಿಯು ನಿಷ್ಪ್ರಯೋಜಕ ಅಲ್ಲವೇ ಅಲ್ಲ

ಹಾಗಾಗಿ ಭಾರತದ ಸಾಹಿತ್ಯ ಸಂಸ್ಕೃತಿ ಕಲೆ

ಹೇಗೆ ಭಿನ್ನವಾಗಿ ನಿಲ್ಲುತ್ತದೆಯೋ ಹಾಗೆ ಎಲ್ಲಾ

ಪುಸ್ತಕಗಳು ಓದುಗನ ಮನಸ್ಸಿನಲಿಯೂ ನಿಲ್ಲಲಿ


ಮನೆಗೆ ಬರಲು ದುಡ್ಡು ಕಡಿಮೆಯಾದರೂ ಸರಿ

ಬಿಡದೆ ಪುಸ್ತಕ ತರಲು ಹಿಂಜರಿಯದೆ ನಡೆದಾದರೂ

ಮನೆ ಸೇರಿದರಾಯಿತು ಎನ್ನೋ ಛಲ ನನ್ನೂರು

ಸೇರುವ ನಂಬಿಕೆ ಎಂದೂ ಹುಸಿಯಾಗಿಲ್ಲರೀ


ನನ್ನ ಪುಸ್ತಕ ಪ್ರೀತಿ ಎಲ್ಲಾ ದೇಶ ಬಾಂಧವರಲ್ಲಿ 

ಮೂಡಿದರೆ ಬರೆದ ಕವಿ ಮನ ಸಂತಸಪಡಲಿ

ಸಾಹಿತ್ಯ ಓದುವ ಹವ್ಯಾಸ ಎಲ್ಲರಲ್ಲೂ ಬೆಳೆಯಲು

ದುಷ್ಟ ಯೋಚನೆಗಳು ಸುಳಿಯವು ಯಾವಾಗಲೂ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ








Friday, October 23, 2020

ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೨೪/೧೦/೨೦೨೦

ಭೂ ರಮೆಯ ಸೌಂದರ್ಯ ರಾಶಿ ಕವನ 



ಸ್ವರಚಿತ ಕವನ ೨೩/೧೦/೨೦೨೦

 ಕವನದ ಶೀರ್ಷಿಕೆ

*‌ಬಾಳುವನು ಮೌಲ್ಯಗಳೊಂದಿಗೆ*


ಹಾಲುಣಿಸುವ ತಾಯಿ ಹೃದಯದಲ್ಲಿ

ಮಗು ಅತ್ತಾಗ ಬಂದು ಮುದ್ದಿಸುವಲ್ಲಿ

ಕೈತುತ್ತು ಅನ್ನ ನೀಡಿ ಉಣಿಸುವಲ್ಲಿ

ಅಕ್ಕರೆಯ ಪ್ರೀತಿಯನು ನೀಡುವಲ್ಲಿ 


ಮಕ್ಕಳಿಗೆ ಶಿಕ್ಷಣ ನೀಡುತ ಕಂಗಾವಲಲ್ಲಿ

ಬೆಳಸಿ ದೊಡ್ಡವರನ್ನಾಗಿ ಮಾಡುವಲ್ಲಿ

ಅರಾಮವಿಲ್ಲದ್ದಿದ್ದಾಗ ಆರೈಕೆ ನೀಡುವಲ್ಲಿ

ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಕಲಿಸುವಲ್ಲಿ



ತಂದೆಯೇ ಒಳ್ಳೆಯ ಸ್ನೇಹಿತರಾದಲ್ಲಿ

ಮಕ್ಕಳಿಗೆ ಮದುವೆ ಮಾಡುವಲ್ಲಿ

ಹೆಂಡತಿ ಗಂಡನ ಯೋಗಕ್ಷೇಮದಲ್ಲಿ

ಮನೆಗೆ ಬರುವ ಗಂಡನ ನಿರೀಕ್ಷೆ ಮಾಡುವಲ್ಲಿ


ಒಬ್ಬರಿಗೊಬ್ಬರು ಪರಸ್ಪರರ ನಂಬಿಕೆಯಲ್ಲಿ

ಗೆಳೆಯ ಗೆಳತಿಯರ ಸ್ನೇಹ ಬೆಳೆಸುವಲ್ಲಿ

ಕಷ್ಟ ಸುಖಗಳಲ್ಲಿ ಭಾಗಿಯಾಗುವಲ್ಲಿ 

ಹಿರಿಯರ ಆರೋಗ್ಯದ ಕಾಳಜಿವಹಿಸುಲ್ಲಿ


ಅಕ್ಕ ತಂಗಿ ಅಣ್ಣ ತಮ್ಮರ ಅನುರಾಗದಲ್ಲಿ

ಅನುರಾಗ ಪ್ರೀತಿ ವಾತ್ಸಲ್ಯ ಮಮತೆಯಲ್ಲಿ

ಸದಾ ಮಾನವ ಮಾನವೀಯತೆಯ ನೆಲೆಗಟ್ಟಿನಲ್ಲಿ 

ತಾನು ಬಾಳುವನು ಮೌಲ್ಯಗಳೊಂದಿಗೆ ಜೀವನದಲ್ಲಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ





೯ನೇ ತರಗತಿ ಜನಪದ ಕಲೆಗಳ ವೈಭವ ಗದ್ಯಭಾಗದ ವೀಡಿಯೊ ಭಾಗ - ೧ ೨೩/೧೦/೨೦೨೦

 


Thursday, October 22, 2020

ಸ್ವರಚಿತ ಕವನ ೨೨/೧೦/೨೦೨೦

 ಕವನದ ಶೀರ್ಷಿಕೆ

*ನನ್ನ ಕರ್ತವ್ಯ*


ಭಾರತಾಂಬೆಯ ಮಡಿಲಲ್ಲಿ ಜನಿಸಿದ ನಾನು

ನಾರಿ ಮಣಿಯರನ್ನು ಗೌರವಿಸುವದು ಮೊದಲು

ಶಿರಭಾಗುವುದು ಹೆತ್ತ ತಂದೆ ತಾಯಿಯಂದಿರಿಗೆ

ಗುರು ಹಿರಿಯರ ನಮಿಸೋದು ನನ್ನ ಕರ್ತವ್ಯ 


ಸರಕಾರಿ ಆಸ್ತಿ-ಪಾಸ್ತಿಯನ್ನು ರಕ್ಷಿಸುವುದು ತಿಳಿದು

ನೆರೆ ಹೊರೆಯವರೊಂದಿಗೆ ಸಹಬಾಳ್ವೆ ಬಾಳೋದು

ಸರಳತೆಯ ಜೀವನವನ್ನು ನಡೆಸುದನು ಕಲಿತು

ಮರೆಯದೆ ಮತದಾನ ಮಾಡುವದು ನನ್ನ ಕರ್ತವ್ಯ


ಮಮಕಾರ ಪ್ರೀತಿ ವಾತ್ಸಲ್ಯ ಮಕ್ಕಳಿಗೆ ತೋರುವದು

ಸಮತೆಯಿಂದ ಅವರ ಸಮಸ್ಯೆಗಳನು ಆಲಿಸುವುದು

ಸಮಯ ಪರಿಪಾಲನೆಯ ರೂಢಿ ಮಾಡಿಕೊಳ್ಳುವುದು

ಸಮಾನತೆಯ ತತ್ವ ಸಾರುವುದೇ ನನ್ನ ಆದ್ಯ ಕರ್ತವ್ಯ


ಸತ್ಯ ನ್ಯಾಯ ನೀತಿ ಧರ್ಮ ಮಾರ್ಗದಲ್ಲಿ ನಡೆದು

ಹಿತಮಿತ ಆಹಾರ ‌ಸೇವಿಸುತ ಅನ್ನದ ಬೆಲೆ ಅರಿತು

ಸತಿಯ ಹಿತ ಆಲಿಸಿ ಅವಳ ಮಾತಿಗೆ ಬೆಲೆ ಕೊಡುತ

ಜಾತಿ ಮತ ಭೇದ ಮಾಡದಿರೋದು ನನ್ನ ಕರ್ತವ್ಯ


ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಕೈಮುಗಿವದು

ದೇಶ ಕಾಯುವ ಯೋಧರನು ತಪ್ಪದೆ ನಮಿಸುವುದು

ಹಸನಾಗಿ ಊಳುವ ಯೋಗಿ ರೈತರನು ನೆನೆಯೋದು

ಹೊಸ ಅನುಭವದಿ ಜೀವನ ಸಾಗಿಸುವದು ನನ್ನ ಕರ್ತವ್ಯ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ

ಬರಹಗಾರರ ಬಳಗ ರಾಜ್ಯ ಘಟಕ* 

         *ಹೂವಿನಹಡಗಲಿ*

               ✍️✍️

       *ಕವಿತಾ ಸಪ್ತಾಹ*

           🌻🌻

 *೧೯೭ನೇ ಗೋಷ್ಠಿ* 

ದಿನಾಂಕ-೨೨.೧೦.೨೦೨೦

ವಾರ-ಗುರುವಾರ

ನಿರ್ವಹಣೆ *-ಶ್ರೀ ಗಿರೀಶ್ ಪೂಜಾರ್* 

ವಿಷಯ- *ನನ್ನ ಕರ್ತವ್ಯ

ಕವಿತೆ ೧೬ ರಿಂದ ೨೦ ಸಾಲಿರಲಿ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 

🙏 *ಮಧುನಾಯ್ಕ.ಲಂಬಾಣಿ* 

      *ಬ.ಬ.ರಾ.ಘ.ಹೂ.ಹಡಗಲಿ*







Wednesday, October 21, 2020

೧೦ನೇ ಕನ್ನಡ ಕೌರವೇಂದ್ರನ ಕೊಂದೆ ನೀನು ಪದ್ಯಭಾಗದ ವೀಡಿಯೊ ಭಾಗ - ೨ ೨೨/೧೦/೨೦೨೦

 


ಸ್ವರಚಿತ ಕವನ ೨೧/೧೦/೨೦೨೦

 ಕವನದ ಶೀರ್ಷಿಕೆ

*ಭೂ ರಮೆಯ ಸೌಂದರ್ಯ ರಾಶಿ*


ವಿಧ ವಿಧವಾದ ಸುಂದರ ಗಿಡಮರಗಳು 

ಚಿಲಿಪಿಲಿ ಕಲರವ ಹೊರಡಿಸುವ ಹಕ್ಕಿಗಳು

ಖನಿಜ ಸಂಪನ್ಮೂಲಗಳ ಹಲವು ಬಗೆಗಳು

ಅಲ್ಲಲ್ಲಿ ಧಾರಾಕಾರವಾಗಿ ಸುರಿವ ಝರಿಗಳು


ದುಂಬಿಗಳ ಕಲರವದ ಇಂಪು

ಅನೇಕ ಹೂಗಳ ಪರಿಮಳದ ಕಂಪು

ಹುಲಿ,ಕರಡಿ,ಸಿಂಹ,ಚಿರತೆಗಳ ಗುಂಪು

ನವಿಲುಗಳ ನಾಟ್ಯ ನರ್ತನ ಕಣ್ಮನಕೆ ತಂಪು


ಬೆಟ್ಟ ಗುಡ್ಡ ಕಣಿವೆಗಳಲಿ ಹರಿವ ನದಿ ನೀರು

ಹಿಮಾಲಯದ ತಪ್ಪಲಿನ ಮೋಹಕ ದೃಶ್ಯ

ಭೋರ್ಗರೆದಿ ರಭಸದಿ ಸುರಿವ ಮಳೆಯು

ರುಚಿ ರುಚಿಯಾದ ಹಣ್ಣುಗಳ ಸವಿ ತಿನಿಸು


ತಿಳಿ ಬಿಳಿ ಬಣ್ಣದ ಶುಭ್ರವಾದ ಆಕಾಶ

ನಕ್ಷತ್ರ ಪುಂಜಗಳ ರಮಣೀಯ ದೃಶ್ಯಗಳು

ಅಧಿಪತಿಗಳಂತೆ ಮೆರೆವ ಸೂರ್ಯ ಚಂದ್ರರು

ಇದೆ ಅಲ್ಲವೇ ಭೂ ರಮೆಯ ಸೌಂದರ್ಯ ರಾಶಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ


*ಬರಹಗಾರರ ಬಳಗ ರಾಜ್ಯ ಘಟಕ* 

         *ಹೂವಿನಹಡಗಲಿ*

               ✍️✍️

       *ಕವಿತಾ ಸಪ್ತಾಹ*

           🌻🌻

 *೧೯೬ ನೇ ಗೋಷ್ಠಿ* 

ದಿನಾಂಕ-೨೧.೧೦.೨೦೨೦

ವಾರ- ಬುಧುವಾರ

ನಿರ್ವಹಣೆ- *ಶ್ರೀಮತಿ ಮಂಗಳ ಕೆ ಎಮ್* 

ವಿಷಯ- *ಸೌಂದರ್ಯ* 

ಕವಿತೆ ೧೬ ರಿಂದ ೨೦ ಸಾಲಿರಲಿ

       

 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 

🙏 *ಮಧುನಾಯ್ಕ.ಲಂಬಾಣಿ* 

      *ಬ.ಬ.ರಾ.ಘ.ಹೂ.ಹಡಗಲಿ*



ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೨೧/೧೦/೨೦೨೦

 ಅಹಂಕಾರವೆಂಬ ಅಜ್ಞಾನ ಕವನ

ದಿನಾಂಕ ೨೧/೧೦/೨೦೨೦



Tuesday, October 20, 2020

ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೦೨/೦೯/೨೦೨೦

 ಕನ್ನಡ ಸವಿನುಡಿ ಕವನ

ದಿನಾಂಕ ೦೨/೦೯/೨೦೨೦



ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೦೪/೦೯/೨೦೨೦

 ಚನ್ದ್ರನ ಚಮ್ತ್ಕಾರ ಕವನ

ದಿನಾಂಕ ೦೪/೦೯/೨೦೨೦



ಸ್ವರಚಿತ ಕವನ ೨೦/೧೦/೨೦೨೦

 ಕವನದ ಶೀರ್ಷಿಕೆ

*ನೀನು ಬಂದ ಮೇಲೆ*


ನೀನು ಮಡದಿಯಾಗಿ ಮನೆ ಸೇರಿದ ಮೇಲೆ

ಕೂಡಿದ್ದ ಸಂಸಾರ ಆಯಿತು ಎರಡು ಹೋಳಾ

ಅಣ್ಣತಮ್ಮಂದಿರ ಮಧ್ಯೆ ಇರಲಿಲ್ಲ ಭೇದಭಾವ

ನಿಮ್ಮಿಂದ ಬೇರೆ ಬೇರೆ ಆದೇವು ನೋಡಾ....!


ನಿಮ್ಮ ತಂದೆ ತಾಯಿ ಅಂದ್ರೆ ಪ್ರಾಣ ನಿಂಗೆ

ಅದೇ ಅತ್ತೆ ಮಾವಂದಿರೆಂದರೇ ತಾತ್ಸಾರವೇ

ಸವಿ ಮಾತಿಂದ ಓಣಿಯವರೊಡನೆ ಕಳೆವೆ ಕಾಲ 

ಆದರೆ ಮನೆಯರೊಂದಿಗಿಲ್ಲ ಮಾತುಕತೆ..!


ಮಕ್ಕಳು ಮರಿ ಆದರು ನೋಡಾ ಅವರವರ

ಪ್ರೀತೀಲಿ ಮರೆತೆವು ಎಲ್ಲಾ ನೋವು ಕಷ್ಟಗಳ

ನೀ ಬಂದ ಮೇಲೆ ಬದಲಾವಣೆ ಆಯ್ತು ಅದೇ

ಚಿಕ್ಕ ಸಂಸಾರ ಚೊಕ್ಕ ಸಂಸಾರ ಎಂಬುದು ಕೇಳಾ...!


ಕೂಡಿ ಬಾಳಿದರೆ ಸ್ವರ್ಗ ಸುಖವೆಂಬುದ ತಿಳಿ

ಬಂಧನವು ಆಗುವುದು ಗಟ್ಟಿ ಗುರು ಹಿರಿಯರ 

ಆದರ್ಶ,ನಡೆ,ನುಡಿ,ಆಚಾರ,ವಿಚಾರ,ಸಂಸ್ಕೃತಿ

ಇವೆಲ್ಲ ಬದುಕಿಗೆ ಬೆಳಕಾಗುವವು ನೋಡಾ....!


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



*ಬರಹಗಾರರ ಬಳಗ ರಾಜ್ಯ ಘಟಕ* 

         *ಹೂವಿನಹಡಗಲಿ*

               ✍️✍️

       *ಕವಿತಾ ಸಪ್ತಾಹ*

           🌻🌻

 *೧೯೫ನೇ ಗೋಷ್ಠಿ* 

ದಿನಾಂಕ-೨೦.೧೦.೨೦೨೦

ವಾರ- ಮಂಗಳವಾರ

ನಿರ್ವಹಣೆ *-ಶ್ರೀ ನಿಸಾರ್ ಅಹಮದ್*

ವಿಷಯ - *ಬದಲಾವಣೆ* 

ಕವಿತೆ ೧೬ ರಿಂದ ೨೦ ಸಾಲಿರಲಿ

          🌺🌺


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 

🙏 *ಮಧುನಾಯ್ಕ.ಲಂಬಾಣಿ* 

      *ಬ.ಬ.ರಾ.ಘ.ಹೂ.ಹಡಗಲಿ*








Monday, October 19, 2020

೮ನೇ ಕನ್ನಡ ಯಶೋಧರೆ ಗದ್ಯಭಾಗದ ವೀಡಿಯೊ ಭಾಗ - ೧ ೨೦/೧೦/೨೦೨೦


 

ಸ್ವರಚಿತ ಕವನ ೧೯/೧೦/೨೦೨೦

 ಕವನದ ಶೀರ್ಷಿಕೆ

*ಆತ್ಮವಿಶ್ವಾಸ*


ನಮಗೆ ಗೆಲುವು ಸಿಗಬೇಕಾದರೆ ಮೊದಲು

ಆತ್ಮವಿಶ್ವಾಸ ಇದ್ದರೆ ಅರ್ಧ ಗೆದ್ದಂತೆ ಸರಿ

ಹಿಡಿದ ಕೆಲಸವನ್ನು ಬಿಡದೆ ಸಾಧಿಸಲು

ಮುಖ್ಯವಾಗಿ ಛಲ ದೃಢ ನಿರ್ಧಾರ ಬೇಕು


ನೂರಾರು ಪ್ರಯತ್ನ ಮಾಡಿ ಕೊನೆಗೆ ಒಂದು

ದಿನ ಜಯ ನಮ್ಮದಾಗಲು ನೋಡುವರು

ಎಲ್ಲರೂ ನಮ್ಮೆಡೆಗೆ ಎಡೆಬಿಡದೆ ದುಡಿಮೆಯ

ಕಷ್ಟಗಳ ಸುರಿಮಳೆಯೇ ಲೆಕ್ಕಕ್ಕೆ ಬಾರದು ಆಗ


ಕಾಯಕದಲ್ಲಿ ಮೇಲು ಕೀಳೆನ್ನದೆ ನಿಷ್ಠೆಯಿಂದ

ದುಡಿದರೆ ಒಂದಲ್ಲಾ ಒಂದು ದಿನ ತಾನಾಗಿಯೇ

ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇರಲಿ

ಮನದಲಿ ಗೆದ್ದು ಬೀಗುವ ಅವಕಾಶ ನಮ್ಮದು


ಜಗತ್ತಿನಲ್ಲಿ ಎಲ್ಲವೂ ಅಸಾಧ್ಯವೇ ಸಾಧಿಸಿದ

ಮೇಲೆ ಇಷ್ಟೆನಾ ಎಂಬ ಭಾವನೆ ಮೂಡುತ್ತದೆ

ಅದಕ್ಕೆ ಹೊಸತನ್ನು ಆಲೋಚಿಸುವ ಜನರಿಗೆ

ಉಪಯೋಗಕ್ಕೆ ಬರುವದನು ಶೋಧಿಸೋಣ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ

*ಬರಹಗಾರರ ಬಳಗ ರಾಜ್ಯ ಘಟಕ*

         *ಹೂವಿನಹಡಗಲಿ*

               ✍️✍️

       *ಕವಿತಾ ಸಪ್ತಾಹ*


 *೧೯೪ನೇ ಗೋಷ್ಠಿ*

 *ದಿನಾಂಕ- ೧೯.೧೦.೨೦೨೦* 

 *ವಾರ-ಸೋಮವಾರ*


 *ನಿರ್ವಹಣೆ *-ಶ್ರೀ ಚನ್ನಬಸವಯ್ಯ ವಿ ಪೂಜೇರ** 

 *ವಿಷಯ- *ಆತ್ಮವಿಸ್ವಾಸ*


       *ಸೂಚನೆಗಳು*

👉🏻 *ಕವಿತೆ ೧೬ ರಿಂದ ೨೦ ಸಾಲಿರಲಿ*

👉🏻 *ಸಮಯ ಮುಂಜಾನೆ ೮ ಘಂಟೆಯಿಂದ ಸಂಜೆ ೫ ಘಂಟೆಯವರೆಗೆ*


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


✍🏻✍🏻✍🏻✍🏻✍🏻

💐💐💐💐💐

🙏🏻🙏🏻🙏🏻🙏🏻🙏🏻 *ಮಧುನಾಯ್ಕ.ಲಂಬಾಣಿ* 

      *ಬ.ಬ.ರಾ.ಘ.ಹೂ.ಹಡಗಲಿ*

ಸ್ವರಚಿತ ಕವನ ೧೮/೧೦/೨೦೨೦

 ಕವನದ ಶೀರ್ಷಿಕೆ

*ಸುಳ್ಳಿನ ಸರಮಾಲೆ*


ಮಾತೆತ್ತಿದರೆ ಸಾಕು ಸುಳ್ಳೇ ಹೇಳುವರು

ಮೋಬೈಲ್ನಲ್ಲಿ ಮಾತಾಡುತ್ತಾ ಅಲ್ಲೀನಿ

ಇಲ್ಲೀನಿ ಎಂದು ಹೇಳುತ ತಿರುಗುತಲೇ

ಮೋಸ ಮಾಡಿದರೆ ನಂಬಲು ಹೇಗೆ ಸಾಧ್ಯ


ಬಣ್ಣದ ಮಾತಿನಿಂದ ಜನರನ್ನು ಮೋಡಿ

ಮಾಡುತಲಿರುವರು ನೀರಿದ್ದಲಿ ಕೇಸರಿಲ್ಲ

ಕೆಸರಿದ್ದಲಿ ನೀರಿಲ್ಲ ಎನ್ನುವ ಮಾತಿಲ್ಲವೇ

ನಂಬಿಕೆಯನ್ನು ಕಳೆದುಕೊಂಡಿರುವರು ಜನ


ಜನಕೆ ಮಂಕು ಬೂದಿ ಎರಚುತ ನಿನಗೆ

ಅದು ಮಾಡುವೆ ಇದು ಮಾಡುವೆನು

ನನಗೆ ದೊಡ್ಡವರ ಪರಿಚಯವಿದೆ ಎಂದು

ಹೇಳುತ ಹಣ ಲಪಟಾಯಿಸುವ ಸಂಚು ಇದೆ


ಇದರಿಂದ ವಿಶ್ವಾಸ ಕಳೆದುಕೊಳ್ಳುವರು ಜನ

ನೈಜತೆಯನ್ನು ಒಪ್ಪುತ್ತಿಲ್ಲ ಅವರ ಮನ

ಸುಳ್ಳಿನ ಸರಮಾಲೆಯಲಿ ಬದುಕುವ ಬದಲು

ಇದ್ದುದನ್ನು ಇದ್ದಂತೆ ಹೇಳುವದ ಕಲಿತರಾಗದೆ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ

*ಬರಹಗಾರರ ಬಳಗ ರಾಜ್ಯ ಘಟಕ* 

         *ಹೂವಿನಹಡಗಲಿ*

               ✍️✍️

       *ಕವಿತಾ ಸಪ್ತಾಹ*

             🇮🇳🇮🇳

 *೧೯೩ ನೇ ಗೋಷ್ಠಿ* 

ದಿನಾಂಕ-೧೮.೧೦.೨೦೨೦

ವಾರ-ಬಾನುವಾರ

ನಿರ್ವಹಣೆ- *ಶ್ರೀಹುಸೇನಪ್ಪ ಸಜ್ಯೋಲಿ* 

ವಿಷಯ- *ಸುಳ್ಳುಎಂಬ ಮೋಸ*


     *ಸೂಚನೆಗಳು*


👉🏻 *ಕವಿತೆ ೧೬ ರಿಂದ ೨೦ ಸಾಲಿರಲಿ*

👉🏻 *ಮುಂಜಾನೆ ೮ ಘಂಟೆಯಿಂದ ಸಂಜೆ ೬ ಘಂಟೆಯೊಳಗೆ ಕವನ ಹಾಕಿ*


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 

🙏 *ಮಧುನಾಯ್ಕ.ಲಂಬಾಣಿ* 

      *ಬ.ಬ.ರಾ.ಘ.ಹೂ.ಹಡಗಲಿ*



ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೧೯/೧೦/೨೦೨೦

ಸುಳ್ಳಿನ ಸರಮಾಲೆ ಕವನ 

ದಿನಾಂಕ ೧೯/೧೦/೨೦೨೦



೧೦ನೇ ಕನ್ನಡ ಕೌರವೇಂದ್ರನ ಕೊಂದೆ ನೀನು ಪದ್ಯಭಾಗದ ವೀಡಿಯೊ ಭಾಗ - ೧ ೧೯/೧೦/೨೦೨೦

 


Sunday, October 18, 2020

ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೧೮/೧೦/೨೦೨೦

 ಅತ್ಯಾಚಾರ ಕವನ

ದಿನಾಂಕ ೧೮/೧೦/೨೦೨೦



ಸ್ವರಚಿತ ಕವನ ೧೭/೧೦/೨೦೨೦

 ಕವನದ ಶೀರ್ಷಿಕೆ

*ಅಹಂಕಾರವೆಂಬ ಅಜ್ಞಾನ*


ಅಹಂಕಾರವು ಮನುಜನ ಕೇಡಿನ ದಾರಿ

ಅಧಿಕಾರ,ಅಂತಸ್ತು,ವೈಭವ,ಬಂಗಾರ

ಅಹಂಕಾರಕ್ಕೆ ಮೂಲ ಇವುಗಳ ತೊರೆ

ನಿನ್ನಂತಹ ವ್ಯಕ್ತಿ ಇನ್ನೊಬ್ಬ ಇರಲಾರ


ವ್ಯಾಮೋಹ ಬಿಟ್ಟು ಸರಿ ದಾರಿಯಲ್ಲಿ ದುಡಿ

ನಿನ್ನ ನಂಬಿ ಹಲವು ಜನ ಬರುವರು ನೋಡ

ಪ್ರೀತಿ ಪ್ರೇಮವ ತೋರಿಸಿದರೆ ನೀನೇ ಬೇಡಾ

ಎಂದರೂ ಬಿಡದೆ ಹಿಂಬಾಲಿಸುವರು ನಿನ್ನ ಕಡೆ


ಜೀವನದಲ್ಲಿ ಕಳೆದುಕೊಳ್ಳುವದು ಏನಿಲ್ಲೋ

ಸವಿಮಾತು ಸ್ನೇಹ ಭಾವನೆ ತೋರೋ

ಅವನಿ ಕೊಟ್ಟರೂ ಸಿಗದ ವಾತ್ಸಲ್ಯದ ಪಥವೋ

ಯಾವುದೇ ಕಾರಣಕ್ಕೂ ಬಿಡದೆ ಪಡೆಯೋ


ಅಹಂಕಾರವೆಂಬ ಅಜ್ಞಾನವ ತೊರೆಯೋ

ಮಹಾ ಮಾನವತೆಯ ಬದುಕನು ಅರಿಯೋ

ಸಹಾಯ,ಸಹಕಾರ,ಸೌಹಾರ್ದತೆಯ ತೊರೋ

ಬಹಳ ಜನಪ್ರಿಯ ನಾಯಕನಾಗಿ ನೀ ಬಾಳೋ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



*ಬರಹಗಾರರ ಬಳಗ ರಾಜ್ಯ ಘಟಕ** 

         *ಹೂವಿನಹಡಗಲಿ*

               ✍️✍️

       *ಕವಿತಾ ಸಪ್ತಾಹ*


 *೧೯೨ನೇ ಗೋಷ್ಠಿ*

 *ದಿನಾಂಕ-೧೭.೧೦.೨೦೨೦* 

 *ವಾರ-ಶನಿವಾರ* 

 *ನಿರ್ವಹಣೆ- *ಶ್ರೀಚನ್ನ ಕೇಶವ* *ಪವಾರ** 

 *ವಿಷಯ-* *ಅಹಂಕಾರವೆಂಬ ಅಜ್ಞಾನ*


*ಸೂಚನೆಗಳು*

👉🏻 *ಕವಿತೆ ೧೬ ರಿಂದ ಇಪ್ಪತ್ತು ಸಾಲಿರಲಿ*

👉🏻 *ತಮ್ಮ ಕವನಗಳನ್ನು ಮುಂಜಾನೆ ೮ ಗಂಟೆಯಿಂದ ಸಂಜೆ ೫ ಘಂಟೆಯೊಳಗೆ ಹಾಕಿ*


*ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 

🙏 *ಮಧುನಾಯ್ಕ.ಲಂಬಾಣಿ* 

      *ಬ.ಬ.ರಾ.ಘ.ಹೂ.ಹಡಗಲಿ*



 

Friday, October 16, 2020

SSLC ಪೂರಕ ಪರೀಕ್ಷೆಯ ಫಲಿತಾಂಶ ಸೆಪ್ಟೆಂಬರ್ - ೨೦೨೦

ಎಸ್ ಎಸ್ ಎನ್ ಸಿ ಪೂರಕ ಪರೀಕ್ಷೆಯ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ 

ಸ್ವರಚಿತ ಕವನ ೧೬/೧೦/೨೦೨೦

 ಕವನದ ಶೀರ್ಷಿಕೆ

*ಅನ್ನ ಅಮೃತಕ್ಕೆ ಸಮಾನ*


ಅನ್ನ ಹೊಟ್ಟೆ ತುಂಬಿಸುವುದು ಅಣ್ಣಾ

ಅನ್ನ ಅಮೃತಕ್ಕೆ ಸಮಾನವಾದುದು

ತನ್ನಲ್ಲಿ ಎಷ್ಟು ಹಣವಿದ್ದರೂ ಕೂಡ

ತಿನ್ನಲು ಅನ್ನವೇ ಬೇಕು ಹಣವಲ್ಲವೋ


ರೈತರು ತಾವು ದುಡಿದು ಬೆಳೆ ಬೆಳೆದಾಗ

ಮಾತ್ರ ಎಲ್ಲರೂ ತಿನ್ನಲು ಬರುವುದು

ಸತತ ಪರಿಶ್ರಮ ಅಗತ್ಯ ಹೊರತುಪಡಿಸಿ

ಮತ್ತೆಲ್ಲೂ ಅಂಗಡಿಗಳಲ್ಲಿ ಸಿಗುವುದಿಲ್ಲ


ಪರಮ ಪವಿತ್ರವಾದ ಅನ್ನದ ಅಗುಳನು

ಮರೆಯದೆ ಗೌರವಿಸಬೇಕು ಜಗದಾಗ

ಕರದಲಿ ತಟ್ಟೆಯ ಹಿಡಿದು ತಿಂದರೆ ದೇಹಕ್ಕೆ

ಶರವೇಗದಲ್ಲಿ ಶಕ್ತಿಯ ಲಭಿಸುವುದು 


ರೊಕ್ಕ ಸಿಗುವುದೆಂಬ ಬರದಲಿ ಜನರು

ಸಿಕ್ಕ ಸಿಕ್ಕ ಕೈಗಾರಿಕೆಗಳಲ್ಲಿ ಕೆಲಸಕ್ಕೆ ಸೇರಿ

ತಕ್ಕುದಾದ ಜೀವನದ ಬಂಡಿ ಸಾಗಿಸಿದರೆ

ಚಿಕ್ಕ ಹಳ್ಳಿಯ ವ್ಯವಸಾಯ ಮಾಡೋರು ಯಾರ


ಸುಮ್ಮನೆ ಮನೆಯಲ್ಲಿ ಕುಳಿತು ಅರಚುತ

ಒಮ್ಮೆಯು ಹೊಲದಲಿ ದುಡಿಯದ ಬಳಿಕ

ನೆಮ್ಮದಿಯಾಗಿ ತಿನ್ನಲು ಬರುವುದೇ ಅನ್ನ

ಹಮ್ಮು ಬಿಮ್ಮು ಬಿಟ್ಟು ದುಡಿದರೆ ಮಾತ್ರ ಅನ್ನ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



*ಬರಹಗಾರರ ಬಳಗ ರಾಜ್ಯ ಘಟಕ** 

         *ಹೂವಿನಹಡಗಲಿ*

               ✍️✍️

       *ಕವಿತಾ ಸಪ್ತಾಹ*


 *೧೯೧ ನೇ ಗೋಷ್ಠಿ* 

 *ದಿನಾಂಕ-೧೬.೧೦.೨೦೨೦* 

 *ವಾರ-ಶುಕ್ರವಾರ* 

 *ನಿರ್ವಹಣೆ ಶ್ರೀ ಹಾಲೇಶ ಹಕ್ಕಂಡಿ* 

 *ವಿಷಯ-* *ಅನ್ನವೆಂಬ ಪರಭ್ರಹ್ಮ* 

 *ಕವಿತೆ ೧೬ ರಿಂದ ೨೦ ಸಾಲಿರಲಿ*


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 

🙏 *ಮಧುನಾಯ್ಕ.ಲಂಬಾಣಿ* 

      *ಬ.ಬ.ರಾ.ಘ.ಹೂ.ಹಡಗಲಿ*








೯ನೇ ಕನ್ನಡ ನಿಯತಿನಾರ್ ಮೀರಿದಪರ್ ಪದ್ಯಭಾಗದ ವೀಡಿಯೊ ೧೬/೧೦/೨೦೨೦

 


Thursday, October 15, 2020

ಸ್ವರಚಿತ ಕವನ ೧೫/೧೦/೨೦೨೦

 ಕವನದ ಶೀರ್ಷಿಕೆ

*ಅತ್ಯಾಚಾರ*


ಹೆಣ್ಣಿನ ಮೇಲೆ ನಿರಂತರ ನಡೆಯುತ್ತಿದೆ 

ಕಾಣದ ಕೈವಾಡ ಕಲ್ಪನೆಗೆ ಸಿಗದಂತಾಗಿದೆ

ಸಣ್ಣವರು ದೊಡ್ಡವರೆನ್ನದೆ ಕೈಗೆ ಸಿಕ್ಕವರನು

ಬಣ್ಣದ ಮಾತಿನಿಂದ ಮರುಳು ಮಾಡುವರು


ಹಲವಾರು ಕನಸುಗಳ ಕಟ್ಟಿ ಬಾಳಬೇಕಾದ

ಕೆಲವು ಮಕ್ಕಳು ಬಂಢರ ದಾಳಿಗೆ ಸಿಲುಕಿ

ವಿಲವಿಲನೆ ಒದ್ದಾಡಿ ಪ್ರಾಣ ತ್ಯಾಗ ಮಾಡಿ

ಸಲುಹಿ ಸಾಕಿದವರು ಗೋಳಿಡುವಂತೆ ಮಾಡಿ


ಭಾರತ ದೇಶ ಆದರ್ಶದ ಬೀಡು ಅನಾಚಾರದಂತ

ಖಾರವಾದ ವಿಷಯಗಳಿಂದ ಕೆಟ್ಟೆಸರನು

ತರುವಂತವರ ಬದುಕಿಗೆ ಸಿಗಬೇಕು ಗಲ್ಲು

ನಾರಿಯರ ಶಾಪ ಬಿಡದೆಂದು ಗೊತ್ತಾಗಬೇಕು


ದುಷ್ಟ ಶಕ್ತಿಗಳನ್ನು ಮೂಲೆಗುಂಪು ಮಾಡುವ

ಕಷ್ಟ ಕೊಟ್ಟವರ ವಿರುದ್ಧ ಸಿಡಿದು ಬಿಳುವ

ಶ್ರೇಷ್ಠ ಕಾನೂನು ಜಾರಿಗೆ ತರುವ ಮೂಲಕ

ಶಿಷ್ಟರ ರಕ್ಷಣೆ ಮಾಡಿ ಅತ್ಯಾಚಾರ ತಡೆಯಬೇಕು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ




೧೦ನೇ ಕನ್ನಡ ಎದೆಗೆ ಬಿದ್ದ ಅಕ್ಷರ ಗದ್ಯಭಾಗದ ವೀಡಿಯೊ ಭಾಗ - ೩ ೧೫/೧೦/೨೦೨೦

 


Wednesday, October 14, 2020

ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೧೫/೧೦/೨೦೨೦

 ಅಕ್ಕನ ಅಕ್ಕರೆ ಕವನ

ದಿನಾಂಕ ೧೫/೧೦/೨೦೨೦



ಸ್ವರಚಿತ ಕವನ ೧೪/೧೦/೨೦೨೦

 ಕವನದ ಶೀರ್ಷಿಕೆ

*ಅಕ್ಕನ ಅಕ್ಕರೆ*


ನನಗಿಂತಲೂ ದೊಡ್ಡವಳು ಅಷ್ಟೆ ದೊಡ್ಡ

ಮನಸ್ಸು ನಿನ್ನದು ನನಗೆ ಯಾವಾಗಲೂ

ಕನಸಲ್ಲೂ ಕೇಡನು ಬಯಸದವ ಜೀವ

ನೀನು ನಿನಗಾಗಿ ಮಾಡಲಿಲ್ಲ ನಾನೇನೂ...!


ತಾಯಿಯಂತೆ ವಿಶಾಲವಾದ ಮನಸು ಅಕ್ಕಾ

ನನಗೆ ದುಃಖವಾದರೆ ನೀನಳೋದು ಪಕ್ಕಾ

ಯಾವಾಗಲೂ ನನ್ನದೆ ಚಿಂತೆ ಅದೇಕಕ್ಕಾ

ನನಗೆ ತಿಳಿಯದು ಅಕ್ಕನ ಅಕ್ಕರೆ ಸಕ್ಕರೆಯಕ್ಕಾ


ಬಯಸದೆ ಬಂದ ಭಾಗ್ಯ ನೀನಾಗಿರುವೆ

ಚಂದಿರನ ನೆರಳಿನಂತೆ ತಂಪನೀಯುವೆ

ಬಾಲ್ಯದ ತುಂಟಾಟಗಳ ನಂಟು ನಿನ್ನಲ್ಲಿವೆ

ಆಟ ಆಡ್ಕೊಂಡು ಕುಣಕೋತ ತಿರುಗಿದೆವು


ಗಿಡಕೆ ಜೋಗುಳ ಆಡೋದು,ಕಾಲ್ಚೆಂಡು ಸದಾ

ಕೆರೆಯಲ್ಲಿ ಗೆಳೆಯರ ಸಂಗಡ ಈಜಾಡೋದು

ಹುಣಸೆ ಮರದಲಿ ಕಣ್ಣು ಮುಚ್ಚಾಲೆ ಆಡೋದು

ಈಗಿನ ಮಕ್ಕಳು ಮರೆತಿರುವರು ಆಡಿ ನಲಿಯೋದು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ









Tuesday, October 13, 2020

ಸ್ವರಚಿತ ಕವನ ೧೩/೧೦/೨೦೨೦

 ಕವನದ ಶೀರ್ಷಿಕೆ

*"ಹೆಣ್ತನದ ಸಾರ್ಥಕತೆ"*


ಗರ್ಭದಲಿ ಮಗುವಿನ ಕುರುಹು 

ಮೂಡಿದ್ದು ಗೊತ್ತಾದ ದಿನದಿಂದ 

ತಾಯಿ ಎಂಬ ದೇವತೆಗೆ ಆದ ಖುಷಿ 

ಅಷ್ಟಿಷ್ಟಲ್ಲ ಅದಕೆ ಸಾಟಿ ಎಂಬುದಿಲ್ಲ


ಆ ಮಗುವಿನ ಕಲ್ಪನೆಗಳ ಮೂಟೆ

ಹೊತ್ತು ಸಾಗುತಲಿರುವಳು ಅನುದಿನ

ಮಗುವಿಗೆ ಸ್ವಲ್ಪವೂ ಕಷ್ಟವಾಗದಂತೆ

ಪೊರೆವಳು ಸದಾ ಉಸಿರಲಿ ಉಸಿರಾಗಿ 


ನವಮಾಸ ತುಂಬುವ ದಿನಗಣನೆ

ಮಾಡುತ ಜನಿಸುವ ಮಗುವನು

ಸರಾಗವಾಗಿ ಅಡ್ಡಿಆತಂಕಗಳಾಗದೆ

ಹೆರಲೆಂದು ಬೇಡುವಳು ದೇವರಿಗೆ


ಬಾಣಂತನ ಬೇನೆಗಳ ಸಹಿಸಿಕೊಂಡು

ಮಗುವಿನ ಮುಖ ನೋಡಲು ನೋವೆಲ್ಲಾ

ಮಂಗಮಾಯವಾಗಿ ಸಂತಸ ಒಡಮೂಡಿ

 ಹೆಣ್ತನದ ಸಾರ್ಥಕತೆಗೆ ಆತೊರೆದ ಆಕ್ಷಣಕೆ


ಮಗುವು ಹೆತ್ತ ಮಡಿಲಲಿ ಆಟವಾಡಿ

ತಂದೆ ತಾಯಿಯ ಮನೆಮಂದಿಯೆಲ್ಲ

ಹೆಗಲಲ್ಲಿ ಹೊತ್ತು ಮರೆವರು ಶಿಶುವಿನ

ಬಾಲ ಲೀಲೆಗಳನು ನೋಡುತ ಸಂತಸದಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ






ಕರ್ನಾಟಕ ಭೂಮಿ ಪಹಣಿ

 ಕರ್ನಾಟಕದಲ್ಲಿರುವ ಭೂಮಿಯ ಪಹಣಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಲೋಕಸೇವಾ ಆಯೋಗ

 ಕರ್ನಾಟಕ ಲೋಕಸೇವಾ ಆಯೋಗಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

Pm kissan samman

pm kissan sammanಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ 

kseeb

 kseebಗೆ ಇಲ್ಲಿ ಕ್ಲಿಕ್ ಮಾಡಿ

STS Login Page

 STS loginಗೆ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದಲ್ಲಿ ಶಾಲಾ ಶಿಕ್ಷಣ

Karnataka School Educationಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

DSERT ಅಭ್ಯಾಸ ಪುಸ್ತಕಗಳು

ಅಭ್ಯಾಸ ಪುಸ್ತಕಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

೧ ರಿಂದ ೧೦ನೇ ತರಗತಿ ಪಠ್ಯಪುಸ್ತಕಗಳು

ಪಠ್ಯಪುಸ್ತಕಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Popular Links

೮ನೇ ತರಗತಿ ಕನ್ನಡ ಗೆಳೆತನ ಪದ್ಯಭಾಗದ ವೀಡಿಯೊ ೧೩/೧೦/೨೦೨೦

 


Monday, October 12, 2020

ಸ್ವರಚಿತ ಕವನ ೧೨/೧೦/೨೦೨೦

 ಕವನದ ಶೀರ್ಷಿಕೆ

*ಅಂತರಾಳದ ಮೃದಂಗ*


ಮನದಲ್ಲಿ ನೂರಾರು ಭಾವನೆಗಳು

ಯೋಚನೆಗಳು ಹಲವು ತಕತೈ ಎಂದು

ಹೊಯ್ದಾಟ ಮಾಡುತ್ತಿರುತ್ತವೆ ಒಂದೇ

ಸಮನೆ ನಿರ್ಧಾರಕ್ಕೆ ಬರಲು ಹಾಗದು


ಒಳಿತು ಕೆಡುಕುಗಳ ನಡುವೆ ತಿಕ್ಕಾಟ

ಒಳಿತೋ ಕೆಡಕೋ ಯಾವುದು

ತಿಳಿಯುತಿಲ್ಲ ಮನದ ನಡುವೆ ನಡೆವ

ಗೋಳಾಟ ಯಾರ ಮಾತನ್ನೂ ಕೇಳದು


ಪಶ್ಚಾತ್ತಾಪದಿಂದ ಬೆಂದವನು

ನಾನಾ ತರದಿ ಯೋಚ್ನೆ ಮಾಡಿ

ಮಾಡಿ ಅವನ ಮನಕೆ ಅವನ

ಉತ್ತರ ನೀಡಲು ಒದ್ದಾಡುವನು


ತಪ್ಪು ಮಾಡಿದ ಮನುಜನಿಗೆ

ಹಸೆ ಮಣೆ ಏರುವ ವ್ಯಕ್ತಿಗೆ ಸತ್ಯವನು 

ಮುಚ್ಚಿ ಸುಳ್ಳನು ಹೇಳುವವನ ಮನದಲಿ

ಅಂತರಾಳದ ಮೃದಂಗ ಬಡಿಯುತ್ತಿರುವುದು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*






ಹತ್ತನೇ ತರಗತಿ ಕನ್ನಡ ಎದೆಗೆ ಬಿದ್ದ ಅಕ್ಷರ ಗದ್ಯಭಾಗದ ವೀಡಿಯೊ ಭಾಗ - ೨ ೧೨/೧೦/೨೦೨೦

 


Sunday, October 11, 2020

ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೧೨/೧೦/೨೦೨೦

 ತ್ಯಾಗ ಬಲಿದಾನ ಕವನ

ದಿನಾಂಕ ೧೨/೧೦/೨೦೨೦



ಸ್ವರಚಿತ ಕವನ ೧೧/೧೦/೨೦೨೦

 *ಪೌರ್ಣಿಮಾ ಸಾಹಿತ್ಯ ವೇದಿಕೆ, ಸಿದ್ದಾಪುರ. ಜಿಲ್ಲೆ - ಉತ್ತರ ಕನ್ನಡ*


*ರಾಜ್ಯ ಮಟ್ಟದ ಆನ್ಲೈನ್ ಕವನ ಸ್ಪರ್ಧೆ*


*ವಿಷಯ- ಎಸ್ ಪಿ ಬಾಲಸುಬ್ರಹ್ಮಣ್ಯಂ ರ ಕನ್ನಡ ಸೇವೆ*

 

ಕವನದ ಶೀರ್ಷಿಕೆ

*ಕನ್ನಡ ಸೇವೆ*


ಕನ್ನಡ ಸಾಹಿತ್ಯ ಶ್ರೀಮಂತಿಯನ್ನು ಎತ್ತಿಹಿಡಿದು

ತನ್ನದೆ ಧ್ವನಿ ಕಂಠದ ಮೂಲಕ ಸವಿರುಚಿಯನು

ಚನ್ನುಡಿಯನು ಜಗಕೆ ಪರಿಚಯ ಮಾಡಿದವರು

ಕನ್ನಡ ನುಡಿ ಸುಲಲಿತವಾಗಿ ಹಾಡಿದ ಹಾಡುಗಾರ


ಬಾರಿಸು ಕನ್ನಡ ಡಿಂಡಿಮವ ಎನ್ನುವಂತೆ 

ಮನೆಮನೆಯಲ್ಲಿ ನಿನಾದವ ಒಡಮೂಡುವಂತೆ

ಸಿರಿಗನ್ನಡ ನುಡಿ ನರನಾಡಿಗಳಲ್ಲಿ ರಾರಾಜಿಸುವಂತೆ

ಹಲವು ಚಂದನ ವನದ ತಾರೆಯರು ಬೆಳಗುವಂತೆ


ರವಿ ಕಾಣದ್ದು ಕವಿ ಕಂಡ ಎಂಬ ಭಾವದಿ

ಸವಿನುಡಿಯ ಮೂಲಕ ಜನರು ಗುನುಗುವ

ಭಾವ ಕಂಡು ಬರುತ್ತದೆ ಜನ ಮೆಚ್ಚುಗೆ ಪಡೆದ

ಕವಿಪುಂಗವರ ಹೆಸರು ಪಸರಿಸುವ ಕೆಲಸ ಮಾಡಿದರು


ಓ...! ಎಸ್ಪಿ ಬಾಲಸುಬ್ರಹ್ಮಣ್ಯಂ ಗುರುಗಳೇ ಇದೋ ಕನ್ನಡಿಗರ  

ಕೋಟಿ ನಮನ ನಿಮಗೆ ತಮ್ಮ ನುಡಿಸಿರಿ ಕಂಠದಲ್ಲೇ        ಕನ್ನಡಾಂಬೆಯ ನಾಡಲಿ*ಕನ್ನಡ ಸೇವೆ*ಗೈದು                      ಸಾವಿರಾರು ಹಾಡುಗಳ ಮೂಲಕ ಕೀರ್ತಿ ಪತಾಕೆಯನ್ನು 


ಮುಗಿಲೆತ್ತರಕ್ಕೆ ಹಾರಿಸಿ ಹಾಡು ಹಾಡುತ ನಾಡಲಿ

ಸಂಭ್ರಮ ಸಡಗರದ ಹಲವು ಗೌರವ ಪ್ರಶಸ್ತಿಗಳು

ಪುರಸ್ಕಾರಕ್ಕೆ ಭಾಜನರಾಗಿರುವ ತಮ್ಮ ನಾಡಗುಡಿಯ

ಸೇವೆಗೆ ಅನಂತ ಅನಂತ ಧನ್ಯವಾದಗಳು ಅರ್ಪಿಸುವೆವು 


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ


 

ಸ್ವರಚಿತ ಕವನ ೧೧/೧೦/೨೦೨೦

 ಕವನದ ಶೀರ್ಷಿಕೆ

*ತ್ಯಾಗ ಬಲಿದಾನ*


ಸ್ವಾತಂತ್ರ್ಯ ಹೋರಾಟಗಾರರು ಕಲಿತನದಿ

ಮಾಡು ಇಲ್ಲವೇ ಮಡಿ ಎಂಬ ನುಡಿಗೆ

ಶಕ್ತಿ ತುಂಬಿ ತಮ್ಮ ಜೀವನದ ವ್ಯಾಮೋಹ

ತೊರೆದು ಭಾರತಾಂಬೆಯ ಸೇವೆಗೆ ಕಂಕಣ ಕಟ್ಟಿ


ನಾಡಗುಡಿಯ ರಕ್ಷಣೆಗಾಗಿ ಸಂಸಾರದ

ಬಂಧನ ಬಿಟ್ಟು ದೇಶ ಸೇವೆಯೇ ಈಶ ಸೇವೆ

ಎಂಬಂತೆ ಜೀವದ ಹಂಗು ತೊರೆದು ಹೋರಾಡಿ

ಮಡಿದ ಮಹಾನ್ ನಾಯಕರು ನಮ್ಮ ಹೆಮ್ಮ


ಸಾವಿರಾರು ಕೆಚ್ಚೆದೆಯ ವೀರ ಸೈನಿಕರು

ತ್ಯಾಗ ಬಲಿದಾನ ಮಾಡಿದ ಹೆಮ್ಮೆ ನಮ್ಮದು

ಗಾಂಧಿ ತಾತಾ ನೀವು ಚರಕ ಹಿಡಿದು ದೇಶದ

ರೈತರ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಿದರು


ಬಾಲ ಗಂಗಾಧರ ತಿಲಕ್, ಗೋಪಾಲ ಕೃಷ್ಣ ಗೋಖಲೆ

ಬಿಪಿನ್ ಚಂದ್ರಪಾಲ್, ಲಾಲಾ ಲಜಪತ್ ರಾಯರು

ಭಗತ್ ಸಿಂಗ್,ರಾಜಗುರು,ಸುಖದೇವ್, ಸುಭಾಷ್ ಚಂದ್ರ ಬೋಸ್ ಅವರ ತ್ಯಾಗ ಬಲಿದಾನದ ದೇಶ


ಕೆಚ್ಚೆದೆಯ ಹೋರಾಟಗಾರ ಅವಿರತ ಶ್ರಮ ಪಟ್ಟರು

ಭಾರತ ಮಾತಾ ಕೀ ಜೈ ಜೈಕಾರ ಹಾಕುತ್ತಾ ಹಾಕುತ್ತಾ

ಹುತಾತ್ಮರಾಗಿ ಮೆರೆದು ಕೀರ್ತಿ ಪತಾಕೆಯನ್ನು ಎತ್ತಿ

ಮುಗಿಲೆತ್ತರಕ್ಕೆ ಹಾರಿಸಿದ ವೀರರ ನಮ್ಮ ಹೆಮ್ಮೆಯ ನಾಡು


ರಚನೆ 

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ


Saturday, October 10, 2020

ಸ್ವರಚಿತ ಕವನ ೧೦/೧೦/೨೦೨೦

 ಕವನದ ಶೀರ್ಷಿಕೆ

*ಮೊಬೈಲ್ ಗೇಮ್ಸ್ ಆಡದಿರಿ*


ಆಧುನಿಕತೆಯ ಭರಾಟೆಯಲ್ಲಿ ಯುವಜನತೆಯು 

ಅದಮ್ಯವಾದ ಮೊಬೈಲ್ ಫೋನ್ ಬಳಕೆ ಮಾಡಿ

ಗದರಿಸಿದರು ಕೇಳದೆ ಆಡುತ್ತಿರುವರು ಹಠದಿಂದ

ಹೆದರಿಕೆ ಇಲ್ಲದೆ ಜನ ಸಮೂಹವೆಲ್ಲ ಹಾಳಾಗುತ್ತಿದೆ


ಸಾಯಂಕಾಲವಾದರೆ ಸಾಕು ಎಲ್ಲಿ ನೋಡಿದರಲ್ಲಿ

ಕೈಯಲ್ಲಿ ಹಿಡಿದು ಒತ್ತುತ್ತಾ ಸವರುತ್ತಾ ಕುಳಿತು

ಮೈಯೆಲ್ಲಾ ಕಣ್ಣಾಗಿ ದೃಷ್ಟಿಯಲ್ಲ ಅದರೆಡೆಗೆ ಬೀರಿ

ಭಯಂಕರ ದೃಶ್ಯಗಳನು ನೋಡುವರು ಎಡೆಬಿಡದೆ


ಏನು ಭ್ರಮೆಯೋ ತಿಳಿಯದಾಗಿದೆ ಈ ಜನರಿಗೆ

ಅಲ್ಲಾ ಪರದೆಯ ಮೇಲೆ ಆಡುವ ಆಟಗಳಿಗೆ

ಮಾರುಹೋಗಿ ನಿಜ ಜೀವನದಲ್ಲಿ ಅದು ಕಲಿಕೆಗೆ

ಪೂರಕವೇ ಯೋಚಿಸಿ ತಿಳಿಸಿರಿ ನಿಮ್ಮ ಸ್ನೇಹಿತರಿಗೆ


ಮೊಬೈಲ್ನಲ್ಲಿ ಆಡಿದ ಕಾರು,ಬೈಕು ರೇಸ್ ಹೊರಗಡೆ

ಓಡಿಸಲು ಹೋಗಿ ಅಪಾಯಕ್ಕೆ ತುತ್ತಾದಿರಿ ನೋಡಿ

ಪಬ್ಜಿ ಆಠ ಅಲ್ಲಿ ಸೂಟ್ ಮಾಡು ಅವನ ಹೊಡಿ

ಇವನ ಹೊಡಿ ಎಂದು ಅರಚುವದ ನೀವು ಬಿಡಿ


ಆ ಗೇಮ್ ಈ ಗೇಮ್ ಎಂದು ಹಾಳಾದ್ದುನ್ನು

ಹಗಲು ರಾತ್ರಿ ಆಡಿ ಓದಲು ಸಮಯ‌ವೇ

ಸಿಗದೆ ಜೀವನದಲ್ಲಿ ಏನು ಸಾಧನೆ ಮಾಡಲಾಗದು

ಹಾಗಾಗಿ ಮೊಬೈಲ್ ಗೇಮ್ಸ್ ಆಡದಿರಿ ಗೆಳೆಯರೆ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ




ಸ್ವರಚಿತ ಕವನ ೧೦/೧೦/೨೦೨೦

 ಕವನದ ಶೀರ್ಷಿಕೆ

*ತವರು ಮನೆ*


ಹೆಣ್ಣಿನ ಮನಸ್ಸು ಎಳೆಯುವುದು ತವರ

ಆಕೆಗೆ ಎಷ್ಟೇ ಸಕಲ ಸೌಕರ್ಯ ಇದ್ದರೂ

ಅಮ್ಮ ಅಪ್ಪನ ಮಡಿಲಲ್ಲಿ ಬೆಳೆದಿರೋ

ನೆನಪು ಅಳಿಸಲು ಸಾಧ್ಯವೇ ಮರೆಯದಿರು


ಬಂಧು-ಬಾಂಧವರೊಂದಿಗಿನ ಒಡನಾಟ

ಹೆಂಗೆಳೆಯರೊಂದಿಗಿನ ಹಾಡಿದ ಆಟಪಾಠ

ಅಣ್ಣತಮ್ಮ,ಅಕ್ಕತಂಗಿಯರ ತೊರೆವ ಸಂಕಟ

ಗಂಡನ ಮನೆವರೊಂದಿಗೆ ಹೊಂದಿಕೊಳ್ಳುವ ಹಠ


ತವರ ಮನೆ ಯಾವಾಗಲೂ ಸುಖಿಯಾಗಿರಲು

ಸದಾ ಬಯಸುತ ಯೋಗಕ್ಷೇಮ ನೋಡಲು

ತವಕದಿ ಕಾಯುವಳು ಸ್ವಯಂ ಪ್ರೀತಿಯಿಂದಲೇ

ಭಾಗಿಯಾಗುವಳು ಅವರ ಸುಖ ದುಃಖಗಳಲಿ 


ಹೆಣ್ಣು ಹೆತ್ತ ತವರು ಮನೆ ಗಂಡನ ಮನೆಯನ್ನು

ಎರಡು ಕುಟುಂಬಗಳ ನಡುವೆ ಸೌಹಾರ್ದತೆಯನ್ನು

ಆ ನಂಟು ಬಿಡಿಸಲಾಗದ ಬಂಧ ಅನುಬಂಧವನ್ನು

ಸಂಬಂಧಗಳ ಗಟ್ಟಿಯಾಗಿಸೋದು ಅವಳ ಪ್ರೀತಿಯನ್ನು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*



*೧೮೫ನೇ ಗೋಷ್ಠಿ*

                  🌹🌹

 *ಬರಹಗಾರರ ಬಳಗ ರಾಜ್ಯ ಘಟಕ* 

        *ಹೂವಿನಹಡಗಲಿ* 

                   🌸🌸

 *ದಿನಾಂಕ-೧೦.೧೦.೨೦೨೦* 

                   🌹🌹

 *ವಾರ-ಶನಿವಾರ* 

                   🌻🌻

 *ವಿಷಯ-ತವರುಮನೆ* 

                   🌷🌷

 *ನಿರ್ವಹಣೆ-ಶ್ರೀಮತಿ ರೂಪಾ ಪಾಟೀಲ್*    

                    🍀🍀


೧.ಕವಿತೆ ೧೬ ರಿಂದ ೨೦ ಸಾಲಿರಲಿ

೨.ಸಮಯ ಮುಂಜಾನೆ ೮ ರಿಂದ ಸಂಜೆ ೬

೩.ಗೋಷ್ಠಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ


 ✍️ *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 



 🙏 *ಮಧುನಾಯ್ಕ.ಲಂಬಾಣಿ* 

       *ಬ.ಬ.ರಾ.ಘ.ಹೂ.ಹಡಗಲಿ*


Friday, October 9, 2020

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ September - 2020

 ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ

೯ನೇ ಕನ್ನಡ ಪ್ರಜಾನಿಷ್ಠೆ ಗದ್ಯಭಾಗದ ವೀಡಿಯೊ ಭಾಗ - ೨ ೦೯/೧೦/೨೦೨೦

 


ಸ್ವರಚಿತ ಕವನ ೦೯/೧೦/೨೦೨೦

 ಕವನದ ಶೀರ್ಷಿಕೆ

*ಸಮರ್ಪಣೆ*


ಹೆಂಡತಿಯ ಜೀವನ ಗಂಡನಿಗೆ ಸಮರ್ಪಣೆ

ತಂದೆ-ತಾಯಿಯ ಜೀವನ ಮಕ್ಕಳಿಗೆ ಸಮರ್ಪಣೆ

ಗುರುವಿನ ಜೀವನ ಶಿಷ್ಯರಿಗೆ ಸಮರ್ಪಣೆ

ಸೈನಿಕನ ಜೀವನ ದೇಶಕ್ಕೆ ಸಮರ್ಪಣೆ


ವೈದ್ಯರ ಜೀವನ ರೋಗಿಗಳಿಗೆ ಸಮರ್ಪಣೆ

ಸುಶ್ರುಕಿಯರ ಜೀವನ ಸೇವೆಗೆ ಸಮರ್ಪಣೆ

ರೈತನ ಜೀವನ ಭೂರಮೆಗೆ ಸಮರ್ಪಣೆ

ಕಾರ್ಮಿಕರ ಜೀವನ ದುಡಿಮೆಗೆ ಸಮರ್ಪಣೆ


ಜನರ ಭಕ್ತಿ ರಾಜನಿಗೆ ಸಮರ್ಪಣೆ

ಭಕ್ತರ ಭಕ್ತಿ ದೇವರಿಗೆ ಸಮರ್ಪಣೆ

ಶಿಷ್ಯರು ಗುರುವಿಗೆ ಗೌರವದ ಸಮರ್ಪಣೆ

ಸಮಾಜ ಸೇವಕರು ಜನ ಸೇವೆಗೆ ಸಮರ್ಪಣೆ


ಇಂತಪ್ಪ ವಿವಿಧ ಜನರ ಸಮರ್ಪಣೆ ನೋಡೋ

ಕಲಿಯುಗದಲ್ಲಿ ನಾಟಕೀಯತೆಗೆ ಬೆಲೆ ನೋಡೋ

ಯಾರು ಸಮಾಜದಲ್ಲಿ ಗೌರವಯುತ ಬಾಳುವರು ನೋಡೋ

ಅವರವರ ಯೋಗ್ಯತೆಗೆ ಜನ ಬೆಲೆ ಕೊಡುವರು ನೋಡೋ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ

*೧೮೪ನೇ ಗೋಷ್ಠಿ*

                  🌹🌹

 *ಬರಹಗಾರರ ಬಳಗ ರಾಜ್ಯ ಘಟಕ* 

        *ಹೂವಿನಹಡಗಲಿ* 

                   🌸🌸

 *ದಿನಾಂಕ-೦೯.೧೦.೨೦೨೦* 

                   🌹🌹

 *ವಾರ-ಶುಕ್ರವಾರ* 

                   🌻🌻

 *ವಿಷಯ-ಸಮರ್ಪಣೆ* 

                   🌷🌷

 *ನಿರ್ವಹಣೆ-ಶ್ರೀ ನಾಗರಾಜ ಸಣ್ಣಪ್ಪ ಅರ್ಕಸಾಲಿ*    

                    🍀🍀


೧.ಕವಿತೆ ೧೬ ರಿಂದ ೨೦ ಸಾಲಿರಲಿ

೨.ಸಮಯ ಮುಂಜಾನೆ ೮ ರಿಂದ ಸಂಜೆ ೬

೩.ಗೋಷ್ಠಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ


 ✍️ *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 



 🙏 *ಮಧುನಾಯ್ಕ.ಲಂಬಾಣಿ* 

       *ಬ.ಬ.ರಾ.ಘ.ಹೂ.ಹಡಗಲಿ*







Thursday, October 8, 2020

ಸ್ವರಚಿತ ಕವನ ೦೮/೧೦/೨೦೨೦

 ಕವನದ ಶೀರ್ಷಿಕೆ

*ಯೋಧರಿಗೊಂದು ನಮನ ಸಲ್ಲಿಸಿವೆವು*


ನಾಡಿನ ಯೋಧರು ಗಡಿಯ ಕಾಯುತ

ಕಾವಲಿರುವರು ಅವರು ಕಾಯುತಲಿರುವರೂ

ನಾಡಿನ ಜನರು ಹಿತವಾಗಿರಲು ಸದಾ

ಬಯಸುವರು ಅವರು ಸಾಹಸ ಮೆರೆವರೂ


ಮಣ್ಣಿನ ಋಣವ ತೀರಿಸಲು ಅವರು

ಯುದ್ಧ ಮಾಡುತ ಮಡಿದು ಅಮರರಾಗುವರು

ದೇಶದ ಗುಡಿಯೇ ಅವರಿಗೆ ಪರಶ್ರೇಷ್ಠವು 

ಅದು ಪರಮಾನಂದವು ಅವರು ದೇಶ ಕಾಯುವರು


ಯೋಧನು ಮನೆಯ ಕುಟುಂಬವನ್ನು 

ತೊರೆದು ಬಿಡುವನು ಅವನು ಮರೆತು ಬಿಡುವನು

ಹೆಂಡಿರು ಮಕ್ಕಳು ಸಂಸಾರವೆಲ್ಲ

ಯಾವ ಲೆಕ್ಕವೋ ಅವರಿಗೆ ಅದೇ ಸ್ಪೂರ್ತಿಯು


ನಾಡಿನ ಭವ್ಯ ಜನಗಳ ಸಂರಕ್ಷಣೆಗೆ

ಮನವು ಸದಾ ತುಡಿಯುತಲಿರುವುದು ಅವರು

ನಮ್ಮ ಏಳ್ಗೆಗೆಯ ಬಯಸುತ ಹಗಲಿರುಳು

ಕಾವಲಿರುವಂತ ಯೋಧರಿಗೊಂದು ನಮನ ಸಲ್ಲಿಸಿವೆವು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



*೧೮೩ನೇ ಗೋಷ್ಠಿ*

                  🌹🌹

 *ಬರಹಗಾರರ ಬಳಗ ರಾಜ್ಯ ಘಟಕ* 

        *ಹೂವಿನಹಡಗಲಿ* 

                   🌸🌸

 *ದಿನಾಂಕ-೦೮.೧೦.೨೦೨೦* 

                   🌹🌹

 *ವಾರ-ಗುರುವಾರ* 

                   🌻🌻

 *ವಿಷಯ-ಯೋಧರು* 

                   🌷🌷

 *ನಿರ್ವಹಣೆ-ಶ್ರೀ ವೆಂಕಟೇಶ ಬಡಿಗೇರ*    

                    🍀🍀


೧.ಕವಿತೆ ೧೬ ರಿಂದ ೨೦ ಸಾಲಿರಲಿ

೨.ಸಮಯ ಮುಂಜಾನೆ ೮ ರಿಂದ ಸಂಜೆ ೬

೩.ಗೋಷ್ಠಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ


 ✍️ *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 



 🙏 *ಮಧುನಾಯ್ಕ.ಲಂಬಾಣಿ* 

       *ಬ.ಬ.ರಾ.ಘ.ಹೂ.ಹಡಗಲಿ*









Wednesday, October 7, 2020

೧೦ನೇ ತರಗತಿ ಕನ್ನಡ ಎದೆಗೆ ಬಿದ್ದ ಅಕ್ಷರ ಗದ್ಯಭಾಗದ ವೀಡಿಯೊ ಭಾಗ - ೧ ೦೮/೧೦/೨೦೨೦

 


ಸ್ವರಚಿತ ಕವನ ೦೭/೧೦/೨೦೨೦

 ಕವನದ ಶೀರ್ಷಿಕೆ

*ಸಂತೃಪ್ತಿಯ ಜೀವನ*


ಮಾನವ ತನ್ನಲ್ಲಿ ಎಲ್ಲಾ ಇದ್ದರೂ ನೆಮ್ಮದಿ ಇಲ್ಲ

ಕನಕ,ಬೆಳ್ಳಿ,ವಜ್ರ, ವೈಢೂರ್ಯ,ಸಕಲ ಸಂಪತ್ತು

ಏನೇನು ಬೇಕೋ ಅಷ್ಟು ಇದ್ರೂ ಕೂಡ ಸಾಕು

ಎನ್ನುವ ಮಾತೇ ಅವನ ಬಾಯಿಂದ ಬಾರದು


ಬರಿಗಾಲಲ್ಲಿ ನಡೆವ ಮನುಜಗೆ ಚಪ್ಪಲಿ ಬೇಕು

ಸೈಕಲ್ ಮೇಲೆ ಸವಾರಿ ಮಾಡುವವಗೆ ಬೈಕು

ಬೈಕ್ ಇದ್ದರೆ ಕಾರಿನೊಳಗೆ ಕೂಡುವ ತವಕ

ಕಾರ್ ಇದ್ದರೆ ಆಕಾಶದಿ ಸಂಚರಿಸುವ ಬಯಕೆ


ಮನೆಯ ಪಕ್ಕದವರು ಏನೇನು ತರುವರೋ

ತಾನು ತರಬೇಕು ಅವರ ಸಮ ಬಾಳುವ ಹಠ

ಮನೆಯಿಲ್ಲದ ಮನುಜಗೆ ಮನೆಕಟ್ಟುವ ಛಲ

ಮನೆ ಮಕ್ಕಳ ಕಲ್ಯಾಣ ಬಗ್ಗೆಯೂ ಯೋಚನೆ


ಹೀಗೆ ಸಂಸಾರದ ಬಂಧನ ಬಿಡಿಸಲಾಗದ ನಂಟು

ಮಗ ಮಗಳು ಮಡದಿ ಕುಟುಂಬದ ಕಗ್ಗಂಟು

ಸಾಗುವನು ಜೀವನ ಪಯಣದಿ ನೆಮ್ಮದಿ ಬಿಟ್ಟು

ಜಗ್ಗದೆ ಕುಗ್ಗದೆ ಸಂತೃಪ್ತಿಯು ಇಲ್ಲದೆ ಕಂಗೆಟ್ಟು


ಅದಕ್ಕಾಗಿ ಹಾಸಿಗೆ ಇದ್ದಷ್ಟು ಕಾಲು ಚಾಚುವ ಗುಣ

ಸದ್ಯದ ಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ನಡೆಸಿ

ಬದುಕು ಹಸನಾಗಿಸಲು ತಕ್ಕ ಹವ್ಯಾಸ ರೂಢಿಸಿ

ಮದ ಮತ್ಸರ ರಹಿತ ಸಂತೃಪ್ತಿ ಜೀವನ ನಡೆಸೋಣ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ





Tuesday, October 6, 2020

ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ ೦೭/೧೦/೨೦೨೦

 ಭ್ರಷ್ಟಾಚಾರದಲ್ಲಿ ಬೀಳದಂತೆ ಉಳಿಸಿ ಕವನ

ದಿನಾಂಕ ೦೭/೧೦/೨೦೨೦



ಸ್ವರಚಿತ ಕವನ ೦೬/೧೦/೨೦೨೦

 ಕವನದ ಶೀರ್ಷಿಕೆ

*ಹಸಿದೊಡಲು*


ಹಸಿದೊಡಲು ಬಹಳೇ ಕೆಟ್ಟದು ಏಕೆಂದರೆ

ಮಾಡಬಾರದು ಮಾಡಿಸುವ ಸಾಧ್ಯತೆ ಹೆಚ್ಚು

ದುಡಿಯದೆ ಮೈಗಳ್ಳರನು ಒಡಲು ಸುಮ್ಮನೆ

ಹೇಗೆ ಬಿಡವುದು ಒಳ್ಳೆಯದು ಮಾಡಿದರೆ ಸರಿ


‌ಸ್ವಾಭಿಮಾನವ ಬಿಟ್ಟು ಬೇಡುವಂತೆ ಮಾಡುವ

ಕಳ್ಳತನ ಕೊಲೆ ಸುಲಿಗೆ ಅತ್ಯಾಚಾರ ಮಾಡಲು

ಹಿಂಜರಿಯದು ಭಯೋತ್ಪಾದಕ ಚಟುವಟಿಕೆ

ಕೆಲಸ ಮಾಡಲು ಸಿದ್ಧರಾಗುವಂತೆ ಮಾಡುವುದು


ಈ ಹಾಳು ಒಡಲು ಹಸಿಯದಿದ್ದಡೆ ಎಲ್ಲರೂ

ಆಯಾಗಿ ಇರುತ್ತಿದ್ದರು ಜನ ಒಬ್ಬರಿಗೊಬ್ಬರು

ಮಾತು ಕೇಳದೆ ಸ್ವಚ್ಛಂದವಾಗಿ ಬದುಕುತ್ತಿದ್ದರು

ಅದು ಒಂದು ರೀತಿಯ ಸಮಾಜಕ್ಕೆ ತೊಂದರೆ


ಅದಕ್ಕಾಗಿಯೇ ಹಸಿದೊಡಲನು ಖುಷಿ ಪಡಿಸಲು

ಕಾಯಕವೇ ಕೈಲಾಸ ಎಂಬಂತೆ ನಿಷ್ಠೆಯಿಂದಲೇ

ದುಡಿದು ಬಾಳಿನ ಸಾರ್ಥಕತೆಯನು ಪಡೆಯಲು

ಮನುಷ್ಯ ವಾಮಮಾರ್ಗದಿ ನಡೆಯದೆ ಬದುಕಲಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


*೧೮೧ನೇ ಗೋಷ್ಠಿ*

                  🌹🌹

 *ಬರಹಗಾರರ ಬಳಗ ರಾಜ್ಯ ಘಟಕ* 

        *ಹೂವಿನಹಡಗಲಿ* 

                   🌸🌸

 *ದಿನಾಂಕ-೦೬.೧೦.೨೦೨೦* 

                   🌹🌹

 *ವಾರ-ಮಂಗಳವಾರ* 

                   🌻🌻

 *ವಿಷಯ-ಹಸಿದೊಡಲು* 

                   🌷🌷

 *ನಿರ್ವಹಣೆ-ಶ್ರೀಮತಿ ಸುಪ್ರೀತ್ ಎಸ್* *ಶೀಲವಂತ*    

                    🍀🍀


೧.ಕವಿತೆ ೧೬ ರಿಂದ ೨೦ ಸಾಲಿರಲಿ

೨.ಸಮಯ ಮುಂಜಾನೆ ೮ ರಿಂದ ಸಂಜೆ ೬

೩.ಗೋಷ್ಠಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ


 ✍️ *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 



 🙏 *ಮಧುನಾಯ್ಕ.ಲಂಬಾಣಿ* 

       *ಬ.ಬ.ರಾ.ಘ.ಹೂ.ಹಡಗಲಿ*

೮ನೇ ಕನ್ನಡ ಸಾರ್ಥಕ ಬದುಕಿನ ಸಾಧಕ ಗದ್ಯದ ವೀಡಿಯೊ ಭಾಗ - ೨ ೦೬/೧೦/೨೦೨೦

 


Monday, October 5, 2020

೧೦ನೇ ಪದ್ಯ ಪಾಠ ಹಲಗಲಿಯ ಬೇಡರು ವೀಡಿಯೊ ಭಾಗ - ೨ ೦೫/೧೦/೨೦೨೦


 

ಸ್ವರಚಿತ ಕವನ 05-10-2020

 ಕವನದ ಶೀರ್ಷಿಕೆ

*ಭ್ರಷ್ಟಾಚಾರದಲಿ ಬಿಳದಂತೆ ಉಳಿಸಿ*


ನಡೆಯುತ್ತಿದೆ ವಂಚನೆ ಎಲ್ಲಾತರದಿಂದ

ಮನುಜ ಮನುಜರ ನಡುವೆ ‌ಸಂಬಂಧ

ಗಾಳಿಗೆ ತೂರಿ ಸಂಪತ್ತಿನ ಆಸೆಯಿಂದ

ಬೇಗ ಶ್ರೀಮಂತರಾಗುವ ಆತುರದಿಂದ


ಮೈಮುರಿದು ದುಡಿಯದೆ ಸುಮ್ಮನೆ ಬರಲಿ

ಕಂತೆ ಕಂತೆ ನೋಟುಗಳು ಎಂಬ ಭ್ರಮೆಯಲಿ

ತಮ್ಮ ಅಧಿಕಾರವನು ದುರ್ಬಳಕೆ ಮಾಡುತ್ತಲೇ

ನಡೆಯುವರು ಹೀಗೆ ಕಾನೂನು ಮುರಿಯುತ್ತಲೇ


ಬ್ಯಾಂಕಿನ ಅಧಿಕಾರಿಯ ಸೋಗಿನಲ್ಲಿ ಕರೆ ಮಾಡಿ

ಒಡೆಯುವರು ಅಮಾಯಕ ಜನರಲ್ಲಿನ ದುಡ್ಡು

ಲಾಟರಿ ಬಂದಿದೆ ನಿಮ್ಮ ನಂಬರಗೆ ನೀವು ಕೊಡಿ

ಇಂತಿಷ್ಟು ಹಣ ಎಂದು ಎಲ್ಲವ ದೋಚಿಕೊಂಡು


ಪೋನನು ಎತ್ತದೆ ಸತಾಯಿಸುವರು ಜನಗಳನು

ನಂಬದಿರಿ ಉಚಿತ ಸಿಗುವ ಉಡುಗೊರೆಗಳನು

ದುಷ್ಟರ ಮಾತಿನ ಬಲೆಯಲ್ಲಿ ಬಿದ್ದವರು ನಡೆದುದನ್ನು

ತಿಳಿಸಿ ಭ್ರಷ್ಟಾಚಾರದಲಿ ಬೀಳದಂತೆ ಉಳಿಸಿ ಜನರನ್ನು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ










ಕೆ-ಸೆಟ್ ಪರೀಕ್ಷೆ ಕೀ ಉತ್ತರಗಳನ್ನು ಬಿಟ್ಟಿದ್ದಾರೆ ಅದರ ಲಿಂಕ್ ಇಲ್ಲಿದೆ ತಾವು ನೋಡಬಹುದು

 ದಿನಾಂಕ 27-09-2020 ರಂದು ನಡೆದ ಕೆ-ಸೆಟ್ ಪರೀಕ್ಷೆ ಕೀ ಉತ್ತರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Saturday, October 3, 2020

ಸ್ವರಚಿತ ಕವನ 04/10/2020

 ಅಭಿನಂದನಾ ಪತ್ರ

ಕವನದ ಶೀರ್ಷಿಕೆ

*ಪ್ರಾಣಿ ದಯೆ*


ಮೂಕ ಪ್ರಾಣಿಗಳು ನಂಬಿಕೆಯ ನೆಂಟರು

ಮಮತೆಯ ತೋರಿದರೆ ಹಿಂಬಾಲಿಸಿ ಬರುವವು

ಸಮಯಕ್ಕೆ ತಕ್ಕಂತೆ ಸ್ವಲ್ಪ ಗದರಿಸಿದರೆ ಸಾಕು 

ಸುಮ್ಮನೆ ಬಾಲ ಮುದುರಿಕೊಂಡು ಇರುವವು ಸಂಗಡ


ಹೊಸಬರನು ನೋಡಿ ಹೂಂಕರಿಸುವವು ನನ್ಗೆ

ಇವರ ಪರಿಚಯವಿಲ್ಲ ಇವನ್ಯಾರೋ ಹೊಸಬ

ಬಂದಿಹನೆಂದು ಸೂಚನೆಯ ನೀಡುವವು ಗೊತ್ತಿರುವ

ವ್ಯಕ್ತಿಯಾದರೆ ಬಾಲ ಅಳ್ಳಾಡಿಸಿ ಪ್ರೀತಿಯ ತೋರುವವು


ಮನೆಗೆ ಕಾವಲುಗಾರನಾಗಿ ಗೆಳೆಯನಂತೆ ನಮ್ಮ

ಜೊತೆಗೂಡಿ ಸಾಗುವವು ನಿರಂತರ ನಮ್ಮೆಡೆಗೆ 

ನಮಗೆ ಆಪತ್ಕಾಲದಲ್ಲಿ ಸ್ವಯಂ ಸೇವಕರಂತೆ

ಸಹಾಯ ಮಾಡುವ ಗುಣ ಮನುಜನಿಗಿಂತ ಮೇಲು


ಸದಾ ನಮ್ಮಯ ಒಳಿತಿಗಾಗಿ ಮಿಡಿಯುವ ಹೃದಯ

ಮಾತು ಬಾರದ ಪ್ರಾಣಿಗಳಿರಲು ಮಾತು ಬಂದರೂ

ಬೇರೆಯವರ ಭಾವನೆಗೆ ಬೆಲೆ ನೀಡದೆ ನೋವುಂಟು

ಮಾಡುವದು ಬಿಟ್ಟು ಪ್ರಾಣಿ ದಯೆ ನಾವು 

ಪಾಲಿಸಿದರಾಗದೆ.


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ‌.ಜಿ. ಯಾದಗಿರಿ




🙏 *೧೭೮ ನೇ ಕವಿಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


✍🏻✍🏻💐💐 *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* 💐💐✍🏻✍🏻


🌹 *ದಿನಾಂಕ-೦೪.೧೦.೨೦೨೦* 


🌸 *ವಾರ-ರವಿವಾರ* 


🌷 *ವಿಷಯ-ಪ್ರಾಣಿ ದಯೆ* 


🌻 *ನಿರ್ವಹಣೆ-ಶ್ರೀಮತಿ ಐ ಜಯಮ್ಮ ಮತ್ತೀಹಳ್ಳಿ* 


೧. ಕವಿತೆ ೧೬ ರಿಂದ ೨೦ ಸಾಲಿರಲಿ


೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)


೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*


೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ


೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ


೬. ಕವಿತಾ ಸಪ್ತಾಹದ ೭ ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಮಾತ್ರ *ಅಭಿನಂದನಾ ಪತ್ರ* ವನ್ನು ನೀಡಿ ಗೌರವಿಸಲಾಗುವುದು.


೭. ನಿಮ್ಮ ಪೂರ್ಣಹೆಸರನ್ನು (ಶ್ರೀ, ಶ್ರೀಮತಿ ಅಥವಾ ಕು ) ಬಳಸಿ 


೮. *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* ಸ್ಪರ್ಧೆಗಾಗಿ ಅಂತ ಸೂಚಿಸಿ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*


ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟ 04/10/2020

 ಪ್ರಾಮಾಣಿಕತೆಯ ವಾಮನ ಮೂರ್ತಿ ಕವನ

ದಿನಾಂಕ 04/10/2020



ಸ್ವರಚಿತ ಕವನ 03/10/2020

 ಕವನದ ಶೀರ್ಷಿಕೆ

*ಪ್ರಾಮಾಣಿಕತೆಯ ಮೂರ್ತಿ ಶಾಸ್ತ್ರೀಜಿ*


ವಾರಣಾಸಿಯ ಸಮೀಪದ ಒಂದು ಹಳ್ಳಿಯಾದ

ಮುಘಲ್ ಸಾರಾಯಿಯಲಿ ಜನಿಸಿದ ಮಗುವೇ

ಲಾಲ್ ಬಹದ್ದೂರ್ ಶಾಸ್ತ್ರಿ ಎಂಬ ಭಾರತಾಂಬೆಯ

ಕಿರು ದೇಹದ ಚಾಣಾಕ್ಷ ಚತುರ ಬುದ್ಧಿ ನೇತಾರ


ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಮೇಲೆ

ಮಾವನ ಆಶ್ರಯದಿ ಶಿಕ್ಷಣ ಪಡೆದು ತಮ್ಮ ಉಜ್ವಲ

ಭವಿಷ್ಯ ಬಡತನದ ಬೇಗೆಯಲ್ಲಿ ಬೇಯುತ್ತಲೇ ಓದಿ

ಮಾನವೀಯ ಮೌಲ್ಯಗಳನು ಒಗ್ಗೂಡಿಸಿಕೊಂಡವರು


ಅಸಹಕಾರ ಚಳವಳಿಯಲಿ ಭಾಗಿಯಾಗಿ ಜೈಲು

ಸೇರಿ ಸ್ವಾತಂತ್ರ್ಯ ಹೋರಾಟ ಚಳುವಳಿಯ ರುಚಿಯ

ಅನುಭವವಾಗಿ ಇನ್ನೇನು ಶಿಕ್ಷಣ ಕೊನೆಗೊಮ್ಮೆ ಆತ

ಮರಳಿ ಕಾಶಿ ವಿದ್ಯಾಪೀಠದಿ ಶಾಸ್ತ್ರಿ ಪದವಿ ಪಡೆದರು


ದೇಶದ ಇತಿಹಾಸದಲಿ ಪ್ರಧಾನಿಯಾಗಿದ್ದು ಬಡತನ

ಅನುಭವಿಸಿದ ಜಗತ್ತಿನ ಮೊದಲ ವ್ಯಕ್ತಿ ಎಂಬ ಪ್ರತೀತಿ

ಆಹಾರ ಸಮಸ್ಯೆ ತಲೆದೋರಿದಾಗ ಸೋಮವಾರದ

ಉಪವಾಸಕ್ಕೆ ಇಡೀ ಜನ ಸಮೂಹ ಧ್ವನಿಗೂಡಿತ್ತು


ಕಾರು ಖರೀದಿಸಿದರು ಕಂತು ಕಟ್ಟದಾದರು ನೋಡಿ

ರೈಲು ದುರಂತಕೆ ಹೊಣೆಹೊತ್ತು ರಾಜಿನಾಮೆ ನೀಡಿದ

ಮಹಾನಿಯರ ವಿನಮ್ರತೆ,ಸಹಿಷ್ಣುತೆ,ದೃಢನಿಶ್ಚಯದ 

ಪ್ರಾಮಾಣಿಕತೆಯ ಮೂರ್ತಿ ಶಾಸ್ತ್ರೀಜಿ ನಮಗೆ ಮಾದರಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


ಯರಗೋಳ ತಾ.ಜಿ. ಯಾದಗಿರಿ


🙏 *೧೭೮ ನೇ ಕವಿಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


✍🏻✍🏻💐💐 *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* 💐💐✍🏻✍🏻


🌹 *ದಿನಾಂಕ-೦೩.೧೦.೨೦೨೦* 


🌸 *ವಾರ-ಶನಿವಾರ* 


🌷 *ವಿಷಯ-ಲಾಲ್ ಬಹಾಧ್ದೂರ್ ಶಾಸ್ತ್ರೀ ಎಂಬ ಪ್ರಮಾಣಿಕತೆ* 


🌻 *ನಿರ್ವಹಣೆ-ಶ್ರೀನಾಗಭೂಷಣ ಅಯ್.ಎಸ್* 


೧. ಕವಿತೆ ೧೬ ರಿಂದ ೨೦ ಸಾಲಿರಲಿ


೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)


೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*


೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ


೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ


೬. ಕವಿತಾ ಸಪ್ತಾಹದ ೭ ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಮಾತ್ರ *ಅಭಿನಂದನಾ ಪತ್ರ* ವನ್ನು ನೀಡಿ ಗೌರವಿಸಲಾಗುವುದು.


೭. ನಿಮ್ಮ ಪೂರ್ಣಹೆಸರನ್ನು (ಶ್ರೀ, ಶ್ರೀಮತಿ ಅಥವಾ ಕು ) ಬಳಸಿ 


೮. *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* ಸ್ಪರ್ಧೆಗಾಗಿ ಅಂತ ಸೂಚಿಸಿ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*





Videos